For Quick Alerts
ALLOW NOTIFICATIONS  
For Daily Alerts

ವರ್ಕ್‌ ಫ್ರಂ ಹೋಂ ಮಾಡುವ ತಾಯಂದಿರಿಗಾಗಿ ಈ ಉಪಯುಕ್ತ ಟಿಪ್ಸ್

|

ಕೊರೊನಾವೈರಸ್‌ನಿಂದಾಗಿ ಆಫೀಸ್‌ ಎಲ್ಲಾ ಬಂದ್‌ ಆಗಿದೆ. ಹೆಚ್ಚಿನವರಿಗೆ ಕಂಪನಿ ವರ್ಕ್‌ ಫ್ರಂ ಹೋಂ ನೀಡಿದೆ. ಆಫೀಸ್‌ನಲ್ಲಿ ಕೆಲಸ ಮಾಡುವುದಕ್ಕೂ, ಮನೆಯಲ್ಲಿ ಮಾಡುವುದಕ್ಕೂ ವ್ಯತ್ಯಾಸವಿದೆ. ಆಫೀಸ್‌ ಕೆಲಸ ಮನೆಯಲ್ಲಿಯೇ ಕುಳಿತು ಮಾಡುವಾಗ ತುಂಬಾ ಒತ್ತಡಕ್ಕೆ ಒಳಗಾಗುತ್ತೇವೆ.

Reality Of Work From Home | Boldsky Kannada
Work From Home Tips For Mothers

ಏಕೆಂದರೆ ಕೊಟ್ಟಿರುವ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಿ ಬಾಸ್‌ಗೆ ರಿಪೋರ್ಟ್ ಮಾಡಬೇಕಾಗಿರುತ್ತದೆ. ಆದರೆ ಮನೆಯಲ್ಲಿ ಮಕ್ಕಳಿರುವ ತಾಯಂದಿರಿಗೆ ಈ ಸಮಯ ಸ್ವಲ್ಪ ಚಾಲೆಂಜ್‌ನ ಸಮಯವಾಗಿದೆ. ಮಕ್ಕಳನ್ನೂ ನಿಭಾಯಿಸುತ್ತಾ ಆಫೀಸ್‌ ಕೆಲಸ ಮಾಡಬೇಕಾಗುತ್ತದೆ. ಮಕ್ಕಳು ಹಾಗೂ ಕೆಲಸ ಎರಡಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ ಕೆಲಸ ಮಾಡಿಕೊಳ್ಳಬೇಕಾಗುತ್ತದೆ.

ಇನ್ನು ಕಾನ್ಫರೆನ್ಸ್ ಕಾಲ್, ಮೀಟಿಂಗ್ ಮಾಡುವಾಗ ಮಕ್ಕಳು ಅಳುವುದು, ಕಿರುಚಾಡುವುದು ಮಾಡುವುದರಿಂದ ತುಂಬಾ ತೊಂದರೆಯಾಗುತ್ತದೆ ಎನ್ನುವುದನ್ನು ವರ್ಕ್‌ ಫ್ರಂ ಹೋಮ್ ಮಾಡುವ ತಾಯಂದಿರು ಒಪ್ಪಿಕೊಳ್ಳುತ್ತಾರೆ.

ಇಲ್ಲಿ ವರ್ಕ್‌ ಫ್ರಂ ಹೋಮ್‌ ಮಾಡುವ ತಾಯಂದಿರಿಗೆ ಸಹಕಾರಿಯಾದ ಕೆಲ ಟಿಪ್ಸ್ ನೀಡಿದ್ದೇವೆ ನೋಡಿ:

1. ದಿನ ನಿತ್ಯ ಒಂದೇ ಸಮಯ ಫಾಲೋ ಮಾಡಿ

1. ದಿನ ನಿತ್ಯ ಒಂದೇ ಸಮಯ ಫಾಲೋ ಮಾಡಿ

ನೀವು ಆಫೀಸ್‌ಗೆ ಹೋಗುವಾಗ ಹೇಗೆ ಮನೆಯ ಇತರ ಕೆಲಸ ಮುಗಿಸಿ ಸಿದ್ಧರಾಗುತ್ತಿದ್ದೀರೋ ಹಾಗೆಯೇ ವರ್ಕ್‌ ಫ್ರಂ ಹೋಂ ಮಾಡುವಾಗ ನಿಮ್ಮೆಲ್ಲಾ ಕೆಲಸ ಮುಗಿಸಿ, ಮಕ್ಕಳಿಗೆ ತಿನ್ನಲಿಕ್ಕೆ ರೆಡಿ ಮಾಡಿ, ತಿನಿಸಿ, ನಿಮ್ಮ ಆಫೀಸ್‌ ಕೆಲಸವನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸಿ. ಇದರಿಂದ ನಿಮಗೆ ಆಫೀಸ್ ಕೆಲಸ ನಿಗದಿತ ಸಮಯದಲ್ಲಿ ಉಗಿಸಬಹುದು ಹಾಗೂ ಇದು ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ.

ಕೆಲಸ ಮಾಡುವಾಗ ಮಗು ಅಳುವುದು, ಗಲಾಟೆ ಮಾಡುವುದು ಮಾಡಿದರೆ ಹಾಗೇ ಕೆಲಸ ಮುಂದುವರೆಸಬೇಡಿ, ಹಾಗೆ ಮಾಡಿದರೆ ಮಕ್ಕಳು ಮತ್ತಷ್ಟು ಹಠ ಮಾಡುತ್ತವೆ ಹಾಗೂ ನಿಮಗೆ ನಿಮ್ಮ ಕೆಲಸದಲ್ಲಿ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಅವರನ್ನು ಸಮಧಾನ ಪಡಿಸಿ, ನಂತರ ಕೆಲಸ ಮಾಡಿ.

2.ಕೆಲಸಕ್ಕೆ ಅನುಕೂಲವಾರದ ಸ್ಥಳದಲ್ಲಿ ಕೂರಿ

2.ಕೆಲಸಕ್ಕೆ ಅನುಕೂಲವಾರದ ಸ್ಥಳದಲ್ಲಿ ಕೂರಿ

ನೀವು ಮನೆಯಲ್ಲಿರುವಾಗ ಆರಾಮವಾಗಿ ಕೂರುವ ಸೋಫಾ, ಬೆಡ್‌ ಮೇಲೆ ಕೂರಬೇಡಿ. ಇದರಿಂದ ಕೆಲಸ ಮಾಡುವಾಗ ಸೋಮಾರಿತನ ಉಂಟಾಗುವುದು. ಕೆಲಸ ಮಾಡಲು ಒಂದು ಟೇಬಲ್, ಚೇರ್‌ ಗಾಳಿ, ಬೆಳಕು ಚೆನ್ನಾಗಿ ಬರುವ ಕಡೆ ಸೆಟ್‌ ಮಾಡಿ, ಲೈಟ್ ಸೆಟ್‌ ಅಪ್ ಚೆನ್ನಾಗಿರಲಿ, ಆರಾಮದಾಯವಾಗಿ ಕುಳಿತು ಕೆಲಸ ಮಾಡಿ. ಅಲ್ಲಲ್ಲಿ ಕೂತು ಕೆಲಸ ಮಾಡುವುದು, ಸೋಫಾದಲ್ಲಿ ಕೂತು ಮಾಡುವುದು ಮಾಡಿದರೆ ತುಂಬಾ ಹೊತ್ತಿನ ಬಳಿಕ ಬೆನ್ನು ನೋವು, ಕುತ್ತಿಗೆ ನೋವು ಬರುವುದು. ಅಲ್ಲದೆ ನೀವು ಕೂರುವ ಜಾಗಕ್ಕೆ ಆಗಾಗ ಬಂದು ಗಲಾಟೆ ಮಾಡುವಂತೆ ಇರಬಾರದು. ಮನೆಯಲ್ಲಿ ನೋಡಿಕೊಳ್ಳಲು ಹಿರಿಯರಿದ್ದರೆ ಅವರ ಬಳಿ ಸ್ವಲ್ಪ ನೋಡಿಕೊಳ್ಳಲು ಹೇಳಿ, ಮೀಟಿಂಗ್‌, ಕಾಲ್‌ಗಳಿರುವಾಗ ರೂಮ್‌ಗೆ ಬಾಗಿಲು ಹಾಕಿ ಮಾಡಿ.

3. ಮಕ್ಕಳಿಗೆ ಅರ್ಥ ಮಾಡಿಸಿ

3. ಮಕ್ಕಳಿಗೆ ಅರ್ಥ ಮಾಡಿಸಿ

ನಿಮ್ಮ ಕೆಲಸಕ್ಕೆ ಅಡ್ಡಿ ಆಗಬಾರದೆಂದು ಅವರು ಕೇಳಿದ್ದಕ್ಕೆಲ್ಲಾ ಸರಿ ಎಂದು ಹೇಳಬೇಡಿ. ಕೆಲ ಪೋಷಕರನ್ನು ನೋಡುತ್ತೇವೆ. ಮಕ್ಕಳು ಒಂದು ಕಡೆ ಸುಮ್ಮನೆ ಕೂತಿರಲಿ ಎಂದು ಮೊಬೈಲ್ ಕೊಟ್ಟು ಬಿಡುತ್ತಾರೆ. ಈ ರೀತಿ ಮಾಡಲು ಹೋಗಲೇಬೇಡಿ. ಅದರ ಬದಲಿಗೆ ಅವರಿಗೆ ಏನಾದರೂ ಕ್ರಿಯೇಟಿವ್ ಹೇಳೊಕೊಟ್ಟು ಅದನ್ನು ಮಾಡುವಂತೆ ಪ್ರೇರೇಪಿಸಿ. ಇದರಿಂದ ಮಕ್ಕಳ ಯೋಚನಾ ಸಾಮಾರ್ಥ್ಯ ಹೆಚ್ಚುವುದು ಅಲ್ಲದೆ ನಿಮ್ಮ ತಂಟೆಗೆ ಬರದೆ ಅವರಷ್ಟಕ್ಕೆ ಆಡುತ್ತಾ ಕಾಲ ಕಳೆಯುತ್ತಾರೆ. ಇದರಿಂದ ಕೆಲಸವನ್ನು ಸುಲಭದಲ್ಲಿ ಮಾಡಬಹುದು.

4, ಮಕ್ಕಳು ಖುಷಿಯಾಗಿರುವಂತೆ ನೋಡಿಕೊಳ್ಳಿ

4, ಮಕ್ಕಳು ಖುಷಿಯಾಗಿರುವಂತೆ ನೋಡಿಕೊಳ್ಳಿ

ನೀವು ಮನೆಯಲ್ಲಿ ಸದಾ ಲ್ಯಾಪ್‌ಟಾಪ್ ಮುಂದೆ ಕೂರುವುದರಿಂದ ಅವರಿಗೂ ಕಿರಿಕಿರಿ ಅನಿಸಿ, ಗಲಾಟೆ ಮಾಡುವುದು, ಕಿರುಚಾಡುವುದು ಮಾಡುವುದು. ಅವರಿಗೆ ಖುಷಿ ನೀಡುವ ರೀತಿಯಲ್ಲಿ ಕೆಲವೊಂದು ಆಟದ ಸಾಮಾನುಗಳನ್ನು ತಂದುಕೊಡಿ. ಸ್ವಲ್ಪ ದೊಡ್ಡ ಮಕ್ಕಳಾದರೆ ಕತೆ ಪುಸ್ತಕ ಓದಲು ಹೇಳಿ. ಹೀಗೆ ಮಾಡುವುದರಿಂದ ಕೆಲಸ ಮಾಡುವಾಗ ಅಮ್ಮನಿಗೆ ತೊಂದರೆ ಕೊಡಬಾರದೆಂದು ಮಕ್ಕಳಿಗೂ ಅರ್ಥವಾಗುತ್ತದೆ. ಸುಮ್ಮನೆ ಅವರಿಗೆ ಬೈಯ್ಯುವುದು, ಗದರಿಸುವುದು, ಮಾಡಿದರೆ ಅವರು ಮತ್ತಷ್ಟು ಕೀಟಲೆ ಮಾಡುತ್ತಾರೆ.

5. ಕೆಲಸದ ನಡುವೆ ಬ್ರೇಕ್‌ ತಗೊಳ್ಳಿ

5. ಕೆಲಸದ ನಡುವೆ ಬ್ರೇಕ್‌ ತಗೊಳ್ಳಿ

ಆಫೀಸ್‌ನಲ್ಲಿ ಹೇಗೆ ಟೀ, ಲಂಚ್‌ ಬ್ರೇಕ್ ತೆಗೆದುಕೊಳ್ಳುವ ಹಾಗೆಯೇ ಮನೆಯಿಂದ ಕೆಲಸ ಮಾಡುವಾಗಲೂ ಬ್ರೇಕ್ ತೆಗೆಯಿರಿ. ಬ್ರೇಕ್‌ ತೆಗೆಯುವಾಗ ವಾಟ್ಸಾಪ್‌ ಗ್ರೂಪ್ ಇದ್ದರೆ ಅದರಲ್ಲಿ ಹಾಕಿ. ಆಗ ನಿಮ್ಮ ಇತರ ಸಹೋದ್ಯೋಗಿಗಳು ಆ ಸಮಯದಲ್ಲಿ ನಿಮ್ಮಿಂದ ಉತ್ತರ ಬರಬೇಕೆಂದು ನಿರೀಕ್ಷಿಸುವುದಿಲ್ಲ. ಆ ಸಮಯದಲ್ಲಿ ಮಕ್ಕಳ ಜೊತೆ ಆಡಿ. ಅವರ ಜೊತೆ ಮಾತನಾಡುತ್ತಾ ಅವರ ಮುದ್ದಿನ ಮಾತುಗಳನ್ನು ಕೇಳಿ, ಅವರ ಕೈ ಹಿಡಿದು ಮನೆಯೊಳಗೆ ನಡೆಯಿರಿ. ಹೀಗೆ ಮಾಡುವುದರಿಂದ ಅವರಿಗೂ ಖುಷಿ, ನಿಮಗೂ ರಿಲ್ಯಾಕ್ಸ್ ಅನಿಸುವುದು.

6. ಸಂಗಾತಿ ಹಾಗೂ ನಿಮ್ಮ ಕೆಲಸದ ವೇಳೆಯಲ್ಲಿ ವ್ಯತ್ಯಾಸವಿರುವಂತೆ ನೋಡಿಕೊಳ್ಳಿ

6. ಸಂಗಾತಿ ಹಾಗೂ ನಿಮ್ಮ ಕೆಲಸದ ವೇಳೆಯಲ್ಲಿ ವ್ಯತ್ಯಾಸವಿರುವಂತೆ ನೋಡಿಕೊಳ್ಳಿ

ಇಬ್ಬರೂ ಒಂದೇ ಸಮಯದಲ್ಲಿ ಕೆಲಸ ಮಾಡುತ್ತಾ ಕೂರುವ ಬದಲು ಸ್ವಲ್ಪ ಬದಲಾವಣೆ ತನ್ನಿ. ನಿಮ್ಮ ಬಾಸ್‌ನ ಅನುಮತಿ ಪಡೆದು ನಿಮಗೆ ಅನುಕೂಲರವಾದ ಕೆಲಸದ ಸಮಯ ಫಿಕ್ಸ್ ಮಾಡಿ. ಹೀಗೆ ಮಾಡಿದರೆ ನೀವು ಕೆಲಸ ಮಾಡುವಾಗ ಅವರು ಮಕ್ಕಳನ್ನು ನೋಡಿಕೊಳ್ಳಬಹುದು. ಹೀಗೆ ಮಾಡಿದರೆ ಮಕ್ಕಳಿಗೂ ಬೇಸರ ಉಂಟಾಗುವುದಿಲ್ಲ.

7. ಅಮ್ಮ ಹಾಗೂ ಉದ್ಯೋಗಿ ಎರಡೂ ಮಾತ್ರವನ್ನು ನಿಭಾಯಿಸಿ

7. ಅಮ್ಮ ಹಾಗೂ ಉದ್ಯೋಗಿ ಎರಡೂ ಮಾತ್ರವನ್ನು ನಿಭಾಯಿಸಿ

ತಾಯಿಯಾದ ಬಳಿಕ ಮಹಿಳೆಯರ ಜವಾಬ್ದಾರಿ ತುಂಬಾ ಹೆಚ್ಚುವುದು. ಇನ್ನು ಉದ್ಯೋಗಿಯಾಗಿದ್ದರೆ ತಾಯಿ ಹಾಗೂ ಕೆಲಸ ಎರಡನ್ನೂ ನಿಭಾಯಿಸಿಕೊಂಡು ಹೋಗ ಬೇಕಾಗುತ್ತದೆ. ಕೆಲವೊಮ್ಮೆ ತುಂಬಾ ಮಾನಸಿಕ ಒತ್ತಡ ಕೂಡ ಉಂಟಾಗುವುದು. ಇದು ಉಂಟಾಗದಿರಲು ತಡೆಯಲು ನೀವು ಮಾಡಬೇಕಾಗಿರುವುದು, ನಿಮ್ಮ ಆಫೀಸ್‌ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಿ. ಮನೆಯಲ್ಲಿ ಅಲ್ವಾ ಅಂತ ನಿಧಾನಕ್ಕೆ ಮಾಡಿದರೆ ಕೆಲಸ ಮುಗಿಯಲು ತುಂಬಾ ಹೊತ್ತು ಹಿಡಿಯುವುದು. ಇದರಿಂದ ಸಂಜೆ ಹೊತ್ತಿಗೆ ತುಂಬಾ ಸುಸ್ತು ಅನಿಸುವುದು. ಬದಲಿಗೆ ಬೇಗ ಕೆಲಸ ಮುಗಿಸಿ, ಉಳಿದ ಸಮಯ ಮಕ್ಕಳಿಗೆ ಕೊಡಿ.

Read more about: work mother home
English summary

Work From Home Tips For Mothers

Here, we provide you with some effective tips that would help make your work from home not only a productive one but also a peaceful and fun one too.
Story first published: Wednesday, April 1, 2020, 15:35 [IST]
X
Desktop Bottom Promotion