For Quick Alerts
ALLOW NOTIFICATIONS  
For Daily Alerts

ಮಗುವಿಗೆ ಎದೆಹಾಲು ನಿಲ್ಲಿಸುವುದರಿಂದ ಉಂಟಾಗುವ ಸಮಸ್ಯೆಗಳೇನು?

By Deepu
|

ತಾಯ್ತನದ ಸುಖದಲ್ಲಿ ಮಗುವಿಗೆ ಹಾಲುಣಿಸುವುದು ಕೂಡ ಅತ್ಯಂತ ಪವಿತ್ರ ಕಾರ್ಯವಾಗಿದೆ. ನೀವು ಒಂಭತ್ತು ತಿಂಗಳ ಕಾಲ ಹೊತ್ತು ಹೆತ್ತ ಮಗುವಿಗೆ ಹಾಲುಣಿಸುವ ಈ ಪುಣ್ಯ ಕಾರ್ಯದಲ್ಲಿ ಪ್ರತಿಯೊಬ್ಬ ತಾಯಿ ಕೂಡ ಮಿಂದೇಳುತ್ತಾಳೆ. ತಾಯಿಯ ಜೀವನದ ಒಂದು ಭಾಗವಾಗಿರುವ ಈ ಪ್ರಕ್ರಿಯೆಯು ಪ್ರಕೃತಿಯ ವರದಾನವಾಗಿದೆ. ಮಗುವಿಗೆ ಹಾಲುಣಿಸುವ ಸಮಯದಲ್ಲಿ ಕೂಡ ತಾಯ್ತನದ ಸವಿಯನ್ನು ಸವಿಯಬಹುದಾಗಿದೆ. ತಾಯಿ ಮತ್ತು ಮಗುವಿನ ಆಪ್ತತೆಯು ಇನ್ನಷ್ಟು ಸಮೀಪಗೊಂಡು ಮಗುವು ತಾಯಿಯನ್ನು ಹೆಚ್ಚು ಅವಲಂಬಿಸುವಂತೆ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಸಿದ್ಧತೆಯನ್ನು ನೀವು ಹಾಲುಣಿಸುವ ಸಮಯದಲ್ಲಿ ಮಾಡಬೇಕಾಗುತ್ತದೆ.

ಇಂದಿನ ಲೇಖನದಲ್ಲಿ ನಾವು ಹಾಲುಣಿಸುವುದನ್ನು ತಾಯಿಯು ನಿಲ್ಲಿಸಿದಾಗ ಉಂಟಾಗುವ ಮಾನಸಿಕ ದೈಹಿಕ ತುಮುಲಗಳ ಬಗ್ಗೆ ತಿಳಿಸಲಿದ್ದೇವೆ. ಹಾಲುಣಿಸುವಾಗ ಮತ್ತು ಹಾಲುಣಿಸುವುದನ್ನು ನಿಲ್ಲಿಸುವಾಗ ತಾಯಿ ಹೇಗೆ ಇದನ್ನು ಅನುಭವಿಸುತ್ತಾಳೆ ಮತ್ತು ಆ ಸಮಸ್ಯೆಗಳೇನು ಎಂಬುದನ್ನು ಇಂದಿಲ್ಲಿ ನೋಡೋಣ...

kid and mother

ಸ್ತನಗಳು ಸೂಕ್ಷ್ಮವಾಗಿರುತ್ತವೆ
ಮೊಲೆಗಳು ಸೂಕ್ಷ್ಮವಾಗಿರುವ ಭಾಗವಾಗಿದ್ದು ಮೊದಲಿಗೆ ಹಾಲುಣಿಸುವ ಸಮಯದಲ್ಲಿ ಮಗು ನೀಡುವ ಕೆಲವೊಂದು ಕೀಟಲೆಗಳನ್ನು ತಾಯಿ ಸಹಿಸಿಕೊಳ್ಳಬೇಕಾಗುತ್ತದೆ. ಪುಟ್ಟ ಕಂದಮ್ಮ ತನ್ನ ಪುಟ್ಟ ಚೂಪಾದ ಹಲ್ಲುಗಳಿಂದ ಸ್ತನಗಳನ್ನು ಕಚ್ಚುವ ಸಾಧ್ಯತೆ ಕೂಡ ಇರುತ್ತದೆ. ಆ ಸಂದರ್ಭದಲ್ಲಿ ನವಿರಾದ ನೋವನ್ನು ತಾಯಿ ಅನುಭವಿಸುತ್ತಾಳೆ. ಎದೆಹಾಲು ನೀಡುವುದನ್ನು ನಿಲ್ಲಿಸಿದ ನಂತರ ಎಲ್ಲವೂ ಸರಿಯಾಗುತ್ತದೆ ಎಂಬುದನ್ನು ನೀವು ಊಹಿಸಿಕೊಳ್ಳುವುದಕ್ಕಿಂತ ಮುಂಚೆ ನೀವು ಎದುರಿಸಬೇಕಾಗಿರುವ ಕೆಲವೊಂದು ಸವಾಲುಗಳನ್ನು ನಾವಿಲ್ಲಿ ತಿಳಿಸುತ್ತುದ್ದೇವೆ. ಕೆಲವೊಮ್ಮೆ ಇದು ಸೂಕ್ಷ್ಮಗೊಳ್ಳಬಹುದು ಇಲ್ಲವೇ ನಿಸ್ತೇಜಗೊಳ್ಳಬಹುದು.

ಸ್ತನ ಛೇದನ
ಸ್ತನ್ಯಪಾನವನ್ನು ಆರಂಭಿಸುವ ಸಮಯದಲ್ಲಿ ಹೆಚ್ಚಿನ ತಾಯಂದಿರು ಸ್ತನಛೇನದಂತಹ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಸ್ತನಗಳ ನಾಳಗಳಲ್ಲಿ ಹಾಲಿನ ಧಾರಣ ಶಕ್ತಿಯ ಸಂಯೋಜನೆಯಿಂದ ಉರಿಯೂತ ಕೂಡ ಉಂಟಾಗಬಹುದು. ಹಾಲುಣಿಸುವಿಕೆಯನ್ನು ನೀವು ನಿಲ್ಲಿಸಿದಾಗ ನಿಮ್ಮ ಸ್ತನ ನಿಸ್ತೇಜಗೊಳ್ಳಬಹುದು. ಇದು ಸ್ತನಛೇದನಕ್ಕೆ ಕಾರಣವಾಗಬಹುದು. ನೋವುಳ್ಳ ಸ್ತನ, ಜ್ವರ ಶೀತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ

ಹಾರ್ಮೋನ್ ಬದಲಾವಣೆಗಳು
ಸ್ತನ್ಯಪಾನವನ್ನು ನಿಲ್ಲಿಸಿದಾಗ ಹೆಚ್ಚಿನ ತಾಯಂದಿರು ಹಾರ್ಮೋನು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ನೋವಿರುವ ಮತ್ತು ಊದಿಕೊಂಡಿರುವ ಸ್ತನ ಇದರಲ್ಲಿ ಒಂದಾಗಿದೆ. ಇನ್ನು ನಿಮ್ಮ ಭಾವನೆಗಳಲ್ಲಿ ಬದಲಾವಣೆ ಉಂಟಾಗುವುದು ಕೂಡ ಇದರಿಂದಾಗಿದೆ.

ನಿಮ್ಮ ಎದೆಹಾಲನ್ನು ಮಗುವು ನೆಚ್ಚಿಕೊಂಡಿರುತ್ತದೆ
ನೀವು ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿದರೂ ಕೂಡ ಮಗುವಿಗೆ ನಿಮ್ಮ ಹಾಲು ಬೇಕು ಎಂದೆನಿಸುತ್ತದೆ. ಅದಕ್ಕೆ ನಿಮ್ಮ ಎದೆಹಾಲು ಸೇವನೆಯೇ ಹೆಚ್ಚು ಆರೋಗ್ಯದಾಯಕ ಎಂದನಿಸುತ್ತದೆ. ಆದರೆ ಇದು ನಿಮಗೆ ಸೂಕ್ತವೆನ್ನಿಸುವುದಿಲ್ಲ. ಈ ಸಮಯದಲ್ಲಿ ನಿಮಗೆ ಮಗುವಿನ ಮೇಲೆ ಕೋಪ ಬರುತ್ತದೆ.

ಸ್ತನದ ಜೋತುಬೀಳುವಿಕೆ
ಗರ್ಭಾವಸ್ಥೆ ಮತ್ತು ಹಾಲುಣಿಸುವ ಸಮಯದಲ್ಲಿ ಸ್ತನವು ಜೋತುಬೀಳುತ್ತದೆ. ಹಾಲುಣಿಸುವ ಸಮಯದಲ್ಲಿ ಅಸ್ಥಿರಜ್ಜುಗಳು ಮತ್ತು ಸಂಯೋಜಕ ಅಂಶಗಳು ಹೊರಬರುತ್ತದೆ ಆದರೆ ಇವುಗಳು ಪುನಃ ದೇಹಕ್ಕೆ ಹಿಂತಿರುಗುವುದಿಲ್ಲ. ಹಾಲಿನೊಂದಿಗೆ ಭರ್ತಿಗೊಂಡ ಸ್ತನವನ್ನು ನೀವು ಹೊಂದಿದಾಗ ಈ ಅಂಶ ನಿಮ್ಮ ಗಮನಕ್ಕೆ ಬರುವುದಿಲ್ಲ. ಒಮ್ಮೆ ಹಾಲುಣಿಸುವುದನ್ನು ನೀವು ನಿಲ್ಲಿಸಿದ ನಂತರ, ಹಿಂದಿನಂತೆ ನಿಮ್ಮ ಸ್ತನವಿಲ್ಲ ಎಂಬುದನ್ನು ನೀವು ಗಮನಿಸುತ್ತೀರಿ.

ಹಾಲು ಒಣಗಲು ಸಮಯ ಬೇಕು
ನೀವು ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿದೊಡನೆ ಸ್ತನದಲ್ಲಿ ಹಾಲು ಕೂಡಲೇ ಒಣಗುತ್ತದೆ ಎಂಬುದಾಗಿ ನೀವು ಭಾವಿಸಿದರೆ ಇದು ಹಾಗೆ ಸಂಭವಿಸುವುದಿಲ್ಲ. ಹಾಲು ಒಣಗಲು ಕೆಲವೊಮ್ಮೆ ವಾರಗಳು ತಿಂಗಳುಗಳೂ ಬೇಕಾಗಿ ಬರಬಹುದು.

ಹಾಲಿನ ಹಠಾತ್ ಸೋರಿಕೆ
ನೀವು ಹಾಲುಣಿಸುವುದನ್ನು ನಿಲ್ಲಿಸಿದ ಸಮಯದಲ್ಲಿ ನಿಮ್ಮ ಸ್ತನದಲ್ಲಿ ಹಾಲಿನ ಸೋರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ನಿಮಗೆ ಮುಜುಗರವನ್ನುಂಟು ಮಾಡಬಹುದು.

ಹಾಲುಣಿಸುವು ವಿಶೇಷ ಅನುಭೂತಿಯ ಕಳೆದುಕೊಳ್ಳುವಿಕೆ
ಹಾಲುಣಿಸುವ ಸಮಯದಲ್ಲಿ ಒಮ್ಮೊಮ್ಮೆ ತಾಯಂದಿರಿಗೆ ಇದನ್ನು ನಿಲ್ಲಿಸಿದರೆ ಸಾಕು ಎಂಬುದು ಮನದಲ್ಲಿರುತ್ತದೆ. ಆದರೆ ಒಮ್ಮೆ ಹಾಲುಣಿಸುವುದನ್ನು ನಿಲ್ಲಿಸಿದ ನಂತರ ತಾಯಿಗೆ ಅಯ್ಯೋ, ನನ್ನ ಮಗುವಿನೊಂದಿಗಿನ ವಿಶೇಷ ಬಾಂಧವ್ಯವನ್ನು ನಾನು ಕಳೆದುಕೊಂಡೆನಲ್ಲ ಎಂಬ ಬೇಸರ ಕಾಡಬಹುದು.

ನಿಮಗೆ ಹೆಚ್ಚು ವಿಶ್ರಾಂತಿ ದೊರಕುತ್ತದೆ
ಹಾಲುಣಿಸುವ ಸಮಯದಲ್ಲಿ ನೀವು ಮಧ್ಯರಾತ್ರಿ ಮಗು ಅತ್ತಾಗ ಆಗಾಗ ಏಳಬೇಕಾಗಿ ಬಂದಿರುತ್ತದೆ. ಈ ಸಮಯದಲ್ಲಿ ನಿಮ್ಮ ನಿದ್ದೆಗೆ ಭಂಗವಾಗುತ್ತದೆ. ಆದರೆ ಹಾಲುಣಿಸುವುದನ್ನು ನಿಲ್ಲಿಸಿದ ನಂತರ ಸುಖವಾದ ನಿದ್ದೆ ನಿಮಗೆ ಬಂದು ಬೆಳಗ್ಗೆ ನೀವು ಫ್ರೆಶ್ಆಗಿ ಏಳುತ್ತೀರಿ.

ತೂಕದಲ್ಲಿ ಏರು ಪೇರು
ಹಾಲುಣಿಸುವಿಕೆಯು ನಿಮಗೆ ಹೆಚ್ಚಿನ ಸಂತಸವನ್ನು ಜೊತೆಗೆ ಹಚ್ಚು ಹಸಿವಾಗುವಿಕೆಯನ್ನು ಉಂಟುಮಾಡಬಹುದು. ಆದರೆ ಈ ಹೆಚ್ಚುವರಿ ಆಹಾರ ಸೇವನೆಯು ನಿಮ್ಮ ತೂಕದಲ್ಲಿ ಪರಿಣಾಮ ಬೀರುವುದಿಲ್ಲ. ಹೆಚ್ಚಿನ ತಾಯಂದಿರುವ ಹಾಲುಣಿಸುವ ಸಮಯದಲ್ಲೇ ಹೆಚ್ಚಿನ ತೂಕವನ್ನು ಕಳೆದುಕೊಂಡಿರುತ್ತಾರೆ. ಆದರೆ ಹಾಲುಣಿಸುವುದನ್ನು ನಿಲ್ಲಿಸಿದ ಸಮಯದಲ್ಲಿ ಈ ರೀತಿಯಾಗುವುದಿಲ್ಲ. ಹಾಲುಣಿಸುವ ಸಮಯದಲ್ಲಿ ನೀವು ಅನುಸರಿಸುವ ಅದೇ ಆಹಾರ ಪದ್ಧತಿಯನ್ನು ಹಾಲುಣಿಸುವುದನ್ನು ನಿಲ್ಲಿಸಿದ ಸಮಯದಲ್ಲಿ ಅನುಸರಿಸಿದರೂ ಕೂಡ ನಿಮ್ಮ ತೂಕ ಏರಿಕೆಯಾಗುವ ಸಾಧ್ಯತೆ ಇರುತ್ತದೆ.

ಭಾವನೆಗಳ ಏರಿಳಿತ
ಹಾಲುಣಿಸುವುದನ್ನು ನೀವು ನಿಲ್ಲಿಸಿದ ಒಡನೆ ಎಲ್ಲಾ ಭಾವನೆಗಳು ನಿಮ್ಮನ್ನು ಮುತ್ತಿಕೊಳ್ಳಬಹುದು, ಇದಕ್ಕೆ ಕಾರಣ ನಿಮ್ಮ ದೇಹದಲ್ಲಿ ಉಂಟಾಗುವ ಹಾರ್ಮೋನು ವೈಪರೀತ್ಯವಾಗಿರಬಹುದು. ನಿಮ್ಮ ಮತ್ತು ಮಗುವಿನ ಸ್ವಾತಂತ್ರ್ಯದಿಂದ ನಿಮಗೆ ಆನಂದವುಂಟಾಗಬಹುದು. ಆದರೆ ಒಮ್ಮೊಮ್ಮೆ ಹತಾಶೆ, ಬೇಸರ ಮತ್ತು ಒತ್ತಡಕ್ಕೆ ನೀವು ಒಳಗಾಗುವ ಸಾಧ್ಯತೆ ಕೂಡ ಇರುತ್ತದೆ.

English summary

What will Happens When You Stop Breastfeeding?

Breastfeeding is one of the most cherished parts of having a baby. Most moms would tell you that they lovedbreastfeeding inspite of the many challenges they may have faced through the process of getting accustomed to it. Though the baby grows in the mother's womb, most women vouch for the fact that they tasted motherhood only when they began breastfeeding. Today, we shall talk about the physical and mental changes that a breastfeeding mother has to face when she is done breastfeeding. Read on to know more.
Story first published: Tuesday, January 30, 2018, 19:43 [IST]
X
Desktop Bottom Promotion