For Quick Alerts
ALLOW NOTIFICATIONS  
For Daily Alerts

ಬರವಣಿಗೆಯ ಅಭ್ಯಾಸ ಮಕ್ಕಳ ಭವಿಷ್ಯಕ್ಕೆ ಎಷ್ಟು ಸಹಕಾರಿ ಗೊತ್ತೆ?

|

ಮಕ್ಕಳಿಗೆ ಶಿಕ್ಷಣ ನೀಡುವ ವಿಷಯ ಬಂದಾಗ, ನಾವೆಲ್ಲರೂ ನಮಗೆ ಸಿಗದ ಅವಕಾಶಗಳನ್ನು ನಮ್ಮ ಮಕ್ಕಳಿಗೆ ನೀಡಲು ಬಯಸುತ್ತೇವೆ, ಇದರಿಂದ ಮಕ್ಕಳು ಯಾವುದರಿಂದಲೂ ವಂಚಿತರಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತೇವೆ.

ಕೊರೊನಾ ಮಾಹಾಮಾರಿ ದೇಶಕ್ಕೆ ಕಾಲಿಡುವ ಮುನ್ನ ಮಕ್ಕಳು ನಿತ್ಯ ಶಾಲೆಗೆ ಹೋಗುತ್ತಿದ್ದರು, ಸಹಪಾಠಿಗಳೆಲ್ಲ ಒಟ್ಟಾಗಿ ಕುಳಿತು ಪಾಠ ಕೆಳುತ್ತಿದ್ದರು, ನಿತ್ಯ ಶಿಕ್ಷಕರಿಂದ ನೇರ ಮಾರ್ಗದರ್ಶನ ಪಡೆಯುತ್ತಿದ್ದರು. ಹೋಂ ವರ್ಕ್‌, ಕ್ಲಾಸ್ ವರ್ಕ್‌, ನೋಟ್ಸ್‌ ಅಬ್ಬಾ ಎಷ್ಟೆಲ್ಲಾ ಓದಬೇಕು, ಬರೀಬೇಕು ಒತ್ತಡದ ನಡುವೆ ಓದುತ್ತಿದ್ದರು, ಅದೊಂಥರ ಖುಷಿ ಇರುತ್ತಿತ್ತು.

ಇದೀಗ ಆನ್‌ಲೈನ್‌ ಯುಗ ಆರಂಭವಾಗಿದೆ, ಎಲ್ಲವೂ ಆನ್‌ಲೈನ್‌ ಆಗಬಿಟ್ಟಿದೆ. ನಿತ್ಯ ಪಾಠ ಆನ್‌ಲೈನ್‌, ಶಿಕ್ಷಕರ ಭೇಟಿ ಆನ್‌ಲೈನ್‌, ಸಹಪಾಠಿಗಳ ಭೇಟಿ ಆನ್‌ಲೈನ್‌, ಇನ್ನು ಆಟದ ಕತೆಯಂತೂ ಭಯದ ನಡುವೆ ಅಲ್ಲವೆ. ಆದರೆ ಈ ಎಲ್ಲದರ ನಡುವೆ ನಮ್ಮ ಮಕ್ಕಳು ನಾವು ಗುರುಕುಲ ಪದ್ಧತಿ, ಶಾಲೆ, ಶಿಕ್ಷಣ, ಶಿಕ್ಷೆ ಎಲ್ಲವನ್ನು ತುಂಬಾ ಮಿಸ್ ಮಾಡ್ಕೊಳ್ತಾ ಇದ್ದಾರೆ.

ಇದೆಲ್ಲದರ ನಡುವೆ ಬಹಳ ಪರಿಣಾಮ ಬೀರಿರುವ ಅಂಶ ಎಂದರೆ ಬರವಣಿಗೆ. ವಾಸ್ತವವಾಗಿ, ಬರವಣಿಗೆಯು ಸಂವಹನದೊಂದಿಗೆ ತುಂಬಾ ನಿಕಟ ಸಂಬಂಧ ಹೊಂದಿದ್ದರಿಂದ ಇದು ಜೀವನದ ಕೊನೆಯವರೆಗೂ ಉಪಯುಕ್ತವಾದ ಕೌಶಲ್ಯ ಎಂದು ಹೇಳಲಾಗುತ್ತದೆ.

ನಿತ್ಯ ಶಿಕ್ಷಕರ ಭಯದಿಂದ ಹೋಂ ವರ್ಕ್‌, ಕ್ಲಾಸ್‌ ವರ್ಕ್‌ ಬರೀತಿದ್ದ ಮಕ್ಕಳು ಈಗ ನಿತ್ಯ ಮೊಬೈಲ್‌ನ ಗೀಳಿಗೆ ಬಿದ್ದಿದ್ದಾರೆ. ಬರವಣಿಗೆ ಸಂಪೂರ್ಣ ಹಿಂದಕ್ಕೆ ಸರಿದಿದೆ. ಆದರೆ ಈ ಬರವಣಿಗೆ ನಿಜಕ್ಕೂ ಮಕ್ಕಳ ಶಿಕ್ಷಣ, ಬೆಳವಣಿಗೆ, ಅವರ ಮಾನಸಿಕ ಸ್ಥಿತಿ, ಜೀವನಕ್ಕೆ ಎಷ್ಟು ಅವಶ್ಯಕ ಗೊತ್ತೆ?.

ಬನ್ನಿ ಈ ಲೇಖನದಲ್ಲಿ ಬರವಣಿಗೆ ಮಕ್ಕಳಿಗೆ ಏಕೆ ಬೇಕೇ ಬೇಕು? ಪೋಷಕರು ಏಕೆ ಮಕ್ಕಳಿಗೆ ಬರವಣಿಗೆಯ ಕಡೆ ಹೆಚ್ಚು ಕಾಳಜಿವಹಿಸಬೇಕು ಎಂದು ತಿಳಿಸಿಕೊಡಲಿದ್ದೇವೆ.

ಮಕ್ಕಳು ಬರೆಯುವುದು ಏಕೆ ಮುಖ್ಯವಾದ ಪ್ರಮುಖ ಕಾರಣಗಳು ಇಲ್ಲಿವೆ:

1. ಬರವಣಿಗೆ ಮಗುವಿನ ಶಿಕ್ಷಣದ ಪ್ರಮುಖ ಭಾಗ

1. ಬರವಣಿಗೆ ಮಗುವಿನ ಶಿಕ್ಷಣದ ಪ್ರಮುಖ ಭಾಗ

ಶಾಲೆಯಲ್ಲಿ ಬರೆಯುವುದು ಮಗುವಿನ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಶಾಲೆಗಳಲ್ಲಿ ಮಕ್ಕಳು ಕಾರ್ಯಯೋಜನೆಗಳನ್ನು ಮಾಡಬೇಕು, ಪ್ರಬಂಧಗಳನ್ನು ಬರೆಯಬೇಕು, ಪ್ರಶ್ನೆಗಳನ್ನು ಗ್ರಹಿಸಬೇಕು ಮತ್ತು ಉತ್ತರಿಸಬೇಕು ಮತ್ತು ಸಾಮಾನ್ಯವಾಗಿ ಪುಸ್ತಕಗಳ ಮೇಲೆ ವಿಷಯದ ಗ್ರಹಿಕೆಯನ್ನು ಪ್ರದರ್ಶಿಸಬೇಕು.

ಶಾಲೆಯಲ್ಲಿ ಅವರು ಎಷ್ಟು ಚೆನ್ನಾಗಿ ಅಧ್ಯಯನ ಮಾಡುತ್ತಾರೆ ಎಂಬುದು ಅವರ ಬರವಣಿಗೆ ಎಷ್ಟು ವಿವರವಾದ ಮತ್ತು ಅತ್ಯಾಧುನಿಕವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅವರು ಶಾಲೆಯನ್ನು ಪ್ರಾರಂಭಿಸಿದ ಕ್ಷಣದಿಂದ ಅವರು ಕೊನೆಗೊಳ್ಳುವವರೆಗೆ ಬರವಣಿಗೆ ಅವರ ಬದುಕಲ್ಲಿ ಒಂದಿಲ್ಲೊಂದು ಕಾರಣದಿಂದ ಇದ್ದೇ ಇರುತ್ತದೆ.

2. ಇದು ಜೀವಿತಾವಧಿಯ ಕೌಶಲ್ಯ

2. ಇದು ಜೀವಿತಾವಧಿಯ ಕೌಶಲ್ಯ

ನೀವು ಎಂದಾದರೂ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಇಮೇಲ್‌ಗಳು, ಪತ್ರ ವ್ಯವಹಾರದ ದಾಖಲೆಗಳನ್ನು ಮತ್ತೊಮ್ಮೆ ಕಣ್ಣಾಡಿಸಿದ್ದೀರಾ, ನಿಮಗೇ ಗೊತ್ತಿಲ್ಲದೆ ಇದರಲ್ಲಿ ಹಲವಾರು ಕಾಗುಣಿತ ಅಥವಾ ವಿರಾಮ ಚಿಹ್ನೆಗಳ ತಪ್ಪು ನಿಮಗೆ ಗೊತ್ತಿಲ್ಲದೆ ಇದ್ದೇ ಇರುತ್ತದೆ, ಇದು ಕೆಲವು ಸಂದರ್ಭದಲ್ಲಿ ತಪ್ಪು ಸಂದೇಶಗಳನ್ನು ಸಹ ಸಾರಬಹುದು. ಇದಕ್ಕೆ ಕಾರಣ ನಿಮ್ಮ ಚಿಕ್ಕ ವಯಸ್ಸಿನ ಬರವಣಿಗೆಯ ಅಭ್ಯಾಸ.

ಹೌದು, ನೀವು ಚಿಕ್ಕ ವಯಸ್ಸಿನಲ್ಲೇ ಹೆಚ್ಚು ರಚನಾತ್ಮಕ ಹಾಗೂ ಉತ್ತಮ ಬರಹಗಾರರಾಗಲು ಅಭ್ಯಸಿಸಿದ್ದರೆ ಇಂಥಾ ಸಮಸ್ಯೆ ಮುಂದೆ ಎದುರಿಸುವುದಿಲ್ಲ. ಇದಕ್ಕಾಗಿಯೇ ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯ ಕೌಶಲ್ಯವನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದು ಬಹಳ ಮುಖ್ಯ.

3. ಬರವಣಿಗೆ ಸಂವಹನದೊಂದಿಗೆ ಅಂತರ್ಗತವಾಗಿ ಲಿಂಕ್ ಆಗಿರುತ್ತದೆ

3. ಬರವಣಿಗೆ ಸಂವಹನದೊಂದಿಗೆ ಅಂತರ್ಗತವಾಗಿ ಲಿಂಕ್ ಆಗಿರುತ್ತದೆ

ಇತರರೊಂದಿಗೆ ಮಾತಿನ ಮೂಲಕ ಸಂವಹನ ಮಾಡುವುದರ ಜೊತೆಗೆ, ಮಕ್ಕಳು ತಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಲಿಖಿತ ಪದದ ಮೂಲಕ ಸ್ಪಷ್ಟವಾಗಿ ವ್ಯಕ್ತಪಡಿಸುವುದು ಹೇಗೆ ಎಂಬುದನ್ನು ಕಲಿಯಲೇಬೇಕಾಗುತ್ತದೆ.

ಕೆಲವು ಬಾರಿ ಮಕ್ಕಳು ತಮ್ಮ ಭಾವನೆಗಳನ್ನು ಬರವಣಿಗೆ ಮೂಲಕ ಹಂಚಿಕೊಳ್ಳಲು ಇಂಥಾ ಅಭ್ಯಾಸಗಳು ಮಕ್ಕಳಲ್ಲಿದ್ದರೆ ಪೋಷಕರಿಗೆ ಬಹಳ ಸುಲಭವಾಗುತ್ತದೆ, ಮಕ್ಕಳು ಸಹ ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲದಂತೆ ತಡೆಯಲು ಇದು ಬಹಳ ಸಹಕಾರಿ.

ಅಷ್ಟೇ ಅಲ್ಲದೆ, ನಿಸ್ಸಂಶಯವಾಗಿ ನಿಮ್ಮ ಮಗು ಉತ್ತಮವಾಗಿ ಬರೆಯಬಲ್ಲದು ಎಂದರೆ ಪರೀಕ್ಷೆಗಳ ಸಮಯದಲ್ಲಿ ಅವರು ತಮ್ಮ ಜ್ಞಾನವನ್ನು ಸಮರ್ಪಕವಾಗಿ ಮತ್ತು ಯಶಸ್ವಿಯಾಗಿ ನೀಡಬಹುದು.

4. ಬರವಣಿಗೆ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಮಸ್ಯೆಗಳನ್ನು ಹೆಚ್ಚಿಸುತ್ತದೆ

4. ಬರವಣಿಗೆ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಮಸ್ಯೆಗಳನ್ನು ಹೆಚ್ಚಿಸುತ್ತದೆ

ನಿಮ್ಮ ಮಗು ಏನನ್ನಾದರೂ ಬರೆಯುವ ಮೊದಲು ಅವರು ಏನು ಹೇಳಬೇಕೆಂದು ಮತ್ತು ಅವರು ಅದನ್ನು ಹೇಗೆ ತಾರ್ಕಿಕ ರೀತಿಯಲ್ಲಿ ಹೇಗೆ ಹೇಳಬಹುದು ಎಂಬುದರ ಕುರಿತು ಯೋಚಿಸಬೇಕು. ವಿಷಯದ ಬಗ್ಗೆ ಅವರ ಅಭಿಪ್ರಾಯಗಳು ಯಾವುವು? ಅವರು ತಲುಪಿಸಲು ಪ್ರಯತ್ನಿಸುತ್ತಿರುವ ಸಂದೇಶ ಏನು? ಅವರು ಅದನ್ನು ಅತ್ಯಂತ ಪರಿಣಾಮಕಾರಿ ಮತ್ತು ನಿರರ್ಗಳವಾಗಿ ಹೇಗೆ ತಿಳಿಸಬಹುದು? ಈ ಎಲ್ಲದಕ್ಕೂ ಮೆದುಳಿನ ಕೆಲಸ ಅತ್ಯಗತ್ಯ.

ಆದ್ದರಿಂದ ಬರವಣಿಗೆಯ ಅಭ್ಯಾಸ ಮಕ್ಕಳ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ತ್ವರಿತವಾಗಿ ಮತ್ತು ಉತ್ತಮವಾಗಿ ಸುಧಾರಿಸುತ್ತದೆ.

5. ಬರೆಯುವಿಕೆಯು ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ

5. ಬರೆಯುವಿಕೆಯು ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ

ಯಾವುದೇ ಬರವಣಿಗೆ ಅದು ಪರೀಕ್ಷೆ ಅಥವಾ ಪ್ರಬಂಧ ಇಂಥಾ ಯಾವ ಬರವಣಿಗೆ ಆದರೂ ನಿಮ್ಮ ಮಗು ಸಂಶೋಧನೆ ಮತ್ತು ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ ಅಥವಾ ಪಠ್ಯವನ್ನು ಚೆನ್ನಾಗಿ ಓದಿ ಅಭ್ಯಸಿಸ ಬೇಕಾಗುತ್ತದೆ. ಅವರ ಮನಸ್ಸಿನಲ್ಲಿರುವ ವಿಷಯವನ್ನು ಮಂಡಿಸಲು ಅವರು ಯಾವ ರೀತಿಯ ಮಾಹಿತಿಯನ್ನು ಪಡೆಯಬೇಕು? ಅವರು ಈ ಮಾಹಿತಿಯನ್ನು ಎಲ್ಲಿ ಹುಡುಕುತ್ತಾರೆ? ಈ ಮಾಹಿತಿಯನ್ನು ಕ್ರೋಢೀಕರಿಸಲು ಮತ್ತು ಕೆಲಸ ಮಾಡಲು ಅವರಿಗೆ ಲಭ್ಯವಿರುವ ಅಸಂಖ್ಯಾತ ಪುಸ್ತಕಗಳು ಮತ್ತು ಅಂತರ್ಜಾಲಗಳ ಸಂಶೋಧನೆಯಿಂದ ಉತ್ತಮವಾದ ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಚಿಕ್ಕ ವಯಸ್ಸಿನಲ್ಲೇ ಇಂಥಾ ಅಭ್ಯಾಸಗಳು ಕಾಲಾನಂತರದಲ್ಲಿ ಅನಗತ್ಯದಿಂದ ಉತ್ತಮ ಮಾಹಿತಿಯನ್ನು ಹೇಗೆ ಆಯ್ಕೆ ಮಾಡುವುದು ಎಂಬುದರ ಕುರಿತು ಜ್ಞಾನ ವೃದ್ಧಿಗೆ ಸಹಕಾರವಾಗುತ್ತದೆ.

6. ಸ್ಮರಣ ಶಕ್ತಿಗೆ ಸಹಕಾರಿ

6. ಸ್ಮರಣ ಶಕ್ತಿಗೆ ಸಹಕಾರಿ

ವಿದ್ಯಾರ್ಥಿಗಳ ಸ್ಮರಣ ಶಕ್ತಿ ವೃದ್ಧಿಗೆ, ಅಧ್ಯಯನ ಮಾಡಲು ಮತ್ತು ಕಲಿಯಲು ಉತ್ತಮ ಮಾರ್ಗಗಳು ಯಾವುವು ಎಂದು ಯಾವುದೇ ಶಿಕ್ಷಕರನ್ನು ಕೇಳಿ ನೋಡಿ, ಅವರು ಮೊದಲು ಹೇಳುವುದೇ ಟಿಪ್ಪಣಿಗಳನ್ನು ಬರೆಯುವುದು.

ಬರವಣಿಗೆಯು ನಿಮ್ಮ ಮಗುವಿನಲ್ಲಿ ಕಲಿಕೆ ಜತೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಯಾವುದೇ ಗೊಂದಲ ಇಲ್ಲದೆ ಬರವಣಿಗೆಯನ್ನು ಮುಂದುವರೆಸಲು ಸತತ ಬರವಣಿಗೆ ಬೇಕೇ ಬೇಕು. ಪ್ರತಿ ಬಾರಿ ಬರೆಯುವಾಗ ಅವರ ಎಡ ಮತ್ತು ಬಲ ಮೆದುಳು ಕಾರ್ಯರೂಪಕ್ಕೆ ಬರುತ್ತದೆ, ಏಕೆಂದರೆ ಅವರು ಇನ್ನೊಬ್ಬ ವ್ಯಕ್ತಿಯು ಓದಬಲ್ಲ ಮತ್ತು ಅರ್ಥಮಾಡಿಕೊಳ್ಳಬಹುದಾದ ಯಾವುದನ್ನಾದರೂ ಬರೆಯಬೇಕು ಎಂದು ಮನಸ್ಸು ಬಯಸಿರುತ್ತದೆ.

7. ಬರವಣಿಗೆ ಉತ್ತಮ ಥೆರಪಿ

7. ಬರವಣಿಗೆ ಉತ್ತಮ ಥೆರಪಿ

ಮಾತನಾಡುವ ಮೂಲಕ ಸುಲಭವಾಗಿ ವ್ಯಕ್ತಪಡಿಸಲಾಗದ ಅದೆಷ್ಟೋ ಭಾವನೆಗಳನ್ನು ವ್ಯಕ್ತಪಡಿಸಲು ಬರವಣಿಗೆ ಬಹಳ ಸಹಾಯ ಮಾಡುವುದರಿಂದ ಬರವಣಿಗೆ ವೇಗವರ್ಧಕವಾಗಿದೆ. ಇದೊಂದು ಚಿಕಿತ್ಸಕ ಎಂದರೂ ತಪ್ಪಾಗಲಾರದು. ನಾವು ಕಥೆಗಳನ್ನು ಬರೆಯುತ್ತಿರಲಿ ಅಥವಾ ನಮ್ಮ ರಹಸ್ಯ ದಿನಚರಿಯಲ್ಲಿ ನಮ್ಮ ಹೃದಯದ ಮಾತುಗಳನ್ನು, ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಅರ್ಥಪೂರ್ಣ ರೀತಿಯಲ್ಲಿ ಅಚ್ಚು ಇಳಿಸಲು ಬರವಣಿಗೆ ಉತ್ತಮ ಮಾರ್ಗವಾಗಿದೆ.

ಇದು ನಮ್ಮ ತಲೆಯಲ್ಲಿರುವ ಅದೆಷ್ಟೋ ವಿಷಯಗಳು, ತುಮುಲಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ವಿಚಾರಗಳನ್ನು ಸ್ಪಷ್ಟಪಡಿಸಲು, ನಮ್ಮ ಮನಸ್ಸಿನಿಂದ ವಿಷಯಗಳನ್ನು ಹೊರಹಾಕುವ ಮೂಲಕ ಅಂತರ್ಗತ ಶಕ್ತಿ ಮತ್ತು ನಿರ್ದೇಶನವನ್ನು ನೀಡುತ್ತದೆ. ಇದು ಅಂತಿಮವಾಗಿ ಸ್ಪಷ್ಟತೆಯನ್ನು ತೋರುತ್ತದೆ. ನಿಮ್ಮ ಮನಸ್ಸಿನ

ವಿಷಯಗಳನ್ನು ಬರೆಯುವುದರಿಂದ ನಿಮಗೂ ವ್ಯತ್ಯಾಸವಿದೆಯೇ ಎಂದು ನೋಡಿಕೊಳ್ಳು, ಪರೀಕ್ಷಿಸಲು ಪೂರಕವಾಗಿದೆ.

8. ಬರವಣಿಗೆ ಸ್ವಯಂ ಅಭಿವ್ಯಕ್ತಿಯ ಅತ್ಯುತ್ತಮ ರೂಪವಾಗಿದೆ

8. ಬರವಣಿಗೆ ಸ್ವಯಂ ಅಭಿವ್ಯಕ್ತಿಯ ಅತ್ಯುತ್ತಮ ರೂಪವಾಗಿದೆ

ಸಂಗೀತ ಮತ್ತು ಸೃಜನಶೀಲ ಕಲೆಯಂತೆಯೇ ಬರವಣಿಗೆ ಕೂಡಾ ಒಂದು ಕಲೆಯೇ ಹೌದು. ಅದ್ಭುತ ಪುಸ್ತಕಗಳು, ಪತ್ರಿಕೆಯ ಲೇಖನಗಳಲ್ಲಿ ಯಾರಾದರೂ ದೀರ್ಘವಾದ ಪದಗಳನ್ನು ಒಟ್ಟಿಗೆ ಕಟ್ಟುವ ಮೂಲಕ ರಚಿಸಲಾಗಿರುತ್ತದೆ, ಇದು ಸಾಮಾನ್ಯದ ಸಂಗತಿ ಖಂಡಿತ ಅಲ್ಲ.

ಪೋಷಕರು ದಯವಿಟ್ಟು ಈ ಸಂಗತಿಯನ್ನು ನೆನಪಿನಲ್ಲಿಡಿ: ಪ್ರತಿ ಮಗುವೂ ತಮ್ಮದೇ ಆದ ವಿಶಿಷ್ಟ ಧ್ವನಿಯೊಂದಿಗೆ ಜನಿಸುತ್ತದೆ, ಅದು ಬರವಣಿಗೆಯಲ್ಲಿ ವ್ಯಕ್ತವಾಗುತ್ತದೆ.

ಅವರು ವಿಶೇಷ ಶೈಲಿಯನ್ನು ಹೊಂದಿದ್ದು ಅದನ್ನು ಪ್ರೋತ್ಸಾಹಿಸಬೇಕು. ಬಹುಶಃ ನಿಮ್ಮ ಮಗುವಿನಲ್ಲಿ ಉತ್ತಮ ಹಾಸ್ಯಾಸ್ಪದ ಗುಣ ಇರಬಹುದು, ಬಹುಶಃ ಅವರಲ್ಲಿ ಅನನ್ಯ ವ್ಯಕ್ತಿತ್ವವು ಉಡುಗೊರೆಯಾಗಿರಬಹುದು ಮತ್ತು ಈ ಮನೋಭಾವವು ಅವರ ಬರವಣಿಗೆಯ ಮೂಲಕ ಹೊರಬರುವ ಸಾಧ್ಯತೆ ಹೆಚ್ಚಿರುತ್ತದೆ.

English summary

Reasons Why Writing Is Important for Kids

Here we are discussing about Reasons Why Writing Is Important for Kids, how it effects on them. because writing is so closely tied with communication I dare say it is a skill that is useful right until the end of life. Read more.
X