For Quick Alerts
ALLOW NOTIFICATIONS  
For Daily Alerts

30 ದಾಟಿದ ಹೆಣ್ಣು ಮಕ್ಕಳಿಗೆ ಐಶ್ವರ್ಯ ರೈ ಮಾದರಿ

|
ಈಗೆಲ್ಲಾ ಮದುವೆಯಾಗುವುದು ಲೇಟು. ಓದು ಮುಗಿಸಿ ಕೆಲಸಕ್ಕ ಸೇರುವಾಗಲೆ ವಯಸ್ಸು 23 ದಾಟಿರುತ್ತದೆ. ನಂತರ 2-3 ವರ್ಷ ಲೈಫ್ ಸೆಟಲ್ ಆಗಲು ಒದ್ದಾಟ. ಇಷ್ಟೆಲ್ಲಾ ಆಗಿ ಮದುವೆ ಎಂದು ಯೋಚಿಸುವಾಗ ಇಪ್ಪತ್ತೈದು ವರ್ಷ ದಾಟಿರುತ್ತದೆ.

ಈಗಿನ ದುಡಿಯುವ ಹೆಣ್ಣುಮಕ್ಕಳು ಮದುವೆಯಾದ ಕೂಡಲೆ ತಾಯಿ ಆಗುವುದನ್ನು ಇಷ್ಟಪಡುವುದಿಲ್ಲ. ಇಷ್ಟೆಲ್ಲಾ ಆಗಿ ದಂಪತಿಗಳು ಮಗು ಬೇಕೆಂದು ಹಂಬಲಿಸುವಾಗ ವಯಸ್ಸು 30ರ ಆಸುಪಾಸಿನಲ್ಲಿ ಇರುತ್ತದೆ. ಆದರೆ ವೈದ್ಯರು 30ರ ನಂತರ ಮಕ್ಕಳಾಗುವುದು ಕಷ್ಟ ಎಂದು ಹೇಳುತ್ತಾರೆ. ಇದನ್ನು ಕೇಳುತ್ತಿದ್ದರೆ ಯುವ ಜನತೆಗೆ ಗೊಂದಲ ಪ್ರಾರಂಭವಾಗುತ್ತದೆ. ಅವರ ಪ್ರಕಾರ ಲೈಫ್ ಸೆಟಲ್ ಆಗದೆ ಮಗುವಾದರೆ ಕಷ್ಟವೆಂಬುದು.

ಆದ್ದರಿಂದ ಇಂತಹವರು ಕೆಲವು ಸಿನಿಮಾ ನಟಿಯರನ್ನು ನೋಡಿ ಸಮಾಧಾನ ಪಟ್ಟುಕೊಳ್ಳಬಹುದು. ಏಕೆಂದರೆ 30ರ ನಂತರ ಕೂಡ ಗರ್ಭಿಣಿಯಾಗಿ ಯಾವುದೆ ಸಮಸ್ಯೆ ಇಲ್ಲದೆ ಮಕ್ಕಳನ್ನು ಹಡೆಯಬಹುದು ಎನ್ನುವುದಕ್ಕೆ ಉದಾಹರಣೆ ಈ ನಟಿಮಣಿಯರು.

1. ಐಶ್ವರ್ಯ ರೈ: ಐಶರ್ಯ ರೈ ತನ್ನ 38ನೇ ವಯಸ್ಸಿನಲ್ಲಿ ತಾಯಿಯಾದರು. 1973ರಲ್ಲಿ ಹುಟ್ಟಿದ ರೈ 2007ರಲ್ಲಿ ಅಭಿಷೇಕ್ ಬಚ್ಚನ್ ಜೊತೆ ವಿವಾಹವಾದರು. ನಂತರ ಕೂಡ ತುಂಬಾ ಕಾಲ ತನ್ನ ಕೆಲಸದಲ್ಲಿ ನಿರಂತರವಾಗಿದ್ದು ಇದೀಗ ತನ್ನ 38ನೇ ವಯಸ್ಸಿಗೆ ತಾಯಿಯಾದರು. ಅದೂ ಸಾಧಾರಣ ಹೆರಿಗೆ( ನಾರ್ಮಲ್ ಡೆಲಿವರಿ).

2. ಶಿಲ್ಪಾ ಶೆಟ್ಟಿ: ಶಿಲ್ಪ ಶೆಟ್ಟಿ ತನ್ನ 30ನೇ ವರ್ಷದ ನಂತರ ಮಗುವಿಗಾಗಿ ಕಾದರು ಇದೀಗ ತನ್ನ 36ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ.

3. ಲಾರಾ ದತ್ತಾ: ಒಂದು ಕಾಲದಲ್ಲಿ ಭುವನ ಸುಂದರಿಯಾಗಿದ್ದ ಲಾರಾ ದತ್ತಾ ಇತ್ತೀಚಿಕೆಗೆ ಟೆನ್ನೀಸ್ ತಾರೆ ಮಹೇಶ್ ಭೂಪತಿಯನ್ನು ವರಿಸಿ ಇದೀಗ ತಾಯಿ ಆಗುತ್ತಿದ್ದಾಳೆ . ಇವರೂ ಕೂಡ 30 ವರ್ಷ ದಾಟಿದ ಬಳಕೆವೆ ಗರ್ಭಿಣಿಯಾಗಿದ್ದಾರೆ.

4. ಮಾಧುರಿ ದೀಕ್ಷಿತ್ : ಅನೇಕ ಜನರ ಕನಸಿನ ಕನ್ಯೆಯಾಗಿ ಮೆರೆದ ಮಾಧುರಿ ದೀಕ್ಷಿತ್ 1999ರಲ್ಲಿ ಮದುವೆಯಾಗಿ 2003ರಲ್ಲಿ ಮಗುವಿಗೆ ತಾಯಿಯಾದರು. ಆಗ ಅವರಿಗೆ 44ವರ್ಷ ವಯಸ್ಸು ಆಗಿತ್ತು.

30 ವರ್ಷ ದಾಟಿತು ಇನ್ನೂ ಮಕ್ಕಳಾಗಲಿಲ್ಲ ಎನ್ನುವ ದಂಪತಿಗಳು ಈ ನಟಿಯರನ್ನು ನೋಡಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬಹುದು.

English summary

One Can Conceive After 30 | Pregnancy And Age | 30ರ ನಂತರವೂ ಗರ್ಭಿಣಿಯಾಗಬಹುದು | ಗರ್ಭಧಾರಣೆ ಮತ್ತು ವಯಸ್ಸು

Who says you can't get pregnant after 30? There are many examples to show that pregnancy is possible after the woman crosses 30! There are many celebrities who have successfully conceived after 30 and 40 too.. Take a look.
Story first published: Friday, December 16, 2011, 10:04 [IST]
X
Desktop Bottom Promotion