For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ವಿಟಮಿನ್‌ ಎ ಕೊರತೆಯಾದಾಗ ಕಂಡು ಬರುವ ಲಕ್ಷಣಗಳಿವು

|

ಹೆಚ್ಚಿನ ಮಕ್ಕಳಲ್ಲಿ ವಿಟಮಿನ್‌ ಕೊರತೆ ಕಂಡು ಬರುವುದು, ಮಕ್ಕಳು ಪೋಷಕಾಂಶದ ಆಹಾರ ಸರಿಯಾಗಿ ತಿನ್ನದಿದ್ದರೆ ಪೋಷಕಾಂಶದ ಕೊರತೆ ಉಂಟಾಗುವುದು. ಮಕ್ಕಳಿಗೆ ಎಲ್ಲಾ ಬಗೆಯ ವಿಟಮಿನ್ಸ್ ದೊರೆಯಬೇಕು, ಇಲ್ಲದಿದ್ದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಈ ಲೇಖನದಲ್ಲಿ ಮಕ್ಕಳಿಗೆ ವಿಟಮಿನ್ ಎ ಎಷ್ಟು ಅವಶ್ಯಕ, ಅದರ ಕೊರತೆ ಉಂಟಾದರೆ ಆಗುವ ತೊಂದರೆಗಳೇನು ಎಂಬುವುದರ ಬಗ್ಗೆ ವಿವರವಾಗಿ ನೀಡಲಾಗಿದೆ ನೋಡಿ:

ವಿಟಮಿನ್‌ ಎ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಶ್ಯಕ. ಕಣ್ಣು ದೃಷ್ಟಿ ಚೆನ್ನಾಗಿರಲು, ರೋಗ ನಿರೋಧಕ ಶಕ್ತಿ ಉತತಮವಾಗಲು, ತ್ವಚೆ ಆರೋಗ್ಯಕ್ಕೆ ವಿಟಮಿನ್ ಎ ಅವಶ್ಯಕ.

ಆಹಾರದಲ್ಲಿ 2 ಬಗೆಯ ವಿಟಮಿನ್‌ಗಳು ಸಿಗುತ್ತವೆ. ಅವುಗಳೆಂದರೆ ವಿಟಮಿನ್ ಎ ಮತ್ತು ಪ್ರೊ ವಿಟಮಿನ್ ಎ.

ವಿಟಮಿನ್ ಎ ಅನ್ನು ರೆಟಿನೋಲ್‌ ಎಂದು ಕರೆಯಲಾಗುತ್ತಿದ್ದು ಇವು ಮಾಂಸಾಹಾರ, ಮೀನು, ಮೊಟ್ಟೆ, ಹಾಲಿನ ಉತ್ಪನ್ನಗಳಲ್ಲಿ ಇರುತ್ತದೆ.

ಇನ್ನು ನಮ್ಮ ದೇಹವು ಸಸ್ಯಾಹಾರಗಳಲ್ಲಿ ಅಂದರೆ ಕೆಂಪು, ಹಸಿರು, ಹಳದಿಹಾಗೂ ಕಿತ್ತಳೆ ಬಣ್ಣದ ಹಣ್ಣು ಹಾಗೂ ತರಕಾರಿಗಳಲ್ಲಿರುವ ಕ್ಯಾರೊಟಿನಾಯ್ಡ್‌ಗಳನ್ನು ವಿಟಮಿನ್ ಎ ಆಗಿ ಪರಿವರತಿಸುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಅಭಿವೃದ್ದಿ ಹೊಂದುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ವಿಟಮಿನ್ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ.

ಮಕ್ಕಳಲ್ಲಿ ವಿಟಮಿನ್ ಎ ಕೊರತೆ ಉಂಟಾದರೆ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತದೆ:

1. ತ್ವಚೆ ಡ್ರೈಯಾಗುವುದು

1. ತ್ವಚೆ ಡ್ರೈಯಾಗುವುದು

ತ್ವಚೆಯನ್ನು ಆರೋಗ್ಯವಾಗಿ ಇಡುವಲ್ಲಿ ವಿಟಮಿನ್‌ ಎ ಪಾತ್ರ ಪ್ರಮುಖವಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ತ್ವಚೆಯಲ್ಲಿ ತುರಿಕೆ ಉಂಟಾಗುವುದು, ತ್ವಚೆ ಒಣಗುವುದು, ತುರಿಕೆ ಹೆಚ್ಚುವುದು. ಈ ರೀತಿಯ ಸಮಸ್ಯೆಗೆ ವಿಟಮಿನ್ ಎ ಸಪ್ಲಿಮೆಂಟ್‌ ನೀಡುವ ಮೂಲಕ ಸರಿಪಡಿಸಬಹುದು.

ಡ್ರೈ ಸ್ಕಿನ್‌ ಅನೇಕ ಕಾರಣಗಳಿಂದ ಉಂಟಾಗಬಹುದು, ಅದರಲ್ಲೊಂದು ವಿಟಮಿನ್ ಎ ಕೊರತೆಯೂ ಆಗಿರಬಹುದು.

2. ದೃಷ್ಟಿ ದೋಷ

2. ದೃಷ್ಟಿ ದೋಷ

ವಿಟಮಿನ್‌ ಎ ಕೊರತೆ ಇರುವವರಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಯೆಂದರೆ ದೃಷ್ಟಿದೋಷ. ಕಣ್ಣುಗಳು ಒಣಗುವುದು, ಬೇಗನೆ ಕಣ್ಣೀರು ಬರದಿರುವುದು ಇವೆಲ್ಲಾ ವಿಟಮಿನ್‌ ಎ ಕೊರತೆಯ ಲಕ್ಷಣಗಳಾಗಿವೆ. ವಿಟಮಿನ್‌ ಎ ಸಪ್ಲಿಮೆಂಟ್ ತೆಗೆದುಕೊಂಡರೆ ಈ ಸಮಸ್ಯೆ ದೂರಾಗುವುದು.

ಸ್ವ ಚಿಕಿತ್ಸೆ ಮಾಡಬೇಡಿ, ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

3. ಇರಳು ಕುರುಡುತನ

3. ಇರಳು ಕುರುಡುತನ

ವಿಟಮಿನ್‌ ಎ ಕೊರತೆ ತುಂಬಾ ಇದ್ದರೆ ಇರಳು ಕುರುಡುತನ ಅಂದ್ರೆ ರಾತ್ರಿ ಹೊತ್ತಿನಲ್ಲಿ ಕಣ್ಣು ಕಾಣಿಸುವುದಿಲ್ಲ. ಸಮಸ್ಯೆ ಶುರುವಾಗುತ್ತಿದ್ದಂತೆ ಚಿಕಿತ್ಸೆ ಪಡೆಯಿರಿ. ಆಗ ಈ ಸಮಸ್ಯೆ ಕಡಿಮೆ ಮಾಡಬಹುದು.

4. ಮಕ್ಕಳ ಬೆಳವಣಿಗೆ ಕುಂಠಿತವಾಗುವುದು

4. ಮಕ್ಕಳ ಬೆಳವಣಿಗೆ ಕುಂಠಿತವಾಗುವುದು

ವಿಟಮಿನ್ ಎ ಕೊರತೆ ಉಂಟಾದರೆ ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದು. ವಯಸ್ಸಿಗೆ ತಕ್ಕ ಉತ್ತರ, ಮೈ ತೂಕ ಇರಲ್ಲ, ಕುಬ್ಜ ದೇಹವನ್ನು ಹೊಂದುತ್ತಾರೆ. ಮಕ್ಕಳ ಬೆಳವಣಿಗೆ ತುಂಬಾ ಕುಂಠಿತವಾಗುವುದು.

5. ಆಗಾಗ ಗಂಟಲು ಹಾಗೂ ಎದೆ ಭಾಗದಲ್ಲಿ ಸೋಂಕು ಉಂಟಾಗುವುದು

5. ಆಗಾಗ ಗಂಟಲು ಹಾಗೂ ಎದೆ ಭಾಗದಲ್ಲಿ ಸೋಂಕು ಉಂಟಾಗುವುದು

ಮಕ್ಕಳಲ್ಲಿ ವಿಟಮಿನ್‌ ಎ ಕೊರತೆ ಉಂಟಾದರೆ ಗಂಟಲು ಹಾಗೂ ಎದೆಯಲ್ಲಿ ಆಗಾಗ ಇನ್‌ಫೆಕ್ಷನ್‌ ಅಥವಾ ಸೋಂಕು ಕಂಡು ಬರುವುದು. ಇದರಿಂದ ಗಂಟಲು, ಕೆಮ್ಮು ಈ ರೀತಿಯ ಸಮಸ್ಯೆ ಆಗಾಗ ಕಂಡು ಬರುವುದು.

6. ಗಾಯವಾದರೆ ಬೇಗನೆ ಒಣಗುವುದಿಲ್ಲ

6. ಗಾಯವಾದರೆ ಬೇಗನೆ ಒಣಗುವುದಿಲ್ಲ

ವಿಟಮಿನ್ ಎ ಕೊರತೆ ಉಂಟಾದರೆ ಗಾಯವಾದರೆ ಬೇಗನೆ ಒಣಗುವುದಿಲ್ಲ. ಅಲ್ಲದೆ ವಿಟಮಿನ್‌ ಎ ಕೊರತೆ ಉಂಟಾದರೆ ತ್ವಚೆಯಲ್ಲಿ ಕೊಲೆಜಿನ್‌ ಉತ್ಪತ್ತಿ ಕಡಿಮೆಯಾಗುವುದು.

7. ಹದಿ ಹರೆಯದ ಮಕ್ಕಳಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುವುದು

7. ಹದಿ ಹರೆಯದ ಮಕ್ಕಳಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುವುದು

ವಿಟಮಿನ್‌ ಎ ಕೊರತೆ ಉಂಟಾದರೆ ಮೊಡವೆ ಸಮಸ್ಯೆ ಶೇ.50ರಷ್ಟು ಹೆಚ್ಚಾಗುವುದು. ವಿಟಮಿನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುವುದು ಹಾಗೂ ವಿಟಮಿನ್ ಎ ಇರುವ ಕ್ರೀಮ್‌ ಬಳಸುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುವುದು.

ಇನ್ನು ದೊಡ್ಡವರಲ್ಲಿ ವಿಟಮಿನ್‌ ಎ ಸಮಸ್ಯೆ ಉಂಟಾದರೆ ಬಂಜೆತನ ಕೂಡ ಉಂಟಾಗುವುದು.

ವಿಟಮಿನ್‌ ಎ ಇರುವ ಆಹಾರಗಳು

ವಿಟಮಿನ್‌ ಎ ಇರುವ ಆಹಾರಗಳು

* ಚೀಸ್‌

* ಮೊಟ್ಟೆ

* ಮೀನು

* ಮಾಂಸಾಹಾರ

* ಹಾಲು ಮತ್ತು ಮೊಸರು

* ಲಿವರ್‌

* ಹಳದಿ, ಕೆಂಪು, ಹಸಿರು ತರಕಾರಿಗಳು ಅಂದ್ರೆ ಪಾಲಾಕ್‌, ಕ್ಯಾರೆಟ್, ಸಿಹಿ ಗೆಣಸು,ಕೆಂಪು ದುಂಡು ಮೆಣಸು

* ಹಳದಿ ಹಣ್ಣುಗಳು ಅಂದ್ರೆ ಮಾವಿನ ಹಣ್ಣು, ಪಪ್ಪಾಯಿ, ಆಪ್ರಿಕಾಟ್‌

English summary

Signs and Symptoms of Vitamin A Deficiency in Kids

Signs and Symptoms of Vitamin A Deficiency in Kannada, read on....
X
Desktop Bottom Promotion