ತಾಯಿಯ ಎದೆಹಾಲು ಹೆಚ್ಚಿಸುವ ಅತ್ಯುತ್ತಮ ಆಹಾರಗಳು

By: Jaya subramanya
Subscribe to Boldsky

ಪ್ರಸವದ ನಂತರ ಮಗುವಿಗೆ ತಾಯಿಯ ಎದೆಹಾಲು ಪೌಷ್ಟಿಕ ಆಹಾರವಾಗಿರುತ್ತದೆ. ಮೊದಲ ಆರು ತಿಂಗಳವರೆಗೆ ಎದೆ ಹಾಲನ್ನೇ ಈ ಹಸುಗೂಸುಗಳು ಆಶ್ರಯಿಸಿಕೊಂಡಿರುವುದರಿಂದ ಮಗುವಿಗೆ ಈ ಆಹಾರದಲ್ಲಿ ಯಾವುದೇ ಕೊರತೆ ಉಂಟಾಗಬಾರದು. ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಆಹಾರಗಳನ್ನು ತಾಯಿಯು ತೆಗೆದುಕೊಳ್ಳುತ್ತಿರಬೇಕು. ಈ ರೀತಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಯಾವುದೇ ವಸ್ತುವಿಗೆ ಕ್ಷೀರಚೋದಕ ಎಂಬುದಾಗಿ ಕರೆಯಲಾಗುತ್ತದೆ. ಎದೆ ಹಾಲು vs ಬಾಟಲಿ ಹಾಲು, ಮಗುವಿಗೆ ಯಾರು ಹಿತವರು?

ಬಾಣಂತಿಯರು ಎದೆಹಾಲಿನ ಉತ್ಪತ್ತಿ ಹೆಚ್ಚಾಗಲು ಇಂತಹ ಆಹಾರವನ್ನು ತೆಗೆದುಕೊಳ್ಳಬಹುದಾಗಿದ್ದು ಹಾಲನ್ನು ಹೆಚ್ಚಿಸುವ ಆಹಾರಗಳನ್ನು ಬಳಸಿಕೊಂಡು ಸೊಗಸಾದ ಮತ್ತು ಪೌಷ್ಟಿಕವಾದ ಸಂಪೂರ್ಣ ಆಹಾರವನ್ನು ಸಿದ್ಧಪಡಿಸುವುದಾಗಿದೆ. ಮಗುವಿನ ಆರೋಗ್ಯಕ್ಕಾಗಿ ತಾಯಿಯ ಎದೆಹಾಲು ಅವಶ್ಯಕವಾಗಿ ಬೇಕಾಗಿರುವುದರಿಂದ ಇದರಲ್ಲಿ ಯಾವುದೇ ಕೊರತೆ ಉಂಟಾಗದಂತೆ ತಾಯಿ ನೋಡಿಕೊಳ್ಳಬೇಕು.ಅದಕ್ಕಾಗಿ ಎದೆಹಾಲನ್ನು ಹೆಚ್ಚಿಸುವ ಸಂಪೂರ್ಣ ಆಹಾರಗಳನ್ನು ಆಕೆ ತೆಗೆದುಕೊಳ್ಳಲೇಬೇಕು. ಹಾಗಿದ್ದರೆ ಆ ಆಹಾರಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಹಾಲನ್ನು ಹೆಚ್ಚಿಸುವುದರಲ್ಲಿ ಈ ಆಹಾರಗಳ ಪಾತ್ರವೇನು ಎಂಬುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ..

ಸಾಕಷ್ಟು ನೀರು ಕುಡಿಯುವುದು

ಸಾಕಷ್ಟು ನೀರು ಕುಡಿಯುವುದು

ತಾಯಿಯು ಸಾಕಷ್ಟು ನೀರು ಕುಡಿದು ಹೈಡ್ರೇಟ್ ಮಾಡಿಕೊಳ್ಳುವುದು ಅಗತ್ಯವಾಗಿರುವುದರಿಂದ ಸೇವಿಸುವ ನೀರಿನ ಪ್ರಮಾಣದಲ್ಲಿ ಕೊರತೆಯುಂಟಾಗಬಾರದು. ಆದಷ್ಟು ನೀರಿನ ಬಾಟಲನ್ನು ನಿಮ್ಮ ಪಕ್ಕದಲ್ಲಿಯೇ ಇರಿಸಿಕೊಳ್ಳಿ ಇದರಿಂದ ನಿಮಗೆ ನೀರು ಕುಡಿಯಬೇಕು ಎಂದಾಗಲೆಲ್ಲಾ ಬಾಯಾರಿಕೆಯನ್ನು ನೀಗಿಸಿಕೊಳ್ಳಬಹುದಾಗಿದೆ.

ಹಾಲು ಕುಡಿಯುವುದು

ಹಾಲು ಕುಡಿಯುವುದು

ಹಾಲುಣಿಸುತ್ತಿರುವ ತಾಯಿಯು ದಿನಕ್ಕೆ 2 ಅಥವಾ 3 ಲೋಟಗಳಷ್ಟು ಹಾಲು ಕುಡಿಯಲೇಬೇಕು. ಇದರಿಂದ ಅವರಿಗೆ ಬೇಕಾಗಿರುವ ನ್ಯೂಟ್ರೀನ್ ಅಂಶಗಳು ದೊರೆಯುತ್ತದೆ.

ಎಲೆಗಳ್ಳುಳ್ಳ ತರಕಾರಿಗಳ ಸೇವನೆ

ಎಲೆಗಳ್ಳುಳ್ಳ ತರಕಾರಿಗಳ ಸೇವನೆ

ಹಸಿರನ್ನು ಹೆಚ್ಚು ಸೇವಿಸುವುದು ಸೂಕ್ತ. ಗಾಢ ವರ್ಣದ ಎಲೆಗಳುಳ್ಳ ತರಕಾರಿಗಳು ಅಂದರೆ ಪಾಲಾಕ್ ಮತ್ತು ಸಬ್ಬಸಿಗೆ ಎಲೆಗಳು ಪೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶವನ್ನು ಒಳಗೊಂಡಿರುವುದರಿಂದ ಹಾಲುಣಿಸುವುದಕ್ಕೆ ಸಹಕಾರಿಯಾಗಿದೆ. ಭಾರತದಲ್ಲಿ ಊಟದ ನಂತರ ಎಲೆಅಡಿಕೆ ಹಾಕುವುದು ಸರ್ವೇ ಸಾಮಾನ್ಯವಾದ ಪದ್ಧತಿ ಎಂದೆನಿಸಿದ್ದು ಈ ಎಲೆಯಲ್ಲಿ ಕ್ಯಾಲ್ಶಿಯಮ್, ಕ್ಯಾರೊಟಿನ್, ರಿಬೋಫ್ಲಾವಿನ್, ನಿಯಾಸಿನ್, ಅಯೋಡಿನ್, ಹಾಲುಣಿಸಲು ನೆರವಾಗುವ ಕಬ್ಬಿಣ ಮತ್ತು ಪೊಟ್ಯಾಸಿಯಮ್ ಅಂಶಗಳಿವೆ. ಇದರೊಂದಿಗೆ ತುಳಸಿಯನ್ನೂ ಸೇವಿಸಬಹುದಾಗಿದೆ.

ನಟ್ಸ್ ಸೇವಿಸಿ

ನಟ್ಸ್ ಸೇವಿಸಿ

ನಟ್ಸ್ ಸೇವನೆಯಲ್ಲಿ ಯಾವುದೇ ಹಿಂಜರಿಕೆ ಬೇಡ. ವಾಲ್ ನಟ್ಸ್, ಬಾದಾಮಿ ಮತ್ತು ಗೇರುಬೀಜಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ. ಅಂತೆಯೇ ಉಪ್ಪು ಮತ್ತು ಖಾರವನ್ನು ಬೆರೆಸದೇ ಆದಷ್ಟು ಹಾಗೆಯೇ ಇವುಗಳನ್ನು ಸೇವಿಸಿ. ಇನ್ನು ಕಡಲೆ ಬೀಜಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ ಒಮ್ಮೊಮ್ಮೆ ಇದು ಅಲರ್ಜಿಯನ್ನುಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ.

ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಹಣ್ಣುಗಳಾದ ಕಲ್ಲಂಗಡಿ, ಆಪ್ರಿಕೋಟ್ಸ್ ತರಕಾರಿಗಳಾದ ಹಸಿರು ಪಪ್ಪಾಯ, ಸೋರೆಕಾಯಿ ಹಾಲು ಉತ್ಪತ್ತಿಯನ್ನು ವರ್ಧಿಸಲು ಸಹಕಾರಿಯಾಗಿದೆ. ಕ್ಯಾರೇಟ್‎ನಲ್ಲಿ ಬೀಟಾ ಕ್ಯಾರೋಟಿನ್ ಅಂಶ ಹೆಚ್ಚಾಗಿರುವುದರಿಂದ ತಾಯಿಯ ಆಹಾರದಲ್ಲಿ ಇದನ್ನು ಬಳಸಿಕೊಳ್ಳಲೇಬೇಕು. ಶತಾವರಿಯಲ್ಲಿ ಖನಿಜಗಳು ಹೇರಳವಾಗಿದ್ದು, ಇದನ್ನು ಶಿಫಾರಸು ಮಾಡುತ್ತಾರೆ. ಅಂತೆಯೇ ಶುಂಠಿಯ ಸೇವನೆಯನ್ನು ಕೂಡ ಮಾಡಬಹುದಾಗಿದೆ.

ಬೆಳ್ಳುಳ್ಳಿಯ ಸೇವನೆ

ಬೆಳ್ಳುಳ್ಳಿಯ ಸೇವನೆ

ಬೆಳ್ಳುಳ್ಳಿಯ ಕಟುವಾದ ಸುವಾಸನೆಯು ಹಾಲನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ನಿಯಮಿತವಾಗಿ ಬಳಸಬಹುದಾಗಿದೆ. ಇನ್ನು ಓಟ್ ಮೀಲ್ ಕೂಡ ಇನ್ನೊಂದು ಶ್ರೀಮಂತ ಮೂಲ ಎಂದೆನಿಸಿದ್ದು ಹಾಲುಣಿಸುವ ಸಂದರ್ಭದಲ್ಲಿ ಇದನ್ನು ಸೇವಿಸಬೇಕಾಗಿದೆ.

ಬೀಜಗಳ ಶಕ್ತಿ

ಬೀಜಗಳ ಶಕ್ತಿ

ಅಜ್‎ವಾನಿ, ಜೀರಿಗೆ ಕಾಳು,ಎಳ್ಳು ಮತ್ತು ಮೆಂತೆ ಬೀಜಗಳು ಹಾಲನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಜ್‎ವಾನಿ ಅಥವಾ ಬಿಶೊಪ್ಸ್ ವೀಡ್ ಬಲವಾದ ಸುವಾಸನೆಯನ್ನು ಹೊಂದಿದ್ದು ಪ್ರಸೂತಿಯ ನಂತರ ಗರ್ಭಾಶಯದ ಶುದ್ಧಿಗೆ ಸಹಕಾರಿಯಾಗಿದೆ. ಪ್ರಸವದ ಆರಂಭಿಕ ಚೇತರಿಕೆಯನ್ನು ಇದು ನೀಡುವುದರಿಂದ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಅಂಶಗಳನ್ನು ಇದು ಒಳಗೊಂಡಿದೆ. ಜೀರಿಗೆ ಕಾಳುಗಳು ಜೀರ್ಣಕ್ರಿಯೆಯಲ್ಲಿ ಸಹಾಯವನ್ನುಂಟು ಮಾಡುತ್ತಿದ್ದು ಹಾಲನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ಈ ಬೀಜಗಳನ್ನು ಸಿಂಪಡಿಸಿ ಸೇವಿಸಬಹುದಾಗಿದೆ. ಇವುಗಳು ಪ್ರೋಟೀನ್, ಲಿನೊಲಿಯಿಕ್ ಆಮ್ಲ ಮತ್ತು ಒಲಯಿಕ್ ಆಮ್ಲ ಮತ್ತು ಮ್ಯಾಂಗನೀಸ್, ಮೆಗ್ನೇಸಿಯಮ್, ಕ್ಯಾಲ್ಸಿಯಮ್ ಸತು ಮತ್ತು ಕಬ್ಬಿಣದ ತರಹದ ಖನಿಜಗಳನ್ನು ಹೊಂದಿದೆ.

 
English summary

Best Foods To Improve Breast Milk Supply

What Is A Galactagogue? Any substance that increases milk production is called a galactagogue. These can be taken as supplements to increase lactation in nursing mothers, but the best way is to prepare delicious and nutritious foods using the lactogenic foods, so that it becomes a wholesome meal.
Story first published: Wednesday, April 6, 2016, 17:02 [IST]
Subscribe Newsletter