For Quick Alerts
ALLOW NOTIFICATIONS  
For Daily Alerts

ಸ್ವಾಭಾವಿಕವಾಗಿ ಎದೆಹಾಲು ಹೆಚ್ಚಿಸಲು ಇಲ್ಲಿದೆ ಟಿಪ್ಸ್

By Super
|

ಎಳೆವಯಸ್ಸಿನ ಮಗುವಿಗೆ ತಾಯಿಯ ಎದೆ ಹಾಲಿನಷ್ಟು ಆರೋಗ್ಯಕರವಾದ ಆಹಾರ ಬೇರೊಂದಿಲ್ಲ. ಮಗು ಉತ್ತಮ ಬೆಳವಣಿಗೆಯನ್ನು ಹೊಂದಬೇಕಾದರೆ ತಾಯಿಯ ಎದೆ ಹಾಲಿನ ಸರಿಯಾದ ಪೋಷಕಾಂಶ ದೊರೆಯಬೇಕು. ಆದರೆ ತಾಯಿಯಲ್ಲಿ ಮಗುವಿಗೆ ಸಾಕಾಗುವಷ್ಟು ಹಾಲಿಲ್ಲದಿದ್ದರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮವಾಗುವುದು ಖಂಡಿತ!

ಚಿಂತಿಸಬೇಕಿಲ್ಲ! ಎದೆ ಹಾಲು ಇಲ್ಲದೇ ಮಗುವಿಗೆ ತೊಂದರೆ ಆಗುತ್ತಿದೆ ಎಂದು ನೀವು ನೊಂದುಕೊಳ್ಳುವ ಅಗತ್ಯವಿಲ್ಲ. ಅಗತ್ಯವಾದ ನೈಸರ್ಗಿಕ ಹಾಗೂ ಸುರಕ್ಷಿತ ರೀತಿಯಲ್ಲಿ ಎದೆಹಾಲನ್ನು ಹೆಚ್ಚಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ.

1. ಪಂಪ್

1. ಪಂಪ್

ತಜ್ಞರ ಪ್ರಕಾರ ಮಗುವಿಗೆ ಹಾಲುಣಿಸುವಾಗ ಅಥವಾ ಹಾಲುಣಿಸಿದ ನಂತರ ಐದು ನಿಮಿಷಗಳ ಪ್ರಕಾರ ಸ್ತನವನ್ನು ಪಂಪ್ ಮಾಡಬೇಕು. ಇದು ದೇಹದಲ್ಲಿ ಹಾಲು ಉತ್ಪಾದನೆಯಾಗಲು ಸಹಾಯ ಮಾಡುತ್ತದೆ.

2. ಹಾಲುಣಿಸುವಾಗ ಸ್ತನಗಳ ಬದಲಾವಣೆ

2. ಹಾಲುಣಿಸುವಾಗ ಸ್ತನಗಳ ಬದಲಾವಣೆ

ನಿಮ್ಮ ಮಗುವಿಗೆ ಹಾಲುಣಿಸುವಾಗ ಒಂದೇ ಸ್ತನದಿಂದ ಹಾಲುಣಿಸಬೇಡಿ. ಆಗಾಗ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಬದಲಾಯಿಸಿ ಎರಡೂ ಸ್ತನಗಳಿಂದಲೂ ಮಗು ಹಾಲು ಕುಡಿಯುವಂತೆ ನೋಡಿಕೊಳ್ಳಿ. ಹಾಲುಣಿಸುವಾಗ ಕನಿಷ್ಠ ಎರಡರಿಂದ ಮೂರು ಬಾರಿ ಹೀಗೆ ಮಾಡಿ. ಇದರಿಂದ ಹಾಲು ಬತ್ತುವ ಸಮಸ್ಯೆಯಿರುವುದಿಲ್ಲ.

3. ಕಂಪ್ರೆಷನ್

3. ಕಂಪ್ರೆಷನ್

ಹಾಲುಣಿಸುವಾಗ ಸ್ತನವನ್ನು ಕುಗ್ಗಿಸುವುದನ್ನು (ಕೈಗಳಿಂದ ಒತ್ತಿ ಹಾಲು ಬರಲು ಅನುವು ಮಾಡಿಕೊಡುವುದು) ಹೀಗೆ ಮಾಡುವುದರಿಂದ ಮಗುವಿಗೆ ಹಾಲನ್ನು ಹೀರಲು ಸುಲಭವಾಗುತ್ತದೆ.

4. ಮೆಂತ್ಯದ ಬೀಜ

4. ಮೆಂತ್ಯದ ಬೀಜ

ಹೆರಿಗೆಯಾಗುವ ದಿನಗಳಿಂದಲೂ ಮೆಂತ್ಯವನ್ನು ಬಳಸುವುದು ಆರೋಗ್ಯಕ್ಕೆ ಅತ್ಯಂತ ಉತ್ತಮ. ಅದರಲ್ಲೂ ಎದೆಹಾಲು ಹೆಚ್ಚಾಗಲು ಮೆಂತ್ಯದ ಬೀಜವನ್ನು ಬಳಸುವುದು ಸೂಕ್ತ. ಆದರೆ ಇದರಿಂದ ಗ್ಯಾಸ್ ಅಥವಾ ಹೊಟ್ಟೆ ಉಬ್ಬುಕೊಳ್ಳುವಿಕೆ ಸಾಧ್ಯತೆಗಳಿರುತ್ತವೆ. ಆದ್ದರಿಂದ ಎಚ್ಚರಿಕೆವಹಿಸಿ.

5. ಮೆಂತೆ ಟೀ

5. ಮೆಂತೆ ಟೀ

ಈ ವಿಧಾನ ಹಾಲು ಅಧಿಕಗೊಳಿಸುತ್ತವೆಯಾದರೂ ಅನೇಕ ತಾಯಂದಿರಿಗೆ ಈ ಟೀ ರುಚಿಸುವುದಿಲ್ಲ. ಮತ್ತು ಹೊಟ್ಟೆಯಲ್ಲಿ ತೊಂದರೆಗಳೂ ಉಂಟಾಗಬಹುದು. ಮೇಪಲ್ ಸಿರಪ್ ರೀತಿಯ ವಾಸನೆಯೂ ಬರಬಹುದು. ಆದ್ದರಿಂದ ಈ ವಿಧಾನವನ್ನು ಮಾಡುವಾಗಲೂ ಎಚ್ಚರವಹಿಸಿ.

6. ಹಾಲು ಹೆಚ್ಚಿಸುವ ಕುಕ್ಕೀಸ್

6. ಹಾಲು ಹೆಚ್ಚಿಸುವ ಕುಕ್ಕೀಸ್

ಹಲವಾರು ವಿವಿದ ಬ್ರ್ಯಾಂಡ್ ಗಳಲ್ಲಿ ದೊರೆಯುವ ಕುಕ್ಕೀಸ್ ಗಳನ್ನು ಕೊಂಡುಕೊಳ್ಳಬಹುದು ಅಥವಾ ನೀವೇ ತಯಾರಿಸಲೂಬಹುದು. ಓಟ್ಸ್ ಬಳಸಿ ಕುಕ್ಕೀಸ್ ತಯಾರಿಸುವುದು ಉತ್ತಮ. ಹಣ್ಣುಗಳನ್ನು ತಿನ್ನಿ.

7. ಆರೋಗ್ಯಕರ ಆಹಾರ ಸೇವಿಸಿ

7. ಆರೋಗ್ಯಕರ ಆಹಾರ ಸೇವಿಸಿ

ತಾಯಂದಿರು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ. ಹಾಗೆಯೇ ಮಗುವಿನ ಆರೋಗ್ಯಕ್ಕೆ ಬೇಕಾದ ಹಾಲು ಉತ್ಪಾದನೆಯಾಗಲು ತಾಯಂದಿರು ಆರೋಗ್ಯಕರವಾದ ಆಹಾರಗಳನ್ನು ಸೇವಿಸುವುದೂ ಅಷ್ಟೇ ಮುಖ್ಯ!

8. ಬಿಯರ್ ಕುಡಿಯಿರಿ

8. ಬಿಯರ್ ಕುಡಿಯಿರಿ

ಬಹುಶಃ ವೈದ್ಯರು ಈ ಸಲಹೆಯನ್ನು ನೀಡಲಾರರು. ಆದರೆ ಬಿಯರ್ ಎದೆ ಹಾಲು ಹೆಚ್ಚಾಗಿಸಲು ಸಹಾಯಕ. ಆದ್ದರಿಂದ ಅತ್ಯಂತ ಮಿತ ಪ್ರಮಾಣದಲ್ಲಿ ಬಿಯರ್ ನ್ನು ಕೂಡ ಕುಡಿಯಬಹುದು.

9. ಒತ್ತಡ ಕಡಿಮೆಗೊಳಿಸಿ

9. ಒತ್ತಡ ಕಡಿಮೆಗೊಳಿಸಿ

ಸ್ತನ್ಯಪಾನದಲ್ಲಿ ತೊಂದರೆಯಿದ್ದರೆ ಒತ್ತಡ ಉಂಟಾಗುವುದು ಸಹಜ. ಆದರೂ ನೀವು ಈ ಒತ್ತಡದಿಂದ ಹೊರಬರಲೇಬೇಕು. ಏಕೆಂದರೆ ಒತ್ತಡ ಆಕ್ಸಿಟೋಸಿನ್ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ಇದರಿಂದ ಎದೆಹಾಲು ಹೆಚ್ಚಾಗುವುದನ್ನು ತಡೆಯುತ್ತದೆ. ಆದ್ದರಿಂದ ಚಿಂತೆಯನ್ನು ಬಿಟ್ಟು ಎದೆಹಾಲು ಹೆಚ್ಚಾಗಿಸುವಿಕೆಯತ್ತ ಗಮನಕೊಡಿ.

10. ಮಗುವನ್ನು ಜೊತೆಯಲ್ಲಿಯೇ ಮಲಗಿಸಿ

10. ಮಗುವನ್ನು ಜೊತೆಯಲ್ಲಿಯೇ ಮಲಗಿಸಿ

ನೀವು ಮಲಗುವಾಗ ನಿಮ್ಮ ಮಡಿಲಲ್ಲಿಯೇ ಮಗುವಿದ್ದರೆ ಹಾಲುಣಿಸುವುದು ಸುಲಭ. ಮತ್ತು ಮಗುವನ್ನು ಶೂಶ್ರುಷೆ ಮಾಡುವಾಗ ನಿಮ್ಮ ದೇಹ ಹಾಲು ಉತ್ಪಾದನೆಗೂ ಸ್ಪಂದಿಸುತ್ತದೆ.

11. ಓಟ್ಸ್

11. ಓಟ್ಸ್

ಎದೆ ಹಾಲುಣಿಸುವ ತಾಯಿಗೆ ಓಟ್ಸ್ ಸೇವನೆ ಒಳ್ಳೆಯದಲ್ಲ ಎಂದು ಕೆಲವರು ಹೇಳಿದರೂ ಕೂಡ ಇದರಲ್ಲಿರುವ ಜೀವಸತ್ವದಿಂದಾಗಿ ಹಾಲು ಉತ್ಪಾದನೆ ಅಧಿಕವಾಗುವ ಸಾಧ್ಯತೆಗಳಿವೆ. ಅಲ್ಲದೆ ಓಟ್ಸ್ ಅನ್ನು ದೈನಂದಿನ ಆಹಾರದಲ್ಲಿ ಸೇವಿಸಿ ಹಾಲು ಅಧಿಕವಾಗಿರುವ ತಾಯಂದಿರ ಉದಾಹರಣೆಗಳಿವೆ. ಆದ್ದರಿಂದ ಓಟ್ಸ್ ಕೂಡ ತಾಯಂದಿರ ಆರೋಗ್ಯಕ್ಕೆ ಒಳ್ಳೆಯದು.

English summary

10 Natural Ways to Increase Your Breast Milk Supply

Are you popping pills to increase you your breast milk? Please don't do that. Here's a start on some safe, natural ways to boost your milk supply.
X
Desktop Bottom Promotion