For Quick Alerts
ALLOW NOTIFICATIONS  
For Daily Alerts

ನವಜಾತ ಶಿಶುಗಳ ಕಣ್ಣಿಗೆ ಕಾಜಲ್ ಹಚ್ಚಬಹುದೇ? ವೈದ್ಯರು ಏನೆನ್ನುತ್ತಾರೆ ನೋಡಿ

|

ನಮ್ಮ ಅಜ್ಜಿಯಂದಿರ ಕಾಲದಿಂದಲೂ ಮಕ್ಕಳ ಕಣ್ಣಿಗೆ ಕಾಡಿಗೆ(ಕಾಜಲ್) ಹಚ್ಚುವ ಅಭ್ಯಾಸ ರೂಢಿಯಲ್ಲಿದೆ. ಆದರೆ ಸಮಯ ಕಳೆದಂತೆ, ಅದನ್ನು ಹಚ್ಚುವ ವಿಧಾನ, ಬ್ರಾಂಡ್ ಜೊತೆಗೆ ಹೆಸರೂ ಕೂಡ ಬದಲಾಗಿದೆ. ಇಂದಿಗೂ ಬದಲಾಗದೇ ಇರುವಂತದ್ದು ಅಂದ್ರೆ, ಆ ಮಕ್ಕಳ ಕಣ್ಣಗೆ ಕಾಜಲ್ ಹಚ್ಚುವ ಪದ್ಧತಿ. ಹಾಗಾದರೆ ಇದು ಹೀಗೆ ನವಜಾತ ಶಿಶುಗಳ ಕಣ್ಣಿಗೆ ಕಾಜಲ್ ಹಚ್ಚಬಹುದಾ? ಈ ಕುರಿತು ತಜ್ಞರು ಏನು ಹೇಳುತ್ತಾರೆ ನೊಡೋಣ.

ತಜ್ಞರ ಪ್ರಕಾರ, ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚಬಾರದು ಎನ್ನುತ್ತಾರೆ. ಹಾಗಾದರೆ ಇದಕ್ಕೆ ಕಾರಣವೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಾಜಲ್ ಹಚ್ಚಬಾರದು ಎನ್ನಲು ಕಾರಣ:

ಕಾಜಲ್ ಹಚ್ಚಬಾರದು ಎನ್ನಲು ಕಾರಣ:

ಕಣ್ಣಿಗೆ ಹಚ್ಚುವ ಕಾಜಲ್ ತಯಾರಿಸಲು 50 ಪ್ರತಿಶತಕ್ಕಿಂತ ಹೆಚ್ಚಿನ ಸೀಸವನ್ನು ಬಳಸಲಾಗುತ್ತದೆ. ಸೀಸವು ಆರೋಗ್ಯಕ್ಕೆ ಬಹಳ ಹಾನಿಕಾರಕ ಅಂಶವಾಗಿದ್ದು, ಮೂತ್ರಪಿಂಡಗಳು, ಮೆದುಳು, ಮೂಳೆ ಮತ್ತು ದೇಹದ ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿ ಸೀಸದ ಮಟ್ಟ ಏರಿಕೆಯಾದರೆ, ಮೂರ್ಛೆ ರೋಗ, ಕೋಮಾ ಸ್ಥಿತಿಗೆ ಹೋಗುವುದಲ್ಲದೇ, ಸಾವಿಗೂ ಕಾರಣವಾಗಬಹುದು.

ಮಗುವಿನ ಮೇಲೆ ಕಾಜಲ್ ನ ಪರಿಣಾಮ:

ಮಗುವಿನ ಮೇಲೆ ಕಾಜಲ್ ನ ಪರಿಣಾಮ:

ಮಗುವಿನ ದೇಹವು ಇನ್ನೂ ಅಭಿವೃದ್ಧಿ ಹೊಂದುತ್ತಿರುವುದರಿಂದ, ಇದೇ ಸೀಸ ಬಳಸಿ ಮಾಡಿರುವ ಕಾಜಲ್ ಬಳಕೆ ಹಚ್ಚುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮನೆಯಲ್ಲಿ ತಯಾರಿಸಿದ ಕಾಜಲ್ ಸುರಕ್ಷಿತವೇ?:

ಮನೆಯಲ್ಲಿ ತಯಾರಿಸಿದ ಕಾಜಲ್ ಸುರಕ್ಷಿತವೇ?:

ಮನೆಯಲ್ಲಿ ತಯಾರಿಸಿದ ಕಾಜಲ್ ನೈಸರ್ಗಿಕವಾಗಿದೆ. ಅದರಿಂದ ಮಕ್ಕಳ ಕಣ್ಣಿಗೆ ಹಚ್ಚಲು ಮನೆಯಲ್ಲಿ ತಯಾರಿಸಿದ ಕಾಜಲ್ ಅನ್ನು ಬಳಸುವುದು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತದೆ. ಆದರೆ ವೈದ್ಯರ ಅಭಿಪ್ರಾಯದ ಪ್ರಕಾರ, ಇದು ಕೂಡ ಸರಿಯಲ್ಲ. ಸಾಮಾನ್ಯವಾಗಿ, ಮಗುವಿನ ಕಣ್ಣುಗಳಿಗೆ ಬೆರಳಿನಿಂದ ಕಾಜಲ್ ನ್ನು ಹಚ್ಚಲಾಗುತ್ತದೆ. ಈ ಕಾರಣದಿಂದಾಗಿ, ಮಗುವಿನ ಕಣ್ಣುಗಳಿಗೆ ಸೋಂಕು ಬರಬಹುದು ಎಂದು ಹೇಳುತ್ತಾರೆ.

ಕಣ್ಣಿಗೆ ಕಾಜಲ್ ಹಚ್ಚುವ ಬಗ್ಗೆ ಕೆಲವು ಕಟ್ಟುಕಥೆ ಮತ್ತು ಸತ್ಯಗಳು:

ಕಣ್ಣಿಗೆ ಕಾಜಲ್ ಹಚ್ಚುವ ಬಗ್ಗೆ ಕೆಲವು ಕಟ್ಟುಕಥೆ ಮತ್ತು ಸತ್ಯಗಳು:

ಕಟ್ಟುಕಥೆ: ಮಗುವಿನ ಕಣ್ಣಿಗೆ ಕಾಜಲ್ ಪ್ರತಿದಿನ ಹಚ್ಚಿದರೆ, ಅವರ ಕಣ್ಣುಗಳು ಮತ್ತು ರೆಪ್ಪೆಗೂದಲುಗಳು ಚೆನ್ನಾಗಿ ಬೆಳೆಯುತ್ತವೆ.

ಸತ್ಯ: ಕಾಜಲ್ ಅನ್ನು ಹಚ್ಚುವುದರಿಂದ ಮಗುವಿನ ಕಣ್ಣುಗಳು ದೊಡ್ಡದಾಗುವುದಿಲ್ಲ.

ಕಟ್ಟುಕಥೆ: ಕಾಜಲ್ ನ್ನು ಹಚ್ಚುವುದರಿಂದ ಮಗು ಹೆಚ್ಚು ಕಾಲ ಮಲಗುವುದು.

ಕಟ್ಟುಕಥೆ: ಕಾಜಲ್ ನ್ನು ಹಚ್ಚುವುದರಿಂದ ಮಗು ಹೆಚ್ಚು ಕಾಲ ಮಲಗುವುದು.

ಸತ್ಯ- ಕಾಜಲ್ ಗೆ ಸಂಬಂಧಿಸಿದಂತೆ ಅಂತಹ ಯಾವುದೇ ಸಂಶೋಧನೆಗಳು ನಡೆದಿಲ್ಲ. ಕಾಜಲ್ ಹಚ್ಚದೆಯೂ ಸಾಮಾನ್ಯವಾಗಿ ಮಗು ದಿನಕ್ಕೆ 18 ರಿಂದ 19 ಗಂಟೆಗಳ ಕಾಲ ಮಲಗುತ್ತದೆ.

ಕಟ್ಟುಕಥೆ: ಮನೆಯಲ್ಲಿ ತಯಾರಿಸಿದ ಕಾಜಲ್ ಸುರಕ್ಷಿತ.

ಸತ್ಯ: ಮನೆಯಲ್ಲಿ ತಯಾರಿಸಿದ ಕಾಜಲ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಕಾಜಲ್‌ಗಳಿಗಿಂತ ಉತ್ತಮವಾಗಿರುತ್ತದೆ, ಆದರೂ ಅದರಲ್ಲಿರುವ ಕಾರ್ಬನ್ ಮಕ್ಕಳ ಕಣ್ಣಿಗೆ ಹಾನಿಕಾರಕವಾಗಿದೆ. ಇದಲ್ಲದೆ, ಈ ಕಾಜಲ್ ಅನ್ನು ನೇರವಾಗಿ ಮಗುವಿನ ಕಣ್ಣಿಗೆ ಹಚ್ಚುವುದರಿಂದ, ಇದು ಕಣ್ಣಿನ ಸೋಂಕಿಗೆ ಸಹ ಕಾರಣವಾಗಬಹುದು.

ಕಟ್ಟುಕಥೆ: ಕಾಜಲ್ ದುಷ್ಟ ಕಣ್ಣಿನಿಂದ ರಕ್ಷಿಸುವುದು.

ಸತ್ಯ:ಕಾಜಲ್ ಹಚ್ಚುವುದರಿಂದ ಮಗುವನ್ನು ಕೆಟ್ಟ ಕಣ್ಣಿನಿಂದ ರಕ್ಷಿಸಬಹುದು ಎಂಬುದು ಜನರ ವೈಯಕ್ತಿಕ ನಂಬಿಕೆಯಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

ಕಟ್ಟುಕಥೆ: ಕಾಜಲ್ ಮಗುವಿನ ದೃಷ್ಟಿ ತೀಕ್ಷ್ಣಗೊಳಿಸುತ್ತದೆ.

ಸತ್ಯ: ಒಂದು ವೇಳೆ ಈ ರೀತಿಯಾಗಿದ್ದರೆ, ದೃಷ್ಟಿ ದೋಷವಿರುವ ಎಲ್ಲ ರೋಗಿಗಳಿಗೆ, ಕಾಜಲ್ ಹಚ್ಚುವಂತೆ ಜಗತ್ತಿನ ಎಲ್ಲ ವೈದ್ಯರು ಸೂಚಿಸುತ್ತಿದ್ದರು.

English summary

Is it Safe to Apply Kajal to Newborn Eyes?

Here we talking about Is it safe to apply kajal to newborn eyes?, read on
X
Desktop Bottom Promotion