For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಕೂದಲು ಉದುರುವ ಸಮಸ್ಯೆ ತಡೆಗಟ್ಟುವುದು ಹೇಗೆ?

|

ಹೆರಿಗೆಯ ಬಳಿಕ ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಹೆರಿಗೆಯಾಗಿ ಮೂರು ತಿಂಗಳು ಕಳೆಯುತ್ತಿದ್ದತೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಕೆಲವರಂತೂ ಇದೇನು ಇಷ್ಟೊಂದು ಕೂದಲು ಉದುರುತ್ತಿದೆ, ಹೀಗೆ ಹೋದರೆ ತಲೆ ಬೋಳಾಗುವುದು ಎಂದು ಆತಂಕ ಪಡುವುದೂ ಉಂಟು.

ಆದರೆ ದೇಹದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದ ಈ ರೀತಿ ಆಗುತ್ತಿರುತ್ತದೆ. ಹಾರ್ಮೋನ್‌ಗಳು ಸಮತೋಲನಕ್ಕೆ ಬಂದಾಗ ಎಲ್ಲವೂ ಸರಿಯಾಗುವುದು. ಗರ್ಭಿಣಿಯಾದಾಗ ದೇಹದಲ್ಲಿ ಈಸ್ಟ್ರೋಜನ್‌ ಪ್ರಮಾಣ ಹೆಚ್ಚುವುದು, ಇದು ಕೂದಲಿನ ಬೆಳವಣಿಗೆಗೆ ಒಳ್ಳೆಯದು. ಆದ್ದರಿಂದಲೇ ಗರ್ಭಿಣಿಯಾಗಿದ್ದಾಗ ಕೂದಲು ಸೊಂಪಾಗಿ ಬೆಳೆಯುವುದನ್ನು ಕಾಣಬಹುದು.

ಹೆರಿಗೆಯಾದ ಬಳಿಕ ಈಸ್ಟ್ರೋಜನ್ ಪ್ರಮಾಣ ಕಡಿಮೆಯಾಗುವುದು, ಆಗ ಕೂದಲು ಉದುರುವುದು ಕಂಡು ಬರುವುದು. ಇದರ ಜೊತೆಗೆ ಮತ್ತಿತರ ಸಮಸ್ಯೆಯಗಳಿಂದಾಗಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು. ಕೂದಲನ್ನು ಸರಿಯಾದ ರೀತಿಯಲ್ಲಿ ಪೋಷಣೆ ಮಾಡಿದರೆ ಕೂದಲು ಉದುರವುದನ್ನು ತಡೆಗಟ್ಟಬಹುದು.

ಹೆರಿಗೆಯ ಬಳಿಕ ಕೂದಲು ಉದುರುತ್ತಿದ್ದರೆ ಈ ರೀತಿಯ ಆರೈಕೆಯಿಮದ ತಡೆಗಟ್ಟಬಹುದು ನೋಡಿ:

ಕೂದಲಿಗೆ ಅವಶ್ಯಕವಾದ ಪೋಷಕಾಂಶಗಳಿಂದ ಆರೈಕೆ ಮಾಡಬೇಕು

ಕೂದಲಿಗೆ ಅವಶ್ಯಕವಾದ ಪೋಷಕಾಂಶಗಳಿಂದ ಆರೈಕೆ ಮಾಡಬೇಕು

ಕೂದಲಿನ ಆರೋಗ್ಯಕ್ಕೆ ಪೋಷಕಾಂಶಗಳು ಅವಶ್ಯಕ. ಪೋಷಕಾಂಶಗಳ ಕೊರತೆ ಉಂಟಾದಾಗ ಕೂದಲು ಉದುರಲಾರಂಭಿಸುವುದು. ಹೆರಿಗೆಯ ಬಳಿಕ ಮಗುವಿಗೆ ಹಾಲುಣಿಸುವುದರಿಂದ ತಾಯಿ ದೇಹದಲ್ಲಿ ಪೋಷಕಾಂಶಗಳು ಕಡಿಮೆಯಾಗಬಹುದು. ಇದರ ಜೊತೆಗೆ ಮಗುವಿನ ಆರೈಕೆ, ಕೆಲಸ ಹೀಗೆ ಮಾನಸಿಕ ಒತ್ತಡವೂ ಇರುತ್ತದೆ. ಕೂದಲಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆಯಲು ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು. ನಿಮ್ಮ ಆಹಾರಕ್ರಮದಲ್ಲಿ ಮೊಳಕೆ ಬರಿಸಿದ ಕಾಳುಗಳು, ಸೊಪ್ಪುಗಳು, ಮೊಟ್ಟೆ ಮುಂತಾದ ಪೌಷ್ಠಿಕ ಆಹಾರಗಳನ್ನು ಸೇರಿಸಿ.

ದಿನಾ ತಲೆ ತೊಳೆಯುವುದರಿಂದ ಕೂದಲು ಉದುರುವುದೇ?

ದಿನಾ ತಲೆ ತೊಳೆಯುವುದರಿಂದ ಕೂದಲು ಉದುರುವುದೇ?

ಇದು ಸಾಮಾನ್ಯ ಪ್ರಶ್ನೆಯಾಗಿದೆ. ಹೆರಿಗೆಯ ಬಳಿಕ ಪ್ರತಿದಿನ ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದೇ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ. ಆದರೆ ಕೂದಲು ದಿನಾ ತೊಳೆಯುವುದರಿಂದ ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ , ಕೆಲವೊಂದು ಸಂದರ್ಭದಲ್ಲಿ ತಲೆಯನ್ನು ದಿನಾ ತೊಳೆದು ಕೂದಲಿನ ಆರೈಕೆ ಮಾಡಬೇಕಾಗುತ್ತದೆ.

* ತುಂಬಾ ಸೆಕೆಯಿದ್ದಾಗ ಕೂದಲು ಬೆವರುವುದು, ಜಿಡ್ಡಿನಂಶ ತಲೆಯಲ್ಲಿರುತ್ತದೆ, ಆಗ ಪ್ರತಿದಿನ ತಲೆ ಸ್ವಚ್ಛ ಮಾಡಬೇಕಾಗುತ್ತದೆ.

* ಕೂದಲು ಎಣ್ಣೆ-ಎಣ್ಣೆಯಾಗುವುದಾದರೆ ಕೂದಲನ್ನು ವಾರದಲ್ಲಿ 4-5 ಬಾರಿ ತೊಳೆಯಬೇಕು.

* ಒಣ ಕೂದಲು ಆಗಿದ್ದರೆ ವಾರದಲ್ಲಿ ಎರಡು ದಿನ ತೊಳೆದರೆ ಸಾಕು.

* ತುಂಬಾ ಪ್ರಯಾಣ ಮಾಡಿದರೆ ಮೈಲ್ಡ್ ಶ್ಯಾಂಪೂ ಹಾಕಿ ಕೂದಲನ್ನು ತೊಳೆಯಬೇಕು.

* ಇನ್ನು ಕುದಲು ತುಂಬಾ ಎಣ್ಣೆ-ಎಣ್ಣೆಯಾಗುತ್ತಿದ್ದರೆ ಹೇರ್‌ ರಿನ್ಸ್ ಬಳಸಬೇಕು.

ಕೂದಲು ಉದುರುವುದನ್ನು ತಡೆಗಟ್ಟಲು ಯಾವೆಲ್ಲಾ ವಸ್ತುಗಳು ಸಹಾಯ ಮಾಡುತ್ತೆ?

ಕೂದಲು ಉದುರುವುದನ್ನು ತಡೆಗಟ್ಟಲು ಯಾವೆಲ್ಲಾ ವಸ್ತುಗಳು ಸಹಾಯ ಮಾಡುತ್ತೆ?

* ತುಂಬಾ ಜಿಡ್ಡು ಕೂದಲಿನ ಸಮಸ್ಯೆ ಇರುವವರು ಹೇರ್ ರಿನ್ಸ್ ಬಳಸಿ.

* ಡ್ರೈ ಹೇರ್‌ ಇರುವವರು ಕ್ರೀಮಿ ಕಂಡೀಷನರ್‌ ಬಳಸಬಹುದು.

* ಹರ್ಬಲ್ ಹೇರ್‌ ಟಾನಿಕ್ ಬಳಸಿ. ಇದು ಕೂದಲಿನ ಬುಡವನ್ನು ಆರೈಕೆ ಮಾಡುತ್ತೆ.

* ವಾರಕೊಮ್ಮೆ ಕೂದಲಿಗೆ ಎಣ್ಣೆ ಹಚ್ಚಿ.

* ಕೂದಲು ಉದುರುವಾಗ ಹೆಡ್‌ ಮಸಾಜ್‌ ಮಾಡಿಸಬೇಡಿ, ಕೂದಲಿನ ಬುಡ ಸಡಿಲವಾಗಿರುತ್ತೆ, ಮತ್ತಷ್ಟು ಕೂದಲು ಉದುರಬಹುದು.

* ಕೂದಲು ಉದುರುವುದನ್ನು ತಡೆಗಟ್ಟಲು ಹೇರ್ ಟ್ರೀಟ್ಮೆಂಟ್ ಪಡೆಯಬಹುದು.

ಏನೆಲ್ಲಾ ತಿನ್ನಬೇಕು?

ಏನೆಲ್ಲಾ ತಿನ್ನಬೇಕು?

ಕೂದಲಿಗೆ ಬಾಹ್ಯ ಆರೈಕೆ ಅಷ್ಟೇ ಆಂತರಿಕ ಆರೈಕೆ ಕೂಡ ಮುಖ್ಯ. ಆದ್ದರಿಂದ ನೀವು ಆಹಾರಕ್ರಮದ ಕಡೆ ಗಮನ ನೀಡಬೇಕು.

* ಪ್ರತಿದಿನ ಒಂದು ಬೌಲ್‌ನಷ್ಟು ಮೊಳಕೆ ಕಾಳುಗಳನ್ನು ತಿನ್ನಿ.

* ತಲೆ ಹೊಟ್ಟು ತಡೆಗಟ್ಟಲು ಸಾಕಷ್ಟು ನೀರು ಕುಡಿಯಿರಿ.

* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿಯಿರಿ.

* ವೈದ್ಯರನ್ನು ಕೇಳಿ ವಿಟಮಿನ್‌ ಹಾಗೂ ಖನಿಜಾಂಶಗಳ ಸಪ್ಲಿಮೆಂಟ್ ಸೇವಿಸಿ.

* ಸೊಪ್ಪುಗಳನ್ನು ಸೇವಿಸಿ.

FAQ's
  • ಜಿಡ್ಡಿನಂಶದ ಕೂದಲಿಗೆ ಹೇರ್‌ ರಿನ್ಸ್ ಮಾಡುವುದು ಹೇಗೆ?

    1-2 ಚಮಚ ಗ್ರೀನ್ ಟೀ ಅಥವಾ ಬ್ಲ್ಯಾಕ್‌ಟೀಯನ್ನು ಬಿಸಿ ನೀರಿನಲ್ಲಿ ಹಾಕಿ, ನಂತರ ನೀರು ತಣ್ಣಗಾದ ಮೇಲೆ ಅದನ್ನು ಅದನ್ನು ತಲೆಗೆ ಹಚ್ಚಿ ಕೂದಲಿಗೆ ಹಚ್ಚಿ 15 ನಿಮಿಷದ ಬಳಿಕ ತಲೆ ತೊಳೆಯಿರಿ.

  • ಹೆರಿಗೆಯ ಬಳಿಕ ಕೂದಲು ಉದುರುವುದನ್ನು ತಡೆಗಟ್ಟಲು ಯಾವ ಶ್ಯಾಂಪೂ ಒಳ್ಳೆಯದು?

    ಬಯೋಟಿನ್ ಜೊತೆಗೆ ವಿಟಮಿನ್‌ ಎ, ಸಿ, ಡಿ, ಇ ಮತ್ತು ಸತುವಿನ ಸಪ್ಲಿಮೆಂಟ್ ಒಳ್ಳೆಯದು. ಈ ಅಂಶಗಳಿರುವ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

  • ಕೂದಲು ಕತ್ತರಿಸಿದರೆ ಕೂದಲು ಉದುರುವುದು ಕಡಿಮೆಯಾಗುವುದೇ?

    ಕೂದಲು ಕತ್ತರಿಸಿದರೆ ಕೂದಲು ಉದುರುವುದು ಕಡಿಮೆಯಾಗಲ್ಲ, ಆದರೆ ಕೂದಲನ್ನು ಕತ್ತರಿಸುವುದರಿಂದ ಕೂದಲನ್ನು ಅಂದವಾಗಿ, ಸ್ವಲ್ಪ ಮಂದವಾಗಿ ಇರುವಂತೆ ಕಾನಬಹುದು, ಅಲ್ಲದೆ ಕೂದಲು ಕತ್ತರಿಸಿರುವುದರಿಂದ ಕೂದಲು ಉದುರುವುದು ಕಡಿಮೆಯಾಗಿದೆ ಎಂದು ಅನಿಸಬಹುದು. ಅಲ್ಲದೆ ಕುದಲು ಕತ್ತರಿಸುವುದರಿಂದ ಕೂದಲನ್ನು ಆರೈಕೆ ಮಾಡುವುದು ಕೂಡ ಸುಲಭವಾಗುವುದು.

English summary

Tips to Deal With Hair Loss After Pregnancy in Kannada

Tips to Deal With Hair Loss After Pregnancy in Kannada, Read on...
X
Desktop Bottom Promotion