For Quick Alerts
ALLOW NOTIFICATIONS  
For Daily Alerts

ತಮ್ಮ ಮಗುವಿನ ಆರೈಕೆಗಾಗಿ ಹೊಸದಾಗಿ ತಾಯಿಯಾದವರ ಬಳಿ ಈ ವಸ್ತುಗಳು ಇರಲೇಬೇಕು

|

ಮಗುವನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಇನ್ನು ಹೊಸದಾಗಿ ತಂದೆ-ತಾಯಿಯಾದವರಿಗೆ ಮಗುವಿನ ಕಾಳಜಿ ಸ್ವಲ್ಪ ಕಷ್ಟವೇ. ಏಕೆಂದರೆ, ಮಗುವಿನ ವರ್ತನೆ, ಅಗತ್ಯತೆಗಳ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ತಮ್ಮ ಮಗುವಿನ ಆರೈಕೆಗೆ ಯಾವ ವಸ್ತು ಮುಖ್ಯ? ಯಾವುದನ್ನ ಮಗುವಿನಿಂದ ದೂರವಿಡಬೇಕು? ಇಂತಹ ವಿಚಾರಗಳ ಬಗ್ಗೆ ಅರಿವಿರುವುದಿಲ್ಲ.

ನೀವೇನಾದರೂ ಹೊಸ ಪೋಷಕರಾಗಿದ್ದರೆ, ನಿಮ್ಮ ಮಗುವಿಗೆ ಅಗತ್ಯವಾಗಿ ಬೇಕಾಗಿರುವಂತಹ ಕೆಲವು ವಸ್ತುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ. ಇವುಗಳನ್ನು ನಿಮ್ಮ ಬಳಿ ಸದಾ ಇಟ್ಟುಕೊಂಡಿದ್ದರೆ, ನಿಮ್ಮ ರಜಾದಿನ ಅಥವಾ ಪ್ರವಾಸಗಳನ್ನು ಆರಾಮವಾಗಿ ಕಳೆಯಬಬಹುದು.

ಮಗುವಿನ ಆರೈಕೆಗಾಗಿ ಹೊಸ ತಾಯಿ ತನ್ನ ಬಳಿ ಇಟ್ಟುಕೊಳ್ಳಲೇಬೇಕಾದ ವಸ್ತುಗಳ ಪಟ್ಟಿಯನ್ನ ಈ ಕೆಳಗೆ ನೀಡಲಾಗಿದೆ:

1. ಬೇಬಿ ಹೇರ್ ಆಯಿಲ್:

1. ಬೇಬಿ ಹೇರ್ ಆಯಿಲ್:

ತೆಂಗಿನೆಣ್ಣೆಯಿಂದ ತಯಾರಿಸಿದ ಸಾವಯವ ಬೇಬಿ ಹೇರ್ ಆಯಿಲ್ ನಿಮ್ಮ ಮಗುವಿನ ಕೂದಲನ್ನು ಬಲಪಡಿಸುತ್ತದೆ ಜೊತೆಗೆ ಕೂದಲು ಉದುರುವುದು ಮತ್ತು ಪ್ರೋಟೀನ್ ನಷ್ಟವನ್ನು ತಡೆದು, ನಡತ್ತಿಯ ಆರೈಕೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಶುಷ್ಕತೆ, ಡಯಾಪರ್ ದದ್ದುಗಳು, ತುರಿಕೆ, ಕಿರಿಕಿರಿ ಮತ್ತು ಚರ್ಮದ ಉರಿಯೂತಗಳನ್ನು ನಿವಾರಿಸುತ್ತದೆ. ಇದನ್ನು ಮಗುವಿನ ದೇಹದ ಮಸಾಜ್‌ಗಾಗಿ ಕೂಡ ಬಳಸಬಹುದು.

2. ಕ್ಲೆನ್ಸಿಂಗ್ ಬೇಬಿ ವೈಪ್ಸ್:

2. ಕ್ಲೆನ್ಸಿಂಗ್ ಬೇಬಿ ವೈಪ್ಸ್:

ಯಾವುದೇ ಪೋಷಕರು ತಮ್ಮ ಮಗುವಿಗೆ ಹಾನಿಕಾರಕವಾಗಿರುವ ವಸ್ತುವನ್ನು ಬಳಸಲು ಬಯಸುವುದಿಲ್ಲ. ಜೊತೆಗೆ ಮಗುವಿನ ಚರ್ಮವು ಸೂಕ್ಷ್ಮವಾಗಿದ್ದು, ಅತ್ಯಂತ ಎಚ್ಚರಿಕೆಯಿಂದ ಆರೈಕೆ ಮಾಡಬೇಕಾಗುತ್ತದೆ. ಆದ್ದರಿಂದ ಸ್ವಚ್ಛಗೊಳಿಸಲು ಬಟ್ಟೆಯನ್ನು ಬಳಸುವ ಬದಲು ಬೇಬಿ ವೈಪ್ಸ್ ಆಯ್ಕೆ ಮಾಡಿ. ಇದು ತುಂಬಾ ಮೃದುವಾಗಿದ್ದು, ಮಗುವಿನ ತ್ವಚೆಗೆ ಸಂಪೂರ್ಣ ಸುರಕ್ಷಿತವಾಗಿದೆ.

3.ಬೇಬಿರಬ್:

3.ಬೇಬಿರಬ್:

ನಿಮ್ಮ ಮಗು ಕಿರಿಕಿರಿಯುಂಟುಮಾಡುವ ಸಮಯದಲ್ಲಿ ಅದನ್ನು ಸಮಾಧಾನಪಡಿಸಲು ಮತ್ತು ಸಾಂತ್ವನಗೊಳಿಸಲು ಎಲ್ಲವನ್ನು ಮಾಡುತ್ತೀರಿ. ಆದರೆ, ಬೇಬಿರಬ್ ಮೂಲಕ ಅವರನ್ನು ಸಮಾಧಾನಗೊಳಿಸಬಹುದು. ಇವುಗಳಲ್ಲಿ ನೀಲಗಿರಿ, ರೋಸ್ಮರಿ ಮೊದಲಾದ ಸಾರಭೂತ ತೈಲಗಳನ್ನು ಬಳಕೆ ಮಾಡುವುದರಿಂದ ಮಗುವಿಗೆ ನಿದ್ರಿಸಲು ಸಹಾಯ ಮಾಡುವುದು.

4. ಬೇಬಿ ಜೆಂಟಲ್ ವಾಶ್:

4. ಬೇಬಿ ಜೆಂಟಲ್ ವಾಶ್:

ಮಗುವಿನ ಚರ್ಮವನ್ನು ರಕ್ಷಿಸಲು ಮತ್ತು ಹೈಡ್ರೇಟ್ ಮಾಡಲು ಬೇಬಿ ವಾಶ್ ಬಳಸುವುದು ಉತ್ತಮವಾಗಿದೆ. ಸಾಬೂನಿಗಿಂತ ಬೇಬಿ ವಾಶ್ ಮಗುವಿಗೆ ಹೆಚ್ಚು ಸೂಕ್ತವಾಗಿದ್ದು, ಸಾಬೂನಿನ ನೊರೆಯಿಂದ ಕಣ್ಣುರಿಯುವ ಸಮಸ್ಯೆಯಿಂದ ಮಗುವನ್ನು ಪಾರು ಮಾಡಬಹುದು. ಈ ಮೂಲಕ ಯಾವುದೇ ಕಿರಿಕಿರಿ, ಅಳುವಿಲ್ಲದೇ ಮಗುವಿನ ಸ್ನಾನ ಮುಗಿಸಬಹುದು.

5.ಬೇಬಿ ವ್ರಾಪ್ ಬ್ಲಾಂಕೆಟ್:

5.ಬೇಬಿ ವ್ರಾಪ್ ಬ್ಲಾಂಕೆಟ್:

ಸ್ನಾನದ ನಂತರ ನಿಮ್ಮ ಮಗುವನ್ನು ಮಲಗಿಸಲು ಅಥವಾ ಹೊರಗಡೆ ಕರೆದೊಯ್ಯಲು ವ್ರಾಪ್ ಬ್ಲಾಂಕೆಟ್ ಅತ್ಯಗತ್ಯ. ಇದು ಮಗುವನ್ನು ಬೆಚ್ಚಿಗಿಡುವುದಲ್ಲದೇ, ನಿದ್ರಿಸಲು ಉತ್ತಮವಾಗಿದೆ. ಆದ್ದರಿಂದ ಉತ್ತಮ ಗುಣಮಟ್ಟದ ಬ್ಲಾಂಕೆಟ್‌ನ್ನು ನಿಮ್ಮ ಮಗುವಿಗಾಗಿ ಈಗಲೇ ಖರೀದಿಸಿ.

6. ಮಗುವಿನ ಬಾಚಣಿಗೆ ಮತ್ತು ಬ್ರಷ್ ಸೆಟ್:

6. ಮಗುವಿನ ಬಾಚಣಿಗೆ ಮತ್ತು ಬ್ರಷ್ ಸೆಟ್:

ಮಗುವಿಗೆ ಸಾಮಾನ್ಯ ಬಾಚಣಿಗೆ ಬಳಸಬಾರದು. ಅದಕ್ಕಾಗಿ ಮಗುವಿಗಾಗಿಯೇ ತಯಾರಾದ ಹೇರ್ ಬ್ರಷ್ ಸೆಟ್ ನ್ನು ನಿಮ್ಮ ಜೊತೆಗಿಟ್ಟುಕೊಳ್ಳಿ. ಬಾಚಣಿಗೆಯ ಹಲ್ಲುಗಳು ಮೃದುವಾಗಿರುವಂತಹ ಬಾಚಣಿಗೆಯನ್ನು ಮಗುವಿಗೆ ಆಯ್ಕೆ ಮಾಡಿ. ಇಲ್ಲವಾದಲ್ಲಿ ಸೂಕ್ಷ್ಮ ನೆತ್ತಿಗೆ ಹಾನಿಯಾಗುವ ಸಂಭವವಿದೆ.

English summary

Must have items on Every New Mom's list to Pamper Newborn in Kannada

Here we talking about Must have items on every new mom's list to Pamper newborn in Kannada, read on
Story first published: Wednesday, October 20, 2021, 17:15 [IST]
X
Desktop Bottom Promotion