For Quick Alerts
ALLOW NOTIFICATIONS  
For Daily Alerts

ಹೆರಿಗೆ ಬಳಿಕ ಮೈ ತೂಕ ಹೆಚ್ಚದಿರಲು ಇಲ್ಲಿದೆ ಆಯುರ್ವೇದ ಟಿಪ್ಸ್

|

ಗರ್ಭಿಣಿಯಾದ ಮೇಲೆ ಮಹಿಳೆಯರ ಶರೀರದಲ್ಲಿ ಬದಲಾವಣೆಯಾಗುವುದು ಸಹಜ, ಮೈ ತೂಕ ಹೆಚ್ಚಾಗುವುದು, ಹೆರಿಗೆಯ ಬಳಿಕ ಕೆಲವರಿಗೆ ಮೈ ತೂಕ ಕಡಿಮೆ ಅವರು ಮೊದಲಿನ ತೂಕಕ್ಕೆ ಮರಳಿದರೆ ಬಹುತೇಕ ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ನೂರರಲ್ಲಿ ಶೇ 90ರಷ್ಟು ಮಹಿಳೆಯರು ಹೆರಿಗೆಯ ಬಳಿಕ ದಪ್ಪಗಾಗಿಯೇ ಆಗುತ್ತಾರೆ, ಬಾಣಂತನ ಆರೈಕೆ, ಹಾರ್ಮೋನ್‌ಗಳ ಬದಲಾವಣೆ ಇದರಿಂದಾಗಿ ಮೈ ತೂಕ ಹೆಚ್ಚುವುದು.

ಹೆರಿಗೆಯ ಬಳಿಕ ದಪ್ಪಗಾಗಲಿ, ತೆಳ್ಳಗೇ ಇರಲಿ ಬಹುತೇಕ ಮಹಿಳೆಯರು 'ಹೆರಿಗೆ ಬಳಿಕ ಹೊಟ್ಟೆ ಗಾತ್ರ ಹೆಚ್ಚಿದೆ, ಏನೂ ಮಾಡಿದರೂ ಕಡಿಮೆಯಾಗುತ್ತಿಲ್ಲ' ಎಂದು ಹೇಳುತ್ತಾರೆ. ಹೆರಿಗೆಯಾಗಿ ಕೆಲವು ತಿಂಗಳ ಬಳಿಕ ವ್ಯಾಯಾಮ ಮಾಡಿದರೆ ಮೈ ತೂಕ ಕಡಿಮೆಯಾಗುವುದು, ಆದರೆ ಹೊಟ್ಟೆ ಬೊಜ್ಜು ಕರಗಿಸುವುದು ಸ್ವಲ್ಪ ಕಷ್ಟವಾಗಿರುತ್ತೆ. ಆದರೆ ನೀವು ಪ್ರಯತ್ನ ಪಟ್ಟರೆ ಮೊದಲಿನ ಮೈಮಾಟಕ್ಕೆ ಖಂಡಿತ ಮರಳಬಹುದು. ಕೆಲವೊಂದು ಆಯುರ್ವೇದ ಟಿಪ್ಸ್‌ಗಳು ಹೆರಿಗೆಯ ಬಳಿಕ ಹೆಚ್ಚಾದ ಮೈ ತೂಕ ಕಡಿಮೆಯಾಗಲು ಸಹಕಾರಿ.

ಆಯುರ್ವೇದ ವಿಧಾನ ಬಳಸಿ ತೂಕ ಕಡಿಮೆ ಮಾಡುವುದು ಹೇಗೆ ಎಂದು ನೋಡೋಣ:

ಹೆರಿಗೆಯ ಬಳಿಕ ಹೊಟ್ಟೆ ದೊಡ್ಡದಾಗಿರಲು ಕಾರಣವೇನು?

ಹೆರಿಗೆಯ ಬಳಿಕ ಹೊಟ್ಟೆ ದೊಡ್ಡದಾಗಿರಲು ಕಾರಣವೇನು?

ಹೆರಿಗೆಯಾದಾಗ ದೊಡ್ಡದಾಗಿದ್ದ ಯೂಟ್ರಸ್ ಖಾಲಿಯಾಗುವುದು, ಇದರಿಂದಾಗಿ ಆ ಭಾಗದಲ್ಲಿ ಗಾಳಿ ತುಂಬಿಕೊಂಡು ವಾತ ಉಂಟಾಗುವುದು, ಈ ವಾತವನ್ನು ನಿಧಾನಕ್ಕೆ ಹಾಗೂ ಸಂಪೂರ್ಣವಾಗಿ ತೆಗೆಯಬೇಕು, ಅದರಲ್ಲಿರುವ ವಾತವನ್ನು ತೆಗೆದಾಗ ಗರ್ಭಕೋಶ ಕುಗ್ಗಿ ಹೊಟ್ಟೆ ಚಿಕ್ಕದಾಗುವುದು. ನೀವು ಆಯುರ್ವೇದದ ಈ ಟಿಪ್ಸ್ ಪಾಲಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

ಹೆರಿಗೆಯಾದ ಬಳಿಕ ಆಹಾರಕ್ರಮ ಹೇಗಿರಬೇಕು?

ಹೆರಿಗೆಯಾದ ಬಳಿಕ ಆಹಾರಕ್ರಮ ಹೇಗಿರಬೇಕು?

ಹೆರಿಗೆಯಾದ ಮೊದಲ ಎರಡು ದಿನದಲ್ಲಿ ತುಂಬಾ ಲಘುವಾದ ಆಹಾರ ಸೇವಿಸಬೇಕು. ಕಿಚಡಿ, ತರಕಾರಿ ಸೂಪ್‌ ಈ ಬಗೆಯ ಆಹಾರಗಳನ್ನು ಸೇವಿಸಬೇಕು. ಹೆರಿಗೆಯಾದಾಗ ದೇಹದಲ್ಲಿ ಅಗ್ನಿಯಂಶ ಕಡಿಮೆ ಇರುತ್ತದೆ, ಜೀರ್ಣಕ್ರಿಯೆ ದುರ್ಬಲವಾಗುವುದು, ದೇಹ ಮೊದಲಿನ ಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕಾಗುವುದು, ಆದ್ದರಿಂದ ಪೋಷಕಾಂಶಗಳು ಹೆಚ್ಚಿರುವ ಲಘು ಆಹಾರ ಸೇವನೆ ಒಳ್ಳೆಯದು.

ಅದಾದ ಬಳಿಕ ಒಂದು ತಿಂಗಳವರೆಗೆ ಪ್ರತಿದಿನ ಸೊಪ್ಪಿನಂಶ ನಿಮ್ಮ ಆಹಾರದಲ್ಲಿ ಇರಲೇಬೇಕು. ಸಬ್ಸಿಗೆ, ಮೆಂತೆ ಸೊಪ್ಪು, ಪಾಲಾಕ್‌, ನುಗ್ಗೆಕಾಯಿ ಸೊಪ್ಪು ಹೀಗೆ ನಿಮ್ಮ ಆಹಾರಕ್ರಮದಲ್ಲಿ ಸೊಪ್ಪನ್ನು ಅಳವಡಿಸಿಕೊಳ್ಳಿ. ಇದರ ಜೊತೆಗೆ ಮೊಳಕೆ ಕಾಳುಗಳನ್ನು ಸಾರು ಅಥವಾ ಪಲ್ಯ ರೀತಿ ಸೇವಿಸಿ, ತರಕಾರಿಗಳು ನಿಮ್ಮ ಆಹಾರದಲ್ಲಿ ಹೆಚ್ಚಿರಲಿ.

ಗೋಧಿಯ ಆಹಾರ ಹೆಚ್ಚಾಗಿ ಸೇವಿಸಬೇಡಿ. ಅನ್ನ, ಧಾನ್ಯಗಳು, ನವಣೆ ಇವುಗಳ ಸೇವನೆ ಒಳ್ಳೆಯದು.

ಇವುಗಳ ಜೊತೆಗೆ ಕರಿ ಜೀರಿಗೆ, ಅಜ್ವೈನ್‌, ಒಣ ಶುಂಠಿ ಇವುಗಳ ನೀರು ಕುಡಿಯುವುದರಿಂದ ಹೆರಿಗೆಯ ಬಳಿಕ ಮೈ ತೂಕ ತುಂಬಾ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

ತುಪ್ಪ ತಿನ್ನಬಹುದೇ?

ತುಪ್ಪ ತಿನ್ನಬಹುದೇ?

ಬಾಣಂತಿಯರ ಆಹಾರಕ್ರಮದಲ್ಲಿ ತುಪ್ಪ ಇರಬೇಕು, ಇದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ಕೆಲವರು ದಪ್ಪಗಾಗುತ್ತೇವೆ ಎಂದು ತುಪ್ಪ ತಿನ್ನಲ್ಲ, ಬಾಣಂತಿಯರು ತುಪ್ಪ ತಿನ್ನಬೇಕು, ಮಿತಿಯಲ್ಲಿ ತಿನ್ನಿ. ಒಂದು ಸ್ಪುನ್ ತುಪ್ಪ ತಿನ್ನುವುದರಿಂದ ಮಗು ಹಾಲು ಕುಡಿಯುವುದರಿಂದ ನಿಮ್ಮ ಮೈ ತೂಕವೇನು ಹೆಚ್ಚಾಗಲ್ಲ.

ನಾನ್‌ವೆಜ್‌ ತಿನ್ನಬಹುದೇ?

ನಾನ್‌ವೆಜ್‌ ತಿನ್ನಬಹುದೇ?

ಹೆರಿಗೆಯಾಗಿ ಒಂದು ತಿಂಗಳಾಗುವವರೆಗೆ ನಾನ್‌ವೆಜ್‌ ತಿನ್ನಬೇಡಿ, ನಂತರ ತಿನ್ನ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ದೂರವಿಡಿ. ಸೂಪ್, ಸಾರು ಇವುಗಳನ್ನು ಸೇವಿಸಿ. ಮೊಟ್ಟೆ ಸೇವಿಸಿ. ನಿಮ್ಮ ಆಹಾರಕ್ರಮದ ಬಗ್ಗೆ ಆಯುರ್ವೇದ ವೈದ್ಯರ ಬಳಿ ಸಲಹೆ ಪಡೆಯಿರಿ.

ಬಾಣಂತಿಯರೇ ನಿಮ್ಮ ಆಹಾರಕ್ರಮ ಹೀಗಿರಲಿ

ಬಾಣಂತಿಯರೇ ನಿಮ್ಮ ಆಹಾರಕ್ರಮ ಹೀಗಿರಲಿ

ಬಾಣಂತಿಯರು ಬೇಗನೆ ಚೇತರಿಸಿಕೊಳ್ಳಲು ಹಾಗೂ ಜೀರ್ಣಕ್ರಿಯೆಗೆ ಈ ಬಗೆಯ ಆಹಾರ ಒಳ್ಳೆಯದು:

ಸಿಹಿ/ಹುಳಿ/ಉಪ್ಪಿನ ರುಚಿ: ಈ ಬಗೆಯ ಆಹಾರ ಸ್ನಾಯುಗಳನ್ನು ಬಲಪಡಿಸುತ್ತದೆ, ಚೇತರಿಕೆಗೆ ಸಹಕಾರಿ.

* ಮೃದುವಾದ/ಸೂಪ್‌/ ಎಣ್ಣೆ: ಈ ಬಗೆಯ ಆಹಾರಗಳು ಜೀರ್ಣಕ್ರಿಯೆಗೆ ಸಹಕಾರಿ. ಗಟ್ಟಿ ಪದಾರ್ಥಗಳನ್ನು ತಿನ್ನಬೇಡಿ, ಸೂಪ್‌ ಕುಡಿಯಿರಿ, ತುಪ್ಪ ಬಳಸಿ.

* ತಾಜಾ ಆಹಾರ ಬಳಸಿ: ಫ್ರಿಡ್ಜ್‌ನಲ್ಲಿಟ್ಟು ಆಹಾರ ಬಳಸಬೇಡಿ, ಆಗಷ್ಟೇ ತಯಾರಿಸಿದ ತಾಜಾ ಆಹಾರ ಬಳಸಿ. ತಂಗಳು ಆಹಾರ ಬಾಣಂತಿಯರ ಆರೋಗ್ಯಕ್ಕೆ ಒಳ್ಳೆಯದಲ್ಲ.

* ತರಕಾರಿಗಳು: ನಿಮ್ಮ ಆಹಾರದಲ್ಲಿ ತರಕಾರಿಗಳು ಅದರಲ್ಲೂ ನಾರಿನಂಶವಿರುವ ತರಕಾರಿಗಳು ಅಧಿಕವಿರಲಿ. ಚಿಕನ್, ಫಿಶ್‌ಗಿಂತ ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.

* ಮಸಾಲೆ ಪದಾರ್ಥ: ತುಂಬಾ ಖಾರ ಪದಾರ್ಥಗಳನ್ನು ತಿನ್ನಬೇಡಿ, ಕೆಲವರು ಬಾಣಂತಿಯರಿಗೆ ತುಂಬಾ ಖಾರ ಪದಾರ್ಥಗಳನ್ನು ಮಾಡಿ ಕೊಡುತ್ತಾರೆ, ಆದರೆ ಅದು ಒಳ್ಳೆಯದಲ್ಲ, ಖಾರ ಮಿತಿಯಲ್ಲಿರಲಿ, ಹಸಿ ಬೆಳ್ಳುಳ್ಳಿ, ಹೆಚ್ಚು ಖಾರ ಇವೆಲ್ಲಾ ಎದೆ ಹಾಲನ್ನು ಕಡಿಮೆ ಮಾಡುವುದು.

ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ: ಅರ್ಧಂಬರ್ಧ ಬೆಂದ ಆಹಾರ ಸೇವಿಸಬೇಡಿ, ಆಹಾರವನ್ನು, ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ.

ಕಬ್ಬಿಣದಂಶ ಇರುವ ಆಹಾರ: ಖರ್ಜೂರ, ಅಂಜೂರ, ಹುಣಸೆ ಹಣ್ಣು, ಕೆಂಪು ದ್ರಾಕ್ಷಿ, ಸೊಪ್ಪು ಇಂಥವುಗಳಲ್ಲಿ ಕ್ಯಾಲ್ಸಿಯಂ ಹೆಚ್ಚಿರುತ್ತದೆ, ಕ್ಯಾಲ್ಸಿಯಂ ಅಧಿಕವವಿರುವ ಆಹಾರ ಸೇವಿಸಿ.

ಕೊನೆಯದಾಗಿ: ಬಾಣಂತಿಯಲ್ಲಿ ದೇಹವನ್ನು ಚೆನ್ನಾಗಿ ಆರೈಕೆ ಮಾಡಬೇಕು, ದಪ್ಪಗಾಗುತ್ತೇವೆ ಎಂದು ತಿನ್ನದೇ ಇರಬೇಡಿ, ಪೋಷಕಾಂಶವಿರುವ ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ, ಹೆಚ್ಚು ನೀರು ಕುಡಿಯಿರಿ, 3 ಹೊತ್ತು ತಿನ್ನುವ ಬದಲಿಗೆ ಸ್ವಲ್ಪ-ಸ್ವಲ್ಪವಾಗಿ 6 ಹೊತ್ತು ತಿನ್ನಿ. ಹೀಗೆ ಮಾಡಿದರೆ ಹೆರಿಗೆಯ ಬಳಿಕ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟಬಹುದು.

English summary

Post Pregnancy Weight Loss Tips in Kannada: Ayurvedic Diet Plan To Burn Belly Fat

Post Pregnancy weight loss tips in Kannada: Ayurvedic Diet Plan To Burn Belly Fat, read on...
Story first published: Friday, December 17, 2021, 11:02 [IST]
X
Desktop Bottom Promotion