For Quick Alerts
ALLOW NOTIFICATIONS  
For Daily Alerts

ಮಕ್ಕಳ ಬೆಡ್ ವೆಟಿಂಗ್: ಇದನ್ನು ತಡೆಯಲು ಪೋಷಕರು ಈ ವಿಧಾನ ಅನುಸರಿಸಿ

|

ಬೆಡ್ ವೆಟಿಂಗ್ ಅಥವಾ ಬೆಡ್ ನಲ್ಲಿ ಮೂತ್ರವಿಸರ್ಜನೆ ಮಾಡುವುದು ಅಂಬೆಗಾಲಿಡುವ ಮಕ್ಕಳು ಮತ್ತು ಸಣ್ಣ ಮಕ್ಕಳಲ್ಲಿ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಅವರು ಎಷ್ಟೇ ಪ್ರಯತ್ನಿಸಿದರೂ ಅದು ಅವರ ನಿಯಂತ್ರಣದಲ್ಲಿರುವುದಿಲ್ಲ. ಮಕ್ಕಳು ಬೆಳೆಯಲು ಮತ್ತು ಪ್ರಬುದ್ಧರಾಗಲು ಪ್ರಾರಂಭಿಸಿದಾಗ, ಅವರು ಈ ಸ್ಥಿತಿಯ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ ಮತ್ತು ಕ್ರಮೇಣ ನಿಲ್ಲಿಸುತ್ತಾರೆ. ಆದರೆ ನಿರಂತರ ಬೆಡ್‌ವೆಟಿಂಗ್ ಪೋಷಕರ ನಿದ್ದೆ ಕೆಡಿಸಬಹುದು. ಹಾಗಾದರೆ ಬನ್ನಿ ಮಕ್ಕಳ ಸ್ಥಿತಿಗೆ ಕಾರಣವೇನು ಅದನ್ನು ಸರಿಪಡಿಸುವ ಕೆಲವೊಂದು ಸಲಹೆಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ.

ಮಕ್ಕಳಲ್ಲಿ ಬೆಡ್‌ವೆಟಿಂಗ್ ಎಷ್ಟು ಸಾಮಾನ್ಯವಾಗಿದೆ?:

ಮಕ್ಕಳಲ್ಲಿ ಬೆಡ್‌ವೆಟಿಂಗ್ ಎಷ್ಟು ಸಾಮಾನ್ಯವಾಗಿದೆ?:

ಶಿಶುಗಳು ಮತ್ತು ಅಂಬೆಗಾಲಿಡುವ ಮಕ್ಕಳಲ್ಲಿ ಬೆಡ್ ವೆಟಿಂಗ್ ಅತ್ಯಂತ ಸಾಮಾನ್ಯವಾಗಿದೆ. ಒಂದು ಅಧ್ಯಯನದ ಪ್ರಕಾರ, 3 ವರ್ಷದ ಮಕ್ಕಳಲ್ಲಿ 40 ಪ್ರತಿಶತ ಜನರು ಹಾಸಿಗೆಯನ್ನು ಒದ್ದೆ ಮಾಡುತ್ತಾರೆ. ಆದಾಗ್ಯೂ, ಇದು ಅನೇಕ ತಜ್ಞರನ್ನು ಗೊಂದಲಕ್ಕೀಡು ಮಾಡಿದೆ. ಏಕೆಂದರೆ ಕೆಲವು ಮಕ್ಕಳು ಮಾತ್ರ ಹಾಸಿಗೆಯನ್ನು ಒದ್ದೆ ಮಾಡುತ್ತಾರೆ ಏಕೆ? ಮತ್ತು ಉಳಿದ ಮಕ್ಕಳು ಇದರಿಂದ ದೂರವಿರುತ್ತಾರೆ ಏಕೆ ಎಂದು ಪ್ರಶ್ನಿಸಲು ಕಾರಣವಾಗಿದೆ. ಇದು ಮಗುವಿನ ಅಭಿವೃದ್ಧಿಯಾಗದ ಮೂತ್ರಕೋಶದ ಕಾರಣ ಎಂದು ಕೆಲವರು ನಂಬುತ್ತಾರೆ, ಆದ್ದರಿಂದ ದೀರ್ಘಕಾಲದವರೆಗೆ ಮೂತ್ರವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಕ್ಕಳಲ್ಲಿ ಈ ಬೆಡ್ ವೆಟಿಂಗ್ ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಅವರ ಬೆಳವಣಿಗೆಯ ಹಂತವನ್ನು ಸೂಚಿಸುತ್ತದೆ.

ಮಕ್ಕಳಲ್ಲಿ ಬೆಡ್‌ವೆಟಿಂಗ್ ಗೆ ಕಾರಣಗಳು:

ಮಕ್ಕಳಲ್ಲಿ ಬೆಡ್‌ವೆಟಿಂಗ್ ಗೆ ಕಾರಣಗಳು:

  • ಮಕ್ಕಳು ತಮ್ಮ ಮೂತ್ರಕೋಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಸಮಯ ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಅವರ ಮೂತ್ರಕೋಶ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಹಂತದಲ್ಲಿರುವುದರಿಂದ ಮತ್ತು ಹೆಚ್ಚಿನ ಮೂತ್ರವನ್ನು ಹಿಡಿದಿಡಲು ಸಾಧ್ಯವಿಲ್ಲದಿರಬಹುದು, ಅಥವಾ ಇದು ಆನುವಂಶಿಕವಾಗಿರಬಹುದು, ಅಂದರೆ ನಿಕಟ ಕುಟುಂಬದ ಸದಸ್ಯರು ಬೆಡ್‌ವೆಟಿಂಗ್‌ನ ಅದೇ ಸ್ಥಿತಿಯಿಂದ ಬಳಲಿರಬಹುದು.
  • ಇದಲ್ಲದೆ, ಕೆಲವೊಮ್ಮೆ ಮಗು ಗುರುತಿಸುವಷ್ಟು ಮೂತ್ರಕೋಶ ಪೂರ್ಣ ಅಭಿವೃದ್ಧಿ ಹೊಂದಿಲ್ಲ. ಇದು ಹಾಸಿಗೆಯನ್ನು ಒದ್ದೆ ಮಾಡಲು ಕಾರಣವಾಗಬಹುದು.
  • ನಿಮ್ಮ ಮಗು ಮೂತ್ರದ ಸೋಂಕಿನಿಂದ ಬಳಲುತ್ತಿದ್ದರೆ, ಮೂತ್ರ ವಿಸರ್ಜನೆ ಮಾಡುವ ಪ್ರಚೋದನೆಯನ್ನು ಅವರು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಒಂದು ಕಾರಣವಾಗಬಹುದು.
  • ನಿಮ್ಮ ಮಗು ಹಾಸಿಗೆಯನ್ನು ಒದ್ದೆ ಮಾಡುವುದನ್ನು ತಡೆಯುವ ಸಲಹೆಗಳು:

    ನಿಮ್ಮ ಮಗು ಹಾಸಿಗೆಯನ್ನು ಒದ್ದೆ ಮಾಡುವುದನ್ನು ತಡೆಯುವ ಸಲಹೆಗಳು:

    - ನಿಮ್ಮ ಮಗು ಮಲಗುವ 15 ನಿಮಿಷಗಳ ಮೊದಲು ಶೌಚಾಲಯಕ್ಕೆ ಹೋಗಿ ಬರಲು ಹೇಳಿ.

    - ಮಲಗುವ ಮುನ್ನ ನಿಮ್ಮ ಮಗುವಿಗೆ ಕೆಫೀನ್ ಅಥವಾ ಸಕ್ಕರೆ ಪಾನೀಯಗಳನ್ನು ಕುಡಿಯಲು ನೀಡಬೇಡಿ. ಇದು ನಿಮ್ಮ ಮಗುವಿಗೆ ಹೆಚ್ಚಾಗಿ ಮೂತ್ರ ವಿಸರ್ಜಿಸಲು ಕಾರಣವಾಗಬಹುದು.

    - ನಿಮ್ಮ ಮಗುವಿನ ತಪ್ಪುಗಳಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಿ. ಇದು ಅವರಿಗೆ ಹೆಚ್ಚು ಮುಜುಗರ ಮತ್ತು ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಅವರ ನಿದ್ರೆಯಲ್ಲಿ ಹಾಸಿಗೆಯನ್ನು ಮತ್ತಷ್ಟು ಒದ್ದೆಯಾಗುವಂತೆ ಮಾಡುತ್ತದೆ. ಬದಲಾಗಿ, ಅವರು ಹಾಸಿಗೆಯನ್ನು ಒದ್ದೆ ಮಾಡದ ದಿನಗಳ ಎಣಿಕೆಯನ್ನು ಇರಿಸಿ ಮತ್ತು ಅವರನ್ನು ಪ್ರೋತ್ಸಾಹಿಸಿ.

    ತಜ್ಞರ ಸಹಾಯವನ್ನು ಯಾವಾಗ ಪಡೆಯುವುದು?:

    ತಜ್ಞರ ಸಹಾಯವನ್ನು ಯಾವಾಗ ಪಡೆಯುವುದು?:

    ಬೆಡ್‌ವೆಟಿಂಗ್ ಸಮಸ್ಯೆ ನಿರಂತರವಾಗಿದ್ದರೆ ಮತ್ತು ಹಗಲಿನಲ್ಲಿಯೂ ಪ್ರಚಲಿತದಲ್ಲಿದ್ದರೆ, ನೀವು ವೈದ್ಯಕೀಯ ಸಹಾಯವನ್ನು ಪಡೆಯಬೇಕು. ಅಲ್ಲದೆ, ನಿಮ್ಮ ಮಗು ಆಗಾಗ್ಗೆ ವಾಶ್‌ರೂಮ್‌ಗೆ ಭೇಟಿ ನೀಡುವ ಹಂಬಲವನ್ನು ಅನುಭವಿಸುತ್ತಿರುವುದನ್ನು ನೀವು ಗಮನಿಸಿದರೆ, ನೀವು ಮಕ್ಕಳ ವೈದ್ಯರನ್ನು ಭೇಟಿ ಮಾಡಿ.

English summary

Bedwetting In Children Causes And What Parents Can Do To Prevent It In Kannada

here we told about Bedwetting in children causes and what parents can do to prevent it in kannada, read on
Story first published: Friday, March 26, 2021, 16:21 [IST]
X
Desktop Bottom Promotion