For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಹೆರಿಗೆಯಾದ ಬಳಿಕ ಸೆಕ್ಸ್‌ಗಾಗಿ ಎಷ್ಟು ದಿನಗಳವರೆಗೆ ಕಾಯಬೇಕು?

|

ಒಂದು ವೇಳೆ ನೀವು ನವಜಾತ ಶಿಶುವೊಂದರ ತಾಯಿಯಾಗಿದ್ದರೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ನಿಮ್ಮ ಜೀವನ ಬದಲಾಗುವುದು ಮಾತ್ರವಲ್ಲ, ಹೆಚ್ಚು ಜವಾಬ್ದಾರಿಯುತವೂ ಆಗಿರುತ್ತದೆ. ಬಾಣಂತನದ ಅವಧಿಯಲ್ಲಿ ನಿಮ್ಮ ದೇಹ ಹಿಂದಿನ ಆರೋಗ್ಯ ಪಡೆಯುವತ್ತ ಚೇತರಿಸಿಕೊಳ್ಳುತ್ತಿರುವ ಕಾರಣ ಹಲವಾರು ಕಾರ್ಯಗಳನ್ನು ಮುಂದೂಡಬೇಕಾಗಿರುವುದು ಅನಿವಾರ್ಯ. ಇದರಲ್ಲಿ ಸಮಾಗಮವೂ ಒಂದು.

ಸಹಜ ಹೆರಿಗೆಯಾದ 90% ರಷ್ಟು ಮಹಿಳೆಯರಿಗೆ ಪ್ರಸೂತಿ ತಜ್ಞರು ಹೆರಿಗೆ ಸುಲಭವಾಗಲೆಂದು ಕೊಂಚ ಕೊಯ್ತ ಮಾಡಿರುತ್ತಾರೆ. ಉಳಿದಂತೆ ಸಿಸೇರಿಯನ್ ಹೆರಿಗೆಯಾಗಿದ್ದರೆ ಇದರ ಗಾಯ ಕೊಂಚ ದೊಡ್ಡದೇ ಆಗಿದ್ದು ಇದು ಮಾಗಲು ಹೆಚ್ಚೇ ಸಮಯ ಬೇಕಾಗುತ್ತದೆ. ಹಾಗಾಗಿ ಮತ್ತೊಮ್ಮೆ ಲೈಂಗಿಕ ಸಂಬಂಧಕ್ಕೆ ಅಣಿಯಾಗಲು ಎಷ್ಟು ಸಮಯ ಬೇಕೆಂಬುದು ಆಯಾ ಮಹಿಳೆಯ ಆರೋಗ್ಯವನ್ನಾಧರಿಸಿ ಕೇವಲ ವೈದ್ಯರು ಮಾತ್ರವೇ ಸರಿಯಾದ ಉತ್ತರ ನೀಡಬಲ್ಲರು.

ಪ್ರಸೂತಿತಜ್ಞರ ಪ್ರಕಾರ

ಪ್ರಸೂತಿತಜ್ಞರ ಪ್ರಕಾರ

ಅನುಭವಿ ದಾದಿಯರು ಹಾಗೂ ಪ್ರಸೂತಿತಜ್ಞರ ಪ್ರಕಾರ ಹೆರಿಗೆಯ ಆರು ವಾರಗಳಾದರೂ ಚೇತರಿಕೆಗೆ ಅವಶ್ಯವಾಗಿದ್ದು ಈ ಅವಧಿಯಲ್ಲಿ ಸಂಸರ್ಗದಿಂದ ದೂರವಿರಬೇಕೆಂದು ಸಲಹೆ ಮಾಡುತ್ತಾರೆ. ಈ ಅವಧಿಯಲ್ಲಿ ಬಾಣಂತಿಯ ಜನನಾಂಗಗಳ ಪರಿಶೀಲನೆಯ ಮೂಲಕ ಗಾಯಗಳು ಸೂಕ್ತವಾಗಿ ಮಾಗುತ್ತಿವೆಯೇ ಎಂದು ವೈದ್ಯರು ಪರೀಕ್ಷಿಸಿ ಮುಂದಿನ ಕ್ರಮವನ್ನು ಸೂಚಿಸುತ್ತಾರೆ. ಆದರೆ ಸಂಶೋಧನೆಗಳ ಮೂಲಕ ಈ ವಿಧಾನ ಅಷ್ಟೊಂದು ಪ್ರಯೋಜನಕರವಲ್ಲ (ಹೆಚ್ಚಿನವು ಪ್ರಯೋಜನಕಾರಿಯಾಗಿದ್ದರೂ) ಎಂದು ಪರಿಗಣಿಸಿ ಈಗ ಈ ವಿಧಾನವನ್ನು ನಿಲ್ಲಿಸಲಾಗಿದೆ.

Most Read: ಮೊದಲ ಸಲ ಸೆಕ್ಸ್ ನಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವೇ?

ವರದಿಯ ಪ್ರಕಾರ

ವರದಿಯ ಪ್ರಕಾರ

BJOG ಎಂಬ ಅಂತಾರಾಷ್ಟ್ರೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಹೆರಿಗೆಯ ಬಳಿಕ ಆರನೆಯ ವಾರ ನಡೆಸಿದ ಪರೀಕ್ಷೆಯಲ್ಲಿ 41%ರಷ್ಟು ಪ್ರಥಮ ಹೆರಿಗೆಯಾದ ಮಹಿಳೆಯರು ಹಿಂದಿನ ದಿನಗಳಲ್ಲಿ ಸಂಸರ್ಗ ನಡೆಸಿದ್ದರು ಎಂದು ಕಂಡುಬಂದಿದೆ. ಈ ಪ್ರಮಾಣ ಹನ್ನೆರಡನೆಯ ವಾರವಾಗುತ್ತಿದ್ದಂತೆಯೇ 78%.ಕ್ಕೇರಿದೆ. ಸಹಜ ಹೆರಿಗೆಯಾದ ಮಹಿಳೆಯರು ಆರು ವಾರ ಕಳೆಯುವುದಕ್ಕೂ ಮುನ್ನವೇ ಸಂಸರ್ಗಕ್ಕೆ ಮನಸ್ಸು ಮಾಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಆದರೆ ಸಿಸರೇನಿಯನ್ ಹೆರಿಗೆಯಾದ ಮಹಿಳೆಯರಲ್ಲಿ 33%ದಷ್ಟು ಮಹಿಳೆಯರು ಮಾತ್ರ ಆರು ವಾರಕ್ಕೂ ಮುನ್ನ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದಾರೆ.

ಸಂಶೋಧನೆಗಳ ಪ್ರಕಾರ

ಸಂಶೋಧನೆಗಳ ಪ್ರಕಾರ

1970ರ ದಶಕದಲ್ಲಿ ನಡೆಸಿದ ಸಂಶೋಧನೆಗಳಲ್ಲಿ ಕಂಡುಬಂದ ಪ್ರಕಾರ ಸಹಜ ಅಥವಾ ಸಿಸರೇನಿಯನ್ ಹೆರಿಗೆಯಾದ ಮಹಿಳೆಯರು ಕೇವಲ ಎರಡರಿಂದ ನಾಲ್ಕು ವಾರಗಳಲ್ಲಿಯೇ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದರು. 1976ರಲ್ಲಿ American Journal of Obstetrics and Gynecology ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಈ ಅವಧಿಯಲ್ಲಿ ಸಂಸರ್ಗ ನಡೆಸಿದಾಗ ಇನ್ನೂ ಮಾಗದೇ ಇದ್ದ ಗಾಯಗಳಿಂದ ರಕ್ತ ಸೋರಿತ್ತು ಹಾಗೂ ನೋವು ಸಹಾ ಎದುರಾಗಿತ್ತು. ಆದರೆ ಸಂಸರ್ಗದ ಸುಖವನ್ನು ಪಡೆಯುವಲ್ಲಿ ಏನೂ ತೊಂದರೆಯಾಗಿರಲಿಲ್ಲ ಎಂದು ಈ ಮಹಿಳೆಯರ ಅಭಿಪ್ರಾಯವಾಗಿತ್ತು. ಈ ಮಾಹಿತಿಯನ್ನು ಪರಿಗಣಿಸಿದರೆ ವೈದ್ಯರು ನೀಡುವ ಆರು ವಾರಗಳ ಗಡುವನ್ನು ಚಾಚೂತಪ್ಪದೆ ಪಾಲಿಸುವುದು ಎಷ್ಟು ಅಗತ್ಯ ಎಂದು ಮನಗಾಣಬಹುದು.

ಪರಿಹಾರ ಏನು?

ಪರಿಹಾರ ಏನು?

ಕೆಲವು ಸಂದರ್ಭಗಳಲ್ಲಿ ಹೆರಿಗೆಯ ಮೂರು ವಾರಗಳ ಕಾಯುವಿಕೆ ಸಾಧ್ಯ ಎನ್ನಲು ಪುರಾವೆಗಳನ್ನು ಒದಗಿಸಲಾಗಿದೆ. ಹೆರಿಗೆಯ ಸಮಯದಲ್ಲಿ ಮಗುವಿನ ಜನನದ ಬಳಿಕ ವಿಸರ್ಜನೆಗೊಳ್ಳುವ ಮಾಸು (placenta)ಗರ್ಭಕೋಶದಿಂದ ಪ್ರತ್ಯೇಕಗೊಂಡು ಹೊರಬಂದ ಅಂಗವಾಗಿದ್ದು ಗರ್ಭಕೋಶದಲ್ಲಿ ಈ ಭಾಗದಲ್ಲಿ ತಾಜಾ ಗಾಯವಾಗಿರುತ್ತದೆ. ಈ ಗಾಯಗಳು ಹೆರಿಗೆಯ ಬಳಿಕ ನಿಧಾನವಾಗಿ ಮಾಗುತ್ತಾ ಹೋಗುತ್ತವೆ. ತೆರೆದ ರಕ್ತನಾಳಗಳ ರಕ್ತ ಹೆಪ್ಪುಗಟ್ಟಿ ಸಂಕುಚಿತಗೊಂಡು ಗರ್ಭಕೋಶ ನಿಧಾನವಾಗಿ ಹಿಂದಿನ ಸ್ಥಿತಿಯತ್ತ ತೆರಳುತ್ತದೆ. ಈ ಕ್ರಿಯೆ ಪೂರ್ಣಗೊಳ್ಳಲು ಸುಮಾರು ಮೂರು ವಾರ ಬೇಕು. ಆದರೆ ಈ ಅವಧಿಯಲ್ಲಿ ನಡೆಯುವ ಸಂಸರ್ಗ ಇನ್ನೂ ಮಾಗುತ್ತಿರುವ ರಕ್ತನಾಳಗಳ ತುದಿಗಳಿಗೆ ಘರ್ಷಣೆ ನೀಡಿ ಇವನ್ನು ತೆರೆಯುತ್ತವೆ ಹಾಗೂ ಇಲ್ಲಿಂದ ಮತ್ತೆ ರಕ್ತಸ್ರಾವ ಪ್ರಾರಂಭವಾಗುತ್ತದೆ.

ಪರಿಹಾರ ಏನು?

ಪರಿಹಾರ ಏನು?

ಅಲ್ಲದೇ ಸಂಸರ್ಗದ ಸಮಯದಲ್ಲಿ ಜನನಾಂಗಕ್ಕೆ ಹಾಯುವ ಗಾಳಿ ಸಹಾ ಈ ತೆರೆದ ಗಾಯಗಳಲ್ಲಿ ಚಿಕ್ಕ ಗುಳ್ಳೆಗಳಂತೆ ತುಂಬಿಕೊಂಡು ರಕ್ತನಾಳಗಳ ಒಳಗೆ ಈ ಗುಳ್ಳೆಗಳು ನುಸುಳಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ. ಈ ಸ್ಥಿತಿಗೆ air embolus ಎಂದು ಕರೆಯುತ್ತಾರೆ. (ಒಂದು ವೇಳೆ ಈ ಗುಳ್ಳೆಗಳು ದೇಹದಲ್ಲಿ ಮುಂದೆ ಸಾಕಿ ಒಂದಕ್ಕೊಂದು ಸೇರಿ ದೊಡ್ಡ ಗುಳ್ಳೆಯಾಗಿ ಹೃದಯ ತಲುಪಿದರೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚುತ್ತದೆ) ಈ ಸ್ಥಿತಿ ಅತ್ಯಪರೂಪವಾಗಿದ್ದರೂ ನಾವೇ ಕೈಯಾರೆ ಈ ಪರಿಸ್ಥಿತಿಯನ್ನು ಮೈಮೇಲೆ ಎಳೆದುಕೊಳ್ಳುವುದೇಕೆ? 1967‑1993ರ ನಡವೆ ವೈದ್ಯರ ಸಲಹೆಯನ್ನು ಮೀರಿ ಸಂಸರ್ಗ ನಡೆಸಿದ ಮಹಿಳೆಯರ ಪೈಕಿ ಇಪ್ಪತ್ತು ಲಕ್ಷ ಮಹಿಳೆಯರಲ್ಲಿ ಇಬ್ಬರು ಈ ಸ್ಥಿತಿಯಿಂದ ಮರಣ ಹೊಂದಿದ್ದಾರೆ ಎಂದು the Postgraduate Journal of Medicine ಎಂಬ ನಿಯತಕಾಲಿಕೆ ವರದಿ ಮಾಡಿದೆ. ಇದು ಅತ್ಯಪರೂಪವೇ ಇರಬಹುದು, ಆದರೂ ಈ ಸ್ಥಿತಿ ಯಾರಿಗೂ ಬರಬಹುದು. ಅಷ್ಟೇ ಅಲ್ಲ, ಇನ್ನೂ ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡು ಎಚ್ಚರಿಸಿರುವ ಪ್ರಕಾರ ಹೆರಿಗೆಯ ಬಳಿಕ ಮೊಣಕಾಲುಗಳನ್ನು ಎದೆಯವರೆಗೆ ಮಡಚಿರುವ ಭಂಗಿಯ ಸಂಸರ್ಗದಿಂದ ಎದೆಯ ಭಾಗದಲ್ಲಿ ಉಂಟಾಗುವ ಒತ್ತಡ ಈ ಗಾಳಿಗುಳ್ಳೆಗಳನ್ನು ರಕ್ತನಾಳಗಳ ಒಳಗೆ ಸೆಳೆದುಕೊಳ್ಳಲು ಇನ್ನಷ್ಟು ನೆರವಾಗುತ್ತದೆ.

Most Read: ಒಂದು ಗಂಟೆಯಲ್ಲಿ ಎರಡು ಬಾರಿ ಸೆಕ್ಸ್ ನಡೆಸಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು!

ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ

ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ

ಕಾಯುವಿಕೆ ಇಷ್ಟವಾಗದೇ ಹೋದರೂ ಸರಿ, ಬಾಣಂತಿಯ ಆರೋಗ್ಯಕ್ಕೆ ಇದರಿಂದ ಹಲವಾರು ಪ್ರಯೋಜನಗಳಿವೆ. ಬಾಣಂತನದ ಅವಧಿಯಲ್ಲಿ ಮಹಿಳೆ ಅಶಕ್ತಳು ಹಾಗೂ ಸೂಕ್ಷ್ಮಸಂವೇದಿಯಾಗಿರುತ್ತಾಳೆ. ಈ ಅವಧಿಯ ಸಂಸರ್ಗ ಆಕೆಯನ್ನು ಇನ್ನಷ್ಟು ಸುಸ್ತು ಮಾಡುವುದು ಮಾತ್ರವಲ್ಲ ನಿಜವಾದ ಲೈಂಗಿಕ ಸಂವೇದನೆಯನ್ನೇ ಪಡೆಯದಿರಬಹುದು. 2000ರಲ್ಲಿ ಇಂಗ್ಲೆಂಡಿನ British Journal of General Practice ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಪ್ರಥಮ ಹೆರಿಗೆಯಾದ 78 ಮಹಿಳೆಯರಲ್ಲಿ ಕೇವಲ ಮೂವತ್ತು ಮಹಿಳೆಯರು ತಮಗೆ ನಿಜವಾದ ಲೈಂಗಿಕ ತೃಪ್ತಿ ಹೆರಿಗೆಯ ಎಂಟು ತಿಂಗಳ ಬಳಿಕ ಸಿಕ್ಕಿದೆ ಎಂದು ಒಪ್ಪಿಕೊಂಡಿದ್ದರೆ 65 ಮಹಿಳೆಯರು ಇದಕ್ಕೂ ಮುನ್ನವೇ ತೃಪ್ತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಹೆರಿಗೆಯ ಬಳಿಕ ಮೊದಲಿನ ಲೈಂಗಿಕ ಜೀವನ ನಡೆಸಲು ಸಾಕಷ್ಟು ಸಮಯಾವಕಾಶ ನೀಡುವುದೇ ಒಳ್ಳೆಯದು ಹಾಗೂ ಹೆರಿಗೆಗೂ ಮುನ್ನ ಸಮಯದ ಲೈಂಗಿಕ ಚಟುವಟಿಕೆಗೆ ಹಿಂದಿರುಗಲು ಸುಮಾರು ಒಂದು ವರ್ಷವೇ ಬೇಕಾಗಬಹುದು.

English summary

How long after giving birth should wait before having sex again?

If you've just had a baby, restarting your sex life may not be a priority. You'll be sore, not to mention exhausted. Up to 90% of first-time mothers who deliver vaginally will have torn tissue or an episiotomy (a small cut). If you've had a caesarean section your wound will hurt. How soon until you are ready for sex is more a personal than medical decision. Doctors and midwives have generally advised waiting until the six-week postnatal check. Women used to be given vaginal examinations at this point to assess healing but research showed the practice was not useful (most were fine) and it was abandoned.
Story first published: Friday, November 16, 2018, 20:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more