For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ ಸಣ್ಣಗಾಗಲು ಮನೆಮದ್ದು

|
Weight loss Home Remedies
ಹೆಚ್ಚಿನ ಮಹಿಳೆಯರು ಗರ್ಭಿಣಿಯಾದಾಗ ದಪ್ಪಗಾಗುತ್ತಾರೆ, ಹೆರಿಗೆಯ ನಂತರ ಬಾಣಂತನದ ಆರೈಕೆಯಲ್ಲಿ ಮತ್ತಷ್ಟು ದಪ್ಪಗಾಗುತ್ತಾರೆ. ಹೆರಿಗೆಯ ನಂತರ ಸಣ್ಣಗಾಗಲು, ಮುಂಚೆ ಇದ್ದ ಮೈಮಾಟ ಪಡೆಯಲು ಹೆಚ್ಚಿನವರು ಸಣ್ಣಗಾಗಲು ಡಯಟ್ ಮಾಡುತ್ತಾರೆ. ಆದರೆ ಈ ರೀತಿ ಡಯಟ್ ಮಾಡುವುದು ತಪ್ಪು. ದೇಹಕ್ಕೆ ಸರಿಯಾದ ರೀತಿಯಲ್ಲಿ ಪೋಷಕಾಂಶ ದೊರೆಯದೆ ದೇಹ ಸೊರಗಿ ನಿಶ್ಯಕ್ತಿ ಉಂಟಾಗುತ್ತದೆ. ಆದ್ದರಿಂದ ಆರೋಗ್ಯಕರ ರೀತಿಯಲ್ಲಿ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಿ.

ಅದಕ್ಕಾಗಿ ಈ ಕೆಳಗೆ ಹೆಲವು ಮನೆಮದ್ದುಗಳನ್ನು ಹೇಳಲಾಗಿದೆ, ಇವುಗಳನ್ನು ಪಾಲಿಸಿ ಆಕರ್ಷಕವಾದ ಮೈಮಾಟವನ್ನು ಪಡೆಯಿರಿ:

1. ನೀರು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟವಾದ ನಂತರ ಒಂದು ಲೋಟ ಬಿಸಿ ನೀರು ಕುಡಿದರೆ ಬೊಜ್ಜನ್ನು ಕರಗಿಸುತ್ತದೆ. ಇದರಿಂದ ಸಮತೂಕವನ್ನು ಪಡೆಯುತ್ತದೆ.

2. ಫ್ರೂಟ್ ಜ್ಯೂಸ್ ಕುಡಿಯಿರಿ. ತಾಜಾ ಹಣ್ಣು, ತರಕಾರಿಗಳನ್ನು ಸ್ನ್ಯಾಕ್ಸ್ ಆಗಿ ತಿನ್ನಿ.

3. ಜೇನನ್ನು ಬಿಸಿ ನೀರಿನಲ್ಲಿ ಕರಗಿಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು.

4. ನಾರಿನಂಶ ಅಧಿಕವಿರುವ ಆಹಾರ ವಸ್ತುಗಳನ್ನು ಆಹಾರಕ್ರಮದಲ್ಲಿ ಸೇರಿಸಿ.

5. ಬೆಳಗ್ಗೆ ಎರಡು ಟೊಮೆಟೊ ಅಥವಾ ಟೊಮೆಟೊ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು.

6. ಎಲೆಕೋಸು ದೇಹದ ತೂಕ ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿ. ಎಲೆಕೋಸು ತಿಂದರೆ ಎದೆ ಹಾಲು ಕುಡಿದಾಗ ಮಗುವಿಗೆ ಅಲರ್ಜಿ ಉಂಟಾಗುತ್ತದೆ ಎಂದು ಹೇಳುತ್ತಾರೆ. ಆದರೆ ಆ ರೀತಿಯಾಗಿರುವ ಒಂದು ಪ್ರಕರಣವೂ ಇದುವರೆಗೆ ದಾಖಲಾಗಲಿಲ್ಲ.

7. ಪ್ರತಿದಿನ ಒಂದು ಲೋಟ ಗ್ರೀನ್ ಕುಡಿಯಿರಿ.

8. ಮಗುವಿಗೆ ಎದೆ ಹಾಲು ಕೊಡುವುದರಿಂದ ದೇಹದ ತೂಕ ಕಡಿಮೆಯಾಗುವುದು, ಕಡಿಮೆಯೆಂದರೂ ಒಂದು ವರ್ಷದವರೆಗೆ ಮಗುವಿಗೆ ಎದೆ ಹಾಲು ಕೊಡಿ. ಇದರಿಂದ ನಿಮ್ಮ ಹಾಗೂ ಮಗುವಿನ ಆರೋಗ್ಯ ಹೆಚ್ಚುವುದು.

9. ಸಾಧ್ಯವಾದರೆ ದಿನದಲ್ಲಿ ಅರ್ಧಗಂಟೆ ನಡೆಯುವ ವ್ಯಾಯಾಮ ಮಾಡಿ. ಈ ರೀತಿ ಮಾಡಿದರೆ ಬೇಗನೆ ಸಣ್ಣಗಾಗುವಿರಿ.

English summary

Home Remedies To Loose Weight After Delivery | Tips For Weight Lose | ಹೆರಿಗೆಯ ನಂತರ ಸಣ್ಣಗಾಗಲು ಮನೆಮದ್ದು | ದೇಹದ ತೂಕ ಕಡಿಮೆ ಮಾಡಲು ಕೆಲ ಸಲಹೆಗಳು

After pregnancy women will increase their weight. After delivery women will put on their weight. To reduce weight nursing mothers cannot go on fad diet as it will cut short nutritional supply to baby. Here are home remedies to lose your weight.
X
Desktop Bottom Promotion