For Quick Alerts
ALLOW NOTIFICATIONS  
For Daily Alerts

ಹೆರಿಗೆ ನಂತರ ನಿಮ್ಮ ಡಯಟ್ ಹೀಗಿರಲಿ

By Staff
|
Post pregnancy diet
ಹೆರಿಗೆಗೆ ಮುನ್ನ ಮಾತ್ರವಲ್ಲ, ಹೆರಿಗೆ ನಂತರವೂ ತಾಯಿಗೆ ಪೋಷಣೆಯ ಅಗತ್ಯವಿದೆ. ಹೆರಿಗೆ ನಂತರ ದೇಹದಲ್ಲಿ ಅಗತ್ಯ ಅಂಶಗಳು ಕ್ಷೀಣಿಸುವುದರಿಂದ ಅದನ್ನು ಹಿಂಪಡೆಯಲು ಮತ್ತು ಮಗುವಿನ ಹಾಗೂ ತಾಯಿ ಆರೋಗ್ಯವನ್ನು ಸಮತೋಲನವಾಗಿ ನಡೆಸಿಕೊಂಡು ಹೋಗಲು ಸೂಕ್ತ ಆಹಾರ ಕ್ರಮದ ಅವಶ್ಯಕತೆಯಿದೆ. ಅದರಲ್ಲೂ ಹಾಲುಣಿಸುವ ತಾಯಂದಿರಿಗೆ ಈ ಡಯಟ್ ಇನ್ನಷ್ಟು ಉಪಯೋಗಕ್ಕೆ ಬರಲಿದೆ.

ಹೆರಿಗೆ ನಂತರ ಡಯಟ್ ಹೀಗಿರಬೇಕು:

1. ಹೆರಿಗೆ ನಂತರ ತಾಯಂದಿರು ಧಾನ್ಯ, ಹಾಲಿನ ಉತ್ಪನ್ನ, ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಕು. ಈ ಅವಧಿಯಲ್ಲಿ ಡ್ರೈಫ್ರೂಟ್ ಮಿಲ್ಕ್ ಶೇಕ್ ಕುಡಿದರೆ ತುಂಬಾ ಉಪಯೋಗವಿದೆ. ಆದರೆ ಯಾವ ಡ್ರೈಫ್ರೂಟ್ ಹೆಚ್ಚು ಉಪಯುಕ್ತ ಎಂಬುದನ್ನು ತಿಳಿದುಕೊಂಡು ಅದರಿಂದ ಮಿಲ್ಕ್ ಶೇಕ್ ತಯಾರಿಸಬೇಕು.

2. ಬೆಳಗ್ಗಿನ ತಿಂಡಿಗೆ ದೋಸೆ, ಇಡ್ಲಿ ಅಥವಾ ಬ್ರೆಡ್ ಸ್ಯಾಂಡ್ ವಿಚ್ ತಿನ್ನಬಹುದು. ಹಣ್ಣಿನ ಜ್ಯೂಸ್ ಬೆಳಗ್ಗೆ ತಿಂಡಿ ಜೊತೆಗೆ ಕುಡಿಯಬೇಕು.

3. ಬೆಳಗ್ಗೆ ತಿಂಡಿ ನಂತರ ಮತ್ತು ಮಧ್ಯಾಹ್ನ ಊಟದ ಮಧ್ಯೆ ಒಂದು ಕಪ್ ಟೀ ಕುಡಿದರೆ ಸಾಕು. ಅದರಲ್ಲಿರುವ ಔಷಧೀಯ ಅಂಶ ತಾಯಿಯ ಆರೋಗ್ಯಕ್ಕೆ ಉಪಯುಕ್ತ. ಇದೇ ಸಮಯದಲ್ಲಿ ಸಣ್ಣ ವ್ಯಾಯಾಮವನ್ನು ಮಾಡಬೇಕು.

4. ಬಿಸಿ ನೀರಿನ ಸ್ನಾನದ ನಂತರ ಅನ್ನದೊಂದಿಗೆ ಜೀರಿಗೆ ಅಥವಾ ಮೆಣಸಿನ ರಸಂ ಇರಲಿ. ನಂತರ ಮಜ್ಜಿಗೆ ಅನ್ನ ಸೇವಿಸಿದರೆ ಕ್ಷೀಣಿಸಿರುವ ಶಕ್ತಿಯನ್ನು ಮತ್ತೆ ಪಡೆಯಬಹುದು. ಊಟವಾದ ಮೇಲೆ ಎಲೆ ಅಡಿಕೆ ಜಿಗಿದರೆ ಹೆಚ್ಚು ಮಿನರಲ್ ದೊರಕುವುದರೊಂದಿಗೆ ಅವಶ್ಯಕ ನಿದ್ದೆಯನ್ನೂ ನೀಡುತ್ತದೆ.

5. ಸಂಜೆ ವಾಕ್ ಆದ ಮೇಲೆ ಒಂದು ಲೋಟ ಎಳನೀರು, ಕ್ಯಾರೆಟ್ ಜ್ಯೂಸ್, ಸೌತೆಕಾಯಿ ಜ್ಯೂಸ್ ಯಾವುದಾದರೂ ಒಂದನ್ನು ಸೇವಿಸಿದರೆ ದೇಹಕ್ಕೆ ಅವಶ್ಯವಿದ್ದಷ್ಟು ನೀರನ್ನು ಲಭಿಸಿದಂತಾಗುತ್ತದೆ.

6. ಚೆನ್ನಾಗಿ ನೀರು ಕುಡಿಯುವುದು ದೇಹಕ್ಕೆ ಎಂದಿಗೂ ಒಳ್ಳೆಯ ಅಭ್ಯಾಸ. ಇದು ದೇಹವನ್ನು ಶುದ್ಧಗೊಳಿಸಿ ನಿರ್ಜೀವ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

7. ಯಾವುದಾದರೂ ಸೂಪ್, ಬಿಸಿ ಅನ್ನದೊಂದಿಗೆ ಸ್ವಲ್ಪ ತುಪ್ಪ, ಹಸಿರು ತರಕಾರಿ ಅಥವಾ ಸೊಪ್ಪಿನ ಸಾರು, ಪಲ್ಯ ಮತ್ತು ಮೊಸರನ್ನು ರಾತ್ರಿ ಸೇವನೆಗಿರಲಿ.

8. ನಂತರ ಒಂದು ಲೋಟ ಬೆಚ್ಚಗಿನ ಹಾಲು ಕುಡಿದರೆ ಹೆರಿಗೆ ನಂತರದ ಡಯಟ್ ಪಟ್ಟಿ ಪೂರ್ಣಗೊಂಡಂತೆ.

English summary

Post Pregnancy Diet Plan | Diet After Delivery | ಹೆರಿಗೆ ನಂತರದ ಅವಶ್ಯಕ ಆಹಾರ | ಹೆರಿಗೆ ನಂತರದ ಡಯಟ್

During post pregnancy, mothers would need good energy to feed their baby and for themselves also. Take a look at the post pregnancy diet list that will help to regain the energy.
X
Desktop Bottom Promotion