For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಸಂಕಷ್ಟ ಕಾಲದಲ್ಲಿ ಮಕ್ಕಳ ಪೋಷಣೆ ಹೀಗಿರಲಿ

|

ಕೋವಿಡ್-19 ಎನ್ನುವ ಮಹಾಮಾರಿಯು ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಅಂದರೆ ಎಲ್ಲರೂ ಕೆಲಸ ಕಾರ್ಯಗಳನ್ನು ಬಿಟ್ಟು ಮನೆಯಲ್ಲೇ ಇರುವಂತೆ ಆಗಿದೆ. ಕೊರೋನಾ ವಾರಿಯರ್ಸ್ ಆಗಿರುವಂತಹ ವೈದ್ಯರು, ನರ್ಸ್ ಗಳು ಹಾಗೂ ಪೊಲೀಸರು ಮಾತ್ರ ಹೊರಗಡೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Parenting During Covid 19 You Must Know

ಅದೇ ರೀತಿಯ ಬೇಸಗೆ ರಜೆಯಲ್ಲಿ ಮಜಾ ಮಾಡಬೇಕಾಗಿದ್ದ ಮಕ್ಕಳು ಕೂಡ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಇಂತಹ ಸಮಯದಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುವುದು ತುಂಬಾ ಸವಾಲಿನ ಕೆಲಸವಾಗಿರುವುದು. ಯಾಕೆಂದರೆ ಮಕ್ಕಳಿಗೆ ಇಡೀ ದಿನ ಮನೆಯಲ್ಲಿ ಕುಳಿತುಕೊಂಡು ಬೇಸರ ಮೂಡುವುದು. ಇಷ್ಟು ಮಾತ್ರವಲ್ಲದೆ, ಕೆಲವು ಪೋಷಕರು ಮನೆಯಲ್ಲೇ ಇದ್ದುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಪೋಷಣೆ ಮಾಡುವುದು ಅವರಿಗೆ ಒಂದು ಸವಾಲಾಗಿದೆ. ಇಂತಹ ಸಮಯದಲ್ಲಿ ಏನು ಮಾಡಬೇಕು ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

1. ಸಮಯ ನಿಗದಿ ಮಾಡಿಕೊಳ್ಳಿ

1. ಸಮಯ ನಿಗದಿ ಮಾಡಿಕೊಳ್ಳಿ

ಮನೆಯಲ್ಲೇ ಮಕ್ಕಳು, ದೊಡ್ಡವರು ಎಲ್ಲರೂ ಈಗ ಒತ್ತಡಕ್ಕೆ ಸಿಲುಕಿರುವುದು ನಿಜ. ಆದರೆ ಇಂತಹ ಸಮಯದಲ್ಲಿ ಮಕ್ಕಳೊಂದಿಗೆ ಒಂದು 20 ನಿಮಿಷ ಕಳೆದರೂ ಅದು ತುಂಬಾ ಪರಿಣಾಮಕಾರಿ ಆಗಿರುವುದು. ಒಂದು ಸಮಯ ನಿಗದಿ ಮಾಡಿಕೊಂಡು ಆ ವೇಳೆಯಲ್ಲಿ ನೀವು ಮಕ್ಕಳೊಂದಿಗೆ ಕಳೆಯಿರಿ. ಇದರಿಂದ ಮಕ್ಕಳು ತುಂಬಾ ಸಂತೋಷ ಪಡುವರು.

2. ಮಕ್ಕಳಲ್ಲಿ ಕೇಳಿ

2. ಮಕ್ಕಳಲ್ಲಿ ಕೇಳಿ

ಮಕ್ಕಳು ತಮಗೆ ಇಷ್ಟವಾಗಿರುವ ಹವ್ಯಾಸ ಅಥವಾ ಸಂಗೀತ, ಡ್ರಾಯಿಂಗ್ ಇತ್ಯಾದಿಗಳಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡಿ. ಇದರಿಂದ ಅವರಲ್ಲಿನ ಕ್ರಿಯಾತ್ಮಕತೆ ಹೊರಗೆ ಬರುವುದು ಮತ್ತು ಅವರು ದೀರ್ಘಕಾಲ ಇದರಲ್ಲಿ ವ್ಯಸ್ತರಾಗಿ ಇರುವರು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವ ಕಾರಣದಿಂದಾಗಿ ಕೆಲವು ಚಟುವಟಿಕೆ ಮಾಡಲು ಸಾಧ್ಯವಿಲ್ಲವೆಂದು ಅವರಿಗೆ ಹೇಳಿ.

3. ಜತೆಯಾಗಿ ಅಡುಗೆ ಮಾಡಿ

3. ಜತೆಯಾಗಿ ಅಡುಗೆ ಮಾಡಿ

ನಿಮ್ಮ ಮಕ್ಕಳು ಹದಿಹರೆಯದವರಾಗಿದ್ದರೆ ಆಗ ನೀವು ಅವರೊಂದಿಗೆ ಸೇರಿ ಅವರಿಗೆ ಇಷ್ಟವಾದ ಅಡುಗೆ ಮಾಡಿಕೊಳ್ಳಿ. ಮಕ್ಕಳಿಗೆ ಇಷ್ಟವಾಗಿರುವಂತಹ ಸ್ಯಾಂಡ್ ವಿಚ್, ತಯಾರಿಸಿ. ಇದನ್ನು ಹೇಗೆ ತಯಾರಿಸುವುದು ಮತ್ತು ಅಲಂಕರಿಸುವುದು ಎಂದು ಮಕ್ಕಳಿಗೆ ತಿಳಿಸಿ.

4. ಟಿವಿಯಿಂದ ದೂರವಿರಿ

4. ಟಿವಿಯಿಂದ ದೂರವಿರಿ

ದೀರ್ಘಕಾಲ ತನಕ ಮಕ್ಕಳು ಟಿವಿ ನೋಡುವುದರಿಂದ ಅವರ ಕಣ್ಣುಗಳ ಮೇಲೆ ಪರಿಣಾಮ ಬೀರುವುದು. ಇದರಿಂದ ಮಕ್ಕಳನ್ನು ಪುಸ್ತಕ ಓದುವುದು, ಡ್ರಾಯಿಂಗ್ ಅಥವಾ ಡ್ಯಾನ್ಸ್ ನಲ್ಲಿ ವ್ಯಸ್ತವಾಗಿರುವಂತೆ ಮಾಡಿ. ಅವರ ಆರೋಗ್ಯವನ್ನು ಈ ವೇಳೆ ಗಮನದಲ್ಲಿಟ್ಟುಕೊಂಡು ಇದನ್ನು ಮಾಡಿ. ಇದರಿಂದಾಗಿ ಅವರ ಕ್ರಿಯಾತ್ಮಕತೆ ಹಾಗೂ ನಡವಳಿಕೆಯು ಉತ್ತಮವಾಗುವುದು.

5. ಜತೆಯಾಗಿ ವ್ಯಾಯಾಮ ಮಾಡಿ

5. ಜತೆಯಾಗಿ ವ್ಯಾಯಾಮ ಮಾಡಿ

ಮನೆಯಲ್ಲೇ ಇದ್ದುಕೊಂಡು ನೀವು ಕೆಲವೊಂದು ವ್ಯಾಯಾಮ ಮತ್ತು ಯೋಗ ಮಾಡಬಹುದು. ಇದರಲ್ಲಿ ನೀವು ಮಕ್ಕಳನ್ನು ಕೂಡ ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಫೇವರೆಟ್ ಸಂಗೀತ ಹಾಕಿಕೊಂಡು ವ್ಯಾಯಾಮ ಮಾಡಿ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಅವರು ಸದೃಢರಾಗಿರುವರು.

6. ಕೇಳಿ

6. ಕೇಳಿ

ಪ್ರತಿನಿತ್ಯವೂ ಏನಾದರೂ ಹೊಸತು ಕೊವಿಡ್-19 ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದರ ಬಗ್ಗೆ ನಿಮ್ಮ ಮಕ್ಕಳು ಕೂಡ ಕೇಳುತ್ತಿರಬಹುದು. ಆದರೆ ನೀವು ಕೊವಿಡ್-19 ಬಗ್ಗೆ ಸುಮ್ಮನಿದ್ದರೆ ಆಗ ಮಕ್ಕಳಿಗೆ ಅದರಿಂದ ರಕ್ಷಿಸುವ ವಿಧಾನ ಹೇಗೆ ಎಂದು ತಿಳಿಯದಂತೆ ಆಗುವುದು. ಮಕ್ಕಳಿಗೆ ಸರಿಯಾದ ಮಾಹಿತಿ ಇಲ್ಲದೆ ಸೋಂಕು ತಗುಲಬಹುದು. ಇದರಿಂದಾಗಿ ನೀವು ಮಕ್ಕಳೊಂದಿಗೆ ಇದರ ಬಗ್ಗೆ ಮುಕ್ತವಾಗಿ ಮಾತನಾಡಿ ಮತ್ತು ಕೊವಿಟ್ 19 ಬಗ್ಗೆ ಅವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ಇರುವಂತೆ ನೋಡಿಕೊಳ್ಳಿ.

7. ಸತ್ಯವನ್ನೇ ಹೇಳಿ

7. ಸತ್ಯವನ್ನೇ ಹೇಳಿ

ಮಕ್ಕಳು ಕೊವಿಡ್-19 ಬಗ್ಗೆ ಯಾವುದೇ ಪ್ರಶ್ನೆ ಕೇಳಿದರೆ ನಿಮಗೆ ಉತ್ತರ ನೀಡಲು ಸಾಧ್ಯವಾಗದೆ ಇದ್ದರೆ ಆಗ ನೀವು ಅವರಿಗೆ ತಪ್ಪು ಉತ್ತರ ನೀಡಲು ಹೋಗಬೇಡಿ. ನಿಮಗೆ ಕೆಲವು ವಿಚಾರಗಳು ತಿಳಿಯದೆ ಇರಬಹುದು. ಆದರೆ ಇದರ ಬಗ್ಗೆ ಮಕ್ಕಳಿಗೆ ಹೇಳಿ. ಆದರೆ ತಪ್ಪು ಮಾಹಿತಿ ಮಕ್ಕಳಿಗೆ ನೀಡಬೇಡಿ. ಮಕ್ಕಳ ವಯಸ್ಸು ಮತ್ತು ಅದನ್ನು ಅರ್ಥ ಮಾಡಿಕೊಳ್ಳುವ ಮಟ್ಟವನ್ನು ನೋಡಿಕೊಂಡು ಅವರಿಗೆ ಮಾಹಿತಿ ನೀಡಿ.

8. ಮಕ್ಕಳನ್ನು ಬೆಂಬಲಿಸಿ

8. ಮಕ್ಕಳನ್ನು ಬೆಂಬಲಿಸಿ

ಲಾಕ್ ಡೌನ್ ನಿಂದಾಗಿ ದೊಡ್ಡವರು ಕೂಡ ಮುಂದಿನ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ಸಮಯದಲ್ಲಿ ಮಕ್ಕಳು ಕೂಡ ಆತಂಕಕ್ಕೆ ಒಳಗಾಗುವುದು ಸಹಜ. ಆದರೆ ಮಕ್ಕಳನ್ನು ಬೆಂಬಲಿಸಿ ಮತ್ತು ಪ್ರಸಕ್ತ ಪರಿಸ್ಥಿತಿಯಲ್ಲಿ ಅವರ ಭಾವನೆಗಳು ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಲು ಹೇಳಿ. ಭಾವನೆಗಳನ್ನು ಹಂಚಿಕೊಂಡರೆ ಒತ್ತಡ ಕಡಿಮೆ ಆಗುವುದು ಮತ್ತು ಆತಂಕ ಕೂಡ. ಮಾನಸಿಕವಾಗಿ ಯಾವುದೇ ಪರಿಸ್ಥಿತಿಗೆ ಮಗುವನ್ನು ತಯಾರುಗೊಳಿಸಿ. ಅವರೊಂದಿಗೆ ನೀವು ಸದಾ ಇರುತ್ತೀರಿ ಎಂದು ಭರವಸೆ ಮೂಡಿಸಿ.

English summary

Tips for Parenting During the Coronavirus (Covid-19) Outbreak

During Covid 19 lockdown time parents may feel difficult to handle kids, Here parenting tips, it will help you to make your kids more creative, Read on.
X
Desktop Bottom Promotion