For Quick Alerts
ALLOW NOTIFICATIONS  
For Daily Alerts

ಅಮ್ಮ-ಮಗುವಿನ ಆರೋಗ್ಯಕ್ಕೆ ಅತಿ ಅವಶ್ಯಕ ಆಹಾರ

|
Prenatal care
ಅಮ್ಮನಾಗುವುದು ಎಂದರೆ ಹೆಣ್ಣಿಗೆ ವಿಶೇಷ ಅನುಭೂತಿ. ಆ ಅನುಭವ ಸುಂದರವಾಗಿರಬೇಕಾದರೆ ಕಂದ ಮತ್ತು ಅಮ್ಮ ಆರೋಗ್ಯವಾಗಿರಲೇಬೇಕು. ಗರ್ಭಿಣಿಯಾದಾಕೆ ಕೆಲವೊಂದು ಆಹಾರ ಕ್ರಮವನ್ನು ಅನುಸರಿಸಸಿದರೆ ಖಂಡಿತ ಇದು ಸಾಧ್ಯ.

ಗರ್ಭಿಣಿಯರಿಗೆ ಅವಶ್ಯಕವಾದ ವಿಟಮಿನ್ಸ್ ಗಳನ್ನು ಇಲ್ಲಿ ನೀಡಲಾಗಿದೆ. ಇವುಗಳ ಸೇವನೆ ಮಾಡಿದರೆ ಮಗು ಮತ್ತು ತಾಯಿ ಇಬ್ಬರಿಗೂ ಕ್ಷೇಮ.

* ಫೋಲಿಕ್ ಆಸಿಡ್ ಅಥವಾ ಬಿ ಕಾಂಪ್ಲೆಕ್ಸ್: ಫೊಲೇಟ್ ಅಥವಾ ಬಿಕಾಂಪ್ಲೆಕ್ಸ್ ಇರುವ ಆಹಾರ ಸೇವನೆ ಜೀವಕಣಗಳ ಅಭಿವೃದ್ದಿಗೆ ಮಾತ್ರವಲ್ಲ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ, ಅಷ್ಟೇ ಅಲ್ಲ, ಹುಟ್ಟಲಿರುವ ಮಗುವಿಗೆ ಮೆದುಳು ಸಂಬಂಧಿ ಕಾಯಿಲೆ ಬರುವುದನ್ನು ತಡೆಗಟ್ಟುತ್ತದೆ. ಹೃದಯದ ತೊಂದರೆ, ನರಗಳ ಸೆಳೆತ ಮತ್ತು ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಅನ್ನು ಸಹ ದೂರವಿಡುತ್ತದೆ. ಆದ್ದರಿಂದ ದಿನನಿತ್ಯ 400 ಗ್ರಾಂ ಫೋಲಿಕ್ ಆಸಿಡ್ ಸೇವಿಸಿದರೆ ಮಗು ಮತ್ತು ತಾಯಿ ಇಬ್ಬರಿಗೂ ಒಳ್ಳೆಯದು.
ಆಹಾರ: ಪಾಲಾಕ್, ಬೀಟ್ರೂಟ್, ಹೂಕೋಸು, ಮೊಟ್ಟೆ, ಎಲೆಕೋಸು, ಧಾನ್ಯಗಳು ಮತ್ತು ಹಸಿರು ಕಾಳುಗಳನ್ನು ಸೇವಿಸಬಹುದು. ಬಾಳೆಹಣ್ಣು, ಕಿತ್ತಳೆ, ಬಾದಾಮಿಗಳಲ್ಲಿ ಫೋಲಿಕ್ ಆಸಿಡ್ ಹೆಚ್ಚಿದೆ.

* ಕ್ಯಾಲ್ಸಿಯಂ: ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವನೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ಮೂಳೆಗಳ ಬೆಳವಣಿಗೆ ಮತ್ತು ಬಲಕ್ಕೆ ಅವಶ್ಯಕ. ಕ್ಯಾಲ್ಸಿಯಂ ಅಭಾವ ಕಂಡುಬಂದಲ್ಲಿ ಅದು ಹೃದಯದ ಮತ್ತು ಮೂಳೆಗಳ ತೊಂದರೆಯನ್ನೂ ತಂದೊಡ್ಡಬಹುದು.
ಆಹಾರ: ಹಾಲು, ಹಾಲಿನ ಉತ್ಪನ್ನಗಳು, ಧಾನ್ಯಗಳು, ಮೀನು, ಹಸಿರು ಎಲೆಯುಳ್ಳ ತರಕಾರಿ, ಈರುಳ್ಳಿ ಎಲೆ, ನುಗ್ಗೇಕಾಯಿ, ಮೆಂತ್ಯೆ ಸೊಪ್ಪು, ಜೀರಿಗೆ, ಕೊತ್ತಂಬರಿ, ಚೆಕ್ಕೆ, ಮೆಣಸು, ಇಂಗು ಮುಂತಾದುವಲ್ಲಿ ಕ್ಯಾಲ್ಸಿಯಂ ಹೆಚ್ಚಿದೆ.

* ಕಬ್ಬಿಣಾಂಶ: ಗರ್ಭಧಾರಣೆಯ ಮೊದಲು ಮತ್ತು ನಂತರ ದೇಹಕ್ಕೆ ಕಬ್ಬಿಣಾಂಶ ಹೆಚ್ಚು ಮುಖ್ಯ. ಇದು ರಕ್ತದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ. ಮಗುವು ಮೊದಲಿನಿಂದಲೇ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಆಹಾರ: ರಾಗಿ, ಸೊಯಾ ಕಾಳು, ದ್ವಿದಳ ಧಾನ್ಯ, ಕ್ಯಾರೆಟ್, ಆಲೂಗಡ್ಡೆ, ಕಡಲೆಕಾಳು, ಗೋಧಿ, ಒಣದ್ರಾಕ್ಷಿ, ಬಾದಾಮಿ, ಖರ್ಜೂರ ಮುಂತಾದುವು ಹೆಚ್ಚು ಉಪಕಾರಿ.

English summary

Pregnancy and care | Pregnancy prenatal vitamins | ಗರ್ಭಾವಸ್ಥೆ ಮತ್ತು ಆರೈಕೆ | ಗರ್ಭಾವಸ್ಥೆ ಮತ್ತು ಪ್ರಸವ ಪೂರ್ವ ಆರೈಕೆ

Pregnancy is a very sensitive stage for a woman and proper intake of prenatal pregnancy vitamins is a necessity for a good health of both the mother and the fetus. Prenatal vitamins are specially formulated multivitamins which are a supplement for nutritional deficiencies in the pregnant woman's diet. These supplements consists of vitamins and minerals, folic acid, calcium and iron which keeps the baby and mother healthy. Lets have a look at the important prenatal pregnancy vitamins
Story first published: Saturday, August 6, 2011, 11:33 [IST]
X
Desktop Bottom Promotion