For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕಾಗಿ ನೀಡಬಾರದ ಆಹಾರಗಳು

|

ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಮತ್ತು ವೃದ್ದರಲ್ಲಿ ಉಡುಗಿರುವ ಕಾರಣ ವಾತಾವರಣದಲ್ಲಿ ಆಗುವ ಬದಲಾವಣೆಗಳ ಪರಿಣಾಮದಿಂದ ಎದುರಾಗುವ ವೈರಸ್ಸುಗಳ ಧಾಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಇದೇ ಕಾರಣಕ್ಕೆ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಶೀತ, ಫ್ಲೂ, ನ್ಯುಮೋನಿಯಾ, ಜಠರದ ನ್ಯುಮೋನಿಯಾ, ತೀವ್ರತರದ ಕಿವಿಯ ಸೋಂಕು, ಚರ್ಮ ಒಣಗುವುದು, ಆಸ್ತಮಾ ಮೊದಲಾದ ತೊಂದರೆಗಳೂ ಮಕ್ಕಳಲ್ಲಿ ಕಾಣಿಸತೊಡಗುತ್ತವೆ.

ಆದ್ದರಿಂದ ಚಳಿಗಾಲದಲ್ಲಿ ವಿಶೇಷವಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವುದು ಹೆಚ್ಚು ಅಗತ್ಯವಾಗಿದೆ. ಏಕೆಂದರೆ ಮಕ್ಕಳು ಹೊರಹೋಗಿ ಆಡುವ ಉತ್ಸಾಹದಲ್ಲಿದ್ದು ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚೇ ಹೊಂದಿರುತ್ತಾರೆ. ಆದ್ದರಿಂದ ಮಕ್ಕಳನ್ನು ಚಳಿಗಾಲದಲ್ಲಿ ಸೋಂಕಿನಿಂದ ರಕ್ಷಿಸುವುದು ಹೆಚ್ಚಿನ ಸವಾಲಿನ ವಿಷಯವಾಗಿದೆ.

ಚಳಿಗಾಲದಲ್ಲಿ ಮಕ್ಕಳಿಗೆ ಕೆಲವು ಆಹಾರಗಳನ್ನು ನೀಡದಿರುವುದೇ ಉತ್ತಮ. ಏಕೆಂದರೆ ಈ ಅಹಾರಗಳಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಇತರ ಆಹಾರಗಳಿಂದ ಹೆಚ್ಚೇ ಇರುತ್ತದೆ. ಬನ್ನಿ, ಇಂತಹ ಐದು ಆಹಾರಗಳ ಬಗ್ಗೆ ಅರಿಯೋಣ:

ಉಪ್ಪಿನ ಮತ್ತು ಎಣ್ಣೆಯ ಆಹಾರಗಳು:

ಉಪ್ಪಿನ ಮತ್ತು ಎಣ್ಣೆಯ ಆಹಾರಗಳು:

ಪ್ರಾಣಿಜನ್ಯ ಆಹಾರಗಳಾದ ಬೆಣ್ಣೆ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳು ಇತರ ಸಮಯದಲ್ಲಿ ಆರೋಗ್ಯವನ್ನು ವೃದ್ದಿಸಿದರೂ ಚಳಿಗಾಲದಲ್ಲಿ ಇವು ಮಕ್ಕಳಲ್ಲಿ ಕಫ ಮತ್ತು ಜೊಲ್ಲುರಸಗಳನ್ನು ಹೆಚ್ಚು ಸಾಂದ್ರೀಕರಿಸುವ ಗುಣ ಹೊಂದಿವೆ. ಹಾಗಾಗಿ, ಚಳಿಗಾಲ ಕಳೆಯುವವರೆಗೂ ಈ ಆಹಾರಗಳನ್ನು ಮಕ್ಕಳಿಗೆ ನೀಡದಿರುವುದೇ ಒಳ್ಳೆಯದು. ಆದ್ದರಿಂದ ಮಕ್ಕಳ ಆಹಾರವನ್ನು ಸಸ್ಯಜನ್ಯ ಎಣ್ಣೆಗಳಲ್ಲಿ ತಯಾರಿಸಿ. ಪ್ರಾಣಿಜನ್ಯ ಆಹಾರಗಳನ್ನು ಆದಷ್ಟೂ ಮಿತಗೊಳಿಸಿ. ಅಲ್ಲದೇ ಉಪ್ಪಿನ ಪ್ರಮಾಣವನ್ನೂ ಆದಷ್ಟೂ ಕಡಿಮೆ ಮಾಡಿ.

ಕ್ಯಾಂಡಿಗಳು:

ಕ್ಯಾಂಡಿಗಳು:

ಮಕ್ಕಳಿಗೆ ಸಕ್ಕರೆ ಎಂದರೆ ಇಷ್ಟವೇನೋ ಹೌದು. ಹಲ್ಲು ಹುಳುಕಾಗುವುದು ಮೊದಲ ಅಪಾಯವಾದರೆ ದೇಹದ ಇತರ ಭಾಗಗಳಿಗೂ ಅತಿಯಾದ ಸಕ್ಕರೆ ಒಳ್ಳೆಯದಲ್ಲ. ದೇಹದಲ್ಲಿ ಹೆಚ್ಚು ಸಕ್ಕರೆ ಇದ್ದಷ್ಟೂ ರಕ್ತದಲ್ಲಿ ಬಿಳಿ ರಕ್ತದ ಕಣಗಳು ಕಡಿಮೆಯಾಗುತ್ತವೆ. ಅಂದರೆ ರೋಗ ನಿರೋಧಕ ಶಕ್ತಿಯ ಪ್ರಮುಖ ಸೇನಾನಿಗಳಾಗಿರುವ ಬಿಳಿ ರಕ್ತಕಣಗಳು ಕಡಿಮೆಯಾದಷ್ಟೂ ರೋಗ ನಿರೋಧಕ ಶಕ್ತಿಯೂ ಕುಂದುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ, ಈ ಕಣಗಳು ಇನ್ನಷ್ಟು ಕಡಿಮೆಯಾಗುತ್ತವೆ. ತನ್ಮೂಲಕ ಮಕ್ಕಳು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾರೆ. ಹಾಗಾಗಿ, ಮಕ್ಕಳಿಗೆ, ಸಕ್ಕರೆ ಹೆಚ್ಚಿರುವ ಯಾವುದೇ ಆಹಾರಗಳನ್ನು ನೀಡದಿರಿ. ವಿಶೇಷವಾಗಿ, ಕ್ಯಾಂಡಿಗಳು, ಬುರುಗು ಪಾನೀಯಗಳು, ಸೋಡಾ ಮೊದಲಾದವು.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಎಲ್ಲಾ ಪ್ರಾಣಿಜನ್ಯ ಪ್ರೋಟೀನುಳು ಚಳಿಗಾಲದಲ್ಲಿ ಮಕ್ಕಳ ಜೊಲ್ಲು ಮತ್ತು ಕಫ ಹೆಚ್ಚು ಸಾಂದ್ರೀಕರಿಸಲು ಕಾರಣವಾಗುತ್ತದೆ. ಇದು ಮಕ್ಕಳಿಗೆ ಆಹಾರ ನುಂಗುವುದನ್ನು ಕಷ್ಟವಾಗಿಸುತ್ತದೆ. ನಿಮ್ಮ ಮಕ್ಕಳಿಗೆ ಚೀಸ್, ಕ್ರೀಮ್ ಮತ್ತು ಕ್ರೀಮ್ ಆಧಾರಿತ ಸೂಪ್ ಮತ್ತು ಗಾಢವಾಗಿರುವ ಡೈಸಿ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ, ವಿಶೇಷವಾಗಿ ಮಕ್ಕಳಿಗೆ ಕಫ ಎದುರಾಗಿದ್ದರೆ ಈ ಆಹಾರಗಳನ್ನು ನೀಡದಿರಿ.

ಮಯೋನ್ನೀಸ್:

ಮಯೋನ್ನೀಸ್:

ಮಯೋನ್ನೀಸ್ ನಲ್ಲಿ ದೇಹವು ಅಲರ್ಜಿಯ ವಿರುದ್ದ ಹೋರಾಡಲು ಸಹಾಯ ಮಾಡುವ ಹಿಸ್ಟಮೈನ್ ಎಂಬ ರಾಸಾಯನಿಕಗಳು ಸಮೃದ್ಧವಾಗಿದೆ. ಆದರೆ ಚಳಿಗಾಲದ ಅವಧಿಯಲ್ಲಿ ಹಿಸ್ಟಮೈನ್ ಇರುವ ಆಹಾರಗಳನ್ನು ಸೇವಿಸುವುದರಿಂದ ಕಫ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಕಫ ಹೆಚ್ಚಿದಷ್ಟೂ ಗಂಟಲಿನ ತೊಂದರೆಗಳೂ ಹೆಚ್ಚುತ್ತವೆ. ವಿಶೇಷವಾಗಿ ಕೆಮ್ಮು. ಹಿಸ್ಟಮೈನ್ ಟೊಮ್ಯಾಟೊ, ಬೆಣ್ಣೆಹಣ್ಣು, ಬಿಳಿಬದನೆ, ಮಾಯೋನ್ನೀಸ್, ಅಣಬೆಗಳ ಶಿರ್ಕಾ, ಮಜ್ಜಿಗೆ, ಉಪ್ಪಿನಕಾಯಿ, ಹುದುಗು ಬರಿಸಿದ ಆಹಾರಗಳು ಮತ್ತು ಕೃತಕ ಸಂರಕ್ಷಕಗಳಲ್ಲಿ ಇರುತ್ತವೆ.

ಮಾಂಸದ ಆಹಾರಗಳು

ಮಾಂಸದ ಆಹಾರಗಳು

ಮಾಂಸದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್‌ ಇರುತ್ತದೆ. ಪ್ರೋಟೀನ್ ಸಹಾ ಮಕ್ಕಳಲ್ಲಿ ಕಫದ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಕಫ ಹೆಚ್ಚಿದಷ್ಟೂ ಇದು ಗಂಟಲಿನಲ್ಲಿ ಕೆರೆತ ಮತ್ತು ಕೆಮ್ಮು ಹೆಚ್ಚಾಗುತ್ತದೆ. ಸಂಸ್ಕರಿಸಿದ ಮಾಂಸ ಮತ್ತು ಮೊಟ್ಟೆ ಚಳಿಗಾಲದಲ್ಲಿ ಮಕ್ಕಳಿಗೆ ಈ ಅಹಾರಗಳು ಅತ್ಯಂತ ಕೆಟ್ಟದಾಗಿದೆ. ನಿಮ್ಮ ಮಕ್ಕಳಿಗೆ ಮಾಂಸವನ್ನು ನೀಡಲು ನೀವು ಬಯಸಿದರೆ ಮೀನು ಮತ್ತು ಸಾವಯವ ಮಾಂಸಗಳನ್ನು ಅಲ್ಪ ಪ್ರಮಾಣದಲ್ಲಿ ನೀಡಿ.

English summary

Winter Diet For Kids: Avoid Giving These Foods

Winter diet for kids,Avoid giving these foods to kids in winter, Read on.
Story first published: Monday, November 9, 2020, 9:39 [IST]
X
Desktop Bottom Promotion