For Quick Alerts
ALLOW NOTIFICATIONS  
For Daily Alerts

ಪೋಷಕರೇ, ಮಕ್ಕಳಿಗೆ ಕೊರೋನಾ ತಗುಲುವ ಬಗ್ಗೆ ನಿಮ್ಮಲ್ಲೂ ಈ ಪ್ರಶ್ನೆಗಳಿವೆಯೇ?

|

ಕೊರೋನಾದಿಂದ ಮೊದಲನೇ ಅಲೆಯ ಮಕ್ಕಳಿಗೆ ಅಷ್ಟೊಂದು ಅಪಾಯ ಮಾಡಲಿಲ್ಲ ಎಂಬ ನಿರಾಳತೆಯಲ್ಲಿದ್ದ ಪೋಷಕರಿಗೆ ಇದೀಗ ಎರಡನೇ ಅಲೆ ಶಾಕ್ ನೀಡುತ್ತಿದೆ. ಹೌದು, ಕೊರೊನಾದ ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ರೋಗ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆದರೆ ಅಪಾಯದ ಮಟ್ಟ ಕಡಿಮೆ ಎಂಬುದೇ ಸ್ವಲ್ಪ ಸಮಾಧಾನಕರ ಸಂಗತಿ.

ಆದರೆ ಪೋಷಕರು ತಮ್ಮ ಮಕ್ಕಳು ಸೋಂಕಿಗೆ ಒಳಗಾಗುವುದರ ಬಗ್ಗೆ ಚಿಂತಿಸುತ್ತಿದ್ದಾರೆ. ಅದರ ಬಗ್ಗೆ ವಿವಿಧ ಪ್ರಶ್ನೆಗಳನ್ನು ಹೊಂದಿದ್ದಾರೆ. ಮಕ್ಕಳಲ್ಲಿ ಕರೋನವೈರಸ್ ಸೋಂಕಿನ ಬಗ್ಗೆ ತಜ್ಞರು ಉತ್ತರಿಸಿರುವ ಕೆಲವು ಸಾಮಾನ್ಯ ಪ್ರಶ್ನೆಗಳು ಇಲ್ಲಿವೆ.

ಕೊರೋನಾ ಎರಡನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುತ್ತಾರೆಯೇ?

ಕೊರೋನಾ ಎರಡನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುತ್ತಾರೆಯೇ?

ಹೌದು, ರೂಪಾಂತರಿ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ ಮಕ್ಕಳು ಹೆಚ್ಚು ಒಳಗಾಗುತ್ತಿದ್ದಾರೆ. ಜೊತೆಗೆ ಪರೀಕ್ಷೆಯೂ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಿರುವುದರಿಂದ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

ಈ ಸಲದ ಕೊರೋನಾ ರೋಗಲಕ್ಷಣಗಳು ವಿಭಿನ್ನವಾಗಿದೆಯೇ?

ಈ ಸಲದ ಕೊರೋನಾ ರೋಗಲಕ್ಷಣಗಳು ವಿಭಿನ್ನವಾಗಿದೆಯೇ?

ಇಲ್ಲ. ರೋಗಲಕ್ಷಣಗಳು ಹೆಚ್ಚು ಕಡಿಮೆ ಹಿಂದಿನದನ್ನೇ ಹೋಲುತ್ತವೆ. ಹೆಚ್ಚು ಜ್ವರ, ಶೀತ ಹಾಗೂ ಕೆಮ್ಮಿನ ಜೊತೆಗೆ ಅತಿಸಾರ, ಹೊಟ್ಟೆ ನೋವು ಮತ್ತು ವಾಂತಿ ಎರಡನೇ ಅಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವರಲ್ಲಿ ಗಂಟಲು ನೋವು ಸಹ ಕಂಡುಬರುತ್ತದೆ.

ಮಕ್ಕಳು ಹೇಗೆ ಸೋಂಕಿಗೆ ಒಳಗಾಗುತ್ತಾರೆ?:

ಮಕ್ಕಳು ಹೇಗೆ ಸೋಂಕಿಗೆ ಒಳಗಾಗುತ್ತಾರೆ?:

ವಯಸ್ಕರಂತೆ, ಮಕ್ಕಳು ಕುಟುಂಬದ ಇತರ ಸದಸ್ಯರು ಮತ್ತು ಸ್ನೇಹಿತರ ಸಂಪರ್ಕಕ್ಕೆ ಒಳಗಾದಾಗ ಸೋಂಕಿಗೆ ತುತ್ತಾಗುತ್ತಾರೆ. ಹರಡುವಿಕೆ ವಿಧಾನವು ಹೆಚ್ಚಾಗಿ ನೇರ ಮತ್ತು ಗಾಳಿಯ ಮುಖಾಂತರ ಇರುತ್ತದೆ.

ಕುಟುಂಬದಲ್ಲಿ ಯಾರಾದರೂ ಪಾಸಿಟಿವ್ ಆಗಿದ್ದರೆ, ಲಕ್ಷಣರಹಿತ ಮಕ್ಕಳು ಸೇರಿದಂತೆ ಪ್ರತಿಯೊಬ್ಬರನ್ನು ಪರೀಕ್ಷಿಸಬೇಕೇ?

ಹೌದು, ಮಕ್ಕಳಿಗೂ ಪರೀಕ್ಷೆಯನ್ನು ಮಾಡಬೇಕು. ಶೇಕಡಾ 0.1 ಕ್ಕಿಂತ ಕಡಿಮೆ ಜನರು ರೋಗದ ಗಂಭೀರತೆಯನ್ನು ಹೊಂದಿರುತ್ತಾರೆ. ಆದ್ದರಿಂದ ಹೆಚ್ಚಿನ ಜನರಿಗೆ ರೋಗಲಕ್ಷಣವೇ ಇರುವುದಿಲ್ಲ. ಆದ್ದರಿಂದ ಎಲ್ಲರ ಪರೀಕ್ಷೆ ಮಾಡುವುದು ಉತ್ತಮ.

ಮಗುವಿಗೆ ಕೊರೋನಾ ಇದೆ ಎಂಬ ಅನುಮಾನ ಇದ್ದರೆ ಯಾವ ಪರೀಕ್ಷೆಗಳನ್ನು ಮಾಡಬೇಕು?

ಮಗುವಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಆರ್ಟಿ-ಪಿಸಿಆರ್ ವರದಿಗಳು ತಡವಾಗಿರುವುದರಿಂದ ರಾಪಿಡ್ ಆಂಟಿಜೆನ್ ಪರೀಕ್ಷೆಯನ್ನು ಸಹ ಮಾಡಬಹುದು. ಒಂದು ವೇಳೆ ಮಗುವಿಗೆ ರೋಗಲಕ್ಷಣಗಳು ಇದ್ದೂ, ನೆಗೆಟಿವ್ ಬಂದರೆ, ಅದಕ್ಕೆ ಬೇಗನೆ ಚಿಕಿತ್ಸೆ ನೀಡಬೇಕಾಗುತ್ತದೆ.

ಕೋವಿಡ್ ಪಾಸಿಟಿವ್ ಆಗಿರುವ ಮಗುವನ್ನು ಹೇಗೆ ನೋಡಿಕೊಳ್ಳುವುದು?

ಕೋವಿಡ್ ಪಾಸಿಟಿವ್ ಆಗಿರುವ ಮಗುವನ್ನು ಹೇಗೆ ನೋಡಿಕೊಳ್ಳುವುದು?

ಜ್ವರ 100 ಡಿಗ್ರಿ ಗಿಂತ ಹೆಚ್ಚಿದ್ದರೆ ಮಗುವನ್ನು ಹೋಮ್ ಐಸೋಲೇಷನ್ ಮಾಡಿ. ಜ್ವರಕ್ಕಾಗಿ ಪ್ಯಾರೆಸಿಟಮಾಮ್ ಮಾತ್ರೆ ನೀಡಿ. ರೋಗಲಕ್ಷಣಗಳು ಸಣ್ಣದಾಗಿದ್ದರೆ ಬಿಸಿ ನೀರು ಮತ್ತು ಸಾಮಾನ್ಯ ಆಹಾರ. ಯಾವುದೇ ತೊಂದರೆಗಳಿದ್ದಲ್ಲಿ, ಮಗುವನ್ನು ಆಸ್ಪತ್ರೆಗೆ ಸೇರಿಸಬೇಕು.

ಪೋಷಕರಿಗೆ ಪಾಸಿಟಿವ್ ಬಂದಿದ್ದರೆ ಮಗುವನ್ನು ಹೇಗೆ ನೋಡಿಕೊಳ್ಳುವುದು?

ಮಗುವನ್ನು ಪ್ರತ್ಯೇಕಿಸುವುದು ಕಷ್ಟ. ಸಣ್ಣ ಮಕ್ಕಳು ತಾಯಿಯೊಂದಿಗೆ ಇರಬೇಕೆಂದು ಆಸೆಪಡುತ್ತಾರೆ. ಪೋಷಕರು ಎಲ್ಲಾ ಸಮಯದಲ್ಲೂ ಮಾಸ್ಕ ಧರಿಸಬೇಕು. ರೋಗಲಕ್ಷಣವಿಲ್ಲದಿದ್ದರೂ ಸಹ ಅವರನ್ನು ಅಜ್ಜಿಯ ಮನೆಗೆ ಕಳುಹಿಸುವುದು ಅಪಾಯಕಾರಿ. ಹಾಗೇ ಕಳುಹಿಸುವುದಾದರೆ ಮಗುವಿಗೆ ಮೊದಲು ಪರೀಕ್ಷೆ ಮಾಡಿಸಬೇಕು.

ಮಕ್ಕಳು ಸೋಂಕನ್ನು ಹರಡಬಹುದೇ?

ಹೌದು, ಮಕ್ಕಳು ಸೋಂಕನ್ನು ಹರಡಬಹುದು.

ತಾಯಿಗೆ ಪಾಸಿಟಿವ್ ಆಗಿದ್ದರೆ ಆಕೆ ಮಗುವಿಗೆ ಹಾಲುಣಿಸಬಹುದೇ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಸ್ತನ್ಯಪಾನದ ಪ್ರಯೋಜನಗಳು ಕೊರೋನಾ ಅಪಾಯವನ್ನು ಮೀರಿಸುತ್ತದೆ. ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ ಮಾಸ್ಕ ಮತ್ತು ಸ್ಯಾನಿಟೈಸರ್ ಬಳಸಿ, ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ತಾಯಿ ಮಗುವಿಗೆ ಹಾಲುಣಿಸಬಹುದು.

English summary

COVID-19 in Kids: Common Questions Answered in Kannada

Here we talking about COVID-19 in kids: common questions answered in Kannada, read on
X
Desktop Bottom Promotion