For Quick Alerts
ALLOW NOTIFICATIONS  
For Daily Alerts

ಹೆರಿಗೆ ಬಳಿಕ ನಿಮಗೋಸ್ಕರ ಸಮಯ ತೆಗೆಯುವುದು ಹೇಗೆ?

By Lekhaka
|

ಗರ್ಭಧಾರಣೆಯ ಆ ಒಂಬತ್ತು ತಿಂಗಳು ತುಂಬಾ ಕಷ್ಟಕರವಾಗಿ ಸಾಗಿತು. ಇನ್ನು ಮಗುವಿನ ಜನನದ ಬಳಿಕವಾದರೂ ಸ್ವಲ್ಪ ಮಟ್ಟಿಗೆ ತನ್ನ ದೇಹಕ್ಕೆ ಆರಾಮ ಮತ್ತು ಕಾಳಜಿ ವಹಿಸಬೇಕೆಂದು ಮಹಿಳೆಯರು ಭಾವಿಸಿದ್ದರೆ ಇದು ಕಷ್ಟದ ಕೆಲಸ. ಯಾಕೆಂದರೆ ಮಗುವಿನ ಜನನದ ಬಳಿಕ ನೀವು ಹೆಚ್ಚಿನ ಸಮಯವನ್ನು ಮಗುವಿನ ಆರೈಕೆಗೆ ನೀಡಬೇಕಾಗುತ್ತದೆ. ಮಗು ರಾತ್ರಿ ವೇಳೆ ಎದ್ದಾಗ ನಿಮ್ಮ ನಿದ್ರಾಭಂಗವಾಗುವುದು.

ಅದಕ್ಕೆ ಹಸಿವಾದಾಗ ಹಾಲುಣಿಸಬೇಕು. ಮಗುವಿನ ಜನನದ ಬಳಿಕದ ಸಮಯವು ತಾಯಿ ಮತ್ತು ಮಗುವಿಗೆ ಅತೀ ಮುಖ್ಯವಾಗಿರುವುದು. ಆರಂಭದಲ್ಲಿ ತಾಯಿಯ ಅಪ್ಪುಗೆ, ಆಕೆಯ ಮಾತುಗಳು ಮಗುವಿಗೆ ಅತೀ ಅಗತ್ಯ. ಇಂತಹ ಸಮಯದಲ್ಲಿ ಮಹಿಳೆಯರ ದೇಹಕ್ಕೆ ವಿರಾಮ ಸಿಗುವುದಿಲ್ಲ ಮತ್ತು ಅವರ ಬಗ್ಗೆ ಕಾಳಜಿ ವಹಿಸುವುದು ತುಂಬಾ ಕಷ್ಟವಾಗುತ್ತದೆ.

ಹೆರಿಗೆ ಬಳಿಕ ಆಗುವ ದೈಹಿಕ ಬದಲಾವಣೆಗೆ ತಯಾರಾಗಿ!

ಆದರೆ ಮಗುವಿನ ಜನನದ ಬಳಿಕ ತಾನು ಮಾಡಬಹುದಾದ ಕೆಲವೊಂದು ವಿಷಯಗಳನ್ನು ಪಟ್ಟಿ ಮಾಡಿಕೊಂಡರೆ ಒಳ್ಳೆಯದು. ಯಾಕೆಂದರೆ ಇದು ಹೆರಿಗೆ ಬಳಿಕದ ಕೆಲವು ತಿಂಗಳು ವಿಶ್ರಾಂತಿಯಿಲ್ಲದೆ ಇರುವಿಕೆಗೆ ಇದು ಪರಿಹಾರ ನೀಡಲಿದೆ. ಇಲ್ಲಿ ಕೆಲವೊಂದು ವಿಚಾರಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನು ನೀವು ಪರಿಗಣಿಸಿದರೆ ನಿಮ್ಮ ದೇಹದ ಕಾಳಜಿ ಮಾಡಬಹುದು ಮತ್ತು ನಿಮಗೂ ವಿರಾಮ ಸಿಗುವುದು. ಅವು ಯಾವುದೆಂದು ತಿಳಿಯಲು ಓದುತ್ತಾ ಸಾಗಿ....

ನರ್ಸ್ ಸೇವೆ ಪಡೆಯಿರಿ

ನರ್ಸ್ ಸೇವೆ ಪಡೆಯಿರಿ

ಹೆರಿಗೆ ಬಳಿಕ ನೋಡಿಕೊಳ್ಳುವುದರಲ್ಲಿ ಪರಿಣತಿಯನ್ನು ಪಡೆದಿರುವಂತಹ ನರ್ಸ್ ಗಳು ಇದ್ದಾರೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ನರ್ಸ್ ಸೇವೆ ಪಡೆಯಬಹುದು. ನಿಮ್ಮ ಮೊದಲ ಮಗುವಾಗಿದ್ದರೆ ಮತ್ತು ನಿಮಗೆ ನೆರವಿಗೆ ಬೇರೆ ಯಾರೂ ಇಲ್ಲವೆಂದಾದರೆ ಹೀಗೆ ಮಾಡಿ. ನರ್ಸ್ ನೆರವಿನಿಂದ ನಿಮಗೆ ಹೆಚ್ಚಿನ ವಿಶ್ರಾಂತಿ ಸಿಗುವುದು ಮತ್ತು ಬೇಗನೆ ಚೇತರಿಸಿಕೊಳ್ಳುವಿರಿ.

ರಾತ್ರಿ ವೇಳೆಗೆ ನರ್ಸ್ ಸೇವೆ ಪಡೆಯಿರಿ

ರಾತ್ರಿ ವೇಳೆಗೆ ನರ್ಸ್ ಸೇವೆ ಪಡೆಯಿರಿ

ಮಗುವಿನ ಜನನದ ಬಳಿಕ ರಾತ್ರಿಗಳು ತುಂಬಾ ಕಷ್ಟಕರವಾಗಿರುವುದು. ಮಗುವಿಗೆ ಆಗಾಗ ಎದೆಹಾಲುಣಿಸಬೇಕು. ಮಗು ಅತ್ತರೆ ನಿದ್ರೆಗೆ ಭಂಗವಾಗುವುದು. ಪದೇ ಪದೇ ಮಗು ಅಳುವ ಕಾರಣ ನಿಮಗೆ ನಿದ್ರೆ ಬರುವುದು ಕಡಿಮೆಯಾಗುವುದು. ಇಂತಹ ಸಂದರ್ಭದಲ್ಲಿ ನಿಮ್ಮ ಪತಿಗೂ ನಿದ್ರೆ ಇಲ್ಲದಂತಾಗುತ್ತದೆ. ಇದಕ್ಕಾಗಿ ರಾತ್ರಿ ವೇಳೆ ಮಗು ನೋಡಿಕೊಳ್ಳಲು ನರ್ಸ್ ಸೇವೆ ಪಡೆದರೆ ಒಳ್ಳೆಯದು. ಆಕೆ ಮಗುವಿನ ಆರೈಕೆ ಹೇಗೆ ಮಾಡಬೇಕೆಂದು ಹೇಳಿಕೊಡುವಳು. ಸಿಸೇರಿಯನ್ ಆಗಿದ್ದ ಸಮಯದಲ್ಲಿ ಎದೆಹಾಲು ನೀಡುವುದು ಕಷ್ಟವಾಗುತ್ತದೆ. ಆಗ ನರ್ಸ್ ನಿಮಗೆ ನೆರವಾಗುವಳು. ಇವರು ರಾತ್ರಿ ವೇಳೆ ಮಾತ್ರ ಕೆಲಸ ಮಾಡುವರು. ಆದರೂ ನಿಮಗೆ ತುಂಬಾ ನೆರವಿಗೆ ಬರುವುದು.

ಸರಿಯಾಗಿ ನಿದ್ರೆ ಮಾಡಿ

ಸರಿಯಾಗಿ ನಿದ್ರೆ ಮಾಡಿ

ಮಗುವಿನ ಜನನದ ಬಳಿಕ ಸರಿಯಾಗಿ ನಿದ್ರೆ ಮಾಡಲು ನಿಮಗೆ ಸಮಯ ಸಿಗುವುದಿಲ್ಲ. ಅದರಲ್ಲೂ ನಿಮಗೆ ಬೇರೆ ಯಾರಿಂದಲೂ ನೆರವು ಸಿಗದೇ ಇದ್ದರೆ ಮಲಗುವುದು ಕಷ್ಟವಾಗಬಹುದು. ನಿಮ್ಮ ಸ್ನೇಹಿತೆ ಅಥವಾ ಕುಟುಂಬದವರನ್ನು ಕರೆಯಿರಿ. ನಿಮ್ಮ ಮಗುವಿಗೆ ನೆರವಾಗಲು ಸೂಚಿಸಿ. ನಿಮಗೆ ಸಿಗುವಂತಹ ಸಮಯದಲ್ಲಿ ನಿದ್ರೆ ಮಾಡಲು ಪ್ರಯತ್ನಿಸಿ.

ಸ್ನೇಹಿತೆಯರ ಬಳಗಕ್ಕೆ ಮರಳಿ

ಸ್ನೇಹಿತೆಯರ ಬಳಗಕ್ಕೆ ಮರಳಿ

ನೀವು ಗರ್ಭಧಾರಣೆ ಸಮಯದಲ್ಲಿ ತುಂಬಾ ಕಷ್ಟದ ಸಮಯ ಎದುರಿಸಿದ್ದರೆ ಆಗ ನೀವು ಎಲ್ಲಾ ಸ್ನೇಹಿತೆಯರಿಂದಲೂ ಸಂಪರ್ಕ ಕಡಿದುಕೊಂಡಿರುತ್ತೀರಿ. ಸ್ನೇಹಿತೆಯರೊಂದಿಗೆ ಹೊರಗಡೆ ಹೋಗುವುದು ಅಥವಾ ಸುತ್ತಾಡಲು ಹೋಗುವಂತಹ ಸಮಯ ನಿಮಗೆ ಸಿಗದೇ ಇರಬಹುದು. ನೀವು ಸ್ನೇಹಿತೆಯರೊಂದಿಗೆ ಹೊರಗಡೆ ಹೋಗಲು ಸಮಯ ನಿಗದಿ ಮಾಡಿ. ದೊಡ್ಡ ಮಟ್ಟದ ಪಾರ್ಟಿಗೆ ಅಲ್ಲದಿದ್ದರೂ ಒಂದು ಕಪ್ ಕಾಫಿ ಕುಡಿಯಲು ಹೋಗಿ. ನೀವು ಹೊರಗೆ ಹೋಗುವಾಗ ಮಗುವನ್ನು ಕುಟುಂಬದವರು ಅಥವಾ ನರ್ಸ್ ಜತೆ ಬಿಟ್ಟು ಹೋಗಿ. ನೀವು ಅವರನ್ನು ಮನೆಗೆ ಕೂಡ ಕರೆಯಬಹುದು. ಆದರೆ ಇದರಿಂದ ಮಗುವಿಗೆ ಕಿರಿಕಿರಿಯಾಗಬಹುದು.

ಮಸಾಜ್ ಮಾಡಿಸಿಕೊಳ್ಳಿ

ಮಸಾಜ್ ಮಾಡಿಸಿಕೊಳ್ಳಿ

ಹೆರಿಗೆ ಎನ್ನುವುದು ತುಂಬಾ ಕಷ್ಟದ ಸಮಯ. ಈ ವೇಳೆ ನಿಮ್ಮ ದೇಹವು ತುಂಬಾ ನೋವು ತಿಂದಿರುತ್ತದೆ. ಇದಕ್ಕಾಗಿ ದೇಹದ ಸ್ನಾಯುಗಳು ಮತ್ತು ಮೂಳೆಗಳಿಗೆ ಆರಾಮ ನೀಡಲು ಒಳ್ಳೆಯ ಮಸಾಜ್ ಮಾಡಿಸಿಕೊಳ್ಳಿ. ಬಾಣಂತಿ ಮಹಿಳೆಯರಿಗಾಗಿಯೇ ಕೆಲವೊಂದು ಸ್ಪಾಗಳಲ್ಲಿ ಮಸಾಜ್ ವ್ಯವಸ್ಥೆ ಮಾಡಿರಲಾಗುತ್ತದೆ. ನೀವು ಕರೆ ಮಾಡಿ ವಿಚಾರಿಸಿ.

ಕೂದಲು ಕತ್ತರಿಸಿಕೊಳ್ಳಿ

ಕೂದಲು ಕತ್ತರಿಸಿಕೊಳ್ಳಿ

ಕೂದಲು ಕತ್ತರಿಸಿಕೊಳ್ಳುವುದರಿಂದ ನೀವು ಮತ್ತೆ ಹೊಸ ವ್ಯಕ್ತಿಯಾಗಿ ಕಾಣಿಸಿಕೊಳ್ಳಬಹುದು. ಇದು ತಲೆಯ ಭಾರವನ್ನು ಕಡಿಮೆ ಮಾಡುವುದು ಎಂದು ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ. ಹೊಸ ವಿನ್ಯಾಸದಲ್ಲಿ ಕೂದಲು ಕತ್ತರಿಸಿಕೊಳ್ಳಿ. ಇದು ನೀವು ತಾಯ್ತನಕ್ಕೆ ತಯಾರಾಗಿದ್ದೀರಿ ಎಂದು ತೋರಿಸುವುದು.

ಹಸ್ತಾಲಂಕಾರ ಮತ್ತು ಪಾದೋಪಚಾರ

ಹಸ್ತಾಲಂಕಾರ ಮತ್ತು ಪಾದೋಪಚಾರ

ಹಸ್ತಾಲಂಕಾರ ಮತ್ತು ಪಾದೋಪಚಾರ ಮಾಡುವುದರಿಂದ ನಿಮ್ಮ ದೇಹಕ್ಕೆ ಆರಾಮ ಸಿಗುವುದು. ಇದು ಮಸಾಜ್ ನ ಎರಡನೇ ವಿಧವಾಗಿದೆ. ಮಗುವಿನ ಜನನದ ಬಳಿಕ ಸ್ವಲ್ಪ ಸಮಯ ನಿಮ್ಮ ದೇಹದ ಕಾಳಜಿ ವಹಿಸಲು ನೀಡಿ. ಸೋದರಿ, ತಾಯಿ ಅಥವಾ ಸ್ನೇಹಿತೆಯನ್ನು ಜತೆಗಿರಲು ಹೇಳಿ. ಇದರಿಂದ ನಿಮಗೆ ನೆರವಾಗುವುದು. ನೀವು ಏಕಾಂಗಿಯಾಗಿ ಹೋಗಿ ಮಸಾಜ್ ಮಾಡುತ್ತಿರುವ ವೇಳೆ ಪುಸ್ತಕ ಓದಬಹುದು ಅಥವಾ ಆರಾಮ ಮಾಡಬಹುದು.

ಹೊರಗಿನಿಂದ ಆಹಾರ ತರಿಸಿಕೊಳ್ಳಿ

ಹೊರಗಿನಿಂದ ಆಹಾರ ತರಿಸಿಕೊಳ್ಳಿ

ನೀವು ಏಕಾಂಗಿಯಾಗಿದ್ದು, ಮನೆಯ ಅಡುಗೆ ಕೂಡ ನೀವೇ ಮಾಡಬೇಕೆಂದಿದ್ದರೆ ಆಗ ನೀವು ದಿನದಲ್ಲಿ ಒಂದು ಸಲ ಹೊರಗಿನಿಂದ ಆಹಾರ ತರಿಸಿಕೊಳ್ಳುವುದು ತುಂಬಾ ಒಳ್ಳೆಯದು. ಇದರಿಂದ ನಿಮಗೆ ಅಡುಗೆ ಮಾಡುವುದರಿಂದ ಆರಾಮ ಸಿಗುವುದು.

ಮಗುವಿಗಿಂತ ಮೊದಲು ಎದ್ದೇಳಿ

ಮಗುವಿಗಿಂತ ಮೊದಲು ಎದ್ದೇಳಿ

ನೀವು ಮಗುವಿಗಿಂತ ಒಂದು ಗಂಟೆ ಮೊದಲು ಎದ್ದೇಳಿ. ಇದು ನಿಮಗೆ ತುಂಬಾ ನೆರವಾಗುವುದು. ಆ ಒಂದು ಗಂಟೆಯನ್ನು ನಿಮಗಾಗಿ ವ್ಯಯಿಸಬಹುದು. ಈ ಸಮಯದಲ್ಲಿ ಕಾಫಿ ಅಥವಾ ಚಹಾ ಮಾಡಿ ಕುಡಿಯಿರಿ. ಟಿವಿ ನೋಡಿ, ವ್ಯಾಯಾಮ, ಯೋಗ ಮಾಡಿ, ಸಂಪೂರ್ಣ ದಿನಕ್ಕೆ ಶಕ್ತಿ ನೀಡುವ ಕೆಲಸ ಮಾಡಿ. ನಿಮಗಿದು ಅಭ್ಯಾಸವಾದರೆ ಬೆಳಗ್ಗೆ ಬೇಗನೆ ಏಳುವುದನ್ನು ನೀವು ಇಷ್ಟಪಡಲಿದ್ದೀರಿ.

ಶಾಪಿಂಗ್ ಗೆ ಹೋಗಿ

ಶಾಪಿಂಗ್ ಗೆ ಹೋಗಿ

ನೀವು ಹೊರಗಡೆ ಹೋಗಿ ನಿಮ್ಮಷ್ಟಕ್ಕೆ ಶಾಪಿಂಗ್ ಮಾಡಿಕೊಂಡು ಬನ್ನಿ. ಶಾಪಿಂಗ್ ಹೆಚ್ಚಿನ ಮಹಿಳೆಯರಿಗೆ ಹಾಗೂ ಪುರುಷರಿಗೆ ಮನಸ್ಸಿಗೆ ಆರಾಮ ನೀಡುತ್ತದೆ ಎನ್ನಲಾಗಿದೆ. ನಿಮಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸಿ. ಅದರಲ್ಲೂ ಮಗುವಿಗೆ ಬೇಕಾಗಿರುವಂತಹದ್ದು. ಅತಿಯಾಗಿ ಖರ್ಚು ಮಾಡಬೇಡಿ.

ಬಿಸಿ ನೀರಿನ ಸ್ನಾನ ಮಾಡಿ

ಬಿಸಿ ನೀರಿನ ಸ್ನಾನ ಮಾಡಿ

ಬಿಸಿ ನೀರಿನ ಸ್ನಾನವು ದೇಹ ಹಾಗೂ ಮನಸ್ಸಿಗೆ ಮುದ ನೀಡುವುದು. ಇದು ನಿಮಗೆ ಬೇಕಾಗಿರುವ ಸಮಯವನ್ನು ಒದಗಿಸುವುದು. ನೀವು ಕ್ಯಾಂಡಲ್ ಹಚ್ಚಿ, ಸುಗಂಧಿತ ಸಾರಭೂತ ತೈಲವನ್ನು ಹಾಕಿಕೊಂಡು ಸ್ನಾನ ಮಾಡಿ. ಬಾತ್ ಟಬ್ ಇದ್ದರೆ ಪುಸ್ತಕ ಓದುತ್ತಾ ಸ್ನಾನ ಮಾಡಬಹುದು. ಇದರಿಂದ ನಿಮಗೆ ತುಂಬಾ ಆರಾಮ ಸಿಗುವುದು ಮತ್ತು ಮನೆಯಲ್ಲಿರಲು ಖುಷಿಪಡುವಿರಿ.

English summary

Pampering Yourself After Childbirth

After the nine months of pregnancy, you might think that the life after child birth will bring you some respite. Unless you have a help of some kind, the respite that you are waiting for never comes. The sleepless nights, constant feeding and the exhaustion from the labour can led to what is called mommy burn out or even postpartum depression.
X
Desktop Bottom Promotion