For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರದ ಹೊಟ್ಟೆ ಕರಗಿಸಲು ಸುಲಭ ಉಪಾಯಗಳು ಇಲ್ಲಿವೆ

By Divya Pandith
|

ಒಂದು ಮಗುವಿಗೆ ಜನ್ಮ ನೀಡುವುದು ಎಂದರೆ ಮಹಿಳೆಯರಿಗೆ ಒಂದು ಅದೃಷ್ಟವಾಗಿರಬಹುದು. ಆದರೆ ಆ ವೇಳೆ ಆಕೆ ಅಷ್ಟೇ ನೋವನ್ನು ಅನುಭವಿಸ ಬೇಕಾಗುತ್ತದೆ. ಜನ್ಮ ನೀಡಿದ ಮೇಲೆ ಮಗುವನ್ನು ಎತ್ತಿ ತನ್ನ ತೋಳಲ್ಲಿ ಮುದ್ದಾಡಿದಾಗ ಜಗತ್ತಿನ ಎಲ್ಲಾ ನೋವುಗಳು ಮರೆಯಾಗುವುದು. ಆದರೆ ಗರ್ಭಾವಸ್ಥೆಯ ನಂತರ ಸಹಜ ದೇಹದಾಕಾರ ಅಥವಾ ತೂಕಕ್ಕೆ ಬರಬೇಕೆಂದರೆ ಅನೇಕ ಬಗೆಯ ಆರೈಕೆ ಮಾಡಬೇಕಾಗುತ್ತದೆ. ಅದರಲ್ಲೂ ನೈಸರ್ಗಿಕ ರೀತಿಯ ಪ್ರಸವಕ್ಕಿಂತ ಸಿಸೇರಿಯನ್ (ಸಿ-ಸೆಕ್ಷನ್) ಪ್ರಸವ ಆದರೆ ಅನೇಕ ಸಮಸ್ಯೆಯನ್ನು ಅನುಭವಿಸಬೇಕು. ಜೊತೆಗೆ ಹೊಟ್ಟೆಯನ್ನು ಕರಗಿಸಲು ಪರಿಶ್ರಮ ಪಡಬೇಕು.

flat tummy

ಸಿ-ಸೆಕ್ಷನ್ ಪ್ರಸವವಾದರೆ ಮಹಿಳೆಯರು ಹೊಟ್ಟೆಯನ್ನು ಕರಗಿಸಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುತ್ತಾರೆ. ಹಾಗೊಮ್ಮೆ ಹೊಟ್ಟೆ ಕರಗಿಸಬಹುದು ಎಂದರೂ ಅವರು ನಂಬುವುದಿಲ್ಲ. ಸೂಕ್ತ ಬಗೆಯ ವ್ಯಾಯಾಮ ಹಾಗೂ ದೈಹಿಕ ಶ್ರಮದಿಂದ ಹೊಟ್ಟೆಯನ್ನು ಕರಗಿಸಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ಇಂದು ನಿಮಗೆ ತಿಳಿಸಿಕೊಡಲಿದೆ. ಪರಿಹಾರದಂತೆ ಅನುಸರಿಸಿದರೆ ಕಂಡಿತವಾಗಿಯೂ ನಿಮ್ಮ ಹಳೆಯ ಜೀನ್ಸ್ ಧರಿಸಬಹುದಾದಷ್ಟು ಸಣ್ಣಗಾಗುವಿರಿ. ನೀವು ಅಥವಾ ನಿಮ್ಮವರು ಇದೇ ಸಮಸ್ಯೆಯಿಂದ ಬೇಸತ್ತಿದ್ದೀರಿ ಎಂದಾದರೆ ಇಲ್ಲಿರುವ ಹನ್ನೆರಡು ಬಗೆಯ ಉಪಾಯವನ್ನು ಅನುಸರಿಸಿ... ಹೊಟ್ಟೆಯನ್ನು ಕರಗಿಸಿ...

1. ಎದೆಹಾಲು ಉಣಿಸುವುದು

1. ಎದೆಹಾಲು ಉಣಿಸುವುದು

ಮಗುವಿಗೆ ಎದೆ ಹಾಲು ಉಣಿಸುವುದನ್ನು ಬಹು ಬೇಗ ನಿಲ್ಲಿಸಬಾರದು. ಆರು ತಿಂಗಳಿಗಿಂತಲೂ ಹೆಚ್ಚು ಸಮಯದವರೆಗೆ ಮುಂದುವರಿಸಬೇಕು. ಮಗು ನಿಮ್ಮ ಎದೆಹಾಲು ಉಣ್ಣುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕರಗುವುದು.

2. ಮೊದಲ 6 ತಿಂಗಳು ನಿರ್ಣಾಯಕವಾಗಿರುತ್ತದೆ

2. ಮೊದಲ 6 ತಿಂಗಳು ನಿರ್ಣಾಯಕವಾಗಿರುತ್ತದೆ

ಪ್ರಸವದ ನಂತರ ಆರು ತಿಂಗಳು ದೇಹವು ಬಹಳ ಸೂಕ್ಷ್ಮವಾಗಿರುತ್ತದೆ. ಹಾರ್ಮೋನ್‍ಗಳ ವ್ಯತ್ಸಾಸ ಉಂಟಾಗಿರುತ್ತದೆ. ಈ ಸಮಯದಲ್ಲಿ ದೇಹದಲ್ಲಿರುವ ಕೊಬ್ಬು ಸಡಿಲವಾಗಿರುತ್ತದೆ. ಕೊಬ್ಬು ಘನಿಕೃತಗೊಂಡ ನಂತರ ತೂಕ ಇಳಿಸಲು ಕಷ್ಟವಾಗುವುದು. ಹಾಗಾಗಿ ಈ ಸಮಯದಲ್ಲಿಯೂ ವೈದ್ಯರ ಮೇರೆಗೆ ಸರಳ ವ್ಯಾಯಾಮ ಮಾಡುವುದು ಸೂಕ್ತ.

3. ಹೊಟ್ಟೆಯ ಬೆಲ್ಟ್

3. ಹೊಟ್ಟೆಯ ಬೆಲ್ಟ್

ಸಿ-ಸೆಕ್ಷನ್ ಪ್ರಸವದವರು ಹೊಟ್ಟೆಯ ಮೇಲಿರುವ ಗಾಯವು ಗುಣವಾದ ನಂತರ ಹೊಟ್ಟೆ ಬೆಲ್ಟ್‍ಅನ್ನು ಉಪಯೋಗಿಸಬೇಕು ಊಟ ಮಾಡುವಾಗ, ಟಾಯ್ಲೆಟ್‍ಗೆ ಹೋಗುವಾಗ ಇದನ್ನು ತೆಗೆದಿಡಬಹುದು. ಉಳಿದ ಸಮಯದಲ್ಲಿ ತಪ್ಪದೆ ಈ ಬೆಲ್ಟ್ ಧರಿಸಬೇಕು. ಆಗ ಬಹು ಬೇಗ ಹೊಟ್ಟೆಯು ಸಣ್ಣಗಾಗುವುದು.

4. ಟಮ್ಮಿ ಬೈಂಡರ್

4. ಟಮ್ಮಿ ಬೈಂಡರ್

ಬೈಂಡರ್‍ನಿಂದ ಹೊಟ್ಟೆಯನ್ನು ಹಿಡಿದಿಡುವಂತೆ ಮಾಡುವುದು ಪ್ರಾಚೀನ ಪದ್ಧತಿ. ಬ್ಯಾಂಡೇಜ್ ಅಥವಾ ಇಲಾಸ್ಟಿಕ್ ಬಟ್ಟೆಯನ್ನು ಉದ್ದವಾಗಿ ಜೋಡಿಸಿಕೊಂಡು ಹೊಟ್ಟೆಯನ್ನು ಸುತ್ತಿಡುವ ಪ್ರಕ್ರಿಯೆ. ಹೀಗೆ ಮಾಡುವುದರಿಂದ ಹೊಟ್ಟೆಯು ಒಳಭಾಗಕ್ಕೆ ತಳ್ಳಿದಂತೆ ಆಗುತ್ತದೆ. ಸಿ-ಸೆಕ್ಷನ್ ನಂತರ ಎರಡು ತಿಂಗಳಕಾಲ ಮಾತ್ರ ಈ ಪ್ರಕ್ರಿಯೆ ಪರಿಣಾಮ ಬೀರುತ್ತದೆ.

5. ಯೋಗಾಸನ

5. ಯೋಗಾಸನ

ಪ್ರಸವದ ನಂತರ ಹೊಟ್ಟೆಕರಗಿಸಲು ಒಂದು ಸುಲಭ ಉಪಾಯ ಯೋಗಾಸನ. ಯೋಗಾಸನ ಮಾಡುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳು ಬಿಗಿ ಗೊಳ್ಳುತ್ತವೆ. ಹೊಟ್ಟೆಯನ್ನು ಒಳ ಹೊಕ್ಕಿಸಲು ಪ್ರಾಣಯಾಮದಂತಹ ಆಸನಗಳನ್ನು ಮಾಡಬೇಕು.

6. ಕೆಗೆಲ್ ವ್ಯಾಯಾಮ

6. ಕೆಗೆಲ್ ವ್ಯಾಯಾಮ

ಕೆಗೆಲ್ ವ್ಯಾಯಾಮವು ಮೂಲಭೂತವಾಗಿ ಯೋನಿ ನೆಲದ ವ್ಯಾಯಾಮವಾಗಿದೆ. ನಿಮ್ಮ ಯೋನಿಯ ಸ್ನಾಯು ಎಳೆಯುವ ಅಭ್ಯಾಸವನ್ನು ನೀವು ಹೊಂದಿರಬೇಕು. ಅದನ್ನು 30 ಸೆಕೆಂಡ್‍ಗಳ ಕಾಲ ಹಿಡಿದಿಟ್ಟು ಮತ್ತೆ ಅದನ್ನು ಬಿಡುಗಡೆ ಮಾಡಿ. ಹೀಗೆ ಮಾಡುವುದರಿಂದ ಸಿ-ಸೆಕ್ಷನ್ ಹೊಟ್ಟೆಯನ್ನು ಕರಗಿಸಿ ಯೋನಿಯ ಬಿಗಿತ ಹೆಚ್ಚಾಗುವಂತೆ ಮಾಡುತ್ತದೆ.

7. ಬಹಳಷ್ಟು ನೀರನ್ನು ಕುಡಿಯಿರಿ

7. ಬಹಳಷ್ಟು ನೀರನ್ನು ಕುಡಿಯಿರಿ

ದೇಹದ ದ್ರವ ಸಮತೋಲನವನ್ನು ಸ್ಥಾಪಿಸಲು ನೀರು ಸಹಾಯ ಮಾಡುತ್ತದೆ. ಇದು ನಿಮಗೆ ಆಶ್ಚರ್ಯಕರ ಎನಿಸಬಹುದು. ಆದರೆ ಇದು ನಿಮ್ಮ ದೇಹದಲ್ಲಿ ಸೇರಿಕೊಂಡ ಹೆಚ್ಚುವರಿ ಕೊಬ್ಬಿನಂಶವನ್ನು ಹೊರ ತೆಗೆಯಲು ಸಹಾಯ ಮಾಡುತ್ತದೆ.

8. ಲಿಪಿಡ್ ಬಸ್ರ್ಟಿಂಗ್ ಮಸಾಜ್

8. ಲಿಪಿಡ್ ಬಸ್ರ್ಟಿಂಗ್ ಮಸಾಜ್

ಸಿ-ಸೆಕ್ಷನ್ ನಿಂದ ಉಂಟಾದ ಹೊಟ್ಟೆಯನ್ನು ಕರಗಿಸಲು ವ್ಯಾಯಾಮಗಳು ಸಹಾಯ ಮಾಡಿದಂತೆ ಅಂಗವರ್ಧನಗಳು ಸಹ ಸಹಾಯ ಮಾಡುತ್ತವೆ. ನಿಯಮಿತವಾಗಿ ಲಿಪಿಡ್ ಬಸ್ರ್ಟಿಂಗ್ ಮಸಾಜ್ ಮಾಡಿಸುವುದರಿಂದ ಬಹು ಬೇಗ ಹೊಟ್ಟೆಯನ್ನು ಕರಗಿಸಬಹುದು. ಆಯುರ್ವೇದದ ವಿಧಾನವನ್ನು ಒಳಗೊಂಡಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುವುದು ಎನ್ನಲಾಗುತ್ತದೆ.

9. ಊಟದಲ್ಲಿ ಡಯಟ್

9. ಊಟದಲ್ಲಿ ಡಯಟ್

ಎದೆಹಾಲು ಉಣಿಸುತ್ತಿರುವಾಗ ಆದಷ್ಟು ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ಸೇವಿಸಿ. ಅದು ಹೆಚ್ಚು ಶಕ್ತಿಯನ್ನು ನೀಡುತ್ತದೆ. ಪ್ರೋಟಿನ್ ಹೊಂದಿರುವ ಆಹಾರ ಪದಾರ್ಥಗಳು, ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ. ಆದರೆ ತುಪ್ಪ, ಬೆಣ್ಣೆ, ಎಣ್ಣೆ, ಸಿಹಿ ತಿಂಡಿ ಹಾಗೂ ಕಚ್ಚಾ ಕೊಬ್ಬುಗಳಿಂದ ಆದಷ್ಟು ದೂರವಿರಿ.

10. ವಾಕಿಂಗ್ ಮಾಡಿ

10. ವಾಕಿಂಗ್ ಮಾಡಿ

ನಿಮಗೆ ಈ ಸಮಯದಲ್ಲಿ ಸಾಕಷ್ಟು ಶಕ್ತಿಯ ಕೊರತೆ ಇರುತ್ತದೆ. ಕಾರ್ಡಿಯೋ ವ್ಯಾಯಾಮ ಮಾಡಬೇಕು. ಬೆಳಗಿನ ಜಾವದಲ್ಲಿ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಇರುವುದು ಎಂದು ಹೇಳಲಾಗುತ್ತದೆ. ಈ ವಿಧಾನಗಳನ್ನು ಅನುಸರಿಸುವುದರಿಂದ ಹೊಟ್ಟೆ ಭಾಗದಲ್ಲಿ ಸೇರಿಕೊಂಡ ಕೊಬ್ಬುಗಳು ಕರಗುತ್ತವೆ.

11. ಹೆಚ್ಚು ನೀರನ್ನು ಕುಡಿಯಿರಿ

11. ಹೆಚ್ಚು ನೀರನ್ನು ಕುಡಿಯಿರಿ

ಸಿಸೇರಿಯನ್ ಆದ ನಂತರ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದರಿಂದ ನಿಮ್ಮ ದೈಹಿಕ ವ್ಯವಸ್ಥೆಯನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಇದು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ನಿಮ್ಮ ಮಗುವಿಗೆ ಕನಿಷ್ಠ 6 ತಿಂಗಳವರೆಗೆ ಎದೆಹಾಲನ್ನು ಕುಡಿಸುತ್ತ ಇರಿ. ಇದು ನಿಮ್ಮ ಹೊಟ್ಟೆಯ ಭಾಗವನ್ನು ಕರಗಿಸಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.

12. ಧನಾತ್ಮಕವಾಗಿ ಆಲೋಚಿಸಿ

12. ಧನಾತ್ಮಕವಾಗಿ ಆಲೋಚಿಸಿ

ಸಿಸೇರಿಯನ್ ಆದ ಕೆಲ ದಿನಗಳ ಕಾಲ ನೀವು ವ್ಯಾಯಾಮವನ್ನು ಸಹ ಮಾಡಲು ಆಗುವುದಿಲ್ಲ. ಇದರರ್ಥ ನೀವು ಶಾಶ್ವತವಾಗಿ ಸ್ಥೂಲಕಾಯವನ್ನು ಹೊಂದಿರಬೇಕು ಎಂದರ್ಥವಲ್ಲ. ಆದರೆ ಸ್ವಲ್ಪ ಧನಾತ್ಮಕ ಮನೋಭಾವವನ್ನು ಹೊಂದಿ. ಧನಾತ್ಮಕ ಮನೋಭಾವವು ನಿಮ್ಮ ದೇಹದ ಆಕಾರದ ಮೇಲೆ ಸಹ ಪ್ರಭಾವ ಬೀರುತ್ತದೆ. ಇಂದಲ್ಲ ನಾಳೆ ನೀವು ಬಯಸಿದ ರೂಪವನ್ನು ನೀವು ಪಡೆಯುವಿರಿ.

English summary

Tips To Get Flat Tummy After C-Section

The process of losing any kind of belly fat is not easy. It just gets worse after a c-section delivery because you cannot do the standard abdominal exercises. However, there are some alternative ways to reduce your post c-section belly pouch. Try out these 10 basic steps to get a visibly flatter tummy after c-section.
X
Desktop Bottom Promotion