For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಕಂಡು ಬರುತ್ತಿದೆ ಈ ಆರೋಗ್ಯ ಸಮಸ್ಯೆ

|

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಾಗ ಅಬ್ಬಾ.. ಅಂತೂ ಕೊರೊನಾ ಕಪಿಮುಷ್ಠಿಯಿಂದ ಪಾರಾದೆವು ಅಂದುಕೊಳ್ಳುವಷ್ಟರಲ್ಲಿ ಕೋವಿಡ್ 19 ನಂತರ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆಗಳು ಜನರಲ್ಲಿ ಆತಂಕ ಹೆಚ್ಚಿಸಿದೆ. ಅದರಲ್ಲೂ ಕೊರೊನಾ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆ ಪೋಷಕರ ಚಿಂತೆಗೆ ಕಾರಣವಾಗಿದೆ.

Post Covid-19 Symptoms in Kids

ಕೋವಿಡ್‌ 19ನಿಂದ ಗುಣಮುಖರಾದ ಮಕ್ಕಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ, ತಲೆನೋವು, ಮಾನಸಿಕ ಒತ್ತಡ ( brain fog), ಉಸಿರಾಟದದ ತೊಂದರೆಯ ಸಮಸ್ಯೆಗಳು ಕಂಡು ಬರುತ್ತಿವೆ ಎಂದು ದೆಹಲಿಯ ಆಸ್ಪತ್ರೆಯ ಮೂಲಗಳು ತಿಳಿಸಿವೆ.

 ತಜ್ಞರು ಹೇಳುವುದಾದರೂ ಏನು?

ತಜ್ಞರು ಹೇಳುವುದಾದರೂ ಏನು?

ಯಾವ ಮಕ್ಕಳಿಗೆ ಕೋವಿಡ್ 19 ಸೋಂಕು ತಗುಲಿ ರೋಗ ಲಕ್ಷಣಗಳು ತೀವ್ರವಾಗಿತ್ತೋ ಅಂಥ ಮಕ್ಕಳಲ್ಲಿ ಈ ರೀತಿಯ ತೊಂದರೆಗಳು ಕಂಡು ಬರುತ್ತಿವೆ. ಕೋವಿಡ್ 19ನಿಂದ ಚೇತರಿಸಿದ 3-4 ತಿಂಗಳವರೆಗೆ ಈ ಸಮಸ್ಯೆಗಳು ಕಂಡು ಬರುತ್ತಿವೆ, ಕೆಲ ಮಕ್ಕಳು ಚೇತರಿಸಿಕೊಳ್ಳುವುದು ನಿಧಾನವಾಗುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

 ಹೆಚ್ಚಿನ ರೋಗಿಗಳಲ್ಲಿ ಬೇಧಿ, ತಲೆಸುತ್ತು, ಮೈಕೈ ನೋವು, ಜೀರ್ಣಕ್ರಿಯೆಗೆ ತೊಂದರೆ

ಹೆಚ್ಚಿನ ರೋಗಿಗಳಲ್ಲಿ ಬೇಧಿ, ತಲೆಸುತ್ತು, ಮೈಕೈ ನೋವು, ಜೀರ್ಣಕ್ರಿಯೆಗೆ ತೊಂದರೆ

ಕೋವಿಡ್‌ 19ನಿಂದ ಚೇತರಿಸಿದ ಶೇ 1-2ರಷ್ಟು ಮಕ್ಕಳಲ್ಲಿ ಮಲ್ಟಿ ಸಿಸ್ಟಮ್‌ ಇನ್‌ಫ್ಲೇಮಟರಿ ಸಿಂಡ್ರೋಮ್ ಅಥವಾ ಎಂಐಎಸ್‌ಸಿ ಸಮಸ್ಯೆ ಕಂಡು ಬರುತ್ತಿದೆ' ಎಂದು ಪೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ. ರಾಹುಲ್ ನಾಗ್‌ಪಾಲ್‌ ಹೇಳಿದ್ದಾರೆ ಎಂದು ಪಿಟಿಐ ವರದಿ ಹೇಳಿದೆ.

ಹಲವು ರೋಗಿಗಳಲ್ಲಿ ಬೇಧಿ, ತಲೆಸುತ್ತು, ಮೈಕೈ ನೋವು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತಿವೆ. ಈ ರೀತಿಯ ರೋಗ ಲಕ್ಷಣಗಳು ಕೋವಿಡ್‌ 19 ಸೋಂಕಿನಿಂದಲೇ ಕಂಡು ಬರುತ್ತಿದೆಯೇ ಅಥವಾ ಇನ್ನಿತರ ಕಾರಣಗಳಿಂದ ಉಂಟಾಗುತ್ತಿದೆಯೇ ಎಂಬುವುದರ ಬಗ್ಗೆ ಅಧ್ಯಯನಗಳಿಂದ ಇನ್ನಷ್ಟೇ ತಿಳಿಯಬೇಕಾಗಿದೆ.

ಬ್ರೈನ್‌ಫಾಗ್ ಅಥವಾ ಮಾನಸಿಕ ಒತ್ತಡದ ಸಮಸ್ಯೆ

ಬ್ರೈನ್‌ಫಾಗ್ ಅಥವಾ ಮಾನಸಿಕ ಒತ್ತಡದ ಸಮಸ್ಯೆ

ಕೋವಿಡ್‌ 19 ನಂತರದ ಸಮಸ್ಯೆಗಳಲ್ಲಿ ಬ್ರೈನ್‌ ಫಾಗ್ ಕೂಡ ಒಂದು. ಅಂದ್ರೆ ಓದಿದ್ದು ಮರೆತು ಹೋಗುವುದು, ಮಕ್ಕಳು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಈ ರೀತಿಯ ತೊಂದರೆಗಳು ಕಂಡು ಬರುತ್ತಿವೆ.

ಕೊರೊನಾ ಕಾರಣದಿಂದಾಗಿ ಮಕ್ಕಳು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದ ಕಾರಣ ಇತರ ಮಕ್ಕಳ ಜೊತೆ ಬೆರೆಯದೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದು ಎಂದು ಮಾನಸಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಮಕ್ಕಳು ಕೊರೊನಾದಿಂದಾಗಿ ತಮ್ಮ ಕುಟುಂಬದ ಸದಸ್ಯರು ಸಾವನ್ನಪ್ಪಿರುವುದು ನೋಡಿದ್ದಾರೆ. ಇವೆಲ್ಲಾ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿ ಅವರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿರಬಹುದು ಎಂದು ಮ್ಯಾಕ್ಸ್ ಆಸ್ಪತ್ರೆಯ ಮಾನಸಿಕ ತಜ್ಞ ಡಾ. ಶ್ಯಾಮ್‌ ಕುರ್ಜೆಜಾ ಹೇಳಿದ್ದಾರೆ.

ಡೆಲ್ಟಾ ಪ್ಲಸ್‌ ಮಕ್ಕಳಿಗೆ ಅಪಾಯಕಾರಿಯೇ?

ಡೆಲ್ಟಾ ಪ್ಲಸ್‌ ಮಕ್ಕಳಿಗೆ ಅಪಾಯಕಾರಿಯೇ?

ಈಗ ಕಂಡು ಬರುತ್ತಿರುವ ಡೆಲ್ಟಾ ಪ್ಲಸ್‌ ವೈರಸ್‌ 18 ವರ್ಷ ಕೆಳಗಿನ ಮಕ್ಕಳಿಗೆ ಅಪಾಯಕಾರಿಯಾಗಬಹುದು ಎಂದು ಕೆಲ ತಜ್ಞರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲ ತಜ್ಞರು ಈ ರೂಪಾಂತರ ವೈರಸ್‌ ಅಷ್ಟೇನು ಗಂಭೀರ ಸ್ವರೂಪದ್ದಲ್ಲ, ಆದ್ದರಿಂದ ಭಯ ಪಡಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಲಸಿಕೆ ಡ್ರೈವ್‌ ನಡೆಯುತ್ತಿದ್ದು ಬಹುತೇಕ ಎಲ್ಲರಿಗೆ ಲಸಿಕೆ ಸಿಕ್ಕರೆ ಈ ವೈರಸ್‌ ತಡೆಗಟ್ಟುವುದು ಸುಲಭವಾಗುವುದು.

English summary

Post Covid-19 Symptoms In Kids : Kids Complain Like Breathlessness, Headache in Delhi

Post Covid-19 Symptoms in Kids : Kids complain like breathlessness, headache in Delhi,read on...
Story first published: Monday, July 19, 2021, 9:04 [IST]
X
Desktop Bottom Promotion