For Quick Alerts
ALLOW NOTIFICATIONS  
For Daily Alerts

ನೀವು ಒಂದೇ ಮಗುವಿನ ಪೋಷಕರೇ; ಮಗುವಿನ ಬೆಳವಣಿಗೆಗೆ ಈ ಸಲಹೆ ಪಾಲಿಸಿ

|

ಮಕ್ಕಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವೀ ಆಗಬೇಕೆಂದು ಪ್ರತಿಯೊಬ್ಬ ಪಾಲಕರು ಇಚ್ಚಿಸುತ್ತಾರೆ. ಅದರಲ್ಲೂ ಒಂದೆ ಮಗು ಇರುವ ಪೋಷಕರಂತೂ ತಮ್ಮ ಜೀವಮಾನವಿಡೀ ಆ ಮಗುವಿನ ಲಾಲನೆ, ಪೋಷಣೆ ಪ್ರತಿಯೊಂದರಲ್ಲೂ ಅತಿಯಾದ ಕಾಳಜಿ ವಹಿಸಿ ಸಲುಹಿರುತ್ತಾರೆ. ಆದರೆ ಈ ಅತಿಯಾದ ಕಾಳಜಿ, ಅತಿಯಾದ ಸೇವೆ ಮಕ್ಕಳ ಮುಂದಿನ ಭವಿ‍ಷ್ಯಕ್ಕೆ ಖಂಡಿತ ಮಾತಕವಾದೀತು ಎಚ್ಚರ.

ಆರತಿಗೊಂದು ಕೀರ್ತಿಗೊಂದು ಎಂಬ ಮಾತು ಹಿರಿಯರಿಂದ ದೇಣಿಗೆಯಾಗಿದ್ದ ಬಂದಿದ್ದರೂ, ಇಬ್ಬರು ಪೋಷಕರೂ ಕೆಲಸಕ್ಕೆ ಹೋಗುವ ಇಂದಿನ ದಿನಕ್ಕೆ ಆರಿತಿಗಾಗಲಿ, ಕೀರ್ತಿಗಾಗಲಿ ಒಂದೇ ಮಗು ಎಂದು ಮೊದಲೇ ದಂಪತಿಗಳು ನಿರ್ಧರಿಸಿಬಿಡುತ್ತಾರೆ. ಆದರೆ ಒಂದೇ ಮಗುವಿನ ಆರೈಕೆಯಲ್ಲಿ ಇಂದಿನ ಪೋಷಕರು ಎಡವುತ್ತಾರೆ. ಅತಿಯಾದ, ಪ್ರೀತಿ ಕಾಳಜಿ, ಸೇವೆ ಮಾಡಿ ಮಗು ಸ್ವ ಅಭಿವೃದ್ಧಿ, ಸ್ವಯೋಚನೆಯನ್ನೇ ಮಾಡದಂಥ ಪರಿಸ್ಥಿತಿಗೆ ದೂಡಿರುತ್ತಾರೆ.

ಒಂದೇ ಮಗುವಿನನ ಪೋಷಣೆ ಹೇಗಿರಬೇಕು, ಮಗುವಿಗೆ ಏಕಾಂಗಿತನ ಕಾಡದಂತೆ ನೋಡಿಕೊಳ್ಳುವುದು ಹೇಗೆ, ಮಕ್ಕಳ ಸ್ವತಂತ್ರ ಕಲಿಕೆ, ಬೆಳವಣಿಗೆಗೆ ಪೋಷಕರು ಯಾವ ರೀತಿ ಪೂಕರವಾಗಿರಬೇಕು ಇಲ್ಲಿದೆ ಕೆಲವು ಮುಖ್ಯ ಸಲಹೆಗಳು.

ಇತರೆ ಮಕ್ಕಳೊಡನೆ ಬೆರೆಯಲು ಹೆಚ್ಚಿನ ಅವಕಾಶ ಒದಗಿಸಿ

ಇತರೆ ಮಕ್ಕಳೊಡನೆ ಬೆರೆಯಲು ಹೆಚ್ಚಿನ ಅವಕಾಶ ಒದಗಿಸಿ

ಮಕ್ಕಳು ಚಿಕ್ಕಿಂದಿರುವಾಗಲೇ ಸಾಧ್ಯವಾದಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ, ಈ ಮೂಲಕ ಇತರ ಮಕ್ಕಳೊಂದಿಗೆ ಸಂತೋಷದಿಂದ ಬೆರೆಯಲು ಅವಕಾಶ ಕಲ್ಪಿಸಿಕೊಡಿ. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಬಾಂಧವ್ಯ, ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಗುಣ ವೃದ್ಧಿಸುತ್ತದೆ. ಪೋಷಕರ ಮೇಲೆ ಹೆಚ್ಚು ಅವಲಂಬನೆ ಕಡಿಮೆಯಾಗುತ್ತದೆ.

ಸಾಮಾಜಿಕ ಸೃಜನಶೀಲತೆ

ಸಾಮಾಜಿಕ ಸೃಜನಶೀಲತೆ

ಮಕ್ಕಳು ಸಹೋದರು, ಸಹೋದರಿಯರ ಜತೆ ಬೆಳೆದಾಗ ಹಂಚಿಕೊಳ್ಳುವುದು, ಜಗಳ, ಸ್ಪರ್ಧೆ, ಸೋಲು, ಗೆಲವು, ಬೆಂಬಲ ಇಂಥಹ ಬಾಂಧ್ಯವ್ಯಗಳ ಬಗ್ಗೆ ತಿಳಿಯುತ್ತದೆ. ಆದರೆ ಒಂದೇ ಮಗುವಿದ್ದರೆ ಇಂತಹ ಅನುಭವವಾಗುವುದಿಲ್ಲ. ಆದ್ದರಿಂದ ಇಂಥ ಭಾವನೆಗಳು ಅವರಿಗೆ ತಿಳಿಯುವಂತೆ ಮಾಡಲು ಪೋಷಕರ ಹೆಚ್ಚಿನ ಶ್ರಮ ಅಗತ್ಯವಿದೆ. ಇತತರೊಂದಿಗೆ ಬೆರೆತಾಗ ಅಂಥ ಸಂಬಂಧಗಳ ಬೆಲೆ ತಿಳಿಸಿ. ಅವರ ವ್ಯಕ್ತಿತ್ವದಲ್ಲಿ ಅಂಥ ಸಕಾರಾತ್ಮಕ ಸ್ಪಂದನೆ ಸಿಕ್ಕಾಗ ಮಗುವನ್ನು ಶ್ಲಾಘಿಸಿ.

ಸ್ವತಂತ್ರ ಬೆಳೆಯಲು ಸಹಕರಿಸಿ

ಸ್ವತಂತ್ರ ಬೆಳೆಯಲು ಸಹಕರಿಸಿ

ಮಗುವಿನ ಪ್ರತಿಯೊಂದು ಹೆಜ್ಜೆಯಲ್ಲೂ ಕಾಳಜಿ ವಹಿಸುವ ಪೋಷಕರಾಗುವುದು ಸುಲಭ. ಆದರೆ ಮಗುವಿಗೆ ರೆಕ್ಕೆ ಬಿಚ್ಚಿದ ಹಕ್ಕಿಯಂತೆ ಹಾರಲು ಬಿಟ್ಟು ಕಾಪಾಡುವುದು ಅಗತ್ಯವಿದೆ. ಪ್ರತಿ ಸಂದರ್ಭದಲ್ಲೂ ಮಗುವಿನ ಆರೈಕೆ ಮಾಡಿದರೆ ಭವಿಷ್ಯದಲ್ಲಿ ಮಗು ಯಾವುದೇ ನಿರ್ಧಾರಕ್ಕು ನಿಮ್ಮ ಮೇಲೆ ಅವಲಂಬನೆಯಾಗಬೇಕಾಗುತ್ತದೆ. ಆದ್ದರಿಂದ ಸ್ವತಂತ್ರವಾಗಿ ತನ್ನ ಎಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳಲು ಬಿಡಿ, ಸಾಧ್ಯವಾದರೆ ಮನೆಯ ಸಣ್ಣ-ಪುಟ್ಟ ಜವಾಬ್ದಾರಿಗಳನ್ನು ಮಕ್ಕಳಿಗೆ ನೀಡಿ, ಕೆಲಸ ಕಲಿಸಿ.

ಕನಸುಗಳನ್ನು ಮಕ್ಕಳ ಮೇಲೆ ಹೇರಬೇಡಿ

ಕನಸುಗಳನ್ನು ಮಕ್ಕಳ ಮೇಲೆ ಹೇರಬೇಡಿ

ನಿಮ್ಮ ಕನಸುಗಳನ್ನು ಮಕ್ಕಳ ಮೇಲೆ ಒತ್ತಾಯಪೀರ್ವಕವಾಗಿ ಹಾಕಬೇಡಿ, ಅವರ ಕನಸುಗಳಿಗೆ ಬೆಲೆ ನೀಡಿ. ಅವರೇ ತಮ್ಮ ಕನಸನ್ನು ರೂಪಿಸಿಕೊಳ್ಳಲು ಅವಕಾಶ ನೀಡಿ. ಅವರಿಗೆ ಅಗತ್ಯವಾದಾಗ ಸಹಕಾರ ನೀಡಿ, ಅಗತ್ಯವಿಲ್ಲದಾಗ ಹಿಂದೆ ಸರಿಯಿರಿ. ನಿಮ್ಮ ಒತ್ತಡದಿಂದ ಮಕ್ಕಳು ನಿಮ್ಮ ಅಲೋಚನೆ ಮೀರಿ ಕೆಟ್ಟ ದಾರಿ ಹಿಡಿಯಬಹುದು, ಎಚ್ಚರಿಂದಿರಿ.

ಸ್ವಾರ್ಥಿಯಾಗದಂತೆ ನೋಡಿಕೊಳ್ಳಿ

ಸ್ವಾರ್ಥಿಯಾಗದಂತೆ ನೋಡಿಕೊಳ್ಳಿ

ಒಂದೇ ಮಗು ಎಂದು ಅತೀವ ಕಾಳಜಿ ವಹಿಸಿ ಮಕ್ಕಳನ್ನು ಸಲುಹಿದಾಗ ಅದಕ್ಕೆ ಬೇಡದ್ದು, ಬೇಕಿದ್ದು ಎಲ್ಲವನ್ನು ಕೇಳುವುದಕ್ಕೆ ಮುನ್ನವೇ ನೀಡುತ್ತೀರಿ. ಮುಂದೆ ಮಗು ಇದೇ ಅಭ್ಯಾಸನ್ನು ಮಾಡಿಕೊಂಡಾಗ ತನಗೆ ಬೇಕೆಂದುದ್ದನ್ನು ಬೇರೆಯವರಿಗೆ ನೋವುಂಟು ಮಾಡಿಯಾದರೂ ಸರಿಯೇ ಪಡೆದೇ ತೀರುತ್ತದೆ. ಇಂಥ ಅಭ್ಯಾಸಗಳನ್ನು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಗುರುತಿಸಿ ಬುದ್ದಿಕಲಿಸಿ.

ಚಟುವಟಿಕೆಗಳಲ್ಲಿ ನಿರತರಾಗಿಸಿ

ಚಟುವಟಿಕೆಗಳಲ್ಲಿ ನಿರತರಾಗಿಸಿ

ಒಂದೇ ಮಗುವಿರುವ ಪೋಷಕರು ಮಗುವನ್ನು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಮಗ್ನರಾಗಿಸಿ, ಇಲ್ಲವಾದಲ್ಲಿ ಸಲ್ಲದ ಆಲೋಚನೆಗಳು ಅವರನ್ನು ಸೇರಬಹುದು. ನೃತ್ಯ, ಸಂಗೀತ, ಕ್ರೀಡೆ, ಚಿತ್ರಕಲೆ, ಕರಕುಶಲ ಹೀಗೆ ಆಸಕ್ತಿಕರ ಚಟುವಟಿಕೆಯಲ್ಲಿ ನಿರತರಾಗಿಸಿ.

ಮಕ್ಕಳ ಜತೆ ಗೆಳೆಯರಾಗಿರಿ, ಆದರೆ ನೀವೆಂದೂ ಪೋಷಕರೇ ನೆನಪಿರಲಿ!

ಮಕ್ಕಳ ಜತೆ ಗೆಳೆಯರಾಗಿರಿ, ಆದರೆ ನೀವೆಂದೂ ಪೋಷಕರೇ ನೆನಪಿರಲಿ!

ಒಂದೇ ಮಗು ಇರುವ ಪೋಷಕರು ಅತಿಯಾಗಿ ಸ್ನೇಹಿತರಂತೆ ವರ್ತಿಸುತ್ತಾರೆ, ತಮ್ಮಲ್ಲಾ ರಹಸ್ಯಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಅತಿಯಾದ ಸಲುಗೆ ಸಹ ಮಕ್ಕಳಲ್ಲಿ ಭಯ ಇಲ್ಲದಂತೆ ಬೆಳೆಯಲು ಕಾರಣವಾದಿತು. ನಿಮಗೆ ಬದಲಾಗಿ ನಿಮ್ಮ ಸಹೋದರ ಅಥವಾ ಸಹೋದರಿಯ (ಚಿಕ್ಕಪ್ಪ, ಚಿಕ್ಕಮ್ಮ) ಜತೆ ಸಲುಗೆಯಿಂದ ಬೆರೆಯಲು ಅವಕಾಶ ನೀಡಿ, ನಿಮ್ಮ ಮೇಲಿನ ಭಯ, ಗೌರವ ಎಂದಿಗೂ ಇದ್ದೇ ಇರಬೇಕು.

English summary

Essential Parenting Tips For A Single Child

While you have the complete right to decide on the number of children you have, the society would tell you – more often than you like – that it is important to have at least 2 kids. This advice mostly stems from the negative stereotype associated with an only child; that he would grow up to be “selfish, socially irresponsible and spoilt”. This is an unfair generalization. However, there definitely is a risk of your only child feeling lonely. So, read on to learn ways to ensure that your child does not become the “stereotypical only child” and grow up to be as responsible as children with siblings.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X