For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಟೈಪ್ 2 ಮಧುಮೇಹ: ಕಾರಣವೇನು, ತಡೆಗಟ್ಟುವುದು ಹೇಗೆ?

|

ಮಧುಮೇಹ ಎಂಬುವುದು ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಕಮಡು ಬರುವ ಸಮಸ್ಯೆಯಾಗಿತ್ತು, ಈಗೀಗ ಯೌವನ ಪ್ರಾಯದಲ್ಲಿಯೇ ಕಂಡು ಬರುತ್ತಿದೆ, ಆತಂಕಕಾರಿ ವಿಷಯವೆಂದರೆ 20 ವರ್ಷದ ಕೆಳಗಿನವರಲ್ಲೂ ಟೈಪ್‌ ಮಧುಮೇಹದ ಸಮಸ್ಯೆ ಕಂಡು ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಟೈಪ್ 2 ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಮಕ್ಕಳಲ್ಲಿ ಟೈಪ್ 2 ಮಧುಮೇಹ ಎಂಬುವುದು ಗಂಭೀರವಾದ ಸಮಸ್ಯೆಯಾಗಿದೆ. ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಈ ಸಮಸ್ಯೆ ಉಂಟಾಗುವುದು. 2011ರಿಂದ 2021ರ ನಡುವೆ ಶೇ. 23ರಷ್ಟು ಹೊಸ ಪ್ರಕರಣಗಳು ದಾಖಲಾದವು. ಅಮೆರಿದಕ ಡಯಾಬಿಟಿಸ್ ಅಸೋಸಿಯೇಷನ್ ನಡೆಸಿದ ಅಧ್ಯಯನದಲ್ಲಿ ವರ್ಷದಲ್ಲಿ ಸುಮಾರು 5000ಕ್ಕೂ ಅಧಿಕ ಮಕ್ಕಳಲ್ಲಿ ಟೈಪ್ 2 ಮಧುಮೇಹದ ಸಮಸ್ಯೆ ಕಂಡು ಬರುತ್ತಿದೆ.

ಮಕ್ಕಳಲ್ಲಿ ಟೈಪ್ 2 ಮಧುಮೇಹಕ್ಕೆ ಕಾರಣ, ಈ ಕಾಯಿಲೆ ಲಕ್ಷಣಗಳು ಹಾಗೂ ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ಮಕ್ಕಳಲ್ಲಿ ಟೈಪ್ 2 ಮಧುಮೇಹದ ಲಕ್ಷಣಗಳು

ಮಕ್ಕಳಲ್ಲಿ ಟೈಪ್ 2 ಮಧುಮೇಹದ ಲಕ್ಷಣಗಳು

* ಅತ್ಯಧಿಕ ಬಾಯಾರಿಕೆ

* ತಲೆಸುತ್ತು

* ದೃಷ್ಟಿ ದೋಷ

* ದೇಹದ ಕೆಲವೊಂದು ಕಡೆ ತ್ವಚೆ ಕಪ್ಪಾಗುವುದು. ಕುತ್ತಿಗೆ, ಮೊಣಕೈ ಈ ಭಾಗದ ತ್ವಚೆ ಕಪ್ಪಾಗುವುದು

* ತೂಕ ಇಳಿಕೆ

* ಸುಸ್ತು

ಸೂಚನೆ: ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ. ವಂಶಪಾರಂಪರ್ಯವಾಗಿ ಮಧುಮೇಹದ ಸಮಸ್ಯೆಯಿದ್ದರೆ ಆ ಮನೆಯಲ್ಲಿ ಬೆಳೆಯುವ ಮಕ್ಕಳ ಆರೋಗ್ಯದ ಕಡೆ ತುಂಬಾನೇ ಗಮನ ನೀಡಬೇಕು.

ಟೈಪ್ 2 ಮಧುಮೇಹಕ್ಕೆ ಕಾರಣ

ಟೈಪ್ 2 ಮಧುಮೇಹಕ್ಕೆ ಕಾರಣ

ಮಕ್ಕಳಲ್ಲಿ ಟೈಪ್ 2 ಮಧುಮೇಹ ಬರಲು ಇದೇ ಕಾರಣವೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಅನೇಕ ಕಾರಣಗಳಿಂದ ಈ ಸಮಸ್ಯೆ ಬರಬಹುದು, ಸಾಮಾನ್ಯವಾಗಿ ಇಂಥ ಮಕ್ಕಳಿಗೆ ಟೈಪ್‌ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚು

* ಬೊಜ್ಜು ಮೈ: ತುಂಬಾ ಮೈ ತೂಕ ಹೊಂದಿರುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ, ಸೊಂಟದ ಸುತ್ತ ಬೊಜ್ಜು ಸಂಗ್ರಹವಾಗುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆಯಾಗಿ ಮಧುಮೇಹ ಬರುವುದು.

* ದೈಹಿಕ ಚಟುವಟಿಕೆ ತುಂಬಾ ಕಡಿಮೆ ಇರುವ ಮಕ್ಕಳಲ್ಲಿ: ಮಕ್ಕಳು ಹೊರಗಡೆ ಹೆಚ್ಚು ಆಟವಾಡದೆ ಮನೆಯೊಳಗಡೆಯೇ ಟಿವಿ, ಮೊಬೈಲ್ ನೋಡುತ್ತಾ ಕಳೆಯುವುದಾದರೆ ಅವರಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುವುದು, ಇದರಿಂದ ಮೈ ತೂಕ ಹೆಚ್ಚಾಗುವುದು.

* ಕುಟುಂಬದ ಇತಿಹಾಸ: ಮನೆಯಲ್ಲಿ ಅಪ್ಪ-ಅಮ್ಮ ಯಾರಿಗಾದರೂ ಮಧುಮೇಹದ ಕಾಯಿಲೆ ಇದ್ದರೆ ಮಕ್ಕಳಿಗೆ ಬರುವ ಸಾಧ್ಯತೆ ಇದೆ.

* ಮಧುಮೇಹ ಸಮಸ್ಯೆ ಇರುವ ಗರ್ಭಿಣಿ ಮಗುವಿಗೆ ಜನ್ಮ ನೀಡಿದ ಬಳಿಕ ಆ ಮಗುವಿನಲ್ಲಿ ಮಧುಮೇಹದ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ.

* ಹುಟ್ಟುವಾಗ 4 ಕೆಜಿಗಿಂತಲೂ ಅಧಿಕ ಮೈ ತೂಕ ಹೊಂದಿದ್ದರೆ ಅಂಥ ಮಕ್ಕಳಲ್ಲಿ ಮಧುಮೇಹದ ಸಮಸ್ಯೆ ಕಂಡು ಬರಬಹುದು.

* ವಯಸ್ಸು ಹಾಗೂ ಲಿಂಗ: ಹೆಚ್ಚಿನ ಮಕ್ಕಳಿಗೆ ಹದಿಹರೆಯದ ಪ್ರಾಯದಲ್ಲಿ ಟೈಪ್ 2 ಮಧುಮೇಹದ ಸಮಸ್ಯೆ ಕಂಡು ಬರುತ್ತದೆ, ಅದರಲ್ಲೂ ಹುಡುಗರಿಗಿಂತ ಹುಡುಗಿಯರಲ್ಲಿ ಈ ಸಮಸ್ಯೆ ಹೆಚ್ಚು

ಕಂಡು ಬರುತ್ತಿದೆ.

* ಅವಧಿ ಪೂರ್ವ ಜನನ: ತಾಯಿಗೆ ಮಧುಮೇಹದ ಸಮಸ್ಯೆಯಿದ್ದು ಮಗು 39 ವಾರ ತುಂಬುವ ಮೊದಲೇ ಜನನವಾದರೆ ಅಂಥ ಮಕ್ಕಳಲ್ಲಿ ಮಧುಮೇಹದ ಸಮಸ್ಯೆ ಕಂಡು ಬರುವುದು.

ಟೈಪ್‌ ಮಧುಮೇಹದ ಇತರ ತೊಂದರೆಗಳು

ಟೈಪ್‌ ಮಧುಮೇಹದ ಇತರ ತೊಂದರೆಗಳು

ಮಧುಮೇಹ ಕಾಯಿಲೆ ಬಂದರೆ ಮಕ್ಕಳ ರಕ್ತನಾಳಗಳು, ನರಗಳು, ಕಣ್ಣುಗಳು, ಕಿಡ್ನಿಗಳಿಗೆ ಹಾನಿಯುಂಟಾಗುವುದು. ಕೆಲ ಮಕ್ಕಳಲ್ಲಿ ಪ್ರಾಣಕ್ಕೆ ಅಪಾಯಕಾರಿಯಾಗಿದೆ.

ಟೈಪ್ 2 ಮಧುಮೇಹದಿಂದ ಉಂಟಾಗುವ ತೊಂದರೆಗಳು

* ಅತ್ಯಧಿಕ ರಕ್ತದೊತ್ತಡ

* ಅತ್ಯಧಿಕ ಕೊಲೆಸ್ಟ್ರಾಲ್

* ಹೃದಯ ಸಂಬಂಧು ಸಮಸ್ಯೆ

* ಪಾರ್ಶ್ವವಾಯು

* ನಾನ್‌ಆಲ್ಕೋಹಾಲಿಕ್ ಫ್ಯಾಟಿ ಲಿವರ್‌ ಕಾಯಿಲೆ

* ಕುರುಡುತನ

ಮಕ್ಕಳಲ್ಲಿ ಟೈಪ್ 2 ಮಧುಮೇಹದ ಸಮಸ್ಯೆ ತಡೆಗಟ್ಟುವುದು ಹೇಗೆ?

ಮಕ್ಕಳಲ್ಲಿ ಟೈಪ್ 2 ಮಧುಮೇಹದ ಸಮಸ್ಯೆ ತಡೆಗಟ್ಟುವುದು ಹೇಗೆ?

* ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಿ, ಅದರಲ್ಲೂ ನೀರಿನಂಶ ಅಧಿಕವಿರುವ ಆಹಾರ ಸೇವಿಸಿ. ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಲು ಕೊಡಿ. ಮಕ್ಕಳಿಗೆ ಅಧಿಕ ಕೊಬ್ಬಿನಂಶವಿರುವ ಆಹಾರಗಳನ್ನು ನೀಡಬೇಡಿ ಹಾಗೂ ಅನಾರೋಗ್ಯಕರ ಆಹಾರಗಳನ್ನು ಹೆಚ್ಚು ನೀಡಬೇಡಿ.

* ಮಕ್ಕಳು ದೈಹಿಕ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು: ಮಕ್ಕಳು ಹೆಚ್ಚು ಆಟ-ಆಡಲು ಬಿಡಿ, ಅವರು ಒಂದೇ ಕಡೆ ಕೂತು ಸಮಯ ಕಳೆಯಲು ಬಿಡಬೇಡಿ. ಸೈಕ್ಲಿಂಗ್, ವಾಲಿಬಾಲ್, ಬ್ಯಾಡ್ಮಿಂಟನ್, ಈಜು ಹೀಗೆ ದೈಹಿಕವಾಗಿ ಚಟುವಟಿಕೆಯಿಂದ ಇರುವ ಆಟಗಳನ್ನು ಆಡಿಸಿ.

ಸಲಹೆ

ಸಲಹೆ

ಈಗೀಗ ಮಕ್ಕಳು ದೈಹಿಕ ಚಟುವಟಿಕೆ ಕಡಿಮೆ ಮಾಡಿ ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ, ಈ ಅಭ್ಯಾಸ ಬಿಡಿಸಿ. ಆನ್‌ಲೈನ್‌ ಕ್ಲಾಸ್‌ಗಳು ಮುಗಿದ ತಕ್ಷಣ ಅವರು ದೈಹಿಕ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಿ.

ಅಂದ್ರೆ ಅವರನ್ನು ದೈಹಿಕವಾಗಿ ಚಟುವಟಿಕೆಯಿಂದ ಹುರಿದುಂಬಿಸಬೇಕು. ಸೈಕ್ಲಿಂಗ್, ಜಾಗಿಂಗ್ ಇವೆಲ್ಲಾ ಮಕ್ಕಳನ್ನು ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ.

ಜೀವನಶೈಲಿ ಉತ್ತಮವಾಗಿದ್ದರೆ ಪೋಷಕರಿಗೆ ಮಧುಮೇಹವಿದ್ದರೂ ಮಕ್ಕಳಿಗೆ ಬರುವುದನ್ನು ತಡೆಗಟ್ಟಬಹುದು, ಆದ್ದರಿಂದ ಜೀವನಶೈಲಿ ಹಾಗೂ ಆಹಾರಕ್ರಮದತ್ತ ಗಮನ ನೀಡಿ.

English summary

Type 2 Diabetes In Children: Symptoms, Types, Causes, Complication And Treatment in Kannada

Here we are discussing about what is type 2 diabetes in children, symptoms, types, causes, complication and treatment in kannada. Read on,
Story first published: Wednesday, July 28, 2021, 11:25 [IST]
X
Desktop Bottom Promotion