Just In
- 1 hr ago
ಇತ್ತೀಚೆಗಷ್ಟೇ ಟೈಪ್ 2 ಮಧುಮೇಹ ಕಾಣಿಸಿಕೊಂಡಿದ್ದರೆ ಗುಣಪಡಿಸುವುದು ಹೇಗೆ?
- 5 hrs ago
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯವರಿಗೆ ಒತ್ತಡವೇ ಸಮಸ್ಯೆ, ಎಚ್ಚರ
- 11 hrs ago
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- 12 hrs ago
ವಟ ಸಾವಿತ್ರಿ ವ್ರತ ಯಾವಾಗ? ಪತಿಯ ಪತಿಯ ಆಯುರ್-ಐಶ್ವರ್ಯ ವೃದ್ಧಿಗೆ ಈ ದಿನ ಏನು ಮಾಡಬೇಕು?
Don't Miss
- News
ಕ್ವಾಡ್: ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ 50 ಶತಕೋಟಿ ಡಾಲರ್ ಹೂಡಿಕೆ
- Sports
RCB vs LSG: ಎಲಿಮಿನೇಟರ್ ಪಂದ್ಯಕ್ಕೆ ಮಳೆ ಕಾಟ? ಇಲ್ಲಿದೆ ಹವಾಮಾನ ವರದಿ ಮತ್ತು ಸಂಭಾವ್ಯ ಆಡುವ ಬಳಗ
- Finance
ಮೇ.25: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ
- Movies
ಧನುಶ್ ನಟನೆಯ ಹಾಲಿವುಡ್ ಸಿನಿಮಾ ಟ್ರೇಲರ್ ಬಿಡುಗಡೆ: ಅಭಿಮಾನಿಗಳಿಗೆ ನಿರಾಸೆ
- Automobiles
ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್ಎಂಎಲ್
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕ್ಕಳಲ್ಲಿ ಈ ಸ್ವಭಾವ ಕಂಡು ಬಂದರೆ ಅಪಾಯ, ಪೋಷಕರೇ ಎಚ್ಚರ!
ಕೆಲ ಮಕ್ಕಳು ತುಂಬಾ ಮೂಡಿಯಾಗಿರುತ್ತಾರೆ, ಕಲಿಕೆಯಲ್ಲಿ ಆಸಕ್ತಿ ತೋರಿಸಲ್ಲ, ತುಂಬಾ ಹಠ, ಬೇಗನೆ ಕೋಪ ಮಾಡುವುದು, ಚೀರಾಡುವುದು ಮಾಡುತ್ತಾರೆ. ಅಲ್ಲದೆ ಇತರ ಮಕ್ಕಳ ಜೊತೆ ಬೆರೆಯದೆ ಒಂಟಿಯಾಗಿ ಇರಬಹುದು. ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ. ಏಕೆಂದರೆ ಇದು ತುಂಬಾನೇ ಅಪಾಯಕಾರಿಯಾದ ಲಕ್ಷಣಗಳಾಗಿವೆ.
ಪ್ರತಿಯೊಂದು ಪೋಷಕರು ತಮ್ಮ ಮಕ್ಕಳು ಖುಷಿಯಾಗಿರಬೇಕೆಂದು ಬಯಸುತ್ತಾರೆ. ಆದರೆ ಕೆಲವೊಂದು ಪರಿಸ್ಥಿತಿಗಳು ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಆಘಾತ ಉಂಟು ಮಾಡಿರುತ್ತದೆ. ಕೆಲವೊಮ್ಮೆ ಪೋಷಕರು ಅದನ್ನು ಗಮನಿಸುವುದೂ ಇಲ್ಲ, ಇನ್ನು ಕೆಲವರೂ ಆ ಮಗುವಿನ ಸ್ವಭಾವೇ ಹಾಗೇ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದರೆ ಹಾಗೇ ಮಾಡುವುದರಿಂದ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಆ ಮಗುವಿನ ಸ್ವಭಾವ ತುಂಬಾ ಒರಟಾಗಬಹುದು ಅಥವಾ ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಇದು ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಮೇಲೆ ತುಂಬಾನೇ ಪ್ರಭಾವ ಬೀರುವುದು.
ಅಂಥ ಮಕ್ಕಳು ಶಾಲೆಯಲ್ಲಿ ಉತ್ತಮ ಪ್ರದರ್ಶನ ನೀಡುವುದಿಲ್ಲ, ಸಾಮಾಜಿಕವಾಗಿ ಬೆರೆಯುವುದಿಲ್ಲ, ಅವರ ಸ್ವಭಾವದಲ್ಲಿ ಕಠ, ಕೋಪ ಹೆಚ್ಚಾಗಿ ಇರುತ್ತದೆ.
ಯಾವೆಲ್ಲಾ ಕಾರಣಗಳಿಂದ ಮಕ್ಕಳಲ್ಲಿ ಮಾನಸಿಕ ತೊಂದರೆಗಳು ಕಂಡು ಬರುತ್ತವೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಈ ಕೆಳಗಿನ ಕಾರಣಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಪ್ರಮುಖ ಕಾರಣಗಳಾಗಿವೆ.

ವಂಶವಾಹಿಯಾಗಿ ಬರಬಹುದು
ಮನೆಯಲ್ಲಿ ತಾಯಿ ಅಥವಾ ತಂದೆಯಲ್ಲಿ ಮಾನಸಿಕ ಅಸ್ವಸ್ಥತೆ ಸಮಸ್ಯೆ ಇದ್ದರೆ ಅದು ಮಕ್ಕಳಿಗೂ ಬರುವ ಸಾಧ್ಯತೆ ಇದೆ. ಆಟಿಸಂ, ಎಡಿಹೆಚ್ಡಿ (attention deficit hyperactivity disorder), ಬೈ ಪೋಲಾರ್ ಡಿಸಾರ್ಡರ್, ಖಿನ್ನತೆ, ಒತ್ತಡ, ಸಿಝೋಫೆರ್ನಿಯಾ ಇಂಥ ಆರೋಗ್ಯ ಸಮಸ್ಯೆ ಮನೆಯಲ್ಲಿ ಯಾರಿಗಾದರೂ ಇದ್ದರೆ ಅದು ವಂಶವಾಹಿಯಾಗಿ ಬರುವ ಸಾಧ್ಯತೆ ಇದೆ.

ಮಕ್ಕಳ ತಮ್ಮ ದೇಹದ ಬಗ್ಗೆ ಕೀಳೆರಿಮೆ ಹೊಂದಿದ್ದರೆ
ಮಕ್ಕಳು ತಮ್ಮ ದೇಹದ ಬಗ್ಗೆ ಕೀಳೆರಿಮೆ ಹೊಂದಿದ್ದರೆ ಅದು ಅವರ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುವ ಸಾಧ್ಯತೆ. ತುಂಬಾ ದಪ್ಪ ಅಥವಾ ಕಪ್ಪು ಈ ರೀತಿ ಯಾರಾದರೂ ಅವರನ್ನು ಹೀಯಾಳಿಸಿದರೆ ಅದು ಅವರ ಮನಸ್ಸಿನ ಮೇಲೆ ಪ್ರಭಾವ ಬೀರುವುದು. ಮಕ್ಕಳಿಗೆ ಯಾರೂ ಆ ರೀತಿ ಹೀಯಾಳಿಸಬಾರದು ಅಲ್ಲದೆ ಒಂದು ವೇಳೆ ಮಕ್ಕಳಲ್ಲಿ ಕೀಳೆರಿಮೆ ಕಂಡು ಬಂದರೆ ಪೋಷಕರು ಅವರಲ್ಲಿ ಮಾನಸಿಕ ಧೈರ್ಯ ತುಂಬಬೇಕು, ಅಗ್ಯತಬಿದ್ದರೆ ಕೌನ್ಸಿಲಿಂಗ್ ಕೊಡಿಸಬೇಕು.

ಮಾನಸಿಕ ತೊಂದರೆ
ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ನೋವು ಅನುಭವಿಸಿದ್ದರೆ ಅದು ಅವರ ಸ್ವಭಾವ ಬದಲಾವಣೆಗೆ ಕಾರಣವಾಗುವುದು. ಲೈಂಗಿಕ ದೌರ್ಜನ್ಯ, ದೈಹಿಕ ದೌರ್ಜನ್ಯ, ಮೈಗುಳ ಇವೆಲ್ಲಾ ಮಕ್ಕಳ ಮನಸ್ಸಿಗೆ ಆಘಾತ ಉಂಟು ಮಾಡುವುದು, ಇದರಿಂದಾಗಿ ನಕ್ಕಳು ಖಿನ್ನತೆಗೆ ಜಾರಬಹುದು.

ಸುತ್ತಲಿನ ಪರಿಸರ ಬೀರುವ ಒತ್ತಡ
ಓದು, ನೀನೇ ಮೊದಲು ಬರಬೇಕು, ಅದು ಮಾಡು, ಇದು ಮಾಡು ಅಂತೆಲ್ಲಾ ಹುರಿದುಂಬಿಸುವುದು ಬೇರೆ, ಒತ್ತಾಯ ಮಾಡುವುದು ಬೇರೆ. ಮಕ್ಕಳಿಗೆ ಈ ರೀತಿಯ ಒತ್ತಾಯ ಅವರ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಆದ್ದರಿಂದ ಪೋಷಕರೇ ನಿಮ್ಮ ಮಕ್ಕಳನ್ನು ಇತರ ಮಕ್ಕಳ ಜೊತೆ ಹೋಲಿಸಿ ಬೈಯ್ಯಬೇಡಿ, ಬದಲಿಗೆ ಅವರಲ್ಲಿರುವ ಕೌಶಲ್ಯವೇನು ಎಂಬುವುದನ್ನು ಪತ್ತೆ ಮಾಡಲು ಪ್ರಯತ್ನಿಸಿ.

ನಿದ್ರಾಹೀನತೆ
ಇನ್ನು ಚಿಕ್ಕ ಪ್ರಾಯದಲ್ಲಿ ಅತೀ ಕಡಿಮೆ ನಿದ್ದೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಒತ್ತಡ, ಖಿನ್ನತೆ, ಕೋಪ, ಮಕ್ಕಳ ಮನಸ್ಸಿನಲ್ಲಿರುವ ವೇದನೆ ಇವೆಲ್ಲಾ ನಿದ್ರಾಹೀನತೆ ಉಂಟು ಮಾಡಬಹುದು.

ಮಕ್ಕಳಲ್ಲಿ ಮಾನಸಿಕ ತೊಂದರೆ ಇದೆ ಎಂದು ಸೂಚಿಸುವ ಲಕ್ಷಣಗಳು
* ಶಾಲೆಯಲ್ಲಿ ಏನೇ ಮಾಡಿದರೂ ಉತ್ತಮ ಪ್ರದರ್ಶನ ನೀಡದಿರುವುದು(ಕಲಿಕೆ ಹಾಗೂ ಆಟ)
* ಒರಟು ವರ್ತನೆ
* ಶಾಲೆಗೆ ಸರಿಯಾಗಿ ಹೋಗದೇ ಇರುವುದು
* ತುಂಬಾ ದುಃಖದಿಂದ ಇರುವುದು
* ನಿದ್ದೆ ಬೆಚ್ಚಿ ಎದ್ದೇಳುವುದು, ನಿದ್ದೆಯಲ್ಲಿ ನಡೆಯುವುದು, ಭಯ ಪಡುವುದು
* ತಲೆನೋವು, ಹೊಟ್ಟೆ ನೋವಿನ ಸಮಸ್ಯೆ ಆಗಾಗ ಕಾಡುವುದು
* ಮೈ ತೂಕ ಕಡಿಮೆಯಾಗುವುದು
* ಅವರ ಸ್ವಭಾವದಲ್ಲಿ ತುಂಬಾ ಬದಲಾವಣೆ ಕಂಡು ಬರುವುದು
* ತುಂಬಾ ಒತ್ತಡಕ್ಕೆ ಒಳಗಾಗುವುದು
* ಮಕ್ಕಳ ಜೊತೆ ಬೆರೆಯಲು ಹಿಂದೇಟು ಹಾಕುವುದು
ಕೊನೆಯದಾಗಿ: ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಪ್ರಧಾನ. ಮಕ್ಕಳಲ್ಲಿ ಏನಾದರೂ ಸ್ವಲ್ಪ ಸ್ವಭಾವ ವ್ಯತ್ಯಾಸ ಕಂಡು ಬಂದ್ರೆ ಅದರತ್ತ ಗಮನ ನೀಡಿ, ಅಗ್ಯತ ಬಿದ್ದರೆ ಕೌನ್ಸಿಲಿಂಗ್ ಮಾಡಿ. ಒಟ್ಟಿನಲ್ಲಿ ಮಕ್ಕಳು ಖುಷಿ-ಖುಷಿಯಾಗಿರಬೇಕು ಇದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೆಚ್ಚಿಸುತ್ತದೆ.