For Quick Alerts
ALLOW NOTIFICATIONS  
For Daily Alerts

ಷಂಡತನ ಮಾರ್ಡನ್ ಲೈಫ್ ನ ಕೊಡುಗೆ

|
Infertility In Men
ಹೆಚ್ಚಾಗುತ್ತಿರುವ ಬಂಜೆತನ,ಷಂಡತನ ಅಥವಾ ನಿಷ್ಫಲ ಆಧುನಿಕ ಜೀವನ ಶೈಲಿಯ ಕೊಡುಗೆಯಾಗಿದೆ. ನಿಷ್ಫಲಕ್ಕೆ 50% ಹೆಣ್ಣಿನಲ್ಲಿರುವ ದೋಷಗಳು ಕಾರಣವಾಗಿದ್ದರೆ, 50% ಗಂಡಿನಲ್ಲಿರುವ ದೋಷಗಳಿಂದ ಉಂಟಾಗುತ್ತವೆ. ಇಂತಹ ಸಮಸ್ಯೆಗಳು ಜೀವನದ ಸುಖ- ನೆಮ್ಮದಿಯನ್ನು ಹಾಳು ಮಾಡುವುದರಿಂದ ಈ ಸಮಸ್ಯೆಯ ಬಗ್ಗೆ ಎಚ್ಚೆತ್ತು ಕೊಳ್ಳಿ.

ಪುರುಷರಲ್ಲಿ ಉಂಟಾಗುವ ನಿಷ್ಫಲಕ್ಕೆ ಕಾರಣಗಳು ಮತ್ತು ತಡೆಗಟ್ಟುವ ವಿಧಾನ:

1 ಮೊಬೈಲ್ ಪೋನ್: ಮೊಬೈಲ್ ಪೋನುಗಳನ್ನು ಪ್ಯಾಂಟ್ ಜೇಬಿನಲ್ಲಿ ಇಡುವುದರಿಂದ ಮೊಬೈಲ್ ಸಿಗ್ನಲ್ ಗಳಿಂದ ಉಂಟಾಗುವ ವಿಕಿರಣಗಳಿಂದ ಪುರುಷರಲ್ಲಿ ವೀರ್ಯಾಣು ಉತ್ಫತ್ತಿ ಕಡಿಮೆಯಾಗಿ ನಿಷ್ಫಲ ಉಂಟಾಗುತ್ತದೆ. ಆದ್ದರಿಂದ ಮೊಬೈಲ್ ಪೋನುಗಳನ್ನು ಬ್ಯಾಗ್ ನಲ್ಲಿ ಇಡಿ. ಆದಷ್ಟು ಪ್ಯಾಂಟ್ ಜೇಬಿನಲ್ಲಿ ಇಡುವುದನ್ನು ಕಡಿಮೆ ಮಾಡಿ.

2 ಧೂಮಪಾನ ಸೇವನೆ: 15-16 ವರ್ಷದಲ್ಲಿ ಧೂಮಪಾನ ಮಾಡುವ ಚಟವನ್ನು ಬೆಳೆಸಿ ಕೊಂಡಿದ್ದರೆ ಅದರಲ್ಲಿರುವ ತಂಬಾಕು ಹಾಗೂ ನಿಕೋಟಿನ್ ಅಂಶಗಳಿಂದ ಶರೀರದಲ್ಲಿ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗಿ ಷಂಡತನ ಉಂಟಾಗುತ್ತದೆ.

3 ದೇಹದ ಉಷ್ಣತೆಯಿಂದಾಗಿ: ಅಧಿಕ ಕೆಲಸ, ಪ್ರಯಾಣ, ಉಷ್ಣತೆಯ ಹವಾಮಾನ ಈ ಎಲ್ಲಾ ಕಾರಣಗಳು ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಒಳ್ಳೆಯ ಆಹಾರಕ್ರಮ, ಜ್ಯೂಸ್, ಮಜ್ಜಿಗೆ,ಎಳೆನೀರುಗಳನ್ನು ಸೇವಿಸಿ ದೇಹವನ್ನು ತಂಪಾಗಿ ಇಡಿ.

4 ಬಿಗಿಯಾದ ಉಡುಪು: ಅತಿಯಾದ ಪ್ಯಾಂಟ್ ಅಥವಾ ಒಳ ಉಡುಪುಗಳನ್ನು ಧರಿಸುವುದರಿಂದ ವೀರ್ಯಾಣುಗಳು ಸರಿಯಾಗಿ ಉತ್ಪತ್ತಿ ಆಗುವುದಿಲ್ಲ.
ಸಡಿಲವಾದ ಉಡುಪುಗಳನ್ನು ಧರಿಸುವುದು ನಿಮ್ಮ ಶರೀರದ ಸ್ವಾಸ್ಥ್ಯಕ್ಕೆ ಒಳ್ಳೆಯದು .

5 ಬೈಕ್: ಅತೀ ದೂರ ಬೈಕ್ ನಲ್ಲಿ ಪ್ರಯಾಣ ಮಾಡುವುದರಿಂದ ಬೈಕಿನ ಮೆಷಿನ್ ಬಿಸಿಯಾಗಿ ಅದು ಉತ್ಪತ್ತಿಯಾಗಿರುವ ವೀರ್ಯಾಣುಗಣನ್ನು ಕೊಲ್ಲುತ್ತದೆ.
ಆದ್ದರಿಂದ ಬೈಕಿನಲ್ಲಿ ದೂರ ಪ್ರಯಾಣ ಮಾಡುವಾಗ ಆಗಾಗ ಬಿಡುವು ತೆಗೆದುಕೊಳ್ಳಿ.

6. ಒತ್ತಡ: ಒತ್ತಡವು ಎಲ್ಲಾ ರೀತಿಯ ಕಾಯಿಲೆಗಳನ್ನು ತರುತ್ತದೆ. ದುಶ್ಚಟಗಳಿಗೆ ದಾಸರಾಗುವುದು ಕೂಡ ಈ ರೀತಿಯ ಒತ್ತಡದಿಂದ. ಯೋಗ, ಧ್ಯಾನ, ಸಂಗೀತ, ಒಳ್ಳೆಯ ಅಭ್ಯಾಸಗಳಿಂದ ಈ ರೀತಿಯ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಿ. ನೆಮ್ಮದಿಯ ಜೀವನ ನಿಮ್ಮದಾಗಿಸಿ ಕೊಳ್ಳಿ.

English summary

Modren Life Style Cause For Infertility In Men | How To Avoid Infertility | ಆಧುನಿಕ ಜೀವನಶೈಲಿ ಬಂಗೆತನಕ್ಕೆ ಕಾರಣ | ಬಂಜೆತನ ತಡೆಗಟ್ಟುವಿಕೆ

Modern life style cause for increasing so many health problem, infertility also one among them. Infertility is not only the women problem that is men problem too. Here are some reasons how men could infertility problem and how can avoid it.
Story first published: Monday, September 26, 2011, 14:05 [IST]
X
Desktop Bottom Promotion