For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವಿನ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಆಹಾರದಲ್ಲಿ ಇವುಗಳನ್ನು ಸೇರಿಸಿ

|

ಸಾಮಾನ್ಯವಾಗಿ ಮಕ್ಕಳ ಮೆದುಳು ತುಂಬಾ ವೇಗವಾಗಿ ಕಾರ್ಯನಿರ್ವಹಿಸುತ್ತವೆ ಜೊತೆಗೆ ಬದಲಾಗುತ್ತವೆ. ತರಗತಿಯಿಂದ ಚಟುವಟಿಕೆಗೆ, ಅಲ್ಲಿಂದ ಮನೆಗೆ ಹೀಗೆ ಕ್ಷಣ ಕ್ಷಣಕ್ಕೂ ಬದಲಾಗುತ್ತವೆ. ಇದೇ ಕಾರಣಕ್ಕಾಗಿ ಮಕ್ಕಳು ಸೇವಿಸುವ ಆಹಾರ ಬಹಳ ಮುಖ್ಯವಾಗಿರುತ್ತವೆ. ಇವುಗಳು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೇ, ಭವಿಷ್ಯದ ಕೌಶಲ್ಯಗಳ ಮೇಲೂ ಪ್ರಭಾವ ಬೀರುತ್ತವೆ. ಬಾಲ್ಯದಲ್ಲಿ ತಿನ್ನುವ ಆಹಾರ ಪದಾರ್ಥಗಳು ಮಕ್ಕಳ ಭವಿಷ್ಯವನ್ನು ನಿರ್ಧಾರ ಮಾಡುತ್ತವೆ ಅಂದರೆ ತಪ್ಪೇನಿಲ್ಲ. ಯಾಕಂದ್ರೆ ಬಾಲ್ಯದಲ್ಲಿನ ಪೌಷ್ಟಿಕಾಂಶಗಳ ಕೊರತೆಯೂ ಭವಿಷ್ಯದ ಆರೋಗ್ಯದ ಮೇಲೆ ಪರಿಣಾಮ ಬೀರಿರುವ ಅನೇಕ ಉದಾಹರಣೆಗಳಿವೆ. ಅದಕ್ಕಾಗಿ ನಿಮ್ಮ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಿ. ಇಲ್ಲಿ ನೀಡಿರುವ 7 ಆಹಾರ ಪದಾರ್ಥಗಳು ಮಕ್ಕಳ ಬುದ್ಧಿಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಮತ್ತು ಭವಿಷ್ಯದಲ್ಲಿ ಅವರ ಮೆದುಳು ಹೇಗೆ ಉತ್ತಮವಾಗಿ ಬೆಳೆಯುತ್ತವೆ ಎಂಬುದರ ಮೇಲೆ ಪರಿಣಾಮ ಬೀರುತ್ತವೆ.

ಮಕ್ಕಳ ಮೆದುಳನ್ನು ಉತ್ತಮಗೊಳಿಸುವ ಆಹಾರ ಪದಾರ್ಥಗಳು ಇಲ್ಲಿವೆ:

1. ಮೊಟ್ಟೆಗಳು:

1. ಮೊಟ್ಟೆಗಳು:

ಮೊಟ್ಟೆಗಳಲ್ಲಿನ ಪ್ರೋಟೀನ್ ಮತ್ತು ಪೋಷಕಾಂಶಗಳು ಮಕ್ಕಳ ಬುದ್ಧಿಶಕ್ತಿಯನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಮೊಟ್ಟೆ ನೀಡುವುದು ಉತ್ತಮ ಆಯ್ಕೆಯಾಗಿದೆ. ಇದು ಶಕ್ತಿಯನ್ನು ನೀಡುವುದರ ಜೊತೆಗೆ ನಿಮ್ಮ ಮಗುವನ್ನು ಶಾರ್ಪ್ ಗೊಳಿಸುತ್ತದೆ.

ಇದನ್ನು ಹೇಗೆ ನೀಡುವುದು?: ಬೇಯಿಸಿದ ಮೊಟ್ಟೆಯನ್ನು ಬೆಳಗ್ಗಿನ ಉಪಹಾರ ಅಥವಾ ಮಧ್ಯಾಹ್ನದ ಊಟದ ಸಮಯದಲ್ಲಿ ಧಾನ್ಯಗಳೊಂದಿಗೆ ನೀಡಿ. ಅಥವಾ ಸಂಜೆ ವೇಳೆಯ ಎಗ್ ಸಲಾಡ್, ಸ್ಯಾಂಡ್ ವಿಚ್ ಗಳ ರೀತಿಯಲ್ಲಿಯೂ ನೀಡಬಹುದು.

2. ಗ್ರೀಕ್ ಮೊಸರು:

2. ಗ್ರೀಕ್ ಮೊಸರು:

ಮೆದುಳಿನ ಕೊಬ್ಬು ಮುಖ್ಯ ಎಂದು ಹೇಳಲಾಗುತ್ತದೆ. ಪೂರ್ಣ-ಕೊಬ್ಬಿನ ಗ್ರೀಕ್ ಮೊಸರು (ಇತರ ಮೊಸರುಗಳಿಗಿಂತ ಹೆಚ್ಚಿನ ಪ್ರೋಟೀನ್ ಹೊಂದಿದೆ) ಮಾಹಿತಿಯನ್ನು ಕಳುಹಿಸಲು ಮತ್ತು ಸ್ವೀಕರಿಸಲು ಮೆದುಳಿನ ಕೋಶಗಳನ್ನು ಉತ್ತಮ ರೂಪದಲ್ಲಿಡಲು ಸಹಾಯ ಮಾಡುತ್ತದೆ.

ಇದನ್ನು ಹೇಗೆ ನೀಡುವುದು?: ಗ್ರೀಕ್ ಮೊಸರನ್ನು ಕೆಲವು ಆಹಾರದೊಂದಿಗೆ ಮಿಕ್ಸ್ ಮಾಡಿ ಕೊಡಿ. ಕನಿಷ್ಠ 3 ಗ್ರಾಂ ಫೈಬರ್ ಹೊಂದಿರುವ ಸಿರಿಧಾನ್ಯ, ಬ್ಲುಬೆರ್ರಿ ಗಳ ಜೊತೆ ನೀಡಿ. ಡಾರ್ಕ್ ಚಾಕೋಲೇಟ್ ಚಿಪ್ಸ್ ಮತ್ತೊಂದು ಆಯ್ಕೆಯಾಗಿದೆ. ಇವುಗಳಲ್ಲಿ ಫಾಲಿಪಿನಾಲ್ ಗಳಿವೆ. ಈ ಪೋಷಕಾಂಶಗಳು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಬುದ್ದಿಯನ್ನು ಚುರುಕುಗೊಳಿಸುತ್ತದೆ.

3. ಸೊಪ್ಪುಗಳು:

3. ಸೊಪ್ಪುಗಳು:

ಫೋಲೇಟ್ ಮತ್ತು ಜೀವಸತ್ವಗಳ ಕೊರತೆಯು ಭವಿಷ್ಯದಲ್ಲಿ ಬುದ್ದಿಮಾಂದ್ಯತೆಗೆ ಕಾರಣವಾಗುತ್ತದೆ. ಅದನ್ನು ತಡೆಗಟ್ತುವ ಪ್ರಮುಖ ಆಹಾರವೆಂದರೆ ಪಾಲಕ್ ಮತು ಕೇಲ್ ಸೊಪ್ಪು. ಕೇಲ್ ಒಂದು ಸೂಪರ್ ಆಹಾರವಾಗಿದ್ದು, ಉತ್ಕರ್ಷಣ ನಿರೋಧಕಗಳು ಮತ್ತು ಮೆದುಳಿನ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುವ ಇತರ ವಸ್ತುಗಳಿಂದ ತುಂಬಿರುತ್ತದೆ.

ಇದನ್ನು ಹೇಗೆ ನೀಡುವುದು?: ಕೆಲವು ಮಕ್ಕಳಿಗೆ, ಸೊಪ್ಪನ್ನು ಕಷ್ಟಪಟ್ಟು ತಿನ್ನಿಸಲಾಗುತ್ತದೆ. ಕೇವಲ ಸಲಾಡ್ ಅಷ್ಟೇ ಮಾಡುವ ಬದಲು, ನೀವು ಕೆಲವು ವಿಭಿನ್ನ ಆಲೋಚನೆಗಳನ್ನು ಪ್ರಯತ್ನಿಸಬಹುದು:

  • ಲಘು ಉಪಹಾರದ ಜೊತೆ ಪಾಲಕ್ ಅಥವಾ ಕೇಲ್ ನ ಸ್ಮೂಥಿ ತಯಾರಿಸಬಹುದು
  • ಆಮ್ಲೆಟ್ ಗೆ ಪಾಲಕ್ ನ್ನು ಸೇರಿಸಿ
  • ಕೇಲ್ ಚಿಪ್ಸ್ ಮಾಡಿ.
  • 4. ಮೀನು:

    4. ಮೀನು:

    ಮೀನು ವಿಟಮಿನ್ ಡಿ ಮತ್ತು ಒಮೆಗಾ -3 ಗಳ ಉತ್ತಮ ಮೂಲವಾಗಿದೆ . ಇದು ಮಾನಸಿಕ ಕೌಶಲ್ಯ ಮತ್ತು ಮೆಮೊರಿ ನಷ್ಟದಿಂದ ಮೆದುಳನ್ನು ರಕ್ಷಿಸುತ್ತದೆ . ಸಾಲ್ಮನ್, ಟ್ಯೂನ, ಮತ್ತು ಸಾರ್ಡೀನ್ ಗಳು ಒಮೆಗಾ -3 ಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಮೀನು ನೀಡಿ. ಹೆಚ್ಚಿನ ಮಕ್ಕಳು ಮೀನನ್ನು ಇಷ್ಟಪಡುತ್ತಾರೆ.

    ಇದನ್ನು ಹೇಗೆ ಬಡಿಸುವುದು?: ಮೀನನ್ನು ಗ್ರಿಲ್ ಮಾಡಿ ಮತ್ತು ಜೊತೆಗೆ ಅದ್ದಲು ಸಾಸ್ ನೀಡಿ, ಮೀನುಗಳನ್ನು ಟ್ಯಾಕೋಗೆ ಸೇರಿಸಿ, ಅಥವಾ ಟ್ಯೂನ ಸ್ಯಾಂಡ್ ವಿಚ್ ಗಳನ್ನು ಮಾಡಿ.

    5. ಬೀಜಗಳು ಹಾಗೂ ಧಾನ್ಯಗಳು:

    5. ಬೀಜಗಳು ಹಾಗೂ ಧಾನ್ಯಗಳು:

    ಪ್ರೋಟೀನ್, ಅಗತ್ಯವಾದ ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳು ಡ್ರೈಪ್ರೂಟ್ಸ್ ಹಾಗೂ ಧಾನ್ಯಗಳಲ್ಲಿ ತುಂಬಿರುವುದರಿಂದ ಮಕ್ಕಳ ಮನಸ್ಥಿತಿ ಹಾಗೂ ಬುದ್ದಿಶಕ್ತಿ ವೃದ್ಧಿಯಾಗುತ್ತದೆ.

    ಇದನ್ನು ಹೇಗೆ ನೀಡುವುದು?: ಕಡಲೆಕಾಯಿ ಅಥವಾ ಸೂರ್ಯಕಾಂತಿ ಬೀಜದ ಬೆಣ್ಣೆಯನ್ನು ಸಹ ಖರೀದಿಸಬಹುದು ಅಥವಾ ತಯಾರಿಸಬಹುದು. ಸೂರ್ಯಕಾಂತಿ ಬೀಜಗಳು ಫೋಲೇಟ್, ವಿಟಮಿನ್ ಇ ಮತ್ತು ಸೆಲೆನಿಯಂನ ಸಮೃದ್ಧ ಮೂಲವಾಗಿದೆ. ನಿಮ್ಮ ಮಕ್ಕಳು ಕಡಲೆಕಾಯಿ ಬೀಜಗಳನ್ನು ತಿನ್ನದಿದ್ದರೆ, ಬಿಸ್ಕೆಟ್ ಅಥವಾ ಬ್ರೆಡ್ ಮಧ್ಯೆ ಹರಡಿ ಕೊಡಿ.

    6. ಓಟ್ ಮೀಲ್:

    6. ಓಟ್ ಮೀಲ್:

    ಪ್ರೋಟೀನ್ ಮತ್ತು ಫೈಬರ್ ಭರಿತ ಓಟ್ ಮೀಲ್ ಹೃದಯ ಮತ್ತು ಮೆದುಳಿನ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ . ಒಂದು ಅಧ್ಯಯನದ ಪ್ರಕಾರ ಸಿಹಿಯಾದ ಓಟ್ ಮೀಲ್ ನ್ನು ಸೇವಿಸಿದ ಮಕ್ಕಳು, ಸಿರಿಧಾನ್ಯವನ್ನು ಸೇವಿಸಿದವರಿಗಿಂತ ಮೊಮೊರಿ ಸಂಬಂಧಿತ ಕಾರ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಲಾಗಿದೆ.

    ಇದನ್ನು ಹೇಗೆ ಬಡಿಸುವುದು?: ಓಟ್ ಮೀಲ್ ನ ಜೊತೆಗೆ ದಾಲ್ಚಿನ್ನಿ ಸೇರಿಸಿ. ಮಸಾಲೆಯಲ್ಲಿನ ಸಂಯುಕ್ತಗಳು ಮೆದುಳಿನ ಕೋಶಗಳನ್ನು ರಕ್ಷಿಸುತ್ತವೆ ಎಂದು ಸಂಶೋಧನೆ ತೋರಿಸುತ್ತದೆ.

    7. ಸೇಬು ಮತ್ತು ಪ್ಲಮ್:

    7. ಸೇಬು ಮತ್ತು ಪ್ಲಮ್:

    ಮಕ್ಕಳು ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ಇಷ್ಟಪಡುತ್ತಾರೆ. ವಿಶೇಷವಾಗಿ ಅವರು ಜಡವನ್ನು ಹೊಂದಿದ್ದಾಗ ಸೇಬುಗಳು ಹಾಗೂ ಪ್ಲಮ್ ಗಳು ಲಂಚ್ ಬಾಕ್ಸ್ ನ ಪೇವರೆಟ್ ತಿಂಡಿಯಾಗಿರುತ್ತದೆ. ಇದು ಕ್ವೆರ್ಸೆಟಿನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿದ್ದು, ಮಾನಸಿಕ ಕೌಶಲ್ಯಗಳ ಕುಸಿತದ ವಿರುದ್ಧ ಹೋರಾಡುತ್ತದೆ.

    ಇದನ್ನು ಹೇಗೆ ನೀಡುವುದು? : ಪೌಷ್ಟಿಕಾಂಶಗಳು ಹೆಚ್ಚಾಗಿ ಹಣ್ಣಿನ ಸಿಪ್ಪೆಯಲ್ಲಿ ಅಥವಾ ಚರ್ಮದಲ್ಲಿ ಇರುತ್ತದೆ. ಆದ್ದರಿಂದ ಸಾವಯವ ಹಣ್ಣನ್ನು ಖರೀದಿಸಿ, ಚೆನ್ನಾಗಿ ತೊಳೆಯಿರಿ ಮತ್ತು ತ್ವರಿತ ತಿಂಡಿಗಾಗಿ ಹಣ್ಣನ್ನು ಬಟ್ಟಲಿನಲ್ಲಿ ಹಾಕಿ.

English summary

Foods For Your Child's Brain Development In Kannada

Here we told about Foods For Your Child's Brain Development In Kannada, have a look.
X
Desktop Bottom Promotion