For Quick Alerts
ALLOW NOTIFICATIONS  
For Daily Alerts

ಯಶಸ್ವಿ ವಿದ್ಯಾರ್ಥಿಯ ಸಕ್ಸಸ್‌ ಮಂತ್ರ ಇದೇ ನೋಡಿ

|

ವಿದ್ಯಾರ್ಥಿಗಳು ಯಶಸ್ವಿಯಾಗಲು, ಉತ್ತಮ ಶಿಕ್ಷಣ ಮಾರ್ಗದರ್ಶನ ಪಡೆಯಲು ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಡೇನಿಯಲ್ ವಾಂಗ್ (Daniel wong) ರವರು ಈಗಾಗಲೇ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದು ವಿಶ್ವದಾದ್ಯಂತ ಲಕ್ಷಾಂತರ ಹದಿಹರೆಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಕೃತಿಗಳಿಂದ ಆಯ್ಕೆ ಕೆಲವು ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ಲೇಖಕರ ಮಾತಿನಲ್ಲಿಯೇ ವಿವರಿಸಲಾಗಿದೆ.

Successful Students Should Understand This Truths

ಇಲ್ಲಿಯವರೆಗೆ ಸುಮಾರು 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿರುವ ಡೇನಿಯಲ್ ವಾಂಗ್, ಎಲ್ಲರೂ ಏಕಾಗಿ ಯಶಸ್ವಿಯಾಗುತ್ತಿಲ್ಲ ಎಂಬ ಚಿಂತನೆಯಿಂದ ಯಶಸ್ವಿಯಾದವರನ್ನೂ ಆಗದವರನ್ನೂ ಬೇರ್ಪಡಿಸಿ ಪರಿಶೀಲಿಸಿದರು.

ಇವರು ಕೇವಲ ಅವರ ಶೈಕ್ಷಣಿಕ ಸಾಧನೆಯ ಬಗ್ಗೆ ಮಾತ್ರವೇ ಮಾತನಾಡುವುದಿಲ್ಲ, ಬದಲಿಗೆ ಅವರ ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಮತ್ತು ಎದುರಾಗಿರುವ ನಿರಾಶೆಗಳ ಮೂಲಕವೂ ಕಲಿಯಲು ಮತ್ತು ಬೆಳೆಯಲು ಅವರ ಇಚ್ಛೆಯ ಬಗ್ಗೆಯೂ ಮಾತನಾಡಿದ್ದಾರೆ.

ಯಾವುದೇ ವಿದ್ಯಾರ್ಥಿ ಯಶಸ್ವಿಯಾಗಬೇಕಾದರೆ ಆತನ ಸಹಜ ಬುದ್ಧಿಮತ್ತೆ ಅಥವಾ ಅವರು ಎಷ್ಟು ಬಗೆಯ ಅಧ್ಯಯನದ ಸುಲಭ ಮಾರ್ಗಗಳನ್ನು ಅರಿತಿದ್ದಾರೆ ಎಂಬುದು ಕಾರಣವಲ್ಲ.

ಬದಲಾಗಿ, ಅವರ ಯಶಸ್ಸಿನ ಅಡಿಪಾಯವು ಅವರ ನಂಬಿಕೆಗಳಲ್ಲಿದೆ - ಅಂದರೆ ಅವರು ಹೃದಯಕ್ಕೆ ತೆಗೆದುಕೊಳ್ಳುವ ಸತ್ಯಗಳು. ಯಶಸ್ವಿ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವ ಮತ್ತು ಸ್ವೀಕರಿಸುವ ಎಂಟು ಪ್ರಮುಖ ಸತ್ಯಗಳು ಇವು:

1. ಜೀವನವೊಂದು ಸವಾಲು

1. ಜೀವನವೊಂದು ಸವಾಲು

ಜೀವನವು ತುಲನಾತ್ಮಕವಾಗಿ ತುಂಬಾ ಸುಲಭ ಎಂದು ಅನೇಕ ವಿದ್ಯಾರ್ಥಿಗಳು ನಿರೀಕ್ಷಿಸುತ್ತಾರೆ. ಕಠಿಣ ಪರಿಶ್ರಮ ಮುಖ್ಯ ಎಂದು ಅವರಿಗೆ ತಿಳಿದಿದೆ, ಆದರೆ ಅವರು ಬಯಸಿದ್ದನ್ನು ಪಡೆಯಲು ಅವರು ಇನ್ನೂ ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದು ಅವರು ನಂಬುವುದಿಲ್ಲ.

ಉದಾಹರಣೆಗೆ, ನಾನು ಒಮ್ಮೆ 18 ವರ್ಷದ ವಿದ್ಯಾರ್ಥಿಗಳಿಂದ ತುಂಬಿದ ಸಭಾಂಗಣಕ್ಕೆ ಒಂದು ಭಾಷಣವನ್ನು ನೀಡಿದ್ದೆ. ಸಂವಾದದ ಕೊನೆಯಲ್ಲಿ, ಒಬ್ಬ ವಿದ್ಯಾರ್ಥಿ ನನ್ನ ಬಳಿಗೆ ಬಂದು, "ನಿಮ್ಮ ಸಲಹೆಗಳಿಗೆ ಧನ್ಯವಾದಗಳು, ಡೇನಿಯಲ್! ನನಗೆ ಸ್ಫೂರ್ತಿ ಇದೆ. ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ, ಏನೆಂದರೆ: ಭವಿಷ್ಯದಲ್ಲಿ ನಾನು ಈಡೇರಿಸುವ ವೃತ್ತಿಜೀವನವನ್ನು ಕಂಡುಕೊಂಡಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ನಾನು ಏನು ಮಾಡಬಹುದು? "

ಅವರ ಉತ್ಸಾಹವನ್ನು ನಾನು ಮೆಚ್ಚಿದ್ದೇನೆ ಎಂದು ಅವನಿಗೆ ಹೇಳಿದ ನಂತರ, Do What You Are ಮತ್ತು What Color is Your Parachute? ಎಂಬ ನನ್ನ ಎರಡು ಪುಸ್ತಕಗಳನ್ನು ಓದುವ ಮೂಲಕ ಪ್ರಾರಂಭಿಸಲು ನಾನು ಶಿಫಾರಸು ಮಾಡಿದೆ.

ಕ್ಷಣಾರ್ಧದಲ್ಲಿ, ಒಂದು ಗೊಂದಲದ ನೋಟ ಅವನ ಮುಖದ ಮೇಲೆ ಪ್ರಕಟವಾಯಿತು. ಅವರು ನಿರಾಶೆಯಿಂದ ಹೇಳಿದ: "ಓಹ್, ಆದರೆ ನಾನು ಓದುವುದನ್ನು ಇಷ್ಟಪಡುವುದಿಲ್ಲ. ಅದೂ ಎರಡು ಪುಸ್ತಕಗಳು ಎಂದರೆ! ಅದನ್ನು ಮಾಡಲು ನನಗೆ ಸಾಧ್ಯವಾಗುವುದಿಲ್ಲ...

ಈ ವಿದ್ಯಾರ್ಥಿಯು ಕೆಲವು ದಶಕಗಳ ಕಾಲ ಉಳಿಯುವಂತಹ ವೃತ್ತಿಜೀವನವನ್ನು ಕಂಡುಕೊಳ್ಳಲು ಬಯಸಿದ್ದಾನೆ, ಆದರೆ ಅವನು ಬರೆಯ ಎರಡು ಪುಸ್ತಕಗಳನ್ನು ಓದಲು ಸಿದ್ಧನಿಲ್ಲ! ಹೇಗಾದರೂ, ಲಾಭದಾಯಕ ವೃತ್ತಿಜೀವನವನ್ನು ನಿರ್ಮಿಸಲು ಹೆಚ್ಚು ಶ್ರಮ ವಹಿಸಬಾರದು ಎಂದು ಅವರು ನಂಬಿದ್ದಾನೆ.

ದುರದೃಷ್ಟವಶಾತ್, ಈ ಮನಸ್ಥಿತಿ ಇಂದು ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಪ್ರಚಲಿತವಾಗಿದೆ.

ಯಶಸ್ವಿ ವಿದ್ಯಾರ್ಥಿಗಳು, ಮತ್ತೊಂದೆಡೆ, ಜೀವನವು ಕಠಿಣವಾಗಿದೆ ಎಂದು ಅರ್ಥಮಾಡಿಕೊಳ್ಳುತ್ತಾರೆ, ಆದರೆ ಜೀವನದ ಸವಾಲುಗಳನ್ನು ಜಯಿಸುವುದೇ ಜೀವನವನ್ನು ಹೆಚ್ಚು ಅರ್ಥಪೂರ್ಣಗೊಳಿಸುತ್ತದೆ.

2. ಸಂದರ್ಭಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ

2. ಸಂದರ್ಭಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ

ನೀವು ಎದುರಿಸುವ ಸಂದರ್ಭಗಳನ್ನು ನೀವು ಯಾವಾಗಲೂ ಆಯ್ಕೆ ಮಾಡಲು ಸಾಧ್ಯವಿಲ್ಲ, ಆದರೆ ನೀವು ಯಾವುದೇ ಸಂದರ್ಭವನ್ನು ಎದುರಿಸಲು ಸನ್ನದ್ಧರಾಗಿರುವಂತಹ ಮನೋಭಾವವನ್ನು ಆಯ್ಕೆ ಮಾಡಬಹುದು

ನಾವೆಲ್ಲರೂ ನಮ್ಮ ಜೀವನದ ಮೇಲೆ ನಿಯಂತ್ರಣ ಹೊಂದಿದ್ದೇವೆ ಎಂದು ಯೋಚಿಸಲು ಇಷ್ಟಪಡುತ್ತೇವೆ. ಆದರೆ ನಮ್ಮ ಜೀವನದ ಹಲವು ಅಂಶಗಳು ನಮ್ಮ ನಿಯಂತ್ರಣಕ್ಕೆ ಮೀರಿವೆ. ಖಂಡಿತ, ಇದರರ್ಥ ನಾವು ಮುಂದೆ ಯೋಜನೆ ಮಾಡಬಾರದು ಮತ್ತು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದಲ್ಲ.

ಯಶಸ್ವಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಯಾವ ಮನಸ್ಥಿತಿಯಲ್ಲಿದ್ದಾರೆ, ಅಥವಾ ಹವಾಮಾನ ಹೇಗಿರುತ್ತದೆ ಅಥವಾ ಮುಂದಿನ ವಾರದ ಗಣಿತ ಪರೀಕ್ಷೆ ಎಷ್ಟು ಕಷ್ಟಕರವಾಗಿರುತ್ತದೆ ಎಂಬುದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳುತ್ತಾರೆ.

ಆದರೆ ಅವರು ಯಾವಾಗಲೂ ತಮ್ಮ ಮನೋಭಾವವನ್ನು ಆರಿಸಿಕೊಳ್ಳಬಹುದು ಮತ್ತು ಅವರು ಎದುರಿಸುತ್ತಿರುವ ಸಂದರ್ಭಗಳಿಗೆ ಅವರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಅವರು ಗುರುತಿಸುತ್ತಾರೆ.

3. ನಿಮ್ಮ ಶಿಕ್ಷಣ ನಿಮ್ಮದೇ ಜವಾಬ್ದಾರಿಯೇ ಹೊರತು ಹೆತ್ತವರದ್ದಲ್ಲ

3. ನಿಮ್ಮ ಶಿಕ್ಷಣ ನಿಮ್ಮದೇ ಜವಾಬ್ದಾರಿಯೇ ಹೊರತು ಹೆತ್ತವರದ್ದಲ್ಲ

ಇಂದು ಅನೇಕ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಮಕ್ಕಳಿಗಿಮ್ತ ಹೆಚ್ಚಾಗಿ ತಾವೇ ಸ್ವತಃ ಹೆಚ್ಚಿನ ಆಸಕ್ತಿ ವಹಿಸುತ್ತಾರೆ ಎಂದು ತೋರುತ್ತದೆ. ತಮ್ಮ ಮಕ್ಕಳು ತಮ್ಮ ಮನೆಕೆಲಸವನ್ನು ಪೂರ್ಣಗೊಳಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು ಮಕ್ಕಳ ಪಕ್ಕದಲ್ಲಿಯೇ ಕುಳಿತುಕೊಳ್ಳುವ ಪೋಷಕರನ್ನು ನಾನು ಭೇಟಿ ಮಾಡಿದ್ದೇನೆ. ಇದೇ ಪೋಷಕರು ತಮ್ಮ ಮಕ್ಕಳು ಅನುಸರಿಸಲಬೇಕಾದ ಸಂಪೂರ್ಣ ಅಧ್ಯಯನ ವೇಳಾಪಟ್ಟಿಯನ್ನು ಅಭಿವೃದ್ಧಿಪಡಿಸುತ್ತಾರೆ, ಏಕೆಂದರೆ ಅವರ ಮಕ್ಕಳು ಅವರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಕಳೆದ ವಾರವಷ್ಟೇ, ಕುಟುಂಬವೊಂದರ ತಂದೆ ತನ್ನ ಕೆಲಸವನ್ನು ತ್ಯಜಿಸಲು ಯೋಜಿಸುತ್ತಿರುವ ವಿಷಯ ನನಗೆ ತಿಳಿಯಿತು. ಏಕೆಂದರೆ ತಂದೆ ಈ ಮೂಲಕ ತನ್ನ ಇಡಿಯ ದಿನದ ಸಮಯವನ್ನು ತನ್ನ 15 ವರ್ಷದ ಮಗನ ಶಾಲಾ ಅಭ್ಯಾಸಕ್ಕಾಗಿ ವಿನಿಯೋಗಿಸಿ ವಿದ್ಯಾರ್ಥಿಯ ಕೆಲಸವನ್ನು ಹೆಚ್ಚು ನಿಕಟವಾಗಿ ಮೇಲ್ವಿಚಾರಣೆ ಮಾಡಬಹುದು.

ಆದರೆ ಯಶಸ್ವಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ತಮ್ಮದೇ ಸ್ವಂತ ಜವಾಬ್ದಾರಿ ಎಂದು ಅರ್ಥಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಇವರೆಂದೂ ತಮ್ಮ ಪಾಲಕರು ಜವಾಬ್ದಾರಿಯಿಂದ ಕಳಚಿಕೊಳ್ಳುವಂತೆ ಮಾಡುವುದಿಲ್ಲ.

ಪಾಲಕರು ತಮ್ಮ ಮಕ್ಕಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸದೆಯೂ ಮಾಡದೆ ಸಹಾಯ ಮಾಡಬಹುದು. ಬದಲಾಗಿ, ಪೋಷಕರು ತಮ್ಮ ಮಕ್ಕಳೊಂದಿಗೆ ಮಧ್ಯಮ-ಅವಧಿಯ ಗುರಿಗಳನ್ನು ಹೊಂದಿಸಬಹುದು. ಪ್ರತಿ ಎರಡು ತಿಂಗಳಿಗೊಮ್ಮೆ, ಪೋಷಕರು ತಮ್ಮ ಮಕ್ಕಳು ಹೇಗೆ ಪ್ರಗತಿ ಹೊಂದುತ್ತಿದ್ದಾರೆ ಎಂಬುದನ್ನು ನೋಡಲು ಶಾಲಾ ಶಿಕ್ಷಕರಿಗೆ ಸಂಕ್ಷಿಪ್ತ ಕರೆ ನೀಡಬಹುದು. ಒಂದು ವೇಳೆ ತಮ್ಮ ಮಕ್ಕಳು ತಮ್ಮ ನಿರೀಕ್ಷೆಗೆ ತಕ್ಕಂತಹ ಕಲಿಕೆಯನ್ನು ಪ್ರಕಟಿಸದಿದ್ದರೆ ಮಾತ್ರ ಪೋಷಕರು ಮುಂದಿನ ಕ್ರಮಗಳ ಬಗ್ಗೆ ಯೋಚಿಸಬಹುದು.

4. ಜೀವನವು ಕೇವಲ ನಿಮ್ಮ ಸುತ್ತ ಸುತ್ತುವುದಿಲ್ಲ

4. ಜೀವನವು ಕೇವಲ ನಿಮ್ಮ ಸುತ್ತ ಸುತ್ತುವುದಿಲ್ಲ

ಅನೇಕ ವಿದ್ಯಾರ್ಥಿಗಳು "ನನ್ನ ಪೋಷಕರು / ಕುಟುಂಬಕ್ಕಾಗಿ ನಾನು ಏನು ಮಾಡಬಹುದು?" ಎಂದು ಕೇಳುವ ಬದಲು , "ನನ್ನ ಪೋಷಕರು / ಕುಟುಂಬ ನನಗೆ ಏನು ಮಾಡಬಹುದು?" ಎಂದೇ ತಮ್ಮನ್ನು ತಾವು ಕೇಳಿಕೊಳ್ಳುತ್ತಾರೆ

ವಿದ್ಯಾರ್ಥಿಗಳು ದೀರ್ಘಕಾಲೀನ ಯಶಸ್ಸನ್ನು ಕಂಡುಕೊಳ್ಳಬೇಕಾದರೆ, ಅವರು ಬ್ರಹ್ಮಾಂಡದ ಕೇಂದ್ರವಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು.

ಇತರ ಜನರ ಭಾವನೆಗಳು ಮತ್ತು ಅಗತ್ಯಗಳಿಗೆ, ವಿಶೇಷವಾಗಿ ಅವರ ಕುಟುಂಬ ಸದಸ್ಯರ ಭಾವನೆಗಳಿಗೆ ಪರಿಗಣನೆಯನ್ನು ತೋರಿಸುವುದು ಅವರ ಸಾಮಾಜಿಕ ಜವಾಬ್ದಾರಿಯಾಗಿದೆ.

ಆಗ ಮಾತ್ರ ವಿದ್ಯಾರ್ಥಿಗಳು ತಮ್ಮ ಸ್ವಂತ ಆಸೆಗಳನ್ನು ಮಾತ್ರವೇ ಗಮನಿಸುವ ಬದಲು ಸೇವಾ ಮನೋಭಾವವನ್ನೂ ಬೆಳೆಸಿಕೊಳ್ಳಲು ಪ್ರಾರಂಭಿಸಬಹುದು, ಅಲ್ಲಿ ಅವರು ಇತರ ಜನರಿಗೂ ಮೌಲ್ಯವನ್ನು ನೀಡುವತ್ತ ಗಮನ ಹರಿಸುತ್ತಾರೆ.

5. ಇತರರನ್ನು ದೂಷಿಸುವುದರಿಂದ ನಿಮಗೆ ಯಾವುದೇ ಲಾಭವಾಗದು

5. ಇತರರನ್ನು ದೂಷಿಸುವುದರಿಂದ ನಿಮಗೆ ಯಾವುದೇ ಲಾಭವಾಗದು

ವಿದ್ಯಾರ್ಥಿಗಳಿಗೆ (ಮತ್ತು ವಯಸ್ಕರಿಗೆ) ಇತರರನ್ನು ದೂಷಿಸುವುದು ಸುಲಭ. ಕೆಳಗಿನ ಯಾವುದಾದರೂ ವಾಕ್ಯಗಳು ಎಲ್ಲೋ ಕೇಳಿದ್ದೇನೆ ಎಂದೆನಿಸುತ್ತದೆಯೇ?

"ನಮ್ಮ ಶಿಕ್ಷಕರೇ ತುಂಬಾ ಬೋರು. ಅದಕ್ಕಾಗಿಯೇ ನಾನು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗಲಿಲ್ಲ "

"ನನ್ನ ಹೆತ್ತವರು ತುಂಬಾ ಕಿರುಕುಳ ಕೊಡುತ್ತಿರುತ್ತಾರೆ. ಅದಕ್ಕಾಗಿಯೇ ನಾನು ಯಾವಾಗಲೂ ಮೂಡಿ. "

"ಪಾಠ ಏನೂ ಆಸಕ್ತಿದಾಯಕ ಆಗಿರಲಿಲ್ಲ, ಬೋರೂ ಎಂದರೆ ಬೋರು. ಅದಕ್ಕಾಗಿಯೇ ನಾನು ಗಮನ ಹರಿಸಲಾಗಲಿಲ್ಲ. "

ಈ ದೂರುಗಳು ಸತ್ಯವೇ ಆಗಿರಬಹುದು. ಆದರೆ ನಿಮ್ಮ ಶಿಕ್ಷಣ ಮತ್ತು ನಿಮ್ಮ ಜೀವನದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಎಂದರೆ ನೀವು ಪಾಠಗಳಿಗೆ ಸಂಬಂಧಿಸಿದ ವ್ಯಕ್ತಿ ಅಥವಾ ಇತರ ವಿಷಯಗಳ ಬಗ್ಗೆ ಹೇಗೆ ಭಾವಿಸುತ್ತಿದ್ದೀರಿ ಎಂಬುದು ಅನ್ವಯವಾಗುವುದೇ ಇಲ್ಲ. ಉದಾಹರಣೆಗೆ ಸಮಾಜ ಪಾಠ ಹೇಳುವ ಶಿಕ್ಷಕಿ ಊರಿನ ಹೆಸರನ್ನು ಕೊಂಚ ತಪ್ಪಾಗಿ ಉಚ್ಛರಿಸುತ್ತಾರೆ ಎಂದ ಮಾತ್ರಕ್ಕೇ ಆ ಶಿಕ್ಷಕರು ನಿಮಗೆ ಇಷ್ಟವಾಗುವುದಿಲ್ಲ ಎಂದರೆ ಆ ಊರಿನ ಹೆಸರನ್ನು ಕಲಿತುಕೊಳ್ಳಬಾರದು ಎಂದಲ್ಲ. ಅಂದರೆ ನೀವು ಅನುಭವಿಸುತ್ತಿರುವ ನಿರಾಶೆಗಳಿಗೆ ನೀವು ಇತರ ಜನರನ್ನು ದೂಷಿಸುವುದಂತೂ ಖಂಡಿತಾ ಅಲ್ಲ.

ಬದಲಾಗಿ, ಯಶಸ್ವಿ ವಿದ್ಯಾರ್ಥಿಗಳು ನಿರಂತರವಾಗಿ ತಮ್ಮನ್ನು ತಾವು ಈ ಪ್ರಮುಖ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾರೆ: "ಪರಿಸ್ಥಿತಿಯನ್ನು ಉತ್ತಮಗೊಳಿಸಲು ನಾನು ಇದೀಗ ಏನು ಮಾಡಬಹುದು?"

ಇದು ಅವರಿಗೆ ಸಾಧ್ಯವಾಗದ ಬದಲು ಅವರು ನಿಯಂತ್ರಿಸಬಹುದಾದ ವಿಷಯಗಳ ಮೇಲೆ ಕೇಂದ್ರೀಕರಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಅಂದರೆ ಮೇಲಿನ ಉದಾಹರಣೆಗೆ 'ಶಿಕ್ಷಕರು ಆ ಊರಿನ ಹೆಸರನ್ನು ತಪ್ಪಾಗಿ ಉಚ್ಛರಿಸಿದರು ಎಂದರೂ ನಾನು ಸರಿಯಾದ ಉಚ್ಛಾರಣೆಯನ್ನೇ ಪರಿಗಣಿಸುತ್ತೇನೆ' ಎಂಬುದಾಗಿದೆ.

6. ಸಮಯ ನಿರ್ವಹಿಸುವುದಕ್ಕಿಂತ ನಿಮ್ಮನ್ನು ಸ್ವತಃ ನಿರ್ವಹಿಸುವುದು ಬಹಳ ಮುಖ್ಯ

6. ಸಮಯ ನಿರ್ವಹಿಸುವುದಕ್ಕಿಂತ ನಿಮ್ಮನ್ನು ಸ್ವತಃ ನಿರ್ವಹಿಸುವುದು ಬಹಳ ಮುಖ್ಯ

ಇಂದು ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಹೆಚ್ಚು ಗೊಂದಲವನ್ನು ಎದುರಿಸುತ್ತಿದ್ದಾರೆ.

ಟೆಕ್ಸ್ಟಿಂಗ್. ಯೂಟ್ಯೂಬ್ ಫೇಸ್ಬುಕ್. ಟ್ವಿಟರ್. ಇನ್ಸ್ಟಾಗ್ರಾಂ, ಬ್ಲಾಗ್‌ಗಳು. ಆನ್ಲೈನ್ ಆಟಗಳು. ಮತ್ತು ಇತರ ಇಂಟರ್ನೆಟ್ ಆಧಾರಿತ ಚಟುವಟಿಕೆಗಳು.

ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಅವರ ಆದ್ಯತೆಗಳನ್ನು ನಿರ್ವಹಿಸಲು ಕಲಿಯಬೇಕು, ಆದರೆ ಅವರು ಇದಕ್ಕೂ ಮೊದಲು ತಮ್ಮನ್ನು ತಾವು ನಿರ್ವಹಿಸುವುದನ್ನು ಕಲಿಯಬೇಕು.

ಗೊಂದಲವನ್ನು ನಿವಾರಿಸುವುದು, ಪ್ರಲೋಭನೆಗಳ ವಿರುದ್ದ ಹೋರಾಡುವುದು ಮತ್ತು ಆಂತರಿಕ ಪ್ರೇರಣೆಯನ್ನು ಕಂಡುಹಿಡಿಯುವ ಕೌಶಲ್ಯಗಳನ್ನು ಅವರು ಪಡೆದುಕೊಳ್ಳಬೇಕು.

ಉದಾಹರಣೆಗೆ ಕಂಪ್ಯೂಟರ್ ಗೇಮ್ ಆಟ ಆಡುವ ಭರದಲ್ಲಿ ಮುಂದಿನ ಹಂತಕ್ಕೆ ಹೋಗುವ ಪ್ರಲೋಭನೆ ಹೆಚ್ಚುತ್ತಾ ಹೆಚ್ಚುತ್ತಾ ಈ ಆಟದಲ್ಲಿ ಅದೆಷ್ಟು ಘಂಟೆಗಳು ಪೋಲಾಗಿ ಹೋದವೋ ಗೊತ್ತೇ ಆಗುವುದಿಲ್ಲ. ಹಾಗಾಗಿ, ಈ ಆಟದಲ್ಲಿ ಮುಂದೆ ಹೋಗುವುದು ನಿಮ್ಮ ಆದ್ಯತೆಯೋ ಅಥವಾ ಈ ಸಮಯದಲ್ಲಿ ನೀವು ಓದಬೇಕಾದ ಪಾಠ ಮುಖ್ಯವೋ ಎಂದು ತುಲನೆ ಮಾಡಿಕೊಳ್ಳಬೇಕು. ಯಶಸ್ವಿ ವಿದ್ಯಾರ್ಥಿಗಳು ಎಂದಿಗೂ ತಮ್ಮ ಮನಸ್ಸಿನ ಹಿಡಿತವನ್ನು ಪ್ರಲೋಭನೆಗೆ ಒಪ್ಪಿಸುವುದಿಲ್ಲ!

7. ನೀವು ಜೀವನದಲ್ಲಿ ಕೆಲವು ವಿಷಯಗಳ ಬಗ್ಗೆ ಅಧಿಕಾರವಿದೆ ಎಂದು ತಿಳಿದಿರುವುದು

7. ನೀವು ಜೀವನದಲ್ಲಿ ಕೆಲವು ವಿಷಯಗಳ ಬಗ್ಗೆ ಅಧಿಕಾರವಿದೆ ಎಂದು ತಿಳಿದಿರುವುದು

ನಾನು ನಿಗಾ ವಹಿಸುತ್ತಿರುವ ವಿದ್ಯಾರ್ಥಿಗಳ ಪೈಕಿ 80% ವಿದ್ಯಾರ್ಥಿಗಳು ಕೆಲವು ವಿಷಯಗಳ ಬಗ್ಗೆ ಅಧಿಕಾರದ ಪ್ರಜ್ಞೆಯನ್ನು ಹೊಂದಿದ್ದಾರೆ. ಅವರು ಇದಕ್ಕೆ ಅರ್ಹರು ಎಂದು ಭಾವಿಸುತ್ತಾರೆ: ಉದಾಹರಣೆಗೆ

  • ಅವರ ಮನೆಯ ಕಂಪ್ಯೂಟರ್ ಅನ್ನು ಅವರು ಬಯಸಿದ ಯಾವುದೇ ಸಮಯದಲ್ಲಿ ಬಳಸುವ ಅಧಿಕಾರ
  • ಒಂದು ಸ್ಮಾರ್ಟ್ ಫೋನ್ ಹೊಂದಿರುವುದು
  • ಅವರು ಕೋಣೆ ಅಸ್ತವ್ಯಸ್ತವಾಗಿರುವಂತೆ ಆಯ್ದುಕೊಳ್ಳುವುದು
  • ಯಾವುದೇ ಜವಾಬ್ದಾರಿ ಇಲ್ಲದ ಆರಾಮದಾಯಕ ಜೀವನವನ್ನು ನಡೆಸುವುದು
  • ಇವು ಯಾವುವೂ ತಮಗೆ ಅಧಿಕಾರಗಳನ್ನು ನೀಡುವುದಿಲ್ಲ ಎಂಬ ಅಂಶವನ್ನು ಅವರು ಗ್ರಹಿಸುವುದಿಲ್ಲ; ಯವುದೇ ಸವಲತ್ತುಗಳನ್ನು ಸುಮ್ಮನೇ ಪಡೆಯಲು ಸಾಧ್ಯವಿಲ್ಲ, ಇದನ್ನು ಗಳಿಸಬೇಕಾಗುತ್ತದೆ.

    ಯಶಸ್ವಿ ವಿದ್ಯಾರ್ಥಿಗಳು ಈ ಸವಲತ್ತುಗಳನ್ನು ಗಳಿಸಲು ಶ್ರಮಿಸುತ್ತಾರೆ, ಅವರು ಜಾಗರೂಕರಾಗಿರದಿದ್ದರೆ ಈ ಸವಲತ್ತುಗಳನ್ನು ಕಳೆದುಕೊಳ್ಳಬಹುದು ಎಂದೂ ತಿಳಿದಿರುತ್ತಾರೆ.

    8. ಯಾರೂ ಪರಿಪೂರ್ಣರಲ್ಲ, ಆದರೆ ಸುಧಾರಿಸಲು ಯಾವಾಗಲೂ ಅವಕಾಶವಿರುತ್ತದೆ

    8. ಯಾರೂ ಪರಿಪೂರ್ಣರಲ್ಲ, ಆದರೆ ಸುಧಾರಿಸಲು ಯಾವಾಗಲೂ ಅವಕಾಶವಿರುತ್ತದೆ

    ತಮ್ಮ ಬಗ್ಗೆ ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರುವ ಹಲವಾರು ವಿದ್ಯಾರ್ಥಿಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ ಮತ್ತು ಪರಿಪೂರ್ಣ ಫಲಿತಾಂಶಗಳನ್ನು ಪಡೆಯಲು ತಮ್ಮ ಮೇಲೆ ತಾವೇ ಹೆಚ್ಚಿನ ಒತ್ತಡವನ್ನು ಹೇರಿಕೊಳ್ಳುವುದನ್ನೂ ಕಂಡಿದ್ದೇನೆ.

    ಈ ಪರಿಪೂರ್ಣತಾವಾದಿ ಪ್ರವೃತ್ತಿಗಳು (perfectionist tendencies)( ಸಾಮಾನ್ಯವಾಗಿ ಮೊದಲನೆಯನಾಗಿ ಹುಟ್ಟಿರುವವರಲ್ಲಿ ಅಥವಾ ಏಕೈಕ ಮಗುವಾಗಿರುವವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ) ಮುಂದೆ ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳಂತಹ ಗಂಭೀರ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು.

    ಆದ್ದರಿಂದ ನೀವು ಇದನ್ನು ಓದುವ ಪೋಷಕರಾಗಿದ್ದರೆ, ನಿಮ್ಮ ಮಗು ಪರಿಪೂರ್ಣತಾವಾದಿಯಾಗಿದ್ದರೆ ಅದನ್ನು ಖಂಡಿತವಾಗಿಯೂ ಲಘುವಾಗಿ ಪರಿಗಣಿಸದಿರಿ.

    ಆದರೆ ಯಶಸ್ವಿ ವಿದ್ಯಾರ್ಥಿಗಳು ಪರಿಪೂರ್ಣತೆಯಂತಹ ಯಾವುದೇ ವಿಷಯಗಳಿಲ್ಲ ಎಂಬುದನ್ನು ಶೀಘ್ರವೇ ಅರಿತುಕೊಳ್ಳುತ್ತಾರೆ.

    ಅವರು ತಮ್ಮ ಗಮನವನ್ನು ಸಾಧನೆಗಳಿಂದ ಮತ್ತು ಅಂತಿಮ ಫಲಿತಾಂಶದಿಂದ ದೂರವಿಡುತ್ತಾರೆ. ಬದಲಾಗಿ, ಅವರು ಸತತ ತಮ್ಮನ್ನು ಸುಧಾರಿಸಿಕೊಳ್ಳುವ ಮತ್ತು ತಮ್ಮ ಕಲಿಕೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಾರೆ. ಅವರು ತಮ್ಮ ನಿಯಂತ್ರಣದಲ್ಲಿರುವ ಅಂಶಗಳ ಮೇಲೆ ಕೇಂದ್ರೀಕರಿಸುತ್ತಾರೆ: ಅಂದರೆ ಮುಖ್ಯವಾಗಿ ಅವರ ಪ್ರಯತ್ನ ಮತ್ತು ವರ್ತನೆ.

    ವಿಪರ್ಯಾಸವೆಂದರೆ, ಈ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷಮತೆಯತ್ತ ಗಮನ ಹರಿಸದಿವುದನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಪ್ರದರ್ಶನವನ್ನೇ ನೀಡುತ್ತಾರೆ.

    ಅಂತಿಮ ಮಾತು

    ನಿಮ್ಮ ಮಕ್ಕಳು ಸಂತೋಷದಿಂದಿರಲು ಮತ್ತು ಯಶಸ್ವಿಯಾಗಬೇಕೆಂದು ನೀವು ಬಯಸಿದರೆ, ಅವರು ಈ ಎಂಟು ಸತ್ಯಗಳನ್ನು ಒಪ್ಪಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಪ್ರೇರಣೆ ಮತ್ತು ಪ್ರಭಾವ ಬೀರಲು ಪೋಷಕಾಗಿ ನಮ್ಮ ಪಾತ್ರವೆಂದರೆ ಈ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಇದಕ್ಕೆ ತಕ್ಕನಾಗಿ ಜೀವಿಸುವುದಾಗಿದೆ.

English summary

Truths That Successful Students Understand

Here we are discussing about Successful Students Should Understand This Truths. These are the eight most important truths that successful students both understand and embrace: Read more.
X
Desktop Bottom Promotion