For Quick Alerts
ALLOW NOTIFICATIONS  
For Daily Alerts

ಕೊರೊನಾ 3ನೇ ಅಲೆ: ಮಕ್ಕಳಿಗೆ ಹೆಚ್ಚಿನ ಅಪಾಯವಿಲ್ಲ ಎಂದ ಏಮ್ಸ್ ವರದಿ, ಪೋಷಕರಿಗೆ ನಿರಾಳ

|

ಕೊರೊನಾ 2 ಅಲೆ ಕಡಿಮೆಯಾಗಿದೆ ಅಂದುಕೊಳ್ಳುವಷ್ಟರಲ್ಲಿ ಮೂರನೇ ಅಲೆಯ ಆತಂಕ ಹೆಚ್ಚಾಗಿದೆ. ಈಗಾಗಲೇ ನೆರೆಯ ರಾಜ್ಯ ಕೇರಳದಲ್ಲಿ ಅತೀ ಹೆಚ್ಚಿನ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಕೇಸ್‌ಗಳ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಇನ್ನು ಕೊರೊನಾ ಕೇಸ್‌ ತಡೆಗಟ್ಟಲು ನಮ್ಮ ರಾಜ್ಯದ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಒಟ್ಟಿನಲ್ಲಿ ಮೂರನೇ ಅಲೆ ಈ ಹಿಂದೆಗಿಂತಲೂ ಹೆಚ್ಚಿನ ಆತಂಕ ಜನರಲ್ಲಿದೆ, ಅದರಲ್ಲೂ ಈ ಆತಂಕ ಚಿಕ್ಕ ಮಕ್ಕಳಿರುವ ಪೋಷಕರಲ್ಲಿ ಅಧಿಕವಿದೆ.

ಏಕೆಂದರೆ 3ನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿತ್ತು. 2ನೇ ಅಲೆಯಲ್ಲಿ ವಯಸ್ಕರಿಗಿಂತ ಅಧಿಕವಾಗಿ ಯೌವನ ಪ್ರಾಯದವರನ್ನು ಕೊರೊನಾ ಕಾಡಿತ್ತು, ಈಗ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಸಿಗುತ್ತಿದೆ, ಮಕ್ಕಳಿಗೆ ಲಸಿಕೆ ಇನ್ನೂ ಬಂದಿಲ್ಲ, ಅದರಿಂದಾಗಿ ಒಂದು ವೇಳೆ ಮೂರನೇ ಅಲೆ ಬಂದ್ರೆ ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಎರಡನೇ ಅಲೆಯಲ್ಲಿ ಜನರಿಗೆ ಆಕ್ಸಿಜನ್‌ ಸಿಗದೆ, ಬೆಡ್‌ ಸಿಗದೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವಿನ ಸಂಖ್ಯೆ ಹೆಚ್ಚಾಗಿತ್ತು, ಆದ್ದರಿಂದ 3ನೇ ಅಲೆಯಲ್ಲಿ ಮಕ್ಕಳ ಚಿಕಿತ್ಸೆಗೆ ಅಗ್ಯತವಾದ ಎಲ್ಲಾ ಸೌಲಭ್ಯಗಳಿಂದ ಸಿದ್ಧವಾಗಿರಬೇಕು, ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.

3ನೇ ಅಲೆ ಅಂದ ತಕ್ಷಣ ಪೋಷಕರಿಗೆ ತುಂಬಾನೇ ಆತಂಕವಿತ್ತು, ಇದೀಗ ಪೋಷಕರಿಗೆ ಸಮಧಾನಕರವಾದ ಅಂಶವೊಂದನ್ನು ಏಮ್ಸ್‌ ಹೇಳಿದೆ. 3ನೇ ಅಲೆ ಮಕ್ಕಳ ಮೇಲೆ ಬೀರಿರುವ ಪರಿಣಾಮದ ಬಗ್ಗೆ ಏಮ್ಸ್‌ ಏನು ಹೇಳಿದೆ? ಎಂದು ನೋಡೋಣ ಬನ್ನಿ:

ಏಮ್ಸ್‌ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ನಡೆಸಿದ ಅಧ್ಯಯನ

ಏಮ್ಸ್‌ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ನಡೆಸಿದ ಅಧ್ಯಯನ

3ನೇ ಅಲೆ ಮಕ್ಕಳ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುವುದರ ಬಗ್ಗೆ ಏಮ್ಸ್‌ (All India Institute of Medical Sciences) ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನ ವರದಿ ಪ್ರಕಾರ ಮಕ್ಕಳಲ್ಲಿ SARS-CoV-2 ಸೆರೋ ಪಾಸಿಟಿವಿಟಿ ರೇಟ್‌ ಅಧಿಕವಿರುತ್ತದೆ ಎಂದು ತಿಳಿದು ಬಂದಿದೆ. ಈ ಅಧ್ಯಯನ ವರದಿ ಪೋಷಕರ ಆತಂಕ ಕಡಿಮೆ ಮಾಡಿದೆ.

ಸೆರೋ ಪಾಸಿಟಿವಿಟಿ ಎಂದರೇನು?

ಸೆರೋ ಪಾಸಿಟಿವಿಟಿ ಎಂದರೇನು?

ಅಧ್ಯಯನ ಪ್ರಕಾರ 5 ರಾಜ್ಯಗಳನ್ನು ಆಯ್ಕೆ ಮಾಡಿ 10,000 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಆಗ ವಯಸ್ಕರಿಗೆ ಹೋಲಿಸಿದರೆ ಸೆರೋ ಪಾಸಿಟಿವಿಟಿ ಅಧಿಕವಿದೆ ಎಂಬುವುದು ತಿಳಿದು ಬಂದಿದೆ. ಸೆರೋ ಪಾಸಿಟಿವಿಟಿ ಅಂದ್ರೆ ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡುವ ಪ್ರತಿಕಾಯ(antibodie) ಸಾಮರ್ಥ್ಯ ಹೊಂದಿದ್ದಾರೆ ಎಂದರ್ಥ.

ನಾಲ್ಕು ರಾಜ್ಯಗಳಲ್ಲಿ ನಡೆಸಿದ ಅಧ್ಯಯನ ವರದಿ

ನಾಲ್ಕು ರಾಜ್ಯಗಳಲ್ಲಿ ನಡೆಸಿದ ಅಧ್ಯಯನ ವರದಿ

ಭಾರತದ ನಾಲ್ಕು ರಾಜ್ಯಗಳಲ್ಲಿ ನಡೆಸಿದ ಅಧ್ಯಯನದಲ್ಲಿ 4,509 ಮಕ್ಕಳನ್ನು ಒಳಪಡಿಸಲಾಗಿತ್ತು, ಅದರಲ್ಲಿ 700 ಮಕ್ಕಳು 18 ವರ್ಷ ಒಳಗಿನವರಾಗಿದ್ದರೆ 3,809 ಮಕ್ಕಳು 18ರ ಪ್ರಾಯದವರಾಗಿದ್ದರು. ಸಮೀಕ್ಷೆಯ ಜವಾಬ್ದಾರಿ ತೆಗೆದುಕೊಂಡಿದ್ದ ಏಮ್ಸ್‌ನ ಡಾ. ಪುನೀತ್‌ ಮಿಶ್ರಾ ಅವರು 2ನೇ ಅಲೆಗಿಂತ ಮುಂಚೆಯೇ 18 ವರ್ಷ ಮಕ್ಕಳಲ್ಲಿ ಸೆರೋಪಾಸಿಟಿವಿಟಿ ಶೇ.73.9ರಷ್ಟು ಇತ್ತು ಎಂದಿದ್ದಾರೆ.

ಉತ್ತರ ಪ್ರದೇಶದ ಗೋರಾಕ್‌ಪುರದ ಹಳ್ಳಿಯಲ್ಲಿ ನಡೆಸಿದ ಅಧ್ಯಯನ

ಉತ್ತರ ಪ್ರದೇಶದ ಗೋರಾಕ್‌ಪುರದ ಹಳ್ಳಿಯಲ್ಲಿ ನಡೆಸಿದ ಅಧ್ಯಯನ

ಇಲ್ಲಿ ನಡೆಸಿದ ಅಧ್ಯಯನದಲ್ಲಿ 2-18 ವರ್ಷದ ಮಕ್ಕಳಲ್ಲಿ ಸೆರೋಪಾಸಿಟಿವಿಟಿ ಶೇ.87.9ರಷ್ಟು, 18 ವರ್ಷ ಮೇಲ್ಪಟ್ಟವರಲ್ಲಿ ಶೇ.8-.6ರಷ್ಟು ಸೆರೋಪಾಸಿಟಿವಿಟಿ ಕಂಡು ಬಂತು. ಇದರಿಂದ ತಿಳಿದು ಬಂದ ಅಂಶವೆಂದರೆ ಕೊರೊನಾವೈರಸ್‌ ಎದುರಿಸುವ ಶಕ್ತಿ ದೊಡ್ಡವರಿಗಿಂತ ಮಕ್ಕಳಲ್ಲಿ ಅಧಿಕವಿದೆ

3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲ್ಲ!

3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲ್ಲ!

ಏಮ್ಸ್‌ ನಡೆಸಿದ ಅಧ್ಯಯನ ವರದಿ ಪ್ರಕಾರ ಮಕ್ಕಳಲ್ಲಿ ಸೆರೋಪಾಸಿಟಿವಿಟಿ ರೇಟ್‌ ಅಧಿಕವಿರುವುದರಿಂದ ಕೊರೊನಾ ಸೋಂಕಿನ ವಿರುದ್ಧ ಗೆಲ್ಲುವ ಶಕ್ತಿ ಅವರಲ್ಲಿದೆ.

ಕೊನೆಯದಾಗಿ: 3ನೇ ಅಲೆ ಕಂಡು ಬರುತ್ತಿರುವ ಈ ಸಮಯದಲ್ಲಿ ನೀವು ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಬೇಡಿ, ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು (ಇತರ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು) ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಿ.

English summary

Third Wave Unlikely To Impact Children More, Claims AIIMS-WHO Study

corona 3rd wave and children, Third wave unlikely to impact children AIIMS-WHO study, what is sero-positivity rate
Story first published: Monday, August 2, 2021, 17:16 [IST]
X
Desktop Bottom Promotion