For Quick Alerts
ALLOW NOTIFICATIONS  
For Daily Alerts

ಒಮಿಕ್ರಾನ್‌: 5 ವರ್ಷದ ಕೆಳಗಿನ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಈ ಸೋಂಕು

|

ಒಮಿಕ್ರಾನ್‌ ವೈರಸ್‌ ತುಂಬಾ ವೇಗವಾಗಿ ಹರಡುತ್ತಿದೆ. ಅದರಲ್ಲೂ 5 ವರ್ಷದ ಕೆಳಗಿನ ಮಕ್ಕಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ ಎಂದು ದಕ್ಷಿಣ ಆಫ್ರಿಕದ ಕೊರೊನಾ ಕೇಸ್‌ಗಳ ಮೇಲೆ ನಡೆಸಿದ ಅಧ್ಯಯನ ವರದಿ ಹೇಳಿದೆ.

ದಕ್ಷಿಣ ಆಫ್ರಿಕದಲ್ಲಿ 5 ವರ್ಷ ಕೆಳಗಿನ ಮಕ್ಕಳು ಹಾಗೂ ಹದಿಹರೆಯದ ಪ್ರಾಯದವರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ಆದರೆ ಮಕ್ಕಳ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರುತ್ತಿಲ್ಲ ಎಂದು ದಕ್ಷಿಣ ಆಫ್ರಿಕದ ಆರೋಗ್ಯ ಕಾರ್ಯಕರ್ತರು ಹೇಳುತ್ತಿದ್ದಾರೆ.

ಕಳೆದ ಎರಡು ಕೊರೊನಾ ಅಲೆಯಲ್ಲಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು ತುಂಬಾ ಕಡಿಮೆ, ಆದರೆ ಕೊರೊನಾ 3ನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಮಕ್ಕಳ ಸಮಖ್ಯೆ ಹೆಚ್ಚಿದೆ. 5 ವರ್ಷದ ಮಕ್ಕಳು ಹಾಗೂ 5-19 ವರ್ಷದ ಪ್ರಾಯದವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ.

3ನೇ ಅಲೆಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿದೆ ಸೋಂಕು

3ನೇ ಅಲೆಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿದೆ ಸೋಂಕು

ದಕ್ಷಿಣ ಅಫ್ರಿಕದ ತ್ಶ್ವಾನೆ ನಗರದಲ್ಲಿ 2ನೇ ಅಲೆಯಲ್ಲಿ20ಕ್ಕೂ ಕಡಿಮೆ ಮಕ್ಕಳು ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಒಮಿಕ್ರಾನ್‌ ವೈರಸ್‌ ಪತ್ತೆಯಾದ ಮೇಲೆ ನ.14-27ರಷ್ಟರಲ್ಲಿ 100ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಒಮಿಕ್ರಾನ್‌ ಮಕ್ಕಳ ಮೇಲೆ ಇದುವರೆಗೆ ಗಂಭೀರ ಪರಿಣಾಮ ಬೀರಿಲ್ಲ

ಒಮಿಕ್ರಾನ್‌ ಮಕ್ಕಳ ಮೇಲೆ ಇದುವರೆಗೆ ಗಂಭೀರ ಪರಿಣಾಮ ಬೀರಿಲ್ಲ

ಒಮಿಕ್ರಾನ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಮಕ್ಕಳ ಮೇಲೆ ಈ ವೈರಸ್‌ ಗಂಭೀರ ಪರಿಣಾಮ ಬೀರಿಲ್ಲ. ಆಸ್ಪತ್ರೆಗೆ ದಾಖಲಾದ ಮಕ್ಕಳು ಗುಣಮುಖರಾಗುತ್ತಿದ್ದಾರೆ.

ಏಕೆ ಮಕ್ಕಳಲ್ಲಿ ಒಮಿಕ್ರಾನ್‌ ಹೆಚ್ಚಾಗಿ ಕಂಡು ಬರುತ್ತಿದೆ?

ಏಕೆ ಮಕ್ಕಳಲ್ಲಿ ಒಮಿಕ್ರಾನ್‌ ಹೆಚ್ಚಾಗಿ ಕಂಡು ಬರುತ್ತಿದೆ?

ದಕ್ಷಿಣ ಆಫ್ರಿಕದಲ್ಲಿ 12 ವರ್ಷದ ಕೆಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿಲ್ಲ. ಇದೂ ಒಂದು ಕಾರಣವಾಗಿರಬಹುದು. ವೈದ್ಯರು ಹೇಳುವ ಪ್ರಕಾರ ಕೊರೊನಾ ಲಸಿಕೆ ಪಡೆಯದ ಪೋಷಕರು ಹಾಗೂ ಅವರ ಮಕ್ಕಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ.

ಒಮಿಕ್ರಾನ್‌ ವಿರುದ್ಧ ಲಸಿಕೆ ಪರಿಣಾಮಕಾರಿಯೇ?

ಒಮಿಕ್ರಾನ್‌ ವಿರುದ್ಧ ಲಸಿಕೆ ಪರಿಣಾಮಕಾರಿಯೇ?

ಒಮಿಕ್ರಾನ್‌ ತಡೆಗಟ್ಟುವಲ್ಲಿ ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂದು ಇನ್ನೂ ಸಾಬೀತಾಗಿಲ್ಲ. ಇದುವರೆಗೆ ಪತ್ತೆಯಾದ ಒಮಿಕ್ರಾನ್‌ ಕೇಸ್‌ಗಳನ್ನು ನೋಡಿದಾಗ ಕೋವಿಡ್‌ ಲಸಿಕೆ ಪಡೆದವರಿಗಿಂತ ಪಡೆಯದೇ ಇರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ ಅಲ್ಲದೆ ಲಸಿಕೆ ಪಡೆಯದೇ ಇರುವವರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ . ಕೊರೊನಾ ಲಸಿಕೆ ಪಡೆದವರಿಗೂ ಒಮಿಕಾನ್‌ ತಗುಲುತ್ತಿದೆ, ಆದರೆ ಕೊರೊನಾ ತಗುಲುವ ಅಪಾಯ 3 ಪಟ್ಟು ಕಡಿಮೆ ಇದೆ ಎಂದು ಅಧ್ಯಯನ ವರದಿಗಳು ಹೇಳಿವೆ.

ಕೊರೊನಾ ತಡೆಗಟ್ಟಲು ಮುಂಜಾಗ್ರತೆ ಕ್ರಮಗಳೇನು?

ಕೊರೊನಾ ತಡೆಗಟ್ಟಲು ಮುಂಜಾಗ್ರತೆ ಕ್ರಮಗಳೇನು?

* ಲಸಿಕೆ ಪಡೆಯದೇ ಇರುವವರು ಲಸಿಕೆ ಪಡೆಯಿರಿ.

* ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸಿ

* ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ.

* ಸಾಮಾಜಿಕ ಅಂತರ ಕಾಪಾಡಿ.

English summary

Omicron: Hospitalizations Increased Among Kids Under 5 in South Africa

Omicron: Hospitalizations Increased Among Kids Under 5 in South Africa, Read on....
Story first published: Tuesday, December 7, 2021, 13:35 [IST]
X
Desktop Bottom Promotion