For Quick Alerts
ALLOW NOTIFICATIONS  
For Daily Alerts

ಮದರ್ಸ್ ಡೇ ಸ್ಪೆಷಲ್: ಮಕ್ಕಳೇ, ನಿಮ್ಮ ಅಮ್ಮಂದಿರ ಆರೋಗ್ಯಕ್ಕಾಗಿ ಈ ಸಲಹೆಗಳನ್ನು ಪಾಲಿಸಲು ಹೇಳಿ

|

ಈ ಜಗತ್ತಿನಲ್ಲಿ ಬೆಲೆಕಟ್ಟಲಾಗದೇ ಇರುವಂತದ್ದುದು ಏನಾದರೂ ಇದ್ದರೆ ಅದು ಅಮ್ಮ, ಆಕೆಯ ಪ್ರೀತಿ-ವಾತ್ಸಲ್ಯ. ಜೀವನದಲ್ಲಿ ಬೇರೆ ಎಲ್ಲವೂ ಬದಲಾಗಬಹುದೇನೋ ಆದರೆ ತಾಯಿಯ ಮಮತೆ ಎಂದಿಗೂ ಬದಲಾಗದು. ಅಂತಹ ಮಾತೃಹೃದಯಕ್ಕೆ ಗೌರವ ಸಲ್ಲಿಸುವ ದಿನ ಸಮೀಪದಲ್ಲೇ ಇದೆ. ಹೌದು, ಇದೇ ಮೇ 9ರಂದು ಮದರ್ಸ್ ಡೇ ಅಂದ್ರೆ ತಾಯಂದಿರ ದಿನ.

ಸದಾ ತನ್ನ ಮಕ್ಕಳು-ಕುಟುಂಬಕ್ಕಾಗಿ ದುಡಿಯುವ ಈ ತಾಯಿ ತನಗೋಸ್ಕರ ಬದುಕಿದ್ದೇ ಕಡಿಮೆ. ಆದ್ದರಿಂದ ಬರುವ ಅಮ್ಮಂದಿರ ದಿನದಿಂದಾದರೂ ಎಲ್ಲಾ ತಾಯಂದಿರು ಸ್ವ ಆರೈಕೆ ಅಥವಾ ತಮ್ಮ ಆರೋಗ್ಯದ ಕುರಿತು ಕಾಳಜಿ ತೆಗೆದುಕೊಳ್ಳಬೇಕೆಂಬುದು ನಮ್ಮ ಕಳಕಳಿ. ಅದೇಗೆ ಅಂತ ಯೋಚನೆ ಮಾಡ್ತಾ ಇದೀರಾ? ಈ ಕೆಳಗೆ ಕೊಟ್ಟಿರೋ ಸಲಹೆಗಳನ್ನು ಪಾಲನೆ ಮಾಡಿದ್ರೆ ಸಾಕು.

ತಮ್ಮನ್ನು ಆರೋಗ್ಯವಾಗಿಡಲು ಮತ್ತು ಸಂತೋಷವಾಗಿಡಲು ಅಮ್ಮಂದಿರು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ:

ಹಣ್ಣುಗಳು ಮತ್ತು ಸಸ್ಯಾಹಾರಿಗಳನ್ನು ಸೇವಿಸಿ:

ಹಣ್ಣುಗಳು ಮತ್ತು ಸಸ್ಯಾಹಾರಿಗಳನ್ನು ಸೇವಿಸಿ:

'ಮಕ್ಕಳೇ, ಹಣ್ಣು ಮತ್ತು ತರಕಾರಿಗಳನ್ನು ಸರಿಯಾಗಿ ತಿನ್ನಿರಿ' ಎಂದು ಪ್ರತಿಯೊಬ್ಬ ತಾಯಿ ತಮ್ಮ ಮಕ್ಕಳಿಗೆ ಹೇಳಿರುತ್ತಾರೆ. ಆದರೆ ತಾಯಂದಿರು ಎಷ್ಟು ತಿನ್ನುತ್ತಾರೆ ಎಂಬುದು ಯಾರೂ ಚಿಂತಿಸುವುದಿಲ್ಲ. ಹಣ್ಣು-ತರಕಾರಿಯಿಂದ ಉತ್ತಮ ಪೌಷ್ಠಿಕಾಂಶ ಲಭ್ಯವಾಗುವುದರಿಂದ, ಇದು ಮಕ್ಕಳಿಗೆ ಮಾತ್ರವಲ್ಲ, ಮಕ್ಕಳನ್ನು ಹೆತ್ತ ತಾಯಿಗೂ ಅಗತ್ಯವಾಗಿ ಬೇಕಾಗಿರುವುದೇ. ಪೌಷ್ಠಿಕಾಂಶ-ದಟ್ಟವಾದ ಹಣ್ಣುಗಳು ಮತ್ತು ತರಕಾರಿಗಳು ಹೃದ್ರೋಗ ಮತ್ತು ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾಲೊರಿ, ಉಪ್ಪು, ಕೊಬ್ಬು ಮತ್ತು ಆಲ್ಕೋಹಾಲ್ ಅಧಿಕವಾಗಿರುವ ಆಹಾರ ಮತ್ತು ಪಾನೀಯಗಳನ್ನು ಕಡಿತಗೊಳಿಸಿ.

ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ:

ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ:

ದೈಹಿಕವಾಗಿ ಸಕ್ರಿಯರಾಗಿರುವುದು ನಿಮ್ಮ ಆರೋಗ್ಯ ಕಾಪಾಡಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಓಡಾಡುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಣೆಯಾಗುತ್ತದೆ. ಟೈಪ್ 2 ಡಯಾಬಿಟಿಸ್, ಕೆಲವು ಕ್ಯಾನ್ಸರ್ ಅಪಾಯವೂ ಕಡಿಮೆ ಆಗುವುದಲ್ಲದೇ, ನಿಮ್ಮ ಜೀವಿತಾವಧಿಯನ್ನು ಸಹ ಹೆಚ್ಚಿಸಬಹುದು. ಇತರ ಅನೇಕ ಆರೋಗ್ಯ ಪ್ರಯೋಜನಗಳ ಪೈಕಿ, ನಿಯಮಿತ ವ್ಯಾಯಾಮವು ನಿಮ್ಮ ಮನಸ್ಥಿತಿ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಚೆನ್ನಾಗಿ ನಿದ್ರಿಸಿ:

ಚೆನ್ನಾಗಿ ನಿದ್ರಿಸಿ:

ನೆನಪಿಡಿ, ನಿದ್ರೆಯ ಕೊರತೆಯು ಹೃದಯರಕ್ತನಾಳದ ಕಾಯಿಲೆ, ಬೊಜ್ಜು, ಮಧುಮೇಹ, ಖಿನ್ನತೆಯಂತಹ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರತಿ ರಾತ್ರಿ ನಿಮಗೆ ಸಾಕಷ್ಟು ನಿದ್ರೆ ಬರುವಂತೆ ನೋಡಿಕೊಳ್ಳಿ. ಚೆನ್ನಾಗಿ ನಿದ್ರೆ ಬರಬೇಕಾದರೆ ದೇಹವು ಸ್ವಲ್ಪ ದಣಿದಿರಬೇಕು. ಅದಕ್ಕೆ ನೀವು ವ್ಯಾಯಾಮ ಮಾಡಬೇಕು. ಆಗ ಚೆನ್ನಾಗಿ ನಿದ್ರೆ ಬರುತ್ತದೆ.

ಒತ್ತಡವನ್ನು ಕಡಿಮೆ ಮಾಡಿ:

ಒತ್ತಡವನ್ನು ಕಡಿಮೆ ಮಾಡಿ:

ಅಧ್ಯಯನಗಳ ಪ್ರಕಾರ, ಅನೇಕ ಆರೋಗ್ಯ ಸಮಸ್ಯೆಗಳು ಒತ್ತಡಕ್ಕೆ ಸಂಬಂಧಿಸಿವೆ. ನಾವೆಲ್ಲರೂ ಕಾಲಕಾಲಕ್ಕೆ ನಮ್ಮ ಜೀವನದಲ್ಲಿ ಒತ್ತಡವನ್ನು ಅನುಭವಿಸುವುದು ಸಹಜ. ಆದರೆ ಹೆಚ್ಚಿನ ಒತ್ತಡವು ಬೊಜ್ಜು, ಹೃದ್ರೋಗ, ಮಧುಮೇಹ, ಖಿನ್ನತೆ, ಆಸ್ತಮಾ ಮುಂತಾದ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ.

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ:

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ:

ನೀವು ಎಷ್ಟೇ ಬ್ಯುಸಿಯಾಗಿದ್ದರೂ, ನಿಮ್ಮ ಬಗ್ಗೆ ಕಾಳಜಿ ಮಾಡಲು ಸ್ವಲ್ಪ ಸಮಯವನ್ನು ಮಾಡಿಕೊಳ್ಳಬೇಕು. ಏಕೆಂದರೆ ಅನಾರೋಗ್ಯ ಪೀಡಿತ ತಾಯಿ ತನ್ನ ಮನೆಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೃದ್ರೋಗ, ಸ್ತನ ಕ್ಯಾನ್ಸರ್ ಮುಂತಾದ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳನ್ನು ತಡೆಗಟ್ಟಲು ನಿಯಮಿತವಾಗಿ ತಪಾಸಣೆ ಮಾಡಿ. ನಿಮ್ಮ ಆರೋಗ್ಯದ ಬಗ್ಗೆ ನಿಗಾ ಇಡುವುದು ತುಂಬಾ ಮುಖ್ಯ.

English summary

Mothers Day Special : Health Tips for Moms

Here we talking about Mothers Day Special : health tips for moms, read on
X
Desktop Bottom Promotion