For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್‌ ಸಮಯದಲ್ಲಿ ಗ್ಯಾಜೆಟ್‌ಗಳಿಲ್ಲದೆ ಮಕ್ಕಳನ್ನು ಕ್ರಿಯಾತ್ಮಕವಾಗಿಡುವುದು ಹೇಗೆ?

|

ಕೊರೊನಾ ಎಲ್ಲರ ಜೀವನಶೈಲಿಯನ್ನು ಸಾಕಷ್ಟು ಬದಲು ಮಾಡಿದೆ. ಕೆಲವು ಒಪ್ಪಿಕೊಳ್ಳುವಂಥ ಬದಲಾವಣೆಗಳಾದರೂ ಇನ್ನೂ ಹಲವು ಒಪ್ಪಿಕೊಳ್ಳಲು ಸಾಧ್ಯವಾಗದಂಥ ಬದಲಾವಣೆಗಳು. ಆದರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಎಲ್ಲರೂ ಇದಕ್ಕೆ ಒಗ್ಗಿಕೊಂಡಿದ್ದಾರಷ್ಟೇ.

ಆದರೆ ಈ ಬದಲಾವಣೆಯು ಅತಿ ಹೆಚ್ಚು ಪ್ರಭಾವ ಬೀರಿರುವುದು ಮಕ್ಕಳ ಮೇಲೆ ಎಂದರೆ ತಪ್ಪಾಗಲಾರದು. ದಿನನಿತ್ಯ ಶಾಲೆಗೆ ಹೋಗಿ ಪಾಠ, ಶಿಕ್ಷಕರ ಮಾರ್ಗದರ್ಶನ, ಮೈದಾನದಲ್ಲಿ ಆಟ, ಸ್ನೇಹಿತರ ಒಡನಾಟ, ತುಂಟಾಟಗಳು ಎಲ್ಲವೂ ಇಲ್ಲವಾಗಿದೆ. ಶಿಕ್ಷಣ ಕೇವಲ ಆನ್‌ಲೈನ್‌ಗೆ ಸೀಮಿತವಾಗಿದೆ. ಇದೆಲ್ಲವೂ ಖಂಡಿತವಾಗಿಯೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಇವೆಲ್ಲವುಗಳ ಇರುವ ಬಹುದೊಡ್ಡ ಅಪಾಯವೆಂದರೆ ಬಹುತೇಕ ಮಕ್ಕಳು ಗ್ಯಾಜೆಟ್‌ಗಳ ದಾಸರಾಗುತ್ತಿದ್ದಾರೆ.

ಈ ಲಾಕ್‌ಡೌನ್ ಸಮಯದಲ್ಲಿ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರದಂತೆ ಅವರನ್ನು ಬ್ಯುಸಿ ಆಗಿಡುವುದು ಹೇಗೆ, ಮಕ್ಕಳು ಗ್ಯಾಜೆಟ್‌ ಬಳಸದೇ ತಮ್ಮ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಇಲ್ಲಿದೆ ಕೆಲವು ಸಲಹೆಗಳು:

ಮಗುವಿನ ಆಯ್ಕೆಯ ಕಲೆ ಮತ್ತು ಕರಕುಶಲ

ಮಗುವಿನ ಆಯ್ಕೆಯ ಕಲೆ ಮತ್ತು ಕರಕುಶಲ

ನಿಮ್ಮ ಮಗುವಿಗೆ ವಯಸ್ಸಿಗೆ ಸೂಕ್ತವಾದ ಹಾಗೂ ಅವರಿಗೆ ಇಷ್ಟವಾಗುವ ಕಲೆ ಮತ್ತು ಕರಕುಶಲ ಸಾಮಗ್ರಿಗಳನ್ನು ನೀಡಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ. ಅವರು ಮಾಡುವ ಹೊಸ ಹೊಸ ಕ್ರಿಯಾತ್ಮಕ ಕೆಲಸಗಳನ್ನು ಗುರುತಿಸಿಅವರನ್ನು ಪ್ರಶಂಸಿಸಿ ಮತ್ತು ಅವರ ಕೌಶಲ್ಯಗಳನ್ನು ಸುಧಾರಿಸಲು ಪ್ರೋತ್ಸಾಹಿಸಿ. ಪರಿಪೂರ್ಣತೆಯನ್ನು ನಿರೀಕ್ಷಿಸಬೇಡಿ, ಬದಲಿಗೆ ಅವರ ಪ್ರಯತ್ನವನ್ನು ಒಪ್ಪಿಕೊಳ್ಳಿ. ಇದು ಮಕ್ಕಳಲ್ಲಿ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಕೈ ಹಾಗೂ ಕಣ್ಣಿನ ಸಮನ್ವಯ ಹೆಚ್ಚಾಗುತ್ತದೆ, ಬಣ್ಣ ಪ್ರಜ್ಞೆ ಉತ್ತಮವಾಗುತ್ತದೆ.

ಪುಸ್ತಕ ಉತ್ತಮ ಸ್ನೇಹಿತ

ಪುಸ್ತಕ ಉತ್ತಮ ಸ್ನೇಹಿತ

ನಿಮ್ಮ ಮಕ್ಕಳನ್ನು ಪುಸ್ತಕಗಳ ಜಗತ್ತಿಗೆ ಪರಿಚಯಿಸಿ. ಪುಸ್ತಕ ಶಾಪಿಂಗ್‌ಗಾಗಿ ಅವರನ್ನು ಕರೆದುಕೊಂಡು ಹೋಗಿ ಮತ್ತು ಅವರನ್ನೇ ಆಯ್ಕೆ ಮಾಡಲು ಹೇಳಿ. ಓದುವಿಕೆಯನ್ನು ದಿನನಿತ್ಯದ ಅಭ್ಯಾಸವನ್ನಾಗಿ ಮಾಡಿ.

ಸಾಹಸಮಯ, ಕಲ್ಪನಾಲೋಕ, ಜೀವನಚರಿತ್ರೆ, ಥ್ರಿಲ್ಲರ್‌, ವಾಸ್ತವಿಕ ಎಲ್ಲಾ ರೀತಿಯ ಪುಸ್ತಕಗಳ ಬಗ್ಗೆ ಅವರಿಗೆ ಸಾಮಾನ್ಯ ಜ್ಞಾನ ನೀಡಿ. ನಿತ್ಯ ಮಲಗುವ ಮುನ್ನ ಸಣ್ಣ ಸಣ್ಣ ಪುಸ್ತಕಗಳನ್ನು ಓದಲು ನೀಡಿ. ತುಂಬಾ ಚಿಕ್ಕ ಮಕ್ಕಳಿಗೆ ನೀವೆ ಓದಿ ಹೇಳಿ. ನಿಯಮಿತವಾಗಿ ಓದುವುದು ನಿಮ್ಮ ಮಗುವಿನ ಕಲ್ಪನೆಯನ್ನು ಹೆಚ್ಚಿಸುತ್ತದೆ ಮತ್ತು ಅವರ ಗ್ರಹಿಕೆ, ಶಬ್ದಕೋಶ ಮತ್ತು ಬರವಣಿಗೆಯ ಕೌಶಲ್ಯಗಳನ್ನು ಸುಧಾರಿಸುತ್ತದೆ.

ಮನಸ್ಸಿನ ಭಾವನೆ ಹೊರಹಾಕಲು ಸಂಗೀತ ಮತ್ತು ನೃತ್ಯ

ಮನಸ್ಸಿನ ಭಾವನೆ ಹೊರಹಾಕಲು ಸಂಗೀತ ಮತ್ತು ನೃತ್ಯ

ಸಂಗೀತಕ್ಕೆ ಭಾಷೆ ಇಲ್ಲ, ವಯಸ್ಸಿಲ್ಲ. ಈತ ತಾನೆ ಹುಟ್ಟಿನ ಮಗು ಸಹ ಸಂಗೀತಕ್ಕೆ ಪ್ರತಿಕ್ರಿಯಿತ್ತದೆ, ಇದಕ್ಕಿರುವ ಶಕ್ತಿ ಅಂಥದ್ದು. ನಿಮ್ಮ ಮಗು ತುಂಬಾ ಬೇಸರಗೊಂಡಿದ್ದಾಗ ಉತ್ತಮ ಸಂಗೀತವನ್ನು ಕೇಳಲು ಹೇಳಿ. ಮಗುವಿಗೆ ಇಷ್ಟವಾದ ಸಂಗೀತಕ್ಕೆ ಮನಸ್ಸೋ ಇಚ್ಚೇ ಕುಣಿಯಲು ಬಿಡಿ. ನಿಮ್ಮ ಮಗುವಿಗೆ ಆಸಕ್ತಿ ಇದ್ದರೆ ಸಂಗೀತ, ನೃತ್ಯ ಪಾಠಕ್ಕೆ ಕಳುಹಿಸಿ. ಇದು ನಿಮ್ಮ ಮಗುವಿನ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಹಿತವಾದ ಅನುಭವ ನೀಡುತ್ತದೆ. ಮನಸ್ಸಿನ ದುಃಖ ಹೊರಹಾಕಲು ಸಹ ಇದು ಸಹಕಾರಿ ಮಾರ್ಗವಾಗಿದೆ. ಆದ್ದರಿಂದ, ಮುಂದಿನ ಬಾರಿ ನಿಮ್ಮ ಮಗು ಬೇಸರಗೊಂಡಾಗ, ಅವರ ನೆಚ್ಚಿನ ಹಾಡನ್ನು ಆನ್ ಮಾಡಿ ಮತ್ತು ಅವರು ನೃತ್ಯ ಮಾಡುವುದನ್ನು ನೋಡಿ.

ನಿಮ್ಮ ಮಗು ಕೆಲವು ವಾದ್ಯಗಳನ್ನು ನುಡಿಸಲು ಬಯಸಿದರೆ ಪ್ರೋತ್ಸಾಹಿಸಿ. ಸಂಗೀತ ಕೇಳುವುದು, ನೃತ್ಯ ಮಾಡುವುದು ಒಂದು ದೊಡ್ಡ ಒತ್ತಡದ ಬಸ್ಟರ್. ಸಂಗೀತವು ಮೆದುಳಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಅನ್ವೇಷಿಸಿ ಮತ್ತು ಪ್ರಯೋಗಿಸಿ

ಅನ್ವೇಷಿಸಿ ಮತ್ತು ಪ್ರಯೋಗಿಸಿ

ನಿಮ್ಮ ಮಗುವಿಗೆ ಹೊಸ ಆಲೋಚನೆಗಳು ಮತ್ತು ವಸ್ತುಗಳನ್ನು ಅನ್ವೇಷಿಸಲು ಮತ್ತು ಪ್ರಯೋಗಿಸಲು ಅವಕಾಶ ನೀಡಿ. ಅವರು ಹೊಸ ಪಾಕವಿಧಾನವನ್ನು ಪ್ರಯತ್ನಿಸುವಂತಹ ಸರಳ ಪ್ರಯೋಗಗಳನ್ನು ಮಾಡಬಹುದು. ನೀವು ಅವರಿಗೆ ಕೆಲವು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ನೀಡಿ ಮತ್ತು ಅವರು ಯಾವ ಹೊಸ ಆವಿಷ್ಕಾರ ಮಾಡುತ್ತಾರೆ ಎಂಬುದನ್ನು ನೋಡಬಹುದು.

ಈ ರೀತಿಯ ಚಟುವಟಿಕೆಗಳು ನಿಮ್ಮ ಮಗುವಿನಲ್ಲಿ ಸಂಶೋಧಕ ಮತ್ತು ವಿಜ್ಞಾನಿಯನ್ನು ಪ್ರೋತ್ಸಾಹಿಸುತ್ತದೆ. ಈ ಪ್ರಯೋಗಗಳು ಯಾವುದೇ ಆವಿಷ್ಕಾರಕ್ಕೆ ಕಾರಣವಾಗದಿರಬಹುದು. ಆದರೆ ಇವುಗಳು ನಿಮ್ಮ ಮಗುವಿಗೆ ತಪ್ಪುಗಳನ್ನು ಮಾಡುವುದು ತಪ್ಪಲ್ಲ ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು. ಮತ್ತು ಅಂತಹ ಚಟುವಟಿಕೆಗಳನ್ನು ನಿರ್ವಹಿಸುವಾಗ ಅವರು ಹೊಸದನ್ನು ಕಂಡುಕೊಳ್ಳಬಹುದು.

ಮನೆ ಕೆಲಸಗಳಿಗೆ ಮಕ್ಕಳ ಸಹಕಾರ ಪಡೆಯಿರಿ

ಮನೆ ಕೆಲಸಗಳಿಗೆ ಮಕ್ಕಳ ಸಹಕಾರ ಪಡೆಯಿರಿ

ಅಡುಗೆ ಮಾಡಲು ಮತ್ತು ಇತರ ಮನೆಕೆಲಸಗಳನ್ನು ಮಾಡಲು ನಿಮ್ಮ ಮಗುವಿಗೆ ಸಹಾಯ ಪಡೆಯಿರಿ. ಅವರಿಗೂ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸಿ. ನೀವು ಅಡುಗೆ ಮಾಡುವಾಗ, ನಿಮ್ಮ ಮಕ್ಕಳು ತರಕಾರಿಗಳನ್ನು ತೊಳೆಯುವ ಮೂಲಕ, ತಮ್ಮದೇ ರೊಟ್ಟಿಗಳನ್ನು ಮಾಡುವ ಮೂಲಕ ಹೊಸ ಪ್ರಯತ್ನ ಮಾಡಲು ಹೇಳಿ.

ನಿಮ್ಮ ಮಗುವಿನ ಸಹಾಯವನ್ನು ಶ್ಲಾಘಿಸಿ ಮತ್ತು ಅವನು ಯಾವಾಗಲೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕೆಂದು ನಿರೀಕ್ಷಿಸಬೇಡಿ.

ಮನೆಕೆಲಸಗಳಲ್ಲಿ ನಿಮಗೆ ಸಹಾಯ ಮಾಡುವ ಮೂಲಕ, ನಿಮ್ಮ ಮಗು ಬಹಳಷ್ಟು ಸ್ವಯಂ-ಸಹಾಯ ಕೌಶಲ್ಯಗಳನ್ನು ಕಲಿಯುತ್ತದೆ, ಅದು ಅವರನ್ನು ಹೆಚ್ಚು ಸ್ವತಂತ್ರ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತದೆ.

ವಿಶಿಷ್ಟ ಆಟಗಳು

ವಿಶಿಷ್ಟ ಆಟಗಳು

ಆಟ ಎಂದರೆ ಕೇವಲ ಮೈದಾನದಲ್ಲಿ ಆಡುವ ಆಟವಷ್ಟೇ ಅಲ್ಲ. ಮನೆಯಲ್ಲೇ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಕಸರತ್ತು ನೀಡುವ ಆಟಗಳಿವೆ ಅವುಗಳನ್ನು ಆಡಿಸಿ, ಹೊಸ ಹೊಸ ಆಟದ ಚಟುವಟಿಕೆಗಳನ್ನು ನೀವೆ ಯೋಜಿಸಿ. ಒಟ್ಟಾರೆ ನಿಮ್ಮ ಮಕ್ಕಳು ಬೇಸರಗೊಳ್ಳಲು ಬಿಡಬೇಡಿ. ನಾಣ್ಯಗಳನ್ನು ಎಣಿಸುವುದು, ಆಟಿಕೆಗಳನ್ನು ಎಣಿಸುವುದು, ಅವರ ಉಗುರುಗಳಿಗೆ ಬಣ್ಣ ಹಚ್ಚುವುದು ಅಥವಾ ಕಾಗದವನ್ನು ಸಣ್ಣ ತುಂಡುಗಳಾಗಿ ಕತ್ತರಿಸುವುದು ಮುಂತಾದ ಕೆಲಸಗಳನ್ನು ಮಾಡಲು ಅವರು ಬೇಗನೆ ನೋಡುತ್ತಾರೆ.

ಪಜಲ್ಸ್‌, ರೂಬಿಕ್ಸ್ ಕ್ಯೂಬ್, ಮೆದುಳಿನ ಆಟಗಳು ಮತ್ತು ಒಗಟುಗಳು, ವರ್ಡ್ ಗೇಮ್‌ಗಳು, ಕ್ರಾಸ್‌ವರ್ಡ್ ಒಗಟುಗಳು, ಸುಡೋಕು, ಗಣಿತ ಮತ್ತು ಇತರ ತರ್ಕದ ಒಗಟುಗಳಂಥ ಚಟುವಟಿಕೆಗಳನ್ನು ಸಹ ನೀವು ಆಯ್ಕೆ ಮಾಡಬಹುದು. ಈ ಚಟುವಟಿಕೆಗಳು ನಿಮ್ಮ ಮಗುವಿನ ವಿಮರ್ಶಾತ್ಮಕ ಚಿಂತನೆ, ತಾರ್ಕಿಕ ಕೌಶಲ್ಯ ಮತ್ತು ತಾರ್ಕಿಕ ಚಿಂತನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

English summary

Ways to keep your kids busy at home (apart from gadgets) in Kannada

Here we are discussing about Ways to keep your kids busy at home (apart from gadgets) in Kannada. Read more.
Story first published: Thursday, August 26, 2021, 17:44 [IST]
X
Desktop Bottom Promotion