For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಮಲಬದ್ಧತೆ ಸಮಸ್ಯೆಯೇ? ಇಲ್ಲಿದೆ ಪರಿಹಾರ

|

ಮೊನ್ನೆ ತಾನೇ ಹುಟ್ಟಿರೋ ನಿಮ್ಮ ನವಜಾತ ಶಿಶುವು ದಿನವೊಂದರಲ್ಲಿ ಅರ್ಧ ಡಜನ್ ಗಿಂತಲೂ ಅಧಿಕ ಬಾರಿ (ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಬಾರಿ) ಯಾವುದೇ ವಿಶೇಷ ಪ್ರಯತ್ನವಿಲ್ಲದೇ, ಸರಾಗವಾಗಿ ಮಲವಿಸರ್ಜನೆ ಮಾಡುವಾಗ, ಅದೇ ವೇಳೆಗೆ ಆ ಮಗುವಿನ ತಾಯಿ ಅಂತಾ ಅನಿಸಿಕೊಂಡಿರೋ ನೀವು ಮಲವಿಸರ್ಜನೆಗಾಗಿ ತಾಸುಗಟ್ಟಲೇ ಪಾಯಿಖಾನೆಯಲ್ಲಿ ಪರದಾಡುವಂತಾದಲ್ಲಿ ತುಂಬಾನೇ ಹಿಂಸೆಯಾಗುವುದು.

ಅದರಲ್ಲೂ ವಿಶೇಷವಾಗಿ ಮಲವಿಸರ್ಜನೆ ಎಂಬ ಆ ಸಹಜಕ್ರಿಯೆ ನೀವು ಗರ್ಭಿಣಿಯಾಗಿದ್ದಾಗ ತುಂಬಾನೇ ತ್ರಾಸದಾಯಕವಾಗಿದ್ದು, ಮಗುವಿನ ಜನನವಾದ ಬಳಿಕವೂ ಮೊದಲನೆಯ ರೀತಿಯಲ್ಲೇ ಹಾಗೆಯೇ ತ್ರಾಸದಾಯಕವಾಗಿಯೇ ಮುಂದುವರೆದಿದ್ದಲ್ಲಿ, ಅದಕ್ಕಿಂತಲೂ ಹತಾಶ ಪರಿಸ್ಥಿತಿ ನಿಜಕ್ಕೂ ಬೇರೊಂದಿರಲಾರದು!! ಇತ್ತೀಚಿನ ದಿನಗಳಲ್ಲಿ ನೀವು ಶೌಚಾಲಯಕ್ಕೆ ಹೋಗುವುದಕ್ಕಿಂತಲೂ ಹೋಗದೇ ಇರುವ ಸಂದರ್ಭಗಳೇ ಹೆಚ್ಚಾಗಿದ್ದಲ್ಲಿ, ಆ ನಿಮ್ಮ ಸಮಸ್ಯೆಗೆ ಕೆಲವೊಂದು ಸಂಗತಿಗಳು ಕಾರಣವಾಗಿರುವ ಸಾಧ್ಯತೆ ಇದೆ....

ಮೊಟ್ಟಮೊದಲನೆಯದಾಗಿ, ನಿಮ್ಮ ದೊಡ್ಡ ಕರುಳು ಚುರುಕಾಗದೇ ಇರುವುದಕ್ಕೆ ಒಂದೆರಡು ಬಾಹ್ಯ ಸಂಗತಿಗಳು ತಮ್ಮ ಕೊಡುಗೆಯನ್ನು ನೀಡುತ್ತಿರಬಹುದು. ಮಗುವಿನ ಜನನವಾದ ಕೂಡಲೇ ನೋವಿನ ಉಪಶಮನಕ್ಕಾಗಿ ನೀವು ಪಡೆದುಕೊಂಡಿದ್ದ ಜೌಷಧವು ನಿಮ್ಮ ಮಲಬದ್ಧತೆಗೆ ಬಹುಮುಖ್ಯ ಕಾರಣವಾಗಿರಬಹುದು (ಒಂದೊಮ್ಮೆ ನೀವೀಗ ಆ ಜೌಷಧಗಳನ್ನು ತೆಗೆದುಕೊಳ್ಳುತ್ತಿಲ್ಲವೆಂದಾದಲ್ಲಿ, ನಿಮ್ಮ ಮಲವಿಸರ್ಜನಾ ಪ್ರಕ್ರಿಯೆಯು ಬಹುಬೇಗನೇ ಸಹಜ ಸ್ಥಿತಿಗೆ ಹಿಂದಿರುಗಲೇಬೇಕು ಅಥವಾ ನೀವು ಮೊಲೆಹಾಲುಣಿಸುತ್ತಿದ್ದಲ್ಲಿಈಗಲೂ ನೀವು ಪ್ರೀನೇಟಲ್ ವಿಟಮಿನ್ ಅನ್ನು ತೆಗೆದುಕೊಳ್ಳುತ್ತಿದ್ದರೆ ಇದೂ ಕೂಡ ಮಲಬದ್ಧತೆಗೆ ಕಾರಣವಾಗಿದ್ದಿರಬಹುದು (ಹಾಗಂತ ಪ್ರೀನೇಟಲ್ ವಿಟಮಿನ್ ನ ಸೇವನೆಯನ್ನೇ ನಿಲ್ಲಿಸಿಬಿಡುವುದು ತರವಲ್ಲ, - ಈ ಕುರಿತಂತೆ ನಿಮ್ಮ ವೈದ್ಯರೊಡನೆ ಸಮಾಲೋಚಿಸಿ).

ಎರಡನೆಯದಾಗಿ, ಸರಾಗ ಮಲವಿಸರ್ಜನೆಗೆ ನಿಮ್ಮ ಮನಸ್ಥಿತಿಯೂ ತಡೆಯೊಡ್ಡುತ್ತಿರಬಹುದು! ನಿಮ್ಮ ಗುದದ್ವಾರದ ಸುತ್ತಲಿನ ಭಾಗವು ನೋವಿನಿಂದ ಕೂಡಿದ್ದರೆ (ಸಾಮಾನ್ಯವಾಗಿ ಯೋನಿ ಹೆರಿಗೆಯ ಬಳಿಕ ಎಲ್ಲರಿಗೂ ಆ ಭಾಗದ ಸುತ್ತ ನೋವಿರುತ್ತದೆ), ಎಪಿಸಿಯೋಟಮಿ (ಹೆರಿಗೆ ಕಷ್ಟವೆನಿಸಿದಾಗ, ಹೆರಿಗೆಯನ್ನು ಸುಲಭವಾಗಿಸಲು ಯೋನಿಯ ದ್ವಾರದಲ್ಲಿ ಶಸ್ತ್ರಚಿಕಿತ್ಸಾ ಪೂರ್ವಕವಾಗಿ ಮಾಡಲಾಗುವ ಒಂದು ರಂಧ್ರ) ಯ ಹೊಲಿಗೆಗಳಿದ್ದಲ್ಲಿ, ಅಥವಾ ಸಿಸೇರಿಯನ್ ಸೆಕ್ಷನ್ ನಿಂದಾಗಿ ಹರಿದುಹೋಗಿದ್ದಲ್ಲಿ, ಅಥವಾ ಆಸನಮೊಳೆಗಳಿದ್ದಲ್ಲಿ (ಹೆಮರಾಯ್ಡ್ಸ್/ಮೂಲವ್ಯಾಧಿ) ಮಲವಿಸರ್ಜನೆಗೆ ಮುಂದಾಗಲು ಸಹಜವಾಗಿಯೇ ನೀವು ಹಿಂದೇಟು ಹಾಕುವಿರಿ.

ಹೀಗೆ ಮಲವಿಸರ್ಜನೆಯ ಕುರಿತ ನಿಮ್ಮ ಭಯವೇ ಮುಂದೆ ಮಲಬದ್ಧತೆಗೆ ಕಾರಣವಾದೀತು. ಅದು ಕೇವಲ ಅಲ್ಪಸ್ವಲ್ಪ ಉರಿಯಂತಹ ನೋವನ್ನುಂಟು ಮಾಡುವಂತಿದ್ದರೂ ಕೂಡ, ನೋವಿನಿಂದ ತಪ್ಪಿಸಿಕೊಳ್ಳಲು ಕೆಲವೊಮ್ಮೆ ನೀವು ಮಲವಿಸರ್ಜನೆಯನ್ನು ತಡೆಹಿಡಿಯುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನೀವು ತುಸು ಪ್ರಯತ್ನಿಸುವುದೇ ಒಳಿತು: ಮಲವಿಸರ್ಜನೆಗೆ ಮುಂದಾದಾಗ ನಿಮ್ಮ ಯೋನಿಯ ಹೊಲಿಗೆಗಳು ಹರಿಯುವ ಸಾಧ್ಯತೆ ಕಡಿಮೆ. ಹಾಗೇನೇ ಒಂದೊಮ್ಮೆ ನೀವು ಸಿಸೇರಿಯನ್ ಗೆ ಒಳಗಾಗಿದ್ದರೂ ಕೂಡ, ನಿಮ್ಮ ಆ ಶಸ್ತ್ರಚಿಕಿತ್ಸಾ ಹೊಲಿಗೆಗಳು ಮಲವಿಸರ್ಜನೆಗೆಂದು ಮುಂದಾದಾಗ ಹರಿಯಲಾರವು. ಇನ್ನು ಆಸನದಲ್ಲಿ ಮೊಳೆಗಳಿರುವ ಸಮಸ್ಯೆಯು (ಹೆಮರಾಯ್ಡ್ಸ್/ಮೂಲವ್ಯಾಧಿ) ನಿಮ್ಮದಾಗಿದ್ದಲ್ಲಿ, ಅದಕ್ಕೆ ಉಪಶಮನವು ನಿಮ್ಮ ಸ್ಥಳೀಯ ಜೌಷಧಾಲಯದಲ್ಲಿ ಲಭ್ಯವಿರುತ್ತದೆ.

ಮೂರನೆಯದಾಗಿ, ಗರ್ಭಿಣಿಯಾದಾಗಿನಿಂದ ಮಗುವನ್ನು ಹೆರುವವರೆಗೂ ನೀವು ತೆಗೆದುಕೊಳ್ಳುತ್ತಿದ್ದ ಜೌಷಧಗಳು, ಆಹಾರವಸ್ತುಗಳು, ನಿರ್ಬಂಧಿತ ರೀತಿಯಲ್ಲಿನ ವ್ಯಾಯಾಮದ ಆಚರಣೆ ಇವೆಲ್ಲವೂ ನಿಮ್ಮ ಜೀರ್ಣಾಂಗವ್ಯೂಹವನ್ನು ಮಂದಗೊಳಿಸಿರುವ ಸಾಧ್ಯತೆ ಇದೆ. ಹಾಗಾಗಿ, ನಿಮ್ಮ ಜೀರ್ಣಾಂಗವ್ಯೂಹವು ಪುನ: ಮೊದಲಿನಂತೆ ಚಾಲನಾ ಸ್ಥಿತಿಗೆ ಬರುವುದಕ್ಕೆ, ಆಹಾರಕ್ಕೆ ಸಂಬಂಧಿಸಿದ ಹಾಗೆ ಈ ಕೆಳಗಿನ ರಣತಂತ್ರಗಳನ್ನು ಕೈಗೆತ್ತಿಕೊಳ್ಳಿ:

ಕಂದುಬಣ್ಣದ ಆಹಾರವಸ್ತುಗಳ ಕುರಿತು ಯೋಚಿಸಿರಿ

ಕಂದುಬಣ್ಣದ ಆಹಾರವಸ್ತುಗಳ ಕುರಿತು ಯೋಚಿಸಿರಿ

ಅಧಿಕ ಪ್ರಮಾಣದಲ್ಲಿ ನಾರಿನಂಶವುಳ್ಳ ಕಂದುಅಕ್ಕಿ, ತೌಡಿನಿಂದ ತಯಾರಿಸಲ್ಪಟ್ಟ ಯಾವುದೇ ವಸ್ತು, ಓಟ್ಸ್‌ ನ ತೌಡು, ಅಗಸೆ ಬೀಜ, ಅಥವಾ ಸಂಸ್ಕರಿತಗೊಳ್ಳದೇ ಇರುವ ಧಾನ್ಯಗಳು.

ಕೆಲವು ಶುಷ್ಕ ಆಹಾರವಸ್ತುಗಳೂ ಮಲಬದ್ಧತೆಯ ನಿವಾರಣೆಗೆ ಹೇಳಿಮಾಡಿಸಿದಂತಹವು

ಒಣದ್ರಾಕ್ಷಿಗಳು, ಅಂಜೂರಗಳು, ಏಪ್ರಿಕಾಟ್ ಗಳು, ಹಾಗೂ ಕಪ್ಪುಬಣ್ಣದ ಒಣದ್ರಾಕ್ಷಿಗಳು. ಒಮೇಗಾ - 3 ಯ ಲಾಭವನ್ನೂ ನಿಮ್ಮದಾಗಿಸಿಕೊಳ್ಳಲು ಒಣದ್ರಾಕ್ಷಿಗಳೊಂದಿಗೆ ಕಾಳುಗಳನ್ನೂ ಸೇರಿಸಿಕೊಳ್ಳಿರಿ. ಕಾಳುಗಳು ಮಲವಿಸರ್ಜನೆಗೆ ನೆರವಾಗುವ ಮಾಂಸಖಂಡಗಳ ಬಲವನ್ನೂ ಹೆಚ್ಚಿಸುತ್ತದೆ.

ತಾಜಾ ಹಣ್ಣು, ತರಕಾರಿಗಳ ಸೇವನೆಯನ್ನು ರೂಢಿಸಿಕೊಳ್ಳಿರಿ

ತಾಜಾ ಹಣ್ಣು, ತರಕಾರಿಗಳ ಸೇವನೆಯನ್ನು ರೂಢಿಸಿಕೊಳ್ಳಿರಿ

ಕುರುಕುಲಾಗಿರುವ ತಾಜಾ ಹಣ್ಣುಗಳು ಹಾಗೂ ತರಕಾರಿಗಳ ಸೇವನೆಯು ನಿಮ್ಮ ಪ್ರಸ್ತುತ ಆರೋಗ್ಯ ಸ್ಥಿತಿಗೆ ಹೇಳಿಮಾಡಿಸಿದಂತಹವು. ಹಸಿ ತರಕಾರಿಗಳನ್ನು ಸಿಪ್ಪೆಸಮೇತವಾಗಿ ಸೇವಿಸಿದರೆ ಇನ್ನೂ ಉತ್ತಮ. ಬೇಯಿಸಿ ತಿನ್ನುವುದೇ ಆದರೂ, ಕಚ್ಚಿದಾಗ ಅವು "ಕುರುಕುಲ"ನ್ನು ಕಳೆದುಕೊಳ್ಳುವಷ್ಟು ಬೇಯಿಸುವುದು ಬೇಡ!

ದ್ವಿದಳ ಧಾನ್ಯಗಳ ಬಳಕೆ ಯಥೇಚ್ಛವಾಗಿರಲಿ

ದ್ವಿದಳ ಧಾನ್ಯಗಳ ಬಳಕೆ ಯಥೇಚ್ಛವಾಗಿರಲಿ

ಹೆರಿಗೆಯ ಬಳಿಕ, ಇದೀಗ ನೀವು ನಿಮ್ಮ ಹೊಟ್ಟೆಯಲ್ಲಿ ಚಲಿಸಿದಂತಾಗುವ ಅನುಭವವನ್ನು ಹೊಂದುತ್ತಿರಬಹುದು ಹಾಗೂ ಕಡಿಮೆ ಪ್ರಮಾಣದ ವಾಯುಪ್ರಕೋಪವನ್ನೂ ಅನುಭವಿಸುತ್ತಿರಬಹುದು. ಲೆಂಟಿಲ್ ಗಳು ಅಥವಾ ಕಪ್ಪು ಹುರುಳಿಯಂತಹ ದ್ವಿದಳ ಧಾನ್ಯಗಳನ್ನು ಒಂದು ಪಾತ್ರೆಯಷ್ಟು ಬೇಯಿಸಿರಿ ಹಾಗೂ ಅವುಗಳನ್ನು ಸೂಪ್ ಗಳಿಗೆ, ಸಾಲ್ಸಾಗಳಿಗೆ, ಅಥವಾ ಸಲಾಡ್ ಗಳಿಗೆ ಬೆರೆಸಿರಿ.

ಜಿಡ್ಡಿನ ಅಂಶವೂ ನಿಮ್ಮ ಆಹಾರದಲ್ಲಿರಲಿ

ಜಿಡ್ಡಿನ ಅಂಶವೂ ನಿಮ್ಮ ಆಹಾರದಲ್ಲಿರಲಿ

ನೀವು ಸೇವಿಸುವ ಮೀನು, ಚಿಕನ್, ಮತ್ತು ಪಾಸ್ತಾಗಳಿಗೆ ಸ್ವಲ್ಪ ಆಲೀವ್ ಎಣ್ಣೆ ಅಥವಾ ತುಪ್ಪ ಸೇರಿಸಿ.

ಸಂಸ್ಕರಿತ ಆಹಾರವಸ್ತುಗಳು ಬೇಡವೇ ಬೇಡ

ಸಂಸ್ಕರಿತ ಆಹಾರವಸ್ತುಗಳು ಬೇಡವೇ ಬೇಡ

ಸಂಸ್ಕರಿತ ಆಹಾರವಸ್ತುಗಳಾದ ಬಿಳಿ ಅಕ್ಕಿ ಹಾಗೂ ಬಿಳಿ ಬ್ರೆಡ್ ಗಳನ್ನು ವರ್ಜಿಸಿರಿ ಹಾಗೂ ಅದರ ಬದಲಿಗೆ ಸಂಸ್ಕರಿಸದೇ ಇರುವ ತೌಡುಸಹಿತವಾದ ಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿರಿ. ಚಾಕೊಲೆಟ್ ಕೂಡ ಮಲಬದ್ಧತೆಗೆ ಕಾರಣವಾದೀತು (ತಿನ್ನಲೇ ಬೇಕೆಂದಿದ್ದಲ್ಲಿ, ಸ್ನೈಕರ್ಸ್ ನಂತಹ ಒಣಹಣ್ಣು ಹಾಗೂ ಕಾಳುಗಳ ಮಿಶ್ರಣವನ್ನೊಳಗೊಂಡ ಚಾಕೊಲೆಟ್ ಅನ್ನು ಪ್ರಯತ್ನಿಸಬಹುದು). ಅಂತೆಯೇ ಸರಿಯಾಗಿ ಪಕ್ವವಾಗದೇ ಇರುವ ಬಾಳೆಹಣ್ಣೂ ಕೂಡ. ಇದರ ಬದಲಿಗೆ ಕುರುಕುಲಾದ ಸೇಬನ್ನು ತಿನ್ನಬಹುದು.

ಮಲಬದ್ಧತೆಯನ್ನು ನಿವಾರಿಸುವಲ್ಲಿ ದ್ರವಾಹಾರಗಳ ಪಾತ್ರ ಹಿರಿದು

ಮಲಬದ್ಧತೆಯನ್ನು ನಿವಾರಿಸುವಲ್ಲಿ ದ್ರವಾಹಾರಗಳ ಪಾತ್ರ ಹಿರಿದು

ಮಲಬದ್ಧತೆಯ ನಿವಾರಣೆಗೆ ದ್ರವಾಹಾರಗಳ ಸೇವನೆಗಿಂತ ದಿವ್ಯೌಷಧಿ ಬೇರೊಂದಿರಲಾರದು! ಹಾಗಾಗಿ ದಿನಕ್ಕೆ ಏನಿಲ್ಲವೆಂದರೂ ಕನಿಷ್ಟ 8 ಲೋಟಗಳಷ್ಟಾದರೂ ನೀರು ಕುಡಿಯಿರಿ. ಕೆಲ ಮಹಿಳೆಯರು ಲಿಂಬೆ ರಸವನ್ನು ಬೆರೆಸಿದ ಬಿಸಿನೀರನ್ನು ಈ ದಿಶೆಯಲ್ಲಿ ಹೆಚ್ಚು ಲಾಭದಾಯಕವೆಂದು ಭಾವಿಸುತ್ತಾರೆ (ಹೀಗೆ ಕುಡಿಯುವುದಾದರೆ ಬೆಳಗ್ಗೆ ಎದ್ದೊಡನೆಯೇ ಕುಡಿಯುವುದೊಳಿತು). ತರಕಾರಿ ಹಾಗೂ ಹಣ್ಣಿನ ರಸಗಳೂ ಈ ನಿಟ್ಟಿನಲ್ಲಿ ಸಹಕಾರಿ.

ಈ ಮೇಲೆ ತಿಳಿಸಿದ ಯಾವೊಂದು ಪರಿಹಾರೋಪಾಯವೂ ಕೆಲಸ ಮಾಡುತ್ತಿಲ್ಲವೆಂದಾದರೆ (ಅಥವಾ ಅಗತ್ಯವಿದ್ದಷ್ಟು ಕೆಲಸ ಮಾಡುತ್ತಿದ್ದರೂ ಅಥವಾ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರೂ ಕೂಡ), ನಾರಿನಂಶವುಳ್ಳ ಹೆಚ್ಚುವರಿ ಆಹಾರವಸ್ತುಗಳ ಬಗ್ಗೆ ಗಂಭೀರವಾಗಿ ಯೋಚಿಸಿ. ಗೋಧಿ ತೌಡನ್ನೇ ಮತ್ತು/ಅಥವಾ ಸೈಲಂ ನಂತಹ ನಾರಿನಂಶವಿರುವ ಆಹಾರವಸ್ತುವು ತ್ಯಾಜ್ಯ ವಿಸರ್ಜನೆಗೆ ಅಗತ್ಯವಿರುವ ಎಲ್ಲವನ್ನೂ ಒದಗಿಸುತ್ತದೆ (ಆದರೆ ಇದರ ಅತಿಯಾದ ಬಳಕೆಯೂ ಬೇಡ. ಜೊತೆಗೆ ಕ್ಯಾಲ್ಸಿಯಂಯುಕ್ತ ಆಹಾರವಸ್ತುಗಳನ್ನು ಇವುಗಳೊಡನೆ ಸೇವಿಸಬೇಡಿ. ಏಕೆಂದರೆ, ಮೂಳೆಗಳ ಆರೋಗ್ಯಕ್ಕೆ ಸಂಜೀವಿನಿಯಂತಿರುವ ಕ್ಯಾಲ್ಸಿಯಂ, ದೇಹದಿಂದ ಹೀರಿಕೊಳ್ಳಲ್ಪಡುವುದನ್ನು ಇವು ತಡೆಗಟ್ಟುತ್ತವೆ).

ಅಂತೂ ನಿಮ್ಮ ಆಹಾರಪದ್ಧತಿಯು ಅದ್ಯಾವ ಪ್ರಕಾರದ್ದೇ ಆಗಿರಲೀ, ಅದಕ್ಕೆ ಪೂರಕವಾಗಿ ಎಂಬಂತೆ ಒಂದಿಷ್ಟು ವ್ಯಾಯಾಮದಲ್ಲಿ ತೊಡಗಿಕೊಳ್ಳುವುದನ್ನು ಮರೆಯಬೇಡಿ (ಹೊಟ್ಟೆಗೆ ಸಂಬಂಧಿಸಿದ ಕೆಲವು ವ್ಯಾಯಾಮಗಳು ಮಲವಿಸರ್ಜನೆಗೆ ಬಲು ಸಹಕಾರಿ).

ಇಷ್ಟೆಲ್ಲ ಮಾಡಿದ ಬಳಿಕವೂ ಇನ್ನೂ ಮಲವಿಸರ್ಜನೆಯು ನಿಮ್ಮ ಪಾಲಿಗೆ ಬಲು ಕಷ್ಟದಾಯಕವಾಗಿದೆಯೇ ? ಹಾಗಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿರಿ. ನಿಮಗಾಗಿ ಒಂದು ಸುರಕ್ಷಿತವಾದ, ಹಾಗೂ ಪರಿಣಾಮಕಾರಿಯಾದ ವಿರೇಚಕವನ್ನು (ಸ್ಟೂಲ್ ಸಾಪ್ನರ್ ಅಥವಾ ಲ್ಯಾಗ್ಸಟಿವ್) ಅವರು ಖಂಡಿತವಾಗಿಯೂ ಸಲಹೆ ಮಾಡುತ್ತಾರೆ.

English summary

How To Conquer Postpartum Constipation in Kannada

Here is tips to conquer Postpartum constipation, read on,
X
Desktop Bottom Promotion