For Quick Alerts
ALLOW NOTIFICATIONS  
For Daily Alerts

ಹೆರಿಗೆ ನಂತರ ಬೇಕು ಅತ್ಯುತ್ತಮ ಆರೈಕೆ

By Super
|
Postnatal care
ಹೆರಿಗೆಯಾದ ಮೇಲೆ ತಾಯಿಯ ಶಕ್ತಿ ಕುಂದುವುದು ಸಹಜ. ಆದರೆ ಮಗುವಿನ ಆರೋಗ್ಯ ತಮ್ಮ ಆರೋಗ್ಯದ ಮೇಲೆ ಅವಲಂಬಿತವಾಗಿರುವುದರಿಂದ ತಾಯಂದಿರು ಈ ಕುರಿತು ನಿರ್ಲಕ್ಷಿಸಬಾರದು.
;

ಸ್ವಲ್ಪ ಎಚ್ಚರಿಕೆವಹಿಸಿ ಆಹಾರ ಕ್ರಮವನ್ನು ಕಟ್ಟು ನಿಟ್ಟಾಗಿ ಅನುಸರಿಸುವುದರಿಂದ ತಾಯಿ ಮತ್ತು ಮಗು ಇಬ್ಬರ ಆರೋಗ್ಯವೂ ಸುರಕ್ಷಿತವಾಗಿರುತ್ತದೆ. ಹೆರಿಗೆ ನಂತರ ಯಾವ ರೀತಿ ಆಹಾರ ಸೇವಿಸಿದರೆ ಉತ್ತಮ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ

* ಹೆರಿಗೆ ನಂತರ ನೀರನ್ನು ಚೆನ್ನಾಗಿ ಕುಡಿಯಬೇಕು. ಎದೆ ಹಾಲಿನ ಅಭಾವ ಬರದಂತೆ ತಡೆಯಲು ಇದು ಹೆಚ್ಚು ಸಹಕಾರಿ. ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಸುಲಭವಾಗಿ ನಡೆಯುತ್ತದೆ. ಆಗಿಂದಾಗ್ಗೆ ಮಗುವಿನ ಜೀರ್ಣಕ್ರಿಯೆಯನ್ನೂ ಪರೀಕ್ಷಿಸುತ್ತಿರಬೇಕು.

;

* ತುಪ್ಪದ ಹೀರೇಕಾಯಿ ಮತ್ತು ಇನ್ನಿತರ ತರಕಾರಿಗಳ ಸೇವನೆ ತುಂಬಾ ಉತ್ತಮ. ವಿಟಮಿನ್ ಹೆಚ್ಚಿರುವ ಕ್ಯಾರೆಟ್, ಬೀಟ್ಸ್ ಮುಂತಾದುವನ್ನು ಈ ಸಮಯದಲ್ಲಿ ಸೇವಿಸಬೇಕು.

* ತಾಜಾ ಮೆಂತ್ಯೆ ಸೊಪ್ಪನ್ನು ಸೇವಿಸಿದರೆ ಹಾಲಿನ ಉತ್ಪತ್ತಿಗೆ ಹೆಚ್ಚು ಸಹಕಾರಿ. ಪಾಲಾಕ್ ನಂತಹ ಕ್ಯಾಲ್ಸಿಯಂ ಹೆಚ್ಚಿರುವ ಸೊಪ್ಪುಗಳ ಸೇವನೆ ಅಧಿಕವಾಗಿದ್ದರೆ ಉತ್ತಮ.

;

* ಬಾದಾಮಿ ಮತ್ತು ಗೋಡಂಬಿಯ ಸೇವನೆ ಇರಲಿ.

;

* ಪ್ರೊಟೀನ್ ಹೆಚ್ಚಿರುವ ಮೊಟ್ಟೆ, ಬೀನ್ಸ್ ಮುಂತಾದ ಕಾಳುಗಳನ್ನು ನಿಮ್ಮ ಆಹಾರದಲ್ಲಿ ರೂಢಿಸಿಕೊಳ್ಳಬೇಕು.

;

* ತುಪ್ಪವನ್ನು ತಿನ್ನುವುದರಿಂದ ಮೂಳೆಗೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ.

;

* ಮಗುವನ್ನು ಹಡೆದ ನಂತರ ಹಸಿವು ಹೆಚ್ಚಾದ ಕಾರಣ ಹಣ್ಣುಗಳ ಸೇವನೆ ಮಾಡಿದರೆ ಉತ್ತಮ.

;

* ಖಾರವನ್ನು ಆದಷ್ಟು ಕಡಿಮೆ ತಿನ್ನಬೇಕು. ಇಲ್ಲದಿದ್ದರೆ ಗರ್ಭಕೋಶದ ಸಮಸ್ಯೆಗಳನ್ನು ತಂದೊಡ್ಡಬಹುದು.

English summary

Pregnancy and care | Pregnancy postnatal care | ಗರ್ಭಾವಸ್ಥೆ ಮತ್ತು ಆರೈಕೆ | ಗರ್ಭಾವಸ್ಥೆ ಮತ್ತು ಪ್ರಸವ ನಂತರದ ಆರೈಕೆ

If you are a new mother, you now have your precious bundle of joy in your hands. However, you feel little weak and not very sure how to regain that lost energy, which is so essential for you to take care of your young one. To help the new mother regain her energy as quickly as possible, the mother has to undergo a postnatal confinement period. Here are some tips for mothers to regain their energy.
Story first published: Wednesday, January 18, 2012, 13:33 [IST]
X
Desktop Bottom Promotion