For Quick Alerts
ALLOW NOTIFICATIONS  
For Daily Alerts

ಮಗುವಿನ ಅಕಾಲಿಕ ಹುಟ್ಟಿಗೆ ಕಾರಣ ಏನು ಗೊತ್ತಾ?

By Sushma Charhra
|

ಯಾವಾಗ ಮಹಿಳೆ ಬಸುರಿಯಾಗುತ್ತಾಳೋ ಆಕೆಯ ತಲೆಯಲ್ಲಿ ತನ್ನ ಆರೋಗ್ಯಕ್ಕಿಂತ ಹೆಚ್ಚಾಗಿ ತನ್ನ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೇಂದ್ರೀಕೃತವಾಗುತ್ತೆ. ಪ್ರತಿಯೊಬ್ಬ ಮಹಿಳೆಗೂ ಆ ಪ್ರಮುಖ ಒಂಬತ್ತು ತಿಂಗಳು ಆರಾಮದಾಯವಾಗಿದ್ದು, ಪುಟ್ಟ ಕಂದಮ್ಮ ತನ್ನ ತೋಳ ತೆಕ್ಕೆಯಲ್ಲಿ ಆರೋಗ್ಯವಾಗಿ ಮತ್ತು ಆರಾಮಾಗಿ ಬಂದು ಸೇರಬೇಕು ಅನ್ನುವ ಬಯಕೆ ಇರುತ್ತೆ. ಆದರೆ ಎಲ್ಲಾ ಮಹಿಳೆಯರು ಅಷ್ಟೊಂದು ಅದೃಷ್ಟ ಮಾಡಿರುವುದಿಲ್ಲ. ಹಲವು ಸಮಸ್ಯೆಗಳಿಗೆ ಅವರು ತುತ್ತಾಗಬೇಕಾಗುತ್ತೆ. ಎಲ್ಲವೂ ನಾರ್ಮಲ್ ಆಗಿ ಇರಲು ಸಾಧ್ಯವಾಗದೇ ಇರಬಹುದು.

40 ವಾರ ಮುಗಿಯುವುದರ ಒಳಗಾಗಿಯೇ ಕೆಲವು ಮಹಿಳೆಯರಿಗೆ ಪ್ರಸವ ವೇದನೆ ಕಾಣಿಸಿಕೊಂಡು ಬಿಡಬಹುದು. ಕೆಲವು ದಶಮಾನಗಳ ಕೆಳಗೆ ತಿಂಗಳು ಭರ್ತಿಯಾಗದೆ ಹೆರುವುದು ಅಂದರೆ ಮಗುವಿನ ಮರಣ ಇಲ್ಲವೇ ತಾಯಿಯ ಮೃತ್ಯು ಅಂತಲೇ ನಿರ್ಧರಿತವಾಗಿತ್ತು. ಅದೇ ಕಾರಣಕ್ಕೆ ಹೆರಿಗೆ ಅನ್ನುವುದು ಹೆಣ್ಣಿನ ಪುನರ್ಜನ್ಮ ಅಂತ ಶರಾ ಬರೆದು ಇಟ್ಟಿದ್ದು. ಆದರೀಗ ವಿಜ್ಞಾನ ಮತ್ತು ಔಷಧಗಳಿಂದಾಗಿ ಬೇಗನೆ ಹುಟ್ಟುವ ಮಕ್ಕಳು ಆರೋಗ್ಯವಾಗಿ, ಎಲ್ಲರಂತೆ ಬದುಕಲು ಸಾಧ್ಯಾವಾಗುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಸವ ವೇದನೆ ಬೇಗನೆ ಕಾಣಿಸಿಕೊಂಡು ಹೆರಿಗೆಯ ದಿನಾಂಕಕ್ಕಿಂತ ಮೊದಲೇ ಹೆರಿಗೆ ಆಗಲು ಕಾರಣವೇನು ಅನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಇದು ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಕಡಿಮೆಗೊಳಿಸಲು ಮತ್ತು ಈ ಬಗ್ಗೆ ಮೊದಲೇ ಜಾಗೃತಿ ವಹಿಸಲು ಸಹಕಾರಿಯಾಗುತ್ತೆ. ಇವತ್ತು ನಾವು ಇದಕ್ಕೆ ಕಾರಣವಾಗುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಗಮನ ಹರಿಸೋಣ.

1. ಪ್ರಿಎಕ್ಲಾಮ್ಪ್ಸಿಯ

1. ಪ್ರಿಎಕ್ಲಾಮ್ಪ್ಸಿಯ

ಶೇಕಡಾ 7 ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ತಾಯ್ತನದ 9 ತಿಂಗಳಲ್ಲಿ ಪ್ರಿಎಕ್ಲಾಮ್ಪ್ಸಿಯ ಕಾಣಿಸಿಕೊಳ್ಳುತ್ತೆ ಅಂದರೆ ಪೂರ್ವ ನಿಗದಿತ ನಂಜು ಕಾಣಿಸಿಕೊಳ್ಳುತ್ತೆ. ಇದು ಸಾಮಾನ್ಯವಾಗಿ 4ನೇ ತಿಂಗಳಿನಿಂದ ಅಂದರೆ 20 ನೇ ವಾರದ ನಂತರ ಆರಂಭವಾಗುತ್ತೆ. ಇದರ ಗುಣಲಕ್ಷಣಗಳೆಂದರೆ ಪ್ರಮುಖವಾಗಿ ದೇಹದಲ್ಲಿ ಪ್ರೋಟೀನ್ ಅಂಶ ಅಧಿಕಗೊಳ್ಳುವುದು, ಮತ್ತು ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವುದು. ಒಂದು ವೇಳೆ ಇದೆರಡು ಗುಣಲಕ್ಷಣಗಳು ಬಸುರಿಯಾಗಿದ್ದಾಗ ಕಾಣಿಸಿಕೊಂಡರೆ ಆಕೆಯನ್ನು ಹೆಚ್ಚುವರಿ ನಿಗಾ ವಹಿಸಬೇಕಾಗುತ್ತೆ ಅಂತಲೇ ಅರ್ಥ. ಒಂದು ವೇಳೆ ಇದನ್ನು ಕಡೆಗಣಿಸಿದರೆ ಬೇಗನೆ ಹೆರಿಗೆ ನೋವು ಕಾಣಿಸಿಕೊಂಡು ಡೆಲಿವರಿ ಆಗುವ ಸಾಧ್ಯತೆಗಳಿರುತ್ತೆ ಮತ್ತು ಮಗುವಿನ ಪ್ರಾಣಕ್ಕೂ ಹಾನಿಯಾಗುವ ಸಾಧ್ಯತೆಗಳಿರುತ್ತೆ. ಅಷ್ಟೇ ಅಲ್ಲ, ತಾಯಿಯ ಆರೋಗ್ಯಕ್ಕೂ ಇದು ಕುತ್ತು ತರಬಹುದು.

2.HELLP

2.HELLP

HELLP ಅಂದರೆ ಮೂರು ವಿವಿಧ ಪರಿಸ್ಥಿತಿಗಳನ್ನು ಸೇರಿ ಹೇಳುವುದು. ಈ ಮೂರು ಪರಿಸ್ಥಿತಿಗಳಿಂದಾಗಿ ಹೆರಿಗೆ ನೋವು ಬೇಗ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತೆ. H ಅಂದರೆ ಹಿಮೋಲಿಸಿಸ್. ಹಿಮೋಲಿಸಿಸ್ ಅಂದರೆ ಕೆಂಪು ರಕ್ತಕಣಗಳ ಕಾರ್ಯಚಟುವಟಿಕೆ ದಿನದಿಂದ ದಿನಕ್ಕೆ ಸ್ಥಗಿತಗೊಳ್ಳುವುದು ಇಲ್ಲವೇ ಕಡಿಮೆಯಾಗುವುದು. EL ಅಂದರೆ ಇಲವೇಟೆಡ್ ಲಿವರ್ ಎನ್ಜೈಮ್ಸ್. ಇಲ್ಲಿ ಯಕೃತ್ತಿಗೆ ಸಂಬಂಧಿಸಿದ ಕಿಣ್ವಗಳ ಕಾರ್ಯಚಟುವಟಿಕೆ ಅಧಿಕಗೊಳ್ಳುವುದು. LP ಅಂದರೆ ಕ್ತಕಣಗಳು ಕಡಿಮೆಯಾಗುವುದು. ಫ್ಲೇಟ್ಲೆಟ್ಸ್ ಗಳ ಕಡಿಮೆಯಾಗುವ ಪರಿಣಾಮ ರಕ್ತಸಂಚಾರದಲ್ಲಿ ವ್ಯತ್ಯಯವಾಗುವುದು. HELLP ಅನ್ನುವುದು ಪ್ರಾಣಕ್ಕೆ ಹಾನಿ ತರುವ ಸಂದರ್ಬವಾಗಿದೆ. ಆದರೆ ಇದು ಬಹಳ ಕಡಿಮೆ ಜನರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದ್ದು ಶೇಕಡಾ 0.2 ನಷ್ಟು ಮಹಿಳೆಯರಲ್ಲಿ ಬರಬಹುದಷ್ಟೇ.

3.ಗರ್ಭಕಂಠ ಮತ್ತು ಗರ್ಭಕೋಶದ ಅಸಹಸ ಸ್ಥಿತಿ

3.ಗರ್ಭಕಂಠ ಮತ್ತು ಗರ್ಭಕೋಶದ ಅಸಹಸ ಸ್ಥಿತಿ

ಕೆಲವು ಮಹಿಳೆಯರಲ್ಲಿ ಗರ್ಭಕೋಶದ ತನ್ನ ಸಮಯಕ್ಕಿಂತ ಮುಂಚೆಯೇ ಕರಾರಿಗೆ ನಿಂತು ಬಿಡುತ್ತೆ. ಈ ಸಂದರ್ಬದಲ್ಲಿ ಮಗು ಬೇಗನೆ ಹುಟ್ಟುವ ಸಾಧ್ಯತೆಗಳಿರುತ್ತೆ. ಕೆಲವರಲ್ಲಿ ಗರ್ಭಕೋಶದ ಆಕಾರವು ಅಸಹಜವಾಗಿರುವ ಸಾಧ್ಯತೆಗಳಿದ್ದು ಅದೇ ಕಾರಣಕ್ಕೆ ಗರ್ಭಕಂಠವು 9 ತಿಂಗಳವರೆಗೆ ಮುಚ್ಚಿಕೊಂಡಿರಲು ಸಾಧ್ಯವಾಗದೇ ಇರುವಂತ ಸ್ಥಿತಿಯಲ್ಲಿರಬಹುದು. ಇಂತಹ ಸಂದರ್ಬದಲ್ಲಿ ವೈದ್ಯರು ಆದಷ್ಟು ಬೆಡ್ ರೆಸ್ಟ್ ಮಾಡಲು ಸಲಹೆ ನೀಡುತ್ತಾರೆ. ಅಷ್ಟೇ ಅಲ್ಲ ಈಗಿನ ವೈದ್ಯಕೀಯ ಚಿಕಿತ್ಸೆಗಳಿಂದಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.

4.ಜನನಾಂಗದಲ್ಲಿ ಸೋಂಕು

4.ಜನನಾಂಗದಲ್ಲಿ ಸೋಂಕು

ಒಂದು ವೇಳೆ ಬಸುರಿ ಹೆಂಗಸರ ಜನನಾಂಗದಲ್ಲಿ ಸೋಂಕು ಕಾಣಿಸಿಕೊಂಡರೆ ಆಕೆಗೆ ಬೇಗನೆ ಡೆಲವರಿ ಆಗುವ ಸಂಭವವಿರುತ್ತೆ. ಬ್ಯಾಕ್ಟೀರಿಯಾಗಳ ಸೋಂಕು ಅಥವಾ ಇನ್ನಿತರೆ ಯಾವುದೇ ಸೋಂಕುಗಳು ಬೇಗನೆ ಮಗು ಹುಟ್ಟುವಂತೆ ಮಾಡುತ್ತೆ. ಇದು ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕಾರಣಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಡೆಲಿವರಿಯ ನಂತರವೂ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಗಳಿರುತ್ತೆ.

5.ಬೇಗನೆ ಹೆರಿಗೆಯಾದ ಇತಿಹಾಸ

5.ಬೇಗನೆ ಹೆರಿಗೆಯಾದ ಇತಿಹಾಸ

ಒಂದು ವೇಳೆ ತಮ್ಮ ಹಿಂದಿನ ಪ್ರಗ್ನೆನ್ಸಿಯಲ್ಲಿ ಬೇಗನೆ ಹೆರಿಗೆಯಾಗಿ ಮಗು ಬೇಗನೆ ಹುಟ್ಟಿದ್ದು, ಪುನಃ ಈಗಿನ ಪ್ರಗ್ನೆನ್ಸಿಯಲ್ಲೂ ಅದು ಮರುಕಳಿಸುವ ಸಾಧ್ಯತೆಗಳಿರುತ್ತೆ. ಒಂದು ವೇಳೆ ಹಿಂದಿನ ನಿಮ್ಮ ಪ್ರಗ್ನೆನ್ಸಿಯಲ್ಲಿ ಪ್ರಿಮೆಚ್ಯೂರ್ ಮಗು ಹುಟ್ಟಿದ್ದು, ಅದೇ ಕಾರಣಕ್ಕೆ ನೀವು ಹಿಂದಿನ ಪ್ರಗ್ನೆನ್ಸಿಯನ್ನು ಕಳೆದುಕೊಂಡಿದ್ದು ಇಲ್ಲವೇ ಅತೀ ಕಡಿಮೆ ತೂಕದ ಮಗುವಿನ ಜನನವಾಗಿದ್ದಲ್ಲಿ ನಿಮ್ಮ ವೈದ್ಯರ ಬಳಿ ಸರಿಯಾದ ಸಲಹೆ ಪಡೆದುಕೊಳ್ಳಬೇಕಾಗುತ್ತದೆ. ಮತ್ತು ಅದಕ್ಕೆ ಸೂಕ್ತ ಔಷದೋಪಚಾರ ಮತ್ತು ಜಾಗೃತಿಯನ್ನು ವಹಿಸಬೇಕಾಗುತ್ತದೆ.

6.ಅಸಹಜ ಗರ್ಭಪಾತ

6.ಅಸಹಜ ಗರ್ಭಪಾತ

ಒಂದು ವೇಳೆ ಹಿಂದಿನ ದಿನಗಳಲ್ಲಿ ನಿಮಗೆ ನೈಸರ್ಗಿಕ ಗರ್ಭಪಾತವಾಗಿದ್ದು, ಈಗ ಆರೋಗ್ಯವಾಗಿ ತಾಯಿಯಾಗುವ ಖುಷಿಯಲ್ಲಿದ್ದೀರಾದರೆ, ಬೇಗನೆ ಡೆಲಿವರಿ ಆಗುವ ಸಾಧ್ಯತೆಗಳಿರುತ್ತೆ. ಹಿಂದಿನ ಪ್ರಗ್ನೆನ್ಸಿಯಲ್ಲಿ ಕಳೆದುಕೊಂಡಿರುವುದರ ಸಣ್ಣ ಎಫೆಕ್ಟ್ ನಿಮ್ಮ ಈಗಿನ ಪ್ರಗ್ನೆನ್ಸಿಯಲ್ಲಿ ಆಗುವ ಸಾಧ್ಯತೆಗಳಿದ್ದು, ಅದಕ್ಕಾಗಿ ಯಾವುದೇ ಭಯ ಪಡುವ ಅಗತ್ಯವಿಲ್ಲ,

7.ಸಹಜ ಗರ್ಭಪಾತ

7.ಸಹಜ ಗರ್ಭಪಾತ

ಸ್ವಇಚ್ಛೆಯಿಂದ ಯಾವುದೋ ಕಾರಣಕ್ಕೆ ನೀವು ನಿಮ್ಮ ಹಿಂದಿನ ಪ್ರಗ್ನೆನ್ಸಿಯನ್ನು ತೆಗೆಸಿಕೊಂಡಿದ್ದರೆ, ಅದು ಮುಂದಿನ ಗರ್ಭಧಾರಣೆಯಲ್ಲಿ ಬೇಗನೆ ಮಗುವಿನ ಜನನಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ, ಇಂತಹ ತಪ್ಪುಗಳು ನಿಮ್ಮ ಮಗುವಿನ ಬೆಳವಣಿಗೆಯ ಮೇಲೆ ಬಹಳ ಪರಿಣಾಮ ಬೀರುತ್ತೆ. ಹಾಗಾಗಿ ಸ್ವಇಚ್ಛೆಯ ಗರ್ಭಪಾತವನ್ನು ನಿಮ್ಮನ್ನ ದುರ್ಬಲರನ್ನಾಗಿಸುತ್ತೆ ಅನ್ನುವುದು ನಿಮಗೆ ನೆನಪಿರಲಿ.,

8.ಅವಳಿಜವಳಿ ಮಕ್ಕಳ ಜನನ

8.ಅವಳಿಜವಳಿ ಮಕ್ಕಳ ಜನನ

ಒಂದು ವೇಳೆ ನೀವು ಅವಳಿ ಮಕ್ಕಳ ತಾಯಿಯಾಗುತ್ತಿದ್ದರೆ, ಅಂತಹ ಸಂದರ್ಬದಲ್ಲಿ ಸಮಯಕ್ಕೆ ಮುನ್ನವೇ ಹೆರಿಗೆಯಾಗುವ ಸಾಧ್ಯತೆಗಳಿರುತ್ತೆ. ಶೇಕಡಾ 60 ಕ್ಕೂ ಹೆಚ್ಚು ಅವಳಿ ಮಕ್ಕಳ ತಾಯಿಯಂದಿರು ಬೇಗನೆ ಹೆರಿಗೆ ನೋವು ಅನುಭವಿಸುತ್ತಾರೆ., ಒಂದು ವೇಳೆ ಮೂರು ಮಕ್ಕಳಿದ್ದರೆ ಇದರ ಶೇಕಡಾ ರಿಸ್ಕ್ ಪ್ರಮಾಣ 90 ಶೇಕಡಾ ಹೆಚ್ಚುತ್ತದೆ. 36 ನೇ ವಾರಕ್ಕೆ ಅವಳಿ ಮಕ್ಕಳು ಹುಟ್ಟುವ ಸಾಧ್ಯತೆಗಳು ಹೆಚ್ಚು. ತ್ರಿವಳಿಗಳಾದರೆ 32 ಅಥವಾ 30 ನೇ ವಾರದ ಹೊತ್ತಿಗೆ ಹೆರಿಗೆ ನೋವು ಬರುವ ಸಾಧ್ಯತೆಗಳು ಹೆಚ್ಚು.

9.ಕೌಟುಂಬಿಕ ಇತಿಹಾಸ

9.ಕೌಟುಂಬಿಕ ಇತಿಹಾಸ

ಒಂದು ವೇಳೆ ನಿಮ್ಮ ಕುಟುಂಬದ ಹತ್ತಿರದವರು ಯಾರಾದರೂ ತಿಂಗಳು ತುಂಬುವ ಮುನ್ನವೇ ಹುಟ್ಟಿದವರಾಗಿದ್ದರೆ ನಿಮಗೂ ಬೇಗನೆ ಹೆರಿಗೆಯಾಗುವ ಸಾಧ್ಯತೆಗಳಿರುತ್ತೆ. ಒಂದು ವೇಳೆ ನೀವೇ ತಿಂಗಳು ತುಂಬುವ ಮುನ್ನ ನಿಮ್ಮ ತಾಯಿಗೆ ಜನನವಾಗಿದ್ದರೆ ನಿಮ್ಮ ಮಗುವೂ ತಿಂಗಳು ಮುಗಿಯುವ ಮುನ್ನವೇ ಹುಟ್ಟಿಬಿಡಬಹುದು. ಒಂದು ವೇಳೆ ಈ ಕುಟುಂಬದ ಇತಿಹಾಸವನ್ನು ವೈದ್ಯರು ಕೇಳುವುದನ್ನು ಮರೆತರೆ, ನೀವೇ ತಿಳಿಸಿ ಅವರ ಬಳಿ ಸಲಹೆ ಪಡೆದುಕೊಳ್ಳುವುದು ಸೂಕ್ತ.

10.ವಂಶಪಾರಂಪರ್ಯ

10.ವಂಶಪಾರಂಪರ್ಯ

ಜೀನ್ಸ್ ಗರ್ಭಾವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಅನ್ನುವುದು ಎಲ್ಲರಿಗೂ ತಿಳಿದಿರುವ ಅಂಶ. ಕಪ್ಪು ವರ್ಣದ ಮಹಿಳೆಯರಿಗಿಂತ ಶ್ವೇತವರ್ಣದ ಮಹಿಳೆಯರಲ್ಲಿ ಶೇಕಡಾ 17 ರಷ್ಟು ಬೇಗನೆ ಹೆರಿಗೆ ನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಒಂದು ವೇಳೆ ನೀವು ಈ ರೇಸ್ ನಲ್ಲಿದ್ದರೆ ಖಂಡಿತ ಸರಿಯಾದ ಸಲಹೆ ಮತ್ತು ಸೂಚನೆಯನ್ನು ವೈದ್ಯರ ಬಳಿ ಪಡೆದು ಚಿಕಿತ್ಸೆ ಪಡೆದು ಮುನ್ನಡೆಯಿರಿ ಮತ್ತು ಹ್ಯಾವ್ ಎ ಹ್ಯಾಪಿ ಡೆಲಿವರಿ.

11.ತಾಯಿಯ ವಯಸ್ಸು

11.ತಾಯಿಯ ವಯಸ್ಸು

ವಯಸ್ಸು ಬಹಳ ಪ್ರಮುಖವಾಗಿರುವ ವಿಚಾರ. ಯಾವ ವಯಸ್ಸಿನಲ್ಲಿ ಹೆಣ್ಣೊಬ್ಬಳು ಗರ್ಭ ಧರಿಸಿದರೆ ಸೂಕ್ತ ಅನ್ನುವ ವಿಚಾರ ಬಹಳ ಪ್ರಮುಖವಾಗುತ್ತೆ. ಅತೀ ಕಡಿಮೆ ವಯಸ್ಸಿನವರು ಪ್ರಗ್ನೆನ್ ಆದರೆ ಬೇಗನೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತೆ. ಪ್ರಮುಖವಾಗಿ 14 ರಿಂದ 17 ವರ್ಷದವರು ಪ್ರಗ್ನೆಂಟ್ ಆಗುವುದು ಸರಿಯಲ್ಲ. ಆದರೆ 18 ರಿಂದ 19 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಕಡಿಮೆ. ಆದರೆ 35 ವರ್ಷದ ನಂತರ ಬಸುರಿಯಾಗುವವರಲ್ಲಿ ಖಂಡಿತ ಬೇಗನೆ ಹೆರಿಗೆ ನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತೆ. ಆದರೆ 39 ವರ್ಷದೊಳಗಿನ ಮಹಿಳೆಯರು ಸರಿಯಾದ ಸೂಚನೆಯ ಮೇರೆಗೆ ಬಸುರಿಯಾದರೆ ನಾರ್ಮಲ್ ಡೆಲಿವರಿ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ 40 ವರ್ಷ ವಯಸ್ಸಿನ ನಂತರ ಮಕ್ಕಳಾಗುವುದು ಬಹಳ ಕಷ್ಟವಾಗಬಹುದು. ಅದರಲ್ಲೂ ಬೇಗನೆ ಡೆಲಿವರಿ ಆಗುವುದು ರಿಸ್ಕ್ ಕಾಣಿಸಿಕೊಳ್ಳುವುದು ಅಧಿಕ.

12.ತಾಯಿಯ ಒತ್ತಡದ ಜೀವನ

12.ತಾಯಿಯ ಒತ್ತಡದ ಜೀವನ

ಯಾವುದೇ ಕಾರಣಗಳಿಲ್ಲದೆ ಹೇಳಿಲ್ಲ ಬಸುರಿ ಹೆಂಗಸರು ಆದಷ್ಟು ಖುಷಿಯಾಗಿರಬೇಕು ಮತ್ತು ಒತ್ತಡಮುಕ್ತರಾಗಿರಬೇಕು ಎಂದು. ಒತ್ತಡದಲ್ಲಿದ್ದಾಗ ಮಹಿಳೆಯರಲ್ಲಿ epinephrine ಮತ್ತು cortisol ದೇಹ ಬಿಡುಗಡೆಗೊಳಿಸುತ್ತೆ. ಇದು ಹಾರ್ಮೋನುಗಳಲ್ಲಿ ಸಾಕಷ್ಟು ವ್ಯತ್ಯಯಗಳಿಗೆ ಕಾರಣವಾಗುತ್ತೆ.ಇವು prostaglandins ಮತ್ತು estriol ನ್ನು ಅಧಿಕಗೊಳಿಸುತ್ತೆ. ಹೆರಿಗೆ ನೋವು ಬೇಗ ಕಾಣಿಸಿಕೊಳ್ಳಲು ಕಾರಣವಾಗಿರುವ ಅಂಶಗಳಲ್ಲಿ ಇವು ಪ್ರಮುಖವಾದದ್ದು. ಹೆದರಿಕೆಯು ದೇಹವನ್ನು ಬಸುರಿಯ ಪ್ರಕ್ರಿಯೆಗೆ ಯಾವುದೇ ಬೆಂಬಲವನ್ನೂ ನೀಡುವುದಿಲ್ಲ. ಅದೇ ಕಾರಣಕ್ಕೆ ತಾಯಿಗೆ ದೈರ್ಯ ಹೆಚ್ಚಿರಬೇಕು. ಆಕೆ ಸಾಕಷ್ಟು ಒಳ್ಳೆಯ ಆಲೋಚನೆಗಳನ್ನು ಮಾಡಬೇಕು ಎಂದು ಹಿರಿಯರು ತಿಳಿಸಿರುವುದು. ಒಂದು ವೇಳೆ ಆಕೆ ಪ್ರಗ್ನೆನ್ಸಿಯಲ್ಲಿ ದೃತಿಗೆಟ್ಟರೆ ಆಕೆಯ ಆರೋಗ್ಯದಲ್ಲಿ ವ್ಯತ್ಯಯವಾಗಿ ಬೇಗನೆ ಹೆರಿಗೆ ನೋವು ಕಾಣಿಸಿಕೊಳ್ಳಬಹುದು ಮತ್ತು ಅದು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮವನ್ನುಂಟು ಮಾಡಬಹುದು.

13.ಒಂದು ಪ್ರಗ್ನೆನ್ಸಿಯಿಂದ ಇನ್ನೊಂದು ಪ್ರಗ್ನೆನ್ಸಿಯ ನಡುವಿನ ಅಂತರ

13.ಒಂದು ಪ್ರಗ್ನೆನ್ಸಿಯಿಂದ ಇನ್ನೊಂದು ಪ್ರಗ್ನೆನ್ಸಿಯ ನಡುವಿನ ಅಂತರ

ಒಂದು ಪ್ರಗ್ನೆನ್ಸಿ ಅಂದರೆ ಮಹಿಳೆಯ ದೇಹದಲ್ಲಿನ ಹಲವು ಬದಲಾವಣೆಗಳಿಗೆ ಕಾರಣವಾಗುತ್ತೆ ಮತ್ತು ಬೇರೆಬೇರೆ ಪೋಷಕಾಂಶಗಳು ಆಕೆಯ ದೇಹದಿಂದ ಕಡಿಮೆಯಾಗಿರುತ್ತೆ. ಎದೆಹಾಲು ಉಣಿಸುವಿಕೆಯೂ ಕೂಡ ತಾಯಿಯನ್ನು ಮತ್ತಷ್ಟು ವೀಕ್ ಮಾಡುವುದುಂಟು. ಹಾಗಾಗಿ ಒಂದು ಪ್ರಗ್ನೆನ್ಸಿಯಿಂದ ಹೆಣ್ಣೊಬ್ಬಳು ಚೇತರಿಸಿಕೊಂಡು ತನ್ನ ಸಹಜ ದೇಹ ಪ್ರಕ್ರಿಯೆಗೆ ಒಳಗಾಗಲು ಸಮಯ ಬೇಕಾಗುತ್ತದೆ. ಆಕೆಯ ದೇಹವು ಮತ್ತೆ ಇನ್ನೊಂದು ಮಗುವಿಗೆ ಜನ್ಮ ನೀಡಲು ಸಿದ್ಧಗೊಳ್ಳಬೇಕಿದ್ದರೆ ಆಕೆಯ ದೇಹದ ರಿಪ್ರೊಡಕ್ಷನ್ ಸಿಸ್ಟಮ್ ಸಹಜ ಸ್ಥಿತಿಗೆ ಮರಳಬೇಕು. ಒಂದು ಆ ಸಮಯ ಆಕೆಗೆ ಸಿಗದೆ ಕೂಡಲೇ ಮತ್ತೆ ಬಸುರಿಯಾಗಿದ್ದಲ್ಲಿ ಆಕೆಗೆ ಲೇಬರ್ ನೋವು ಬೇಗನೆ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಒಂದು ಪ್ರಗ್ನೆನ್ಸಿಯಿಂದ ಎರಡನೇ ಪ್ರಗ್ನೆನ್ಸಿಗೆ ಕಡಿಮೆ ಅಂದರೂ 18 ತಿಂಗಳ ಅಂತರ ಇರಲೇಬೇಕು. ಈ ಅಂತರ ಆಕೆಯ ದೇಹವು ಕಳೆದುಕೊಂಡಿರುವ ಪೋಷಕಾಂಶಗಳನ್ನು ಮರಳಿ ಪಡೆದು,ಮೊದಲಿನಂತೆ ಸಹಜ ಸ್ಥಿತಿಗೆ ತಲುಪಲು ಅನುವು ಮಾಡಿ ಕೊಟ್ಟಿರುತ್ತದೆ.

14.ಧೂಮಪಾನ, ಮಧ್ಯಪಾನ

14.ಧೂಮಪಾನ, ಮಧ್ಯಪಾನ

ಒಮ್ಮೆ ನೀವು ತಾಯಿಯಾಗುತ್ತಿದ್ದೀರಿ ಅಂದರೆ ನಿಮ್ಮ ಜೀವನ ಶೈಲಿಯನ್ನು ನೀವು ಬದಲಿಸಿಕೊಳ್ಳಲೇಬೇಕಾಗುತ್ತದೆ. ನಿಮ್ಮ ಮಗುವಿನ ಆರೋಗ್ಯಕ್ಕಾಗಿ ಇದು ಬಹಳ ಮುಖ್ಯ. ಧೂಮಪಾನ ಮತ್ತು ಮಧ್ಯಪಾನದ ಅಭ್ಯಾಸ ಇರುವ ಮಹಿಳೆಯರಿಗೆ ಪ್ರಿಮೆಚ್ಯೂರ್ ಡೆಲಿವರಿ ಅಂದರೆ ಬೇಗನೆ ಪ್ರಸವ ವೇದನೆ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ. ಅಥವಾ ಯಾರೋ ಧೂಮಪಾನ ಮಾಡುತ್ತಿದ್ದು, ಅದರ ವಾಸನೆಯನ್ನು ನೀವು ಸತತವಾಗಿ ಸೇವಿಸುತ್ತಿದ್ದರೆ ಖಂಡಿತ ಅದೂ ಕೂಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ಬೇಗನೆ ಹೆರಿಗೆ ನೋವು ಕಾಣಿಸಿಕೊಳ್ಳುವಂತೆ ಮಾಡುತ್ತೆ. ಹಾಗಾಗಿ ಲೈಫ್ ಸ್ಟೈಲ್ ಬದಲಾವಣೆ ಅನ್ನೋದು ಇಡೀ ಕುಟುಂಬಕ್ಕೆ ಅನ್ವಯಿಸುತ್ತದೆ. ಯಾರಾದರೂ ಮನೆಯಲ್ಲಿ ಬಸುರಿ ಹೆಂಗಸರಿದ್ದರೆ ಇಡೀ ಕುಟುಂಬದವರು ಮಧ್ಯಪಾನ ಮತ್ತು ಧೂಮಪಾನದಿಂದ ದೂರವಿರಬೇಕಾಗುತ್ತದೆ ಇಲ್ಲದಿದ್ದರೆ ಅದು ನಿಮ್ಮ ಕುಟುಂಬದ ಮುಂದಿನ ತಲೆಮಾರಿನ ಕುಡಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಮಹಿಳೆಗೆ ಬೇಗನೆ ಹೆರಿಗೆ ನೋವು ಕಾಣಿಸಿಕೊಳ್ಳಬಹುದು.

Read more about: health pregnancy
English summary

Common Causes Of Preterm Labour During Pregnancy

Every woman would surely agree on the fact that the most privileged experience for her is bringing a new life into this world. Going through the process of labour and giving birth is indeed joyful.
X
Desktop Bottom Promotion