For Quick Alerts
ALLOW NOTIFICATIONS  
For Daily Alerts

ಶಾಲೆ ಪ್ರಾರಂಭ: ಈ ರೀತಿಯಲ್ಲಿ ಮಕ್ಕಳಲ್ಲಿ ಕೋವಿಡ್ 19 ತಡೆಗಟ್ಟಿ

|

ಎರಡು ವರ್ಷದಿಂದ ಮಕ್ಕಳಿಗೆ ಶಾಲೆಯ ವಾತಾವರಣ ಎಂಬುವುದೇ ಮರೆತು ಹೋಗಿದೆ. ಎಲ್ಲರೂ ಒಟ್ಟಾಗಿ ನಕ್ಕ-ನಲಿದು ಹೋಗುವುದು, ಶಾಲೆಯಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಇವೆಲ್ಲಾ ದೂರವಾಗಿದೆ. ಕೊರೊನಾ ಬಂದಾಗಿನಿಂದ ಮಕ್ಕಳಿಗೆ ಏನಿದ್ದರೂ ಆನ್‌ಲೈನ್‌ ಕ್ಲಾಸ್‌. ಲ್ಯಾಪ್‌ ಮುಂದೆ ಅಥವಾ ಮೊಬೈಲ್‌ನಲ್ಲಿ ಪಾಠ ಕೇಳುವಂಥ ಪರಿಸ್ಥಿತಿ. ಇತ್ತ ಆನ್‌ಲೈನ್‌ ಪಾಠ ಕೇಳಲು ಮಕ್ಕಳಿಗೆ ಮನಸ್ಸಿಲ್ಲ, ಏಕೆಂದರೆ ಶಾಲೆಯಲ್ಲಿ ಪಾಠ ಕೇಳಿದಷ್ಟೂ ಎಫೆಕ್ಟಿವ್ ಅನಿಸುತ್ತಿಲ್ಲ, ಶಿಕ್ಷಕರ ಆನ್‌ಲೈನ್ ಶಿಕ್ಷಣವಲ್ಲದೆ ಬೇಗ ಮಾರ್ಗವಿಲ್ಲ.

ಹೀಗಾಗಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಒಮ್ಮೆ ಶಾಲೆ ತೆರೆದರೆ ಸಾಕು ಎಂದೇ ಬಯಸಿದ್ದರು. ಇದೀಗ ಶಾಲೆಗಳು ರೀ ಓಪನ್ ಆಗಿವೆ. ದೊಡ್ಡ ತರಗತಿಯ ಮಕ್ಕಳು ಶಾಲೆಗೆ ಹೋಗಲಾರಂಭಿಸಿದ್ದಾರೆ, ಚಿಕ್ಕ ಮಕ್ಕಳಿಗೆ ಶಾಲೆ ತೆರೆಯಲಿವೆ. ಕೊರೊನಾ ಅಲೆ ತಗ್ಗಿದೆ, ಆದರೆ ಸಂಪೂರ್ಣ ಇಲ್ಲವಾಗಿಲ್ಲ. ಆದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಪೋಷಕರು ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕು, ಶಾಲೆಯಲ್ಲೂ ಕೆಲ ಬದಲಾವಣೆಗಳಾಗಬೇಕು.

ಮಕ್ಕಳ ಸುರಕ್ಷಿತೆಗಾಗಿ ಶಾಲೆ ಹೇಗಿರಬೇಕು ಎಂದು ನೋಡುವುದಾದರೆ:

ಶಾಲೆಯ ಆವರಣದಲ್ಲಿ ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು

ಶಾಲೆಯ ಆವರಣದಲ್ಲಿ ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು

ಮಕ್ಕಳು, ಅಲ್ಲಿರುವ ಶಿಕ್ಷಕರು, ಭೋಧಕೇತರ ಸಿಬ್ಬಂದಿಗಳು ಹೀಗೆ ಶಾಲೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು.

ಮಕ್ಕಳು ಸ್ವಲ್ಪ ಕಣ್ಣು ತಪ್ಪಿದರೂ ಗುಂಪು ಸೇರುತ್ತವೆ, ಅದನ್ನು ತಡೆಯುವ ಕೆಲಸ ಶಿಕ್ಷಕರ ಹಾಗೂ ಪೋಷಕರ ಮೇಲಿದೆ. ಮಕ್ಕಳಿಗೆ ಕೊರೊನಾವೈರಸ್‌ ಕುರಿತು ಮನವರಿಕೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಬೇಕು.

ಪೋಷಕರು ,ಶಾಲೆಯಲ್ಲಿರುವ ಶಿಕ್ಷಕರು ಹಾಗೂ ಶಿಕ್ಷಕಯೇತರ ಸಿಬ್ಬಂದಿಗಳು ಲಸಿಕೆ ಹಾಕಿಸಿರಬೇಕು

ಪೋಷಕರು ,ಶಾಲೆಯಲ್ಲಿರುವ ಶಿಕ್ಷಕರು ಹಾಗೂ ಶಿಕ್ಷಕಯೇತರ ಸಿಬ್ಬಂದಿಗಳು ಲಸಿಕೆ ಹಾಕಿಸಿರಬೇಕು

ಮಕ್ಕಳಿಗೆ ಇನ್ನು ಲಸಿಕೆ ಬಂದಿಲ್ಲ. ಆದರೆ ದೊಡ್ಡವರು ಕಡ್ಡಾಯವಾಗಿ ಎರಡು ಡೋಸ್‌ ಕೊರೊನಾ ಲಸಿಕೆ ಹಾಕಿಸಿರಬೇಕು. ವ್ಯಾನ್‌ ಡ್ರೈವರ್‌ಗಳು, ಶಾಲೆಯಲ್ಲಿ ಕೆಲಸ ಮಾಡುವವರು ಪ್ರತಿಯೊಬ್ಬರಿಗೂ ಎರಡು ಡೋಸ್‌ ಲಸಿಕೆಯಾಗಿರಬೇಕು.

ಗಾಳಿಯಾಡುವ ಕೋಣೆಗಳಲ್ಲಿ ಮಕ್ಕಳನ್ನು ಕೂರಿಸಬೇಕು

ಗಾಳಿಯಾಡುವ ಕೋಣೆಗಳಲ್ಲಿ ಮಕ್ಕಳನ್ನು ಕೂರಿಸಬೇಕು

ಮಕ್ಕಳನ್ನು ಕೊಠಡಿಯೊಳಗೆ, ಸರಿಯಾಗಿ ಗಾಳಿಯಾಡದ ಕೂರಿಸಬಾರದು. ಮಕ್ಕಳ ಕ್ಲಾಸ್‌ ರೂಂ ದೊಡ್ಡದಿರಬೇಕು, ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಇರಬೇಕು. ಕೊಠಡಿಯಲ್ಲಿ ಗಾಳಿಯಾಡುವುದು ಕಡಿಮೆ, ಕೊಠಡಿಯೂ ಚಿಕ್ಕದಾಗಿದೆ ಎಂದಾದರೆ ವರಾಂಡದಲ್ಲಿ ಕೂರಲು ವ್ಯವಸ್ಥೆ ಮಾಡಿಸಿ ಕೂರಿಸಬೇಕು.

ಮಕ್ಕಳನ್ನು ಶಾಲೆಗೆ ಕಳುಹಿಸುವ ಮುನ್ನ ಕೋವಿಡ್ ಟೆಸ್ಟ್ ಮಾಡಿಸಬೇಕು

ಶಾಲೆಗಳಲ್ಲಿಯೇ ಈ ಕುರಿತು ಹೇಳಲಾಗುವುದು, ಎಲ್ಲಾ ಮಕ್ಕಳಿಗೆ ಈ ರೀತಿ ಸೂಚಿಸಲಾಗುವುದು. ಸ್ಟಾಫ್‌ಗಳಿಗೂ ಇದು ಅನ್ವಯವಾಗುವುದು.

 ಆರೋಗ್ಯ ಸಮಸ್ಯೆ ಕಾಣಿಸಿದರೆ ಶಾಲೆಗೆ ಕಳುಹಿಸಬೇಡಿ

ಆರೋಗ್ಯ ಸಮಸ್ಯೆ ಕಾಣಿಸಿದರೆ ಶಾಲೆಗೆ ಕಳುಹಿಸಬೇಡಿ

ನಿಮ್ಮ ಮನೆಯಲ್ಲಿ ಯಾರಿಗಾದರೂ ಅಥವಾ ಮಕ್ಕಳಲ್ಲಿ ಕೆಮ್ಮು, ಶೀತ ಮುಂತಾದ ರೋಗ ಲಕ್ಷಣಗಳು ಕಂಡು ಬಂದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಕೋವಿಡ್ 19 ಪರೀಕ್ಷೆ ಮಾಡಿಸಿದ ಬಳಿಕವಷ್ಟೇ ಅವರನ್ನು ಶಾಲೆಗೆ ಕಳುಹಿಸಬೇಕು.

ನಮ್ಮ ಮಕ್ಕಳ ಸುರಕ್ಷತೆ ಎಷ್ಟು ಮುಖ್ಯವೀ ಬೇರೆಯವರ ಮಕ್ಕಳ ಸುರಕ್ಷತೆ ಕೂಡ ಅಷ್ಟೇ ಮುಖ್ಯ.

ಸ್ವಲ್ಪ ಸಮಯದವರೆಗೆ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಂಡರೆ ಕೊರೊನಾ ತಡೆಗಟ್ಟಬಹುದು.

FAQ's
  • ಮಕ್ಕಳಿಗೆ 3ನೇ ಅಲೆ ಅಪಾಯಕಾರಿಯೇ?

    3ನೇ ಅಲೆ ಮಕ್ಕಳಿಗೆ ಅಪಾಯಕಾರಿಯಲ್ಲ ಎಂದು ಏಮ್ಸ್ ಹೇಳಿದೆ. 3ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ಪೋಷಕರಲ್ಲಿ ತುಂಬಾ ಆತಂಕ ಮನೆ ಮಾಡಿತ್ತು. ಆದರೆ ಅನೇಕ ಸಂಶೋಧನೆಗಳು 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲ್ಲ ಎಂದು ಹೇಳಿದೆ. ಆದರೆ ಕೊರೊನಾದಿಂದ ರಕ್ಷಿಸಲು ಪೋಷಕರು ಮುನ್ನೆಚ್ಚರಿಕೆವಹಿಸಬೇಕು. ಸಾರ್ವಜನಿಕ ಸ್ಥಳಗಳಿಗೆ ಕರೆದುಕೊಂಡು ಹೋಗುವಾಗ ಮಾಸ್ಕ್ ಧರಿಸಬೇಕು, ಮನೆಯಲ್ಲಿರುವ 18 ವರ್ಷದ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಕೊಳ್ಳಬೇಕು. ಮಕ್ಕಳನ್ನು ಹೊರಗಡೆ ಸ್ವಲ್ಪ ಸಮಯ ಆಡಲು ಬಿಡಬೇಡಿ. ಶಾಲೆಗೆ ಕಳುಹಿಸುವಾಗಲೂ ಸೂಕ್ತ ಮುನ್ನೆಚ್ಚರಿಕೆವಹಿಸಿ ಕಳಹಿಸಿ.

  • ಮೂಗು ಸೋರುತ್ತಿದ್ದರೆ ಕೋವಿಡ್ ಲಕ್ಷಣವಿರಬಹುದೇ?

    ಕೋವಿಡ್‌ 19ನ ಸಾಮಾನ್ಯ ಲಕ್ಷಣವೆಂದರೆ ಜ್ವರ, ಸುಸ್ತು ಹಾಗೂ ಒಣ ಕೆಮ್ಮು. ಕೆಲವರಲ್ಲಿ ಮೈಕೈ ನೋವು, ಮೂಗು ಸೋರುವುದು, ಮೂಗು ಕಟ್ಟುವುದು, ತಲೆನೋವು ಮುಂತಾದ ಲಕ್ಷಣಗಳು ಕಂಡು ಬರುವುದು. ನಿಮ್ಮ ಸಂಶಯ ಹೌದೇ ಅಲ್ಲವೇ ಎಂದು ದೃಢ ಪಡಿಸಲು ಕೋವಿಡ್ 19 ಪರೀಕ್ಷೆ ಮಾಡಿಸಿ.

  • ಕೊರೊನಾವೈರಸ್‌ ದೊಡ್ಡವರಿಗಿಂತ ಮಕ್ಕಳಿಗೆ ಅಪಾಯ ಕಡಿಮೆಯೇ?

    ಕೊರೊನಾವೈರಸ್‌ ಇದುವರೆಗೆ ಕಂಡು ಬಂದಂತೆ ಹೇಳುವುದಾದರೆ ಮಕ್ಕಳಿಗೆ ಅಷ್ಟು ಅಪಾಯಕಾರಿಯಾಗಿಲ್ಲ. ಕೊರೊನಾವೈರಸ್‌ ತಗುಲಿದರೂ ರೋಗ ಲಕ್ಷಣಗಳು ದೊಡ್ಡವರಿಗೆ ಆದಂತೆ ಗಂಭೀರವಾಗಿಲ್ಲ. ಮೂರನೇ ಅಲೆ ಕೂಡ ಮಕ್ಕಳ ಮೇಲೆ ಪರಿಣಾಮ ಬೀರಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

English summary

School Reopen: Things To Do To Avoid Coronavirus In Kids

School Reopen: Things To Do To Avoid Coronavirus In Kids, Read on...
X
Desktop Bottom Promotion