For Quick Alerts
ALLOW NOTIFICATIONS  
For Daily Alerts

ಎದೆ ಹಾಲನ್ನು ಪಂಪ್ ಮಾಡುವುದು ಹೇಗೆ? ಸೂಕ್ತ ಸೂಚನೆಗಳು ಮತ್ತು ಸಲಹೆಗಳು

By Divya Pandit
|

ಮಗು ತಾಯಿ ಗರ್ಭದಿಂದ ಹೊರ ಪ್ರಪಂಚಕ್ಕೆ ಬಂದಂತೆ ಮೊದಲ ಜೀವಧಾರಕ ತಾಯಿಯ ಎದೆಹಾಲು. ಹುಟ್ಟಿ ಆರು ತಿಂಗಳ ಕಾಲ ಮಗುವಿನ ಪೋಷಣೆಯು ಬರೀ ಎದೆಹಾಲೇ ಮಾಡುತ್ತದೆ. ಎದೆಹಾಲು ಉಣಿಸುವುದರಿಂದಲೇ ತಾಯಿ ಮಗುವಿನ ಬಾಂಧವ್ಯ ಗಟ್ಟಿಯಾಗುತ್ತಾ ಹೋಗುವುದು. ಹಾಗಾಗಿ ಮಗುವಿನ ಬೆಳವಣಿಗೆ ಅತ್ಯಾವಶ್ಯಕವಾಗುವ ಎದೆಹಾಲನ್ನು ಸೂಕ್ತ ರೀತಿಯಲ್ಲಿ ನೀಡಬೇಕಾಗುವುದು. ಆರಂಭದ ಹಂತದಲ್ಲಿ ಮಗುವಿಗೆ ಎದೆಹಾಲು ಉಣ್ಣಲು ತಿಳಿಯದೆ ಇರುವುದರಿಂದ ತಾಯಿ ಸರಿಯಾದ ರೀತಿಯಲ್ಲಿ ಹಾಲುಣ್ಣುವುದನ್ನು ತಿಳಿಸಿಕೊಡಬೇಕಾಗುವುದು.

ಕೆಲಸಕ್ಕೆ ಹೋಗುವ ತಾಯಂದಿರು, ಮಕ್ಕಳಿಂದ ದೂರ ಹೋಗುವಂತಹ ಪರಿಸ್ಥಿತಿ ಇರುವಾಗ ಅಥವಾ ಮಗುವಿನ ಅಕಾಲಿಕ ಜನನ ಉಂಟಾದರೆ ತಾಯಿಯ ಎದೆಹಾಲನ್ನು ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗುವುದು. ತಾಯಿಗೆ ಎದೆಹಾಲು ಹೆಚ್ಚಿರುವಾಗ ಅಥವಾ ಮಗುವಿನ ಅಗತ್ಯಕ್ಕೆ ತಕ್ಕಂತೆ ಹಾಲನ್ನು ಹಿಂಡಿ ತೆಗೆಯಬೇಕಾಗುವುದು.

pumping breast milk tips

ಎದೆಹಾಲನ್ನು ಪಂಪ್‍ಮಾಡುವುದು ಹೇಗೆ? ಅದರ ಪರಿಣಾಮ ಏನು? ಹಾಗೂ ಅದರಿಂದ ಉಂಟಾಗುವ ಪರಿಣಾಮಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಈ ಮುಂದೆ ಇರುವ ಮಾಹಿತಿಯನ್ನು ಪರಿಶೀಲಿಸಿ.

ಎದೆಹಾಲಿನ ಪಂಪ್ ಎಂದರೇನು?

ತಾಯಿಯ ಎದೆಹಾಲನ್ನು ಹಿಂಡಿ ತೆಗೆಯುವ ಪ್ರಕ್ರಿಯೆಗೆ ಎದೆಹಾಲಿನ ಪಂಪ್ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವ ತಾಯಂದಿರು ತಮ್ಮ ಎದೆಹಾಲನ್ನು ಪಂಪ್ ಮಾಡಿ ಸಂಗ್ರಹಿಸಿಟ್ಟು ಹೋಗುವ ಪ್ರಕ್ರಿಯೆ ನಡೆಯುತ್ತಿದೆ. ಹಾಲನ್ನು ಪಂಪ್ ಮಾಡುವ ಸಾಧನಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುವುದು. ಬ್ಯಾಟರಿಗಳಿಂದ ಚಲಿಸುವ ಉತ್ಪನ್ನಗಳನ್ನು ಬಳಕೆ ಮಾಡಲಾಗುವುದು. ಅಲ್ಲದೆ ತಾಯಿ ಮಕ್ಕಳ ಅನುಕೂಲಕ್ಕಾಗಿ ಕಚೇರಿಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಮತ್ತು ಮಾಲ್‍ಗಳಲ್ಲಿ ಹಾಲುಣಿಸುವ ವಿಶೇಷ ಕೊಠಡಿಗಳಿರುತ್ತವೆ.

ಎಂದು ಹಾಲನ್ನು ಪಂಪ್ ಮಾಡಬಹುದು?

ಉತ್ತಮ ಫಲಿತಾಂಶ ಪಡೆಯಬೇಕೆಂದರೆ ಆದಷ್ಟು ಬೇಗ ಎದೆಹಾಲನ್ನು ಪಂಪ್‍ಮಾಡಲು ಪ್ರಾರಂಭಿಸಬೇಕಾಗುವುದು. ಮಗುವಿನ ಜನನದ ನಂತರ ಒಂದೆರಡು ದಿನಗಳಲ್ಲಿಯೇ ಎದೆಹಾಲನ್ನು ಪಂಪ್ ಮಾಡಲು ಪ್ರಾರಂಭಿಸಿದರೆ ಎದೆಹಾಲಿನ ಪ್ರಮಾಣ ಹೆಚ್ಚುತ್ತಾ ಹೊಗುವುದು. ಹಾಗೊಮ್ಮೆ ಪ್ರಸವದ ನಂತರ 3-4 ವಾರಗಳ ಅವಧಿಯಲ್ಲಿ ಪ್ರಾರಂಭಿಸಿದರೂ ಯಾವುದೇ ತೊಂದರೆ ಉಂಟಾಗದು.

ಎದೆಹಾಲನ್ನು ಪಂಪ್ ಮಾಡುವುದು ಹೇಗೆ?

ಮಗುವಿಗೆ ಎದೆಹಾಲು ಉಣ್ಣಿಸುವುದರಿಂದ ನಿತ್ಯದ ಕೆಲಸಗಳಿಗೆ ಯಾವುದೇ ತೊಂದರೆ ಉಂಟಾಗದು. ಬಹುತೇಕ ಮಹಿಳೆಯರು ಇದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುತ್ತಾರೆ. ಅನೇಕ ಶಿಶುಗಳು ಪಂಪ್ ಮಾಡಿದ ಹಾಲನ್ನು ಸಹ ಸೇವಿಸಲು ಇಷ್ಟಪಡುತ್ತಾರೆ. ಎದೆಹಾಲನ್ನು ತೆಗೆಯ ಬೇಕು ಎಂದು ಹೇಗೆಂದರೆ ಹಾಗೆ ಮಾಡುವಂತಿಲ್ಲ. ಅದರಿಂದ ತಾಯಿಗೆ ಅನಾನುಕೂಲ ಉಂಟಾಗುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಎದೆಹಾಲನ್ನು ಪಂಪ್ ಮಾಡುವುದರ ಕುರಿತು ಸೂಕ್ತ ಜ್ಞಾನ ಹಾಗೂ ಸೂಚನೆಗಳು ತಿಳಿದಿರಬೇಕಾಗುವುದು.

1. ಆರಾಮದಾಯಕ ವಾಗಿರಿ:

ಗರ್ಭಾವಸ್ಥೆಯಲ್ಲಿ ಹೇಗೆ ಕುಳಿತುಕೊಳ್ಳುವಾಗ ಸೂಕ್ತ ಕ್ರಮವನ್ನು ಅನುಸರಿಸುತ್ತಿದ್ದೀರೋ ಹಾಗೆಯೇ ಮಗುವಿಗೆ ಹಾಲುಣಿಸುವ ವಿಚಾರದಲ್ಲೂ ಸೂಕ್ತ ರೀತಿಯಲ್ಲಿ ಕುಳಿತುಕೊಳ್ಳಬೇಕು. ಅನಾನುಕೂಲವಾಗುವಂತಹ ಯಾವುದೇ ಸ್ಥಿತಿಗೆ ಒಗ್ಗಿಕೊಳ್ಳದಿರಿ. ನೀವು ಹಾಲನ್ನು ಎಷ್ಟು ಪಂಪ್ ಮಾಡಬೇಕು ಎನ್ನುವುದನ್ನು ಅರಿತಿರಬೇಕಾಗುವುದು. ನಿಮ್ಮ ಎದೆಹಾಲಿನ ಪ್ರಮಾಣವನ್ನು ಇತರರಿಗೆ ಹೋಲಿಸಿ ನೋಡಬೇಡಿ. ಆರಾಮದಾಯಕ ರೀತಿಯಲ್ಲಿ ಪಂಪ್ ಮಾಡುವುದನ್ನು ಕಲಿಯಬೇಕು.

2. ಸರಿಯಾದ ಪ್ರಮಾಣವನ್ನು ಆಯ್ಕೆ ಮಾಡಿ

ಎದೆಯ ತೊಟ್ಟಿಗೆ ಸೂಕ್ತ ವಾಗುವಂತೆ ಹಾಗೂ ಅದು ನಿಮ್ಮ ಸ್ತನದ ಹಾಲನ್ನು ಸೂಕ್ತ ರೀತಿಯಲ್ಲಿ ಹೀರಿ ತೆಗೆಯುವಂತೆ ಪಂಪರ್ ಅನ್ನು ಇಟ್ಟುಕೊಂಡು, ಪಂಪ್ ಮಾಡಬೇಕು. ಕೆಲವೊಮ್ಮೆ ಎದೆ ತೊಟ್ಟು ನೋಯುವುದು ಅಥವಾ ಅಸಹನೀಯಕರ ಅನುಭವ ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನಿಮ್ಮ ಸುರಕ್ಷತೆ ಮತ್ತು ಅನುಕೂಲಕ್ಕೆ ತಕ್ಕಂತೆ ಪಂಪರ್ ಇಟ್ಟುಕೊಂಡು ಹಾಲನ್ನು ಪಂಪ್ ಮಾಡಬೇಕು.

3. ಸೂಕ್ತ ಹರಿವು

ಸ್ತನ ಪಾನವು ಒಂದು ನೈಸರ್ಗಿಕ ವಿದ್ಯಮಾನ. ಈ ಪ್ರಕ್ರಿಯೆಯಲ್ಲಿ ಮಗು ಅಥವಾ ಪಂಪ್ ಸೂಕ್ತ ರೀತಿಯಲ್ಲಿ ಹೀರಿಕೊಳ್ಳುವ ಪ್ರಕ್ರಿಯೆಯನ್ನು ಅನುಸರಿಸಬೇಕು. ಪಂಪ್ ಮಾಡುವ ಮೊದಲು ಎದೆಯನ್ನು ಸೂಕ್ತ ರೀತಿಯಲ್ಲಿ ಒಮ್ಮೆ ಮಸಾಜ್ ಮಾಡಿಕೊಳ್ಳಿ. ನಂತರ ಪಂಪ್ ಪ್ರಕ್ರಿಯೆಯನ್ನು ಅನುಸರಿಸಿದರೆ ಹಾಲಿನ ಹರಿವು ಸೂಕ್ತರೀತಿಯಲ್ಲಿ ಉಂಟಾಗುವುದು.

4. ಡಬಲ್ ಪಂಪ್

ಹೆಸರೇ ಹೇಳುವಂತೆ ಒಂದೇ ವೇಳೆಯಲ್ಲಿ ಎರಡು ಸ್ತನಗಳಿಂದ ಹಾಲನ್ನು ಹೀರುವ ಪ್ರಕ್ರಿಯೆಗೆ ಡಬಲ್ ಪಂಪ್ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯನ್ನು ಅನುಸರಿಸುವ ಮಹಿಳೆಯರಿಗೆ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತದೆ ಎಂದು ಹೇಳಲಾಗುವುದು. ಈ ಪ್ರಕ್ರಿಯೆಯಿಂದ ಪ್ರೊಲ್ಯಾಕ್ಟಿನ್ ಪ್ರಕ್ರಿಯೆ ಹೆಚ್ಚಾಗುವುದು ಎಂದು ಹೇಳಲಾಗುತ್ತದೆ. ಡಬಲ್ ಪಂಪ್ ಪ್ರಕ್ರಿಯೆ ಅಹಿತಕರವೆನಿಸಿದರೆ ಅದನ್ನು ಬದಲಾಯಿಸಿಕೊಳ್ಳಬಹುದು.

5. ನಿಮ್ಮ ಆರಾಮದಾಯಕ ನಿರ್ವಾತ ಆರಿಸಿಕೊಳ್ಳಿ

ಪ್ರತಿ ಮಹಿಳೆಯು ನಿರ್ದಿಷ್ಟವಾದ ನಿರ್ವಾತ ಮಟ್ಟವನ್ನು ಹೊಂದಿರುತ್ತಾರೆ. ಅದನ್ನು ಸೂಕ್ತ ರೀತಿಯಲ್ಲಿ ಅರಿತುಕೊಳ್ಳಬೇಕು. ಆಗ ಪಂಪ್ ಪ್ರಕ್ರಿಯೆಯು ಆರಾಮದಾಯಕವಾಗಿರುತ್ತದೆ. ನಿರ್ವಾತ ಮಟ್ಟವನ್ನು ಬದಲಿಸುವುದರ ಮೂಲಕ ನಿಮ್ಮ ಮಟ್ಟವನ್ನು ಗುರುತಿಸಿಕೊಳ್ಳಬಹುದು. ಸೂಕ್ತ ಜಾಗವನ್ನು ಗುರುತಿಸಿ, ನಂತರ ಪಂಪರ್ ಇಟ್ಟುಕೊಂಡು ಪಂಪ್ ಮಾಡಬೇಕು ಎಂದು ಸಲಹೆ ನೀಡಲಾಗುವುದು.

ಎದೆಹಾಲು ಸಂಗ್ರಹಣೆ ಹೇಗೆ?

ಎದೆಹಾಲು ಪಂಪ್ ಮಾಡುವುದರ ಕುರಿತು ತಿಳಿದುಕೊಂಡ ನಂತರ ಅದರ ಸಂಗ್ರಹಣೆ ಮಾಡುವುದು ಹೇಗೆ? ಎನ್ನುವ ಪ್ರಶ್ನೆ ಕಾಡುವುದು ಸಹಜ. ಎದೆಹಾಲು ಸಂಗ್ರಹಿಸುವ ಮುನ್ನ ಯಾವ ಸಮಯದಲ್ಲಿ ಹಾಗೂ ಎಷ್ಟು ವಧಿಯವರೆಗೆ ಸಂಗ್ರಹಿಸಿಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾದ ಸಂಗತಿಯಾಗಿರುತ್ತದೆ.

1. ಒಂದು ಗಂಟೆಗಳ ಕಾಲ

ಒಮ್ಮೆ ಪಂಪ್ ಮಾಡಿದ ಹಾಲನ್ನು 6 ಗಂಟೆಯ ಒಳಗೆ ಮಗು ಸೇವಿಸುತ್ತದೆ ಎಂದಾದರೆ ಅದರ ಬಗ್ಗೆ ವಿಶೇಷ ಎಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಆಗ ಕೊಠಡಿಯ ಉಷ್ಣಾಂಶಕ್ಕೆ ತಕ್ಕಂತೆ ಸಂಗ್ರಹಿಸಿಡಬಹುದು. ಕೊಠಡಿಯ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‍ಗಿಂತ ಅಧಿಕವಾಗಿ ಇರಬಾರದು. 6 ಗಂಟೆಗಿಂತ ಅಧಿಕ ಸಮಯ ಸಂಗ್ರಹಿಸಿಡಬೇಕೆಂದರೆ ಫ್ರಿಜ್‍ಗಳಲ್ಲಿ ಸಂಗ್ರಹಿಸಿಡಬಹುದು.

2. ವಾರಗಳ ಕಾಲ

ಒಂದು ದಿನಕ್ಕಿಂತ ಹೆಚ್ಚು ಸಮಯಗಳ ಕಾಲ ಹಾಲನ್ನು ಸಂಗ್ರಹಿಸಿಡಬೇಕೆಂದರೆ ಫ್ರಿಜ್‍ಗಳಲ್ಲಿ ಘನೀಕರಿಸುವಲ್ಲಿ ಇಡಬೇಕು. ಮಾಲಿನ್ಯದಿಂದ ತಪ್ಪಿಸಲು ಮಾಂಸ, ಮೊಟ್ಟೆ ಅಥವಾ ಯಾವುದೇ ಬೇಯಿಸಿದ ಆಹಾರ ಪದಾರ್ಥಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಎದೆಹಾಲನ್ನು 5-6 ದಿನಗಳ ಕಾಲ ಆರೋಗ್ಯಕರವಾಗಿರುವಂತೆ ಸಂಗ್ರಹಿಸಿಡಬಹುದು. ಫ್ರೀಜರ್ ಅಲ್ಲಿ ಇಟ್ಟ ಹಾಲು ಎರಡು ವಾರಗಳವರೆಗೆ ಸುರಕ್ಷಿತವಾಗಿ ಇರುವುದು.

3. ತಿಂಗಳು

ಕೆಲವು ಕಾರಣಗಳಿಂದಾಗಿ ನಿಮ್ಮ ಎದೆಹಾಲನ್ನು 6 ತಿಂಗಳ ಕಾಲ ಹಾಳಾಗದಂತೆ ಇಡಬೇಕು ಎಂದಾದರೆ ಫ್ರೀಜರ್ ಅಲ್ಲಿ ಸಂಗ್ರಹಿಸಿ ಇಡಬಹುದು. ಆಗ ಫ್ರೀಜರ್‍ನ ತಾಪಮಾನ 18 ಡಿಗ್ರಿ ಅಥವಾ ಮೈನಸ್ ಅಲ್ಲಿ ಇಡಲು ಮರೆಯಬಾರದು.

Read more about: ಹಾಲು ತಾಯಿ breast
English summary

How To Pump Breast Milk?

The lifeline for a baby in the early days of life - breastmilk - is what keeps him or her nourished for the first 6 months of his or her life. It is so well loaded with nutrients that the child does not really need anything more to keep him or her sustained for those few months. Now breastfeeding is indeed a bonding experience for both the mother and the child. However, it is not always possible that the child would be breastfed live.
X
Desktop Bottom Promotion