For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೊಂದು ವಿಶೇಷ ಸಿಡಿ ಗರ್ಭ ಸಂಸ್ಕಾರ

By Rajendra
|

ತಾಯಿಯ ಗರ್ಭದಲ್ಲಿರುವ ಮಗುವಿಗೆ ತಾಯಿಯ ನಡತೆ, ಸುತ್ತಮುತ್ತಲ ವಾತಾವರಣ ಪ್ರಭಾವ ಬೀರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಗರ್ಭದಲ್ಲಿರುವಾಗಲೆ ಮಗುವಿನ ಕಲಿಕೆ ಆರಂಭವಾಗುತ್ತದೆ. ಆಧುನಿಕ ವಿಜ್ಞಾನ ಸಹ ಈ ಮಹತ್ವದ ಸಂಗತಿಯನ್ನು ಒಪ್ಪುತ್ತದೆ. ಪುರಾಣಗಳಲ್ಲಿ ಇದಕ್ಕೆ ಐತಿಹ್ಯವೂ ದೊರಕುತ್ತದೆ.

ಮಹಾಭಾರತದ ಅಭಿಮನ್ಯು ತಾಯಿಯ ಗರ್ಭದಲ್ಲಿರುವಾಗಲೆ ಚಕ್ರವ್ಯೂಹ ಭೇದಿಸುವ ವಿದ್ಯೆಯನ್ನು ಕಲಿತಿದ್ದ. ಕೃಷ್ಣ ಪರಮಾತ್ಮ ಸುಭದ್ರೆಗೆ ಚಕ್ರವ್ಯೂಹದ ಬಗ್ಗೆ ಹೇಳುತ್ತಿದ್ದರೆ ತಾಯಿಯ ಗರ್ಭದಲ್ಲಿ ಅಭಿಮನ್ಯು ಹೂಂ ಗುಡುತ್ತಾ ಕೇಳುತ್ತಿದ್ದದ್ದು ಗೊತ್ತೆ ಇದೆ. ತಾಯಿಯ ಆರೋಗ್ಯ ಮಗುವಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎನ್ನುತ್ತದೆ ವೈದ್ಯಶಾಸ್ತ್ರ.

ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಗರ್ಭಿಣಿಯರ ಬಗ್ಗೆ, ಬಾಣಂತಿಯರ ಬಗ್ಗೆ ಇರುವ ಕಲ್ಪನೆ, ಆರೈಕೆಗಳು ಎಲ್ಲೂ ಇಲ್ಲ. ಗರ್ಭ ಪಾಠಗಳನ್ನು ಹೇಳಿಕೊಡುವವರು ಸಿಗುವುದಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಪುಣೆಯ ಫೌಂಟೇನ್ ಮ್ಯೂಸಿಕ್ ಕಂಪನಿ 'ಗರ್ಭ ಸಂಸ್ಕಾರ' ಎಂಬ ಗರ್ಭಿಣಿಯರಿಗಾಗಿ ವಿಶೇಷ ಸಿಡಿಯನ್ನು ಹೊರತಂದಿದೆ.

ಕೇವಲ ತಾಯಿಯ ದೈಹಿಕವಷ್ಟೆ ಅಲ್ಲ ಮಾನಸಿಕ ಹಾಗೂ ಅಧ್ಯಾತ್ಮಿಕ ಆರೋಗ್ಯವೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿಯ ದೈನಿಕ ಕಾರ್ಯಚಟುವಟಿಕೆಗಳು ಹೇಗಿರಬೇಕು. ಪಥ್ಯ, ಯೋಗ, ದೇಹಾರೋಗ್ಯ , ಸಾಮವೇದ ಮಂತ್ರಗಳು, ವೀಣಾ ವಾದನ, ಕೊಳಲ ವಾದನ ಹೀಗೆ ಸಿಡಿಯಲ್ಲಿ ವೈವಿಧ್ಯಭರಿತ, ಉಪಯುಕ್ತ ವಿಷಯಗಳಿವೆ.

ಗರ್ಭಿಣಿಯರಿಗಾಗಿ ಮಂತ್ರಗಳು, ಔಷಧಿಗಳು, ಅವುಗಳನ್ನು ಸೇವಿಸುವ ವಿಧಿ ವಿಧಾನಗಳು, ಸಂಸ್ಕಾರಯುತ ನುಡಿಗಳು ಸವಿವರ ಮಾಹಿತಿಗಳು ಸಿಡಿಯಲ್ಲಿವೆ. ಭಾರತದಲ್ಲಿ ಗರ್ಭಿಣಿ ಸಂಸ್ಕಾರದ ಬಗ್ಗೆ ತಂದ ಮೊದಲ ಸಿಡಿಯಿದು. ಆಂಗ್ಲ ಭಾಷೆಯಲ್ಲಿರುವ ಈ ಸಿಡಿ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ.

ಸಂಜಯ್ ಕೊಠಾರಿ ನಿರ್ಮಾಣ, ಅಭಯಾರ್ಪಿತ, ನಯನ ಗೋಪಾಲ್ ಸಂಗೀತ ಹಾಗೂ ಅರ್ಪಿತಾ ಕುಲಕರ್ಣಿ, ಅಭಯ್ ಕುಲಕರ್ಣಿ ಅವರ ಗಾಯನವಿದೆ. ಈ ಸಿಡಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗರ್ಭಿಣಿ ಮಹಿಳೆಯರು, ಬಾಣಂತಿಯರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 93437 11221.

Story first published: Wednesday, June 23, 2010, 13:58 [IST]
X
Desktop Bottom Promotion