For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಸ್ತನಗಳು ಜೋತು ಬೀಳುವುದು ತಡೆಯುವುದು ಹೇಗೆ?

|

ಮಗುವಿಗೆ ಎದೆ ಹಾಲುಣಿಸುವುದು ತಾಯಿಯಾದವಳು ಮಗುವಿಗೆ ಮಾಡುವ ಅದ್ಭುತವಾದ ಕಾರ್ಯ. ಮಗುವಿನ ಬೆಳವಣಿಗೆ ತಾಯಿಯ ಎದೆ ಹಾಲಿನಷ್ಟು ಪೌಷ್ಠಿಕವಾದ ಮತ್ತೊಂದು ಆಹಾರವಿಲ್ಲ. ಆದ್ದರಿಂದಲೇ ಮಗುವಿಗೆ ಆರು ತಿಂಗಳವರೆಗೆ ಎದೆ ಹಾಲು ಬಿಟ್ಟು ಮತ್ತೇನು ನೀಡಬೇಡಿ ಎಂದು ಮಕ್ಕಳ ತಜ್ಞರು ಸಲಹೆ ನೀಡುತ್ತಾರೆ.

How To Prevent Breast Sagging After Delivery

ಮಗು ಹುಟ್ಟಿದ ತಕ್ಷಣ ಮಗುವಿಗೆ ಎದೆ ಹಾಲು ಸಿಗುವುದು. ಅದಕ್ಕಾಗಿ ಗರ್ಭಾವಸ್ಥೆಯಿಂದಲೇ ಮಹಿಳೆಯ ದೇಹದಲ್ಲಿ ಬದಲಾವಣೆಯಾಗಲು ಆರಂಭವಾಗಿರುತ್ತದೆ. ಸ್ತನದ ಗಾತ್ರದ ಹೆಚ್ಚಾಗುವುದು, ಎದೆ ಹಾಲು ಉತ್ಪತ್ತಿಯಾಗುವಾಗ ಸ್ತನದ ಗಾತ್ರ ಮತ್ತಷ್ಟು ದೊಡ್ಡದಾಗುವುದು. ಈ ಸಮಯದಲ್ಲಿ ಸ್ತನಗಳು ಜೋತು ಬೀಳಲಾರಂಭಿಸುತ್ತದೆ. ಈ ಸಮಯದಲ್ಲಿ ಸ್ತನಗಳ ಆರೈಕೆ ಮಾಡದಿದ್ದರೆ, ಹಾಲುಣಿಸುವುದು ನಿಲ್ಲಿಸಿದ ಬಳಿಕ ಗಮನಿಸಿದರೆ ಸ್ತನಗಳು ಜೋತು ಬಿದ್ದು ದೇಹದ ಶೇಪ್ ಹಾಳಾಗುವುದು.

ಆದ್ದರಿಂದ ಮಗುವಾದ ಬಳಿಕ ಸ್ತನಗಳ ಶೇಪ್ ಹಾಳಾಗದಿರಲು ಈ ಟಿಪ್ಸ್ ಪಾಲಿಸಿ:

ಗುಣಮಟ್ಟದ, ಸಪೋರ್ಟಿವ್ ಬ್ರಾ ಧರಿಸಿ

ಗುಣಮಟ್ಟದ, ಸಪೋರ್ಟಿವ್ ಬ್ರಾ ಧರಿಸಿ

ಕೆಲವರು ಮಗುವಿಗೆ ಆಗಾಗ ಹಾಲುಣಿಸಬೇಕೆಂದು ಬ್ರಾ ಧರಿಸುವುದಿಲ್ಲ. ಸ್ತನಗಳು ಜೋತು ಬೀಳಲು ಇದೊಮದು ಕಾರಣವಾಗಿದೆ. ಅಲ್ಲದೆ ಎದೆ ಹಾಲುಣಿಸುವಾಗ ಸ್ತನಗಳು ಭಾರವಾಗಿರುವುದರಿಂದ ಬ್ರಾ ಧರಿಸದಿದ್ದರೆ ಬೆನ್ನು ನೋವು ಬರುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಗರ್ಭಾವಸ್ಥೆಯಿಂದಲೇ ಗುಣಮಟ್ಟದ ಸಪೋರ್ಟಿವ್ ಬ್ರಾ ಧರಿಸಿ. ಗರ್ಭಾವಸ್ಥೆಯಲ್ಲಿ ಹಾಗೂ ಎದೆ ಹಾಲುಣಿಸುವಾಗ ಬಳಸಲು ಅನುಕೂಲವಾರದ ಬ್ರಾಗಳು ದೊರೆಯುತ್ತವೆ. ಅವುಗಳನ್ನು ಬಳಸುವುದರಿಂದ ಎದೆ ಹಾಲು ಸುಲಭವಾಗಿ ನೀಡಬಹುದು ಹಾಗೂ ಸ್ತನಗಳ ಶೇಪ್ ಹಾಳಾಗದಂತೆ ಆರೈಕೆ ಕೂಡ ಮಾಡಬಹುದು.

ಎದೆ ಹಾಲುಣಿಸುವಾಗ ಕೂರುವ ಭಂಗಿ ಸರಿಯಾಗಿರಲಿ

ಎದೆ ಹಾಲುಣಿಸುವಾಗ ಕೂರುವ ಭಂಗಿ ಸರಿಯಾಗಿರಲಿ

ಬಹುತೇಕ ತಾಯಂದಿರು ಎದೆ ಹಾಲುಣಿಸುವಾಗ ಮಗುವಿನ ಕಡೆ ಬಾಗಿ ಎದೆ ಹಾಲುಣಿಸುತ್ತಾರೆ. ಇದು ಸ್ತನಗಳು ಜೋತು ಬೀಳಲು ಒಂದು ಕಾರಣವಾಗಿದೆ. ಮಗುವಿಗೆ ಎದೆ ಹಾಲುಣಿಸುವಾಗ ನೀವು ಕೂರುವ ಭಂಗಿ ಸರಿಯಾಗಿ ಇರಲಿ. ನರ್ಸಿಂಗ್ ಪಿಲ್ಲೋ (ಎದೆ ಹಾಲುಣಿಸುವಾಗ ಬಳಸುವ ದಿಂಬು) ಬಳಸಿ, ಆಗ ಮಗುವನ್ನು ನಿಮ್ಮ ಎದೆಯ ಹತ್ತಿರಕ್ಕೆ ತಂದು ಕುಡಿಸಲು ಸಹಕಾರಿಯಾಗುವುದು. ಈ ಭಂಗಿಯಲ್ಲಿ ಕುಳಿತು ಎದೆ ಹಾಲುಣಿಸುವುದರಿಂದ ಸ್ತನಗಳು ಜೋತು ಬೀಳುವುದನ್ನು ತಪ್ಪಿಸಬಹುದು.

ಬಿಸಿ ನೀರು ಹಾಗೂ ತಣ್ಣೀರು ಬಳಸಿ ಮಸಾಜ್ ಮಾಡಿ

ಬಿಸಿ ನೀರು ಹಾಗೂ ತಣ್ಣೀರು ಬಳಸಿ ಮಸಾಜ್ ಮಾಡಿ

ಬಿಸಿ ನೀರು ರಕ್ತ ಸಂಚಾರಕ್ಕೆ ಸಹಕಾರಿಯಾದರೆ ತಣ್ಣೀರು ತ್ವಚೆ ಬಿಗಿಯಾಗಲು ಸಹಾಯ ಮಾಡುತ್ತದೆ. ಸ್ನಾನವಾದ ಬಳಿಕ ಸ್ತನಗಳಿಗೆ ಬಿಸಿ ನೀರು ಹಾಗೂ ತಣ್ಣೀರು ಹಾಕಿ. ಇದರಿಂದ ಕಟ್ಟಿದ ಹಾಲು ಕೂಡ ಸುರಿದು ಹೋಗುವುದು, ಸ್ತನಗಳಿಗೂ ಉತ್ತಮ ಮಸಾಜ್ ಸಿಗುವುದು. ಇದರಿಂದ ಸ್ತನಗಳು ಬಿಗಿಯಾಗಿರುತ್ತವೆ.

ಸ್ತನಗಳಲ್ಲಿ ಮಾಯಿಶ್ಚರೈಸರ್ ಹಚ್ಚಿ

ಸ್ತನಗಳಲ್ಲಿ ಮಾಯಿಶ್ಚರೈಸರ್ ಹಚ್ಚಿ

ಎದೆ ಹಾಲುಣಿಸುವ ತಾಯಂದಿರು ಸ್ತನಗಳು ಮಾಯಿಶ್ಚರೈಸರ್ ಆಗಿರುವಂತೆ ನೋಡಿಕೊಳ್ಳಬೇಕು. ವಿಟಮಿನ್ ಇ ಅಥವಾ ಶಿಯಾ ಬಟರ್ ಅಥವಾ ಕೋಕಾ ಬಟರ್ ದಿನದಲ್ಲಿ ಎರಡು ಬಾರಿ ಹಚ್ಚುವುದು ಒಳ್ಳೆಯದು. ಇದು ಸ್ತನಗಳ ಇಲಾಸಿಟಿ ಹೆಚ್ಚಿಸಿ, ತ್ವಚೆಯನ್ನು ಬಿಗಿಯಾಗಿಸುವುದು ಹಾಗೂ ಸ್ಟ್ರೆಚ್‌ ಮಾರ್ಕ್ಸ್ ಕೂಡ ಹೋಗಲಾಡಿಸುವುದು.

ಸೂಚನೆ: ಮಸಾಜ್ ಮಾಡುವಾಗ ಸ್ತನಗಳ ತೊಟ್ಟಿನ ಭಾಗಕ್ಕೆ ಹಚ್ಚಬೇಡಿ, ಹಾಗೂ ಮಗುವಿಗೆ ಹಾಲುಣಿಸುವಾಗ ಸ್ತನಗಳ ತೊಟ್ಟಿನ ಭಾಗ ಒದ್ದೆ ಬಟ್ಟೆಯಲ್ಲಿ ಒರೆಸಿ ನಂತರ ಹಾಲುಣಿಸಿ.

ಆರೋಗ್ಯಕರ ಆಹಾರ ಸೇವಿಸಿ

ಆರೋಗ್ಯಕರ ಆಹಾರ ಸೇವಿಸಿ

ಮಗುವಿಗೆ ಎದೆ ಹಾಲುಣಿಸುವ ತಾಯಂದಿರು ಆರೋಗ್ಯಕರ ಆಹಾರ ಸೇವಿಸಬೇಕು. ಅಧಿಕ ಹಣ್ಣುಗಳು ಹಾಗೂ ತರಕಾರಿಗಳನ್ನಿ ಸೇವಿಸಬೇಕು. ಕಾರ್ಬ್ಸ್, ಪ್ರೊಟೀನ್ ಹಾಗೂ ಆರೋಗ್ಯಕರ ಕೊಬ್ಬಿನಂಶ ಆಹಾರಕ್ರಮದಲ್ಲಿರಬೇಕು. ಈ ರೀತಿಯ ಆಹಾರಕ್ರಮ ಪಾಲಿಸುವುದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು, ತ್ವಚೆ ಹೊಳಪು ಹೆಚ್ಚುವುದು, ಆರೋಗ್ಯವೂ ವೃದ್ಧಿಸುವುದು.

 ತುಂಬಾ ನೀರು ಕುಡಿಯಬೇಕು

ತುಂಬಾ ನೀರು ಕುಡಿಯಬೇಕು

ಸ್ತನಗಳನ್ನು ಮಾಯಿಶ್ಚರೈಸರ್ ಆಗಿಡುವುದು ಮಾತ್ರವಲ್ಲ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ನೀರು ಕುಡಿಯಿರಿ. ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು. ನೀರು ತುಂಬಾ ಕುಡಿಯುವುದರಿಂದ ತ್ವಚೆಯಲ್ಲಿನ ಸ್ಟ್ರೆಚ್‌ ಮಾರ್ಕ್ಸ್ ಮಾಯವಾಗುವುದು ಹಾಗೂ ಅಕಾಲಿಕ ನೆರೆಗೆ ಬೀಳುವುದನ್ನು ಕೂಡ ತಪ್ಪಿಸಬಹುದು.

ವ್ಯಾಯಾಮ

ವ್ಯಾಯಾಮ

ಹೆರಿಗೆಯ ಬಳಿಕ ದೇಹ ಮೊದಲಿನ ಆಕಾರಕ್ಕೆ ಬರಲು ವ್ಯಾಯಾಮ ಮಾಡಲು ಪ್ರಾರಂಭಿಸಿ. ವ್ಯಾಯಾಮ ಮಾಡಲು ಆತುರ ಬೇಡ. 6 ತಿಂಗಳು ಹೋಗಲಿ ನಂತರವಷ್ಟೇ ವ್ಯಾಯಾಮ ಪ್ರಾರಂಭಿಸಿ. ವ್ಯಾಯಾಮ ಮಾಡುವಾಗ ಮೊದಲಿಗೆ ಕಠಿಣವಾದ ವ್ಯಾಯಾಮ ಮಾಡಬೇಡಿ, ನಿಧಾನಕ್ಕೆ ಪ್ರಾರಂಭಿಸಿ. ಆಗ ಒಂದು ವರ್ಷದೊಳಗೆ ಮೊದಲಿನ ದೇಹದ ಶೇಪ್‌ಗೆ ಬರಬಹುದು.

English summary

How To Prevent Breast Sagging After Pregnancy in Kannada

Most women who breastfeed will notice a difference in their breasts but by taking care of breast can prevent sagging...
X
Desktop Bottom Promotion