For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವಿಗೆ ಹೆಚ್ಚು ಸ್ನಾನ ಮಾಡಿಸುತ್ತಿದ್ದೀರಾ? ಹಾಗಾದ್ರೆ ಒಮ್ಮೆ ಈ ಸ್ಟೋರಿ ನೋಡಿ

|

ನಿಮ್ಮ ಪುಟ್ಟ ಮಗುವಿನ ಮೂಲಭೂತ ನೈರ್ಮಲ್ಯದ ಬಗ್ಗೆ, ಸ್ನಾನ ಇತ್ಯಾದಿಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಈ ವಿಚಾರದಲ್ಲಿ ಪ್ರತಿಯೊಬ್ಬರೂ ವಿಭಿನ್ನ ಆಚರಣೆಯನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಮಗುವಿಗೆ ಬೆಳಿಗ್ಗೆ ಸ್ನಾನ ಮಾಡಿಸಿದರೆ, ಇನ್ನೂ ಕೆಲವರು ರಾತ್ರಿ ಚೆನ್ನಾಗಿ ಬರುತ್ತದೆ ಎಂಬ ಕಾರಣಕ್ಕಾಗಿ ರಾತ್ರಿ ಸ್ನಾನ ಮಾಡಿಸುತ್ತಾರೆ.

ಆದರೆ ಈ ಸ್ನಾನ ಮಾಡಿಸುವ ವಿಚಾರದಲ್ಲಿ ನೀವು ಕೆಲವೊಂದು ತಪ್ಪುಗಳನ್ನು ಮಾಡುತ್ತಿರಬಹುದು. ಅದರಲ್ಲಿ ಹೆಚ್ಚು ಸ್ನಾನ ಮಾಡಿಸುವುದು ಕೂಡ ಒಂದು. ಹಾಗಾದರೆ ನಿಮ್ಮ ಮಗುವಿಗೆ ಯಾಕೆ ಹೆಚ್ಚು ಸ್ನಾನ ಮಾಡಿಸಬಾರದು? ಎಷ್ಟು ಸ್ನಾನ ಮಾಡಿಸಬೇಕು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ, ಒಮ್ಮೆ ಈ ಕೆಳಗೆ ಕಣ್ಣಾಯಿಸಿ.

ನಿಮ್ಮ ಮಗುವಿಗೆ ಹೆಚ್ಚು ಸ್ನಾನ ಮಾಡುತ್ತಿದ್ದೀರಾ?:

ನಿಮ್ಮ ಮಗುವಿಗೆ ಹೆಚ್ಚು ಸ್ನಾನ ಮಾಡುತ್ತಿದ್ದೀರಾ?:

ನಾವು ನಮ್ಮ ಮಗು ಸ್ವಚ್ಛವಾಗಿರಬೇಕೆಂದು ಪ್ರತಿದಿನ ಸ್ನಾನ ಮಾಡಿಸುತ್ತೇವೆ. ಆದರೆ ಸಂಶೋಧನೆಯ ಪ್ರಕಾರ, ನಿಮ್ಮ ಮಗುವಿನ ಮೇಲೆ ಹೆಚ್ಚು ಕೊಳಕು ಆಗುವುದೇ ಇರುವುದರಿಂದ ಕೆಲವೊಮ್ಮೆ ನೀವು ಸ್ನಾನ ಮಾಡಿಸದೇ ಇರಬಹದಂತೆ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ 6 ರಿಂದ 11 ವರ್ಷದೊಳಗಿನ ಮಕ್ಕಳಿಗೆ ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಸ್ನಾನ ಮಾಡಿಸಬೇಕು ಎಂದು ಸೂಚಿಸುತ್ತದೆ. ಇದಲ್ಲದೆ, ಈಗಷ್ಟೇ ಅಂಬೆಗಾಲಿಡುತ್ತಿರುವವರು ಮತ್ತು ನವಜಾತ ಶಿಶುಗಳಿಗೆ ಕಡಿಮೆ ಉಜ್ಜಿದರೆ ಸಾಕು. ಏಕೆಂದರೆ ನಿಮ್ಮ ಮಗು ನಡೆಯದೇ ಇರುವ ಕಾರಣ ಕೊಳಕು ಆಗುವ ಸಾಧ್ಯತೆ ಕಡಿಮೆ, ಆದ್ದರಿಂದ ವಾರಕ್ಕೆ ಒಂದು ಅಥವಾ ಎರಡು ಬಾರಿ ಸ್ನಾನ ಮಾಡಿಸಿದರೆ ಸಾಕು. ಇದರ ಜೊತೆಗೆಅವರ ಕೂದಲನ್ನು ವಾರಕ್ಕೊಮ್ಮೆ ಮಾತ್ರ ತೊಳೆಯಬೇಕು ಎಂಬುದನ್ನು ನೆನಪಿನಲ್ಲಿಡಿ.

ನೀವು ಮಕ್ಕಳಿಗೆ ಏಕೆ ಕಡಿಮೆ ಸ್ನಾನ ಮಾಡಿಸಬೇಕು?:

ನೀವು ಮಕ್ಕಳಿಗೆ ಏಕೆ ಕಡಿಮೆ ಸ್ನಾನ ಮಾಡಿಸಬೇಕು?:

ತಜ್ಞರ ಪ್ರಕಾರ ಎಳೆವಯಸ್ಸಿನ ಮಕ್ಕಳ ಚಟುವಟಿಕೆಗಳು ಕಡಿಮೆಯಾಗಿರುತ್ತದೆ. ಇದರಿಂದ ಅವರು ಹೆಚ್ಚು, ಬ್ಯಾಕ್ಟೀರಿಯಾ, ಬೆವರು, ಅದರ ವಾಸನೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಕಡಿಮೆ ಸ್ನಾನ ಮಾಡಿಸಿದರೆ ಸಾಕು. ಇದಲ್ಲದೆ, ನಿಮ್ಮ ಮಗುವಿನ ಮೇಲೆ ಕೆಲವೊಂದು ಕೊಳಕ್ಕನ್ನು ಬಿಡುವುದು ಆರೋಗ್ಯಕರವಾಗಿದೆ. ಏಕೆಂದರೆ ಇದರಿಂದ ಅವರು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಕಲಿಯುತ್ತಾರೆ. ಒಂದು ವೇಳೆ, ನಿಮ್ಮ ಮಗು ಹೊರಗಡೆ ಮಣ್ಣಿನಲ್ಲಿ ಆಡಿದಾಗ ಮಾತ್ರ ಹೆಚ್ಚು ಸ್ನಾನ ಹಾಗೂ ಉಜ್ಜುವಿಕೆಯ ಅಗತ್ಯವಿರುತ್ತದೆ.

ಮಕ್ಕಳಿಗೆ ಪ್ರತಿದಿನ ಸ್ನಾನ ಮಾಡಿಸಲು ಯಾವ ವಯಸ್ಸು ಸೂಕ್ತ?:

ಮಕ್ಕಳಿಗೆ ಪ್ರತಿದಿನ ಸ್ನಾನ ಮಾಡಿಸಲು ಯಾವ ವಯಸ್ಸು ಸೂಕ್ತ?:

ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದ ನಂತರ (12 ವರ್ಷ -13 ವರ್ಷಗಳು) ನಿಯಮಿತವಾಗಿ ಪ್ರತಿದಿನ ಸ್ನಾನ ಮಾಡಲು ಪ್ರಾರಂಭಿಸಬೇಕು. ಈ ಸಮಯದಲ್ಲಿ ಅವರಿಗೆ ಹೆಚ್ಚು ಬೆವರುತ್ತದೆ. ಜೊತೆಗೆ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತದೆ. ಆಗ ಪ್ರತಿದಿನ ಸ್ನಾನ ಹಾಗೂ ಎರಡು ಬಾರಿ ಮುಖ ತೊಳೆಯುವುದು ಅತ್ಯಗತ್ಯ. ಆದರೆ ನಿಮ್ಮ ಮಗುವಿಗೆ ಯಾವುದಾದರೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಅವರ ನೈರ್ಮಲ್ಯ ಅಭ್ಯಾಸದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ಅಂಬೆಗಾಲಿಡುವ ಮಗುವಿಗೆ ಸುರಕ್ಷಿತವಾಗಿ ಸ್ನಾನ ಮಾಡಿಸುವುದು ಹೇಗೆ?:

ಅಂಬೆಗಾಲಿಡುವ ಮಗುವಿಗೆ ಸುರಕ್ಷಿತವಾಗಿ ಸ್ನಾನ ಮಾಡಿಸುವುದು ಹೇಗೆ?:

-ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡಿಮೆ ಬಿಸಿ ಇರುವ ನೀರಿನಿಂದ ಸ್ನಾನ ಮಾಡಿಸಿ.

-ಸುಗಂಧ ರಹಿತ ಸಾಬೂನು ಮತ್ತು ಲೋಷನ್ ಗಳನ್ನು ಬಳಸಿ.

- ಹೆಚ್ಚು ಸ್ನಾನ ಮತ್ತು ಉಜ್ಜುವುದನ್ನು ತಪ್ಪಿಸಿ.

-10 ನಿಮಿಷಗಳ ಸ್ನಾನ ಅವರಿಗೆ ಸಾಕಷ್ಟು ಹೆಚ್ಚು.

English summary

Are You Bathing Your Kid a Lot? Here is The Answer in Kannada

Here we talking about Are you bathing your kid a lot? Here is the answer in Kannada, read on
Story first published: Saturday, May 8, 2021, 17:43 [IST]
X
Desktop Bottom Promotion