For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಡ್ರೈ ಫ್ರೂಟ್ಸ್‌: ಪ್ರಯೋಜನಗಳು ಹಾಗೂ ಅಡ್ಡಪರಿಣಾಮಗಳು

|

ಮಕ್ಕಳಿಗೆ ನೀಡಲಾಗುವ ಆಹಾರ ಪೌಷ್ಟಿಕ ಹಾಗೂ ಆರೋಗ್ಯಕರವಾಗಿರುವುದು ಅಗತ್ಯವಾಗಿದೆ. ಮಕ್ಕಳ ಬೆಳವಣಿಗೆಗೆ ಇದು ಅಗತ್ಯವಾಗಿದೆ ಹಾಗೂ ಯಾವುದೇ ಅಂಶದ ಕೊರತೆಯಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪ್ರಭಾವ ಉಂಟಾಗಬಹುದು. ವಿಶೇಷವಾಗಿ, ನಾವು ಮಕ್ಕಳಿಗೆ ನೀಡುವ ಒಣಫಲಗಳ ಬಗ್ಗೆ ನಮಗೆ ಅರಿವಿಲ್ಲದೇ ಕೆಲವು ತಪ್ಪುಗಳನ್ನು ಮಾಡುತ್ತಿದ್ದಿರಬಹುದು. ಅವಶ್ಯಕ ಪ್ರಮಾಣದಲ್ಲಿ ನೀಡದೇ ಇರುವುದು ಅಥವಾ ಅಗತ್ಯಕ್ಕೂ ಹೆಚ್ಚು ನೀಡುವುದು ಈ ತಪ್ಪುಗಳು ನಮ್ಮಿಂದ ಆಗುತ್ತಿದ್ದಿರಬಹುದು.

ಒಣಫಲಗಳು ಅತಿ ಸಾಂದ್ರೀಕೃತ ಆಹಾರಗಳಾಗಿವೆ ಹಾಗೂ ವಿಟಮಿನ್ನುಗಳು, ಖನಿಜಗಳು, ಆಂಟಿ ಆಕ್ಸಿಡೆಂಟುಗಳು, ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಕರಗುವ ಹಾಗೂ ಕರಗದ ನಾರಿನಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವೆಲ್ಲವೂ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ಕಲಿಯುವಿಕೆ ಹಾಗೂ ಏಕಾಗ್ರತೆ ಮೊದಲಾದವುಗಳಿಗೆ ಅಗತ್ಯವಾಗಿವೆ. ಇವೆಲ್ಲವನ್ನೂ ಒದಗಿಸುವ ಸಾಮಾನ್ಯ ಒಣಫಲಗಳು ಎಂದರೆ ಬಾದಾಮಿ, ಬ್ರೆಜಿಲ್ ನಟ್ಸ್, ಗೋಡಂಬಿ, ಚೆಸ್ಟ್‌ನಟ್, ಹೇಜೆಲ್ ನಟ್ಸ್, ಮಾಕಾಡಾಮಿಯಾ, ಪೆಕಾನ್, ಪೈನ್ ನಟ್ಸ್, ಪಿಸ್ತಾ ಮತ್ತು ಅಕ್ರೋಟು. ಇದರಲ್ಲಿ ನಮ್ಮ ಬಡವರ ಬಾದಾಮಿ ನೆಲಗಡಲೆಯನ್ನೂ ಸೇರಿಸಿಕೊಳ್ಳಬಹುದು. ಇವು ದ್ವಿದಳ ಧಾನ್ಯವೇ ಆದರೂ ಇವುಗಳ ಪೋಷಕಾಂಶಗಳು ಬಹುತೇಕ ಬಾದಾಮಿಗೆ ಹೋಲುವ ಕಾರಣದಿಂದ ಇವನ್ನೂ ಒಣಫಲಗಳಿಗೆ ಸೇರಿಸಿಕೊಳ್ಳಬಹುದು.

ನಿತ್ಯವೂ ನೀಡಬಹುದಾದ ಒಂದು ಪ್ರಮಾಣದಲ್ಲಿ ಮಕ್ಕಳಿಗೆ ಲಭಿಸುವ ಪೋಷಕಾಂಶಗಳೆಂದರೆ:

ನಿತ್ಯವೂ ನೀಡಬಹುದಾದ ಒಂದು ಪ್ರಮಾಣದಲ್ಲಿ ಮಕ್ಕಳಿಗೆ ಲಭಿಸುವ ಪೋಷಕಾಂಶಗಳೆಂದರೆ:

36% ರಷ್ಟು ಪ್ರಮಾಣದ ದೈನೈಂದಿನ ವಿಟಮಿನ್ ಇ ಅವಶ್ಯಕತೆ

13% ರಷ್ಟು ಪ್ರಮಾಣದ ದೈನೈಂದಿನ ನಾರಿನಂಶದ ಅವಶ್ಯಕತೆ

4 ಗ್ರಾಂ ಪ್ರೋಟೀನ್.

1. ಮಕ್ಕಳ ಆಹಾರದಲ್ಲಿ ಡ್ರೈಫ್ರೂಟ್ಸ್ ಅವಶ್ಯಕತೆಯಾದರೂ ಏನು?

1. ಮಕ್ಕಳ ಆಹಾರದಲ್ಲಿ ಡ್ರೈಫ್ರೂಟ್ಸ್ ಅವಶ್ಯಕತೆಯಾದರೂ ಏನು?

ಮಕ್ಕಳು ನಿತ್ಯವೂ ಮಿತ ಪ್ರಮಾಣದಲ್ಲಿ ಒಣಫಲಗಳನ್ನು ಸೇವಿಸುತ್ತಾ ಬರುವ ಮೂಲಕ ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳಲು, ರಕ್ತದ ಒತ್ತಡ ನಿಯಂತ್ರಿಸಲು, ಮಧುಮೇಹ ಮತ್ತು ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಪಡೆಯಲು, ನಿತ್ಯದ ಬಹಿರ್ದೆಶೆ ಸುಲಭವಾಗಿ ಆಗಲು ಹಾಗೂ ಮೂಳೆಗಳ ಆರೋಗ್ಯ ಉತ್ತಮಗೊಳ್ಳಲು ನೆರವಾಗುತ್ತವೆ. ಜೊತೆಗೇ, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಇನ್ನೂ ಹಲವಾರು ಬಗೆಯಲ್ಲಿ ಉತ್ತಮಗೊಳ್ಳುತ್ತದೆ. ಇವುಗಳಲ್ಲಿ ಮಕ್ಕಳು ಪಡೆಯಬಹುದಾದ ಪ್ರಮುಖ ಪ್ರಯೋಜನಗಳೆಂದರೆ:

2. ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ:

2. ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ:

ಒಣಫಲಗಳಲ್ಲಿರುವ ಏಕ ಅಸಂತೃಪ್ತ ಕೊಬ್ಬಿನ ಆಮ್ಲದ ಕಾರಣ ಹೃದಯಸ್ನೇಹಿ ಆಹಾರಳಾಗಿವೆ. ಅಕ್ರೋಟು, ಬಾದಾಮಿ ಮೊದಲಾದವುಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲಗಳಿವೆ. ಇವು ಅತ್ಯಂತ ಆರೋಗ್ಯಕರ ಹಾಗೂ ಮಕ್ಕಳ ಮೆದುಳಿನ ಬೆಳವಣಿಗೆಗೆ ಅವಶ್ಯಕವಾಗಿರುವ ಕೊಬ್ಬುಗಳು ಎಂದು ಪರಿಗಣಿಸಲ್ಪಡುತ್ತವೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

3. ಇವು ಅತ್ಯುತ್ತಮ ಕುರುಕು ತಿಂಡಿಗಳಾಗಿವೆ:

3. ಇವು ಅತ್ಯುತ್ತಮ ಕುರುಕು ತಿಂಡಿಗಳಾಗಿವೆ:

ಮಕ್ಕಳಿಗೆ ಕುರುಕು ತಿಂಡಿಗಳು ತುಂಬಾ ಇಷ್ಟ. ಈ ಅಗತ್ಯತೆಯನ್ನು ಒಣಫಲಗಳು ಸೂಕ್ತವಾಗಿ ಪೂರೈಸಬಲ್ಲವು. ಇವುಗಳ ಸೇವನೆಯಿಂದ ಹೆಚ್ಚಿನ ಶಕ್ತಿ, ಹಾಗೂ ದೈನಂದಿನ ಅಗತ್ಯದ ಆರೋಗ್ಯಕರ ಕೊಬ್ಬುಗಳು ಲಭಿಸುವ ಜೊತೆಗೇ ಅನಾರೋಗ್ಯಕರ ಕುರುಕು ತಿಂಡಿಗಳನ್ನು ತಿನ್ನದಿರುವಂತೆ ಮಕ್ಕಳನ್ನು ತಡೆಗಟ್ಟಲೂ ಸಾಧ್ಯವಾಗುತ್ತದೆ.

4. ಇವುಗಳನ್ನು ಹಲವಾರು ವಿಧಗಳಲ್ಲಿ ಸೇವಿಸಬಹುದು:

4. ಇವುಗಳನ್ನು ಹಲವಾರು ವಿಧಗಳಲ್ಲಿ ಸೇವಿಸಬಹುದು:

ಹುರಿದು, ಬೇಯಿಸಿ, ಇತರ ಆಹಾರಗಳ ಜೊತೆಗೆ ಸೇರಿಸಿ, ನೆನೆಸಿಟ್ಟು, ಅಥವಾ ಬ್ರೆಡ್ಡಿಗೆ ಸವರುವ ಪೀನಟ್ ಬಟರ್, ಎಣ್ಣೆಯಿಲ್ಲದೇ ಹುರಿದು, ಮಸಾಲೆಗಳೊಡನೆ ಹುರಿದು, ನಿತ್ಯದ ಆಹಾರಗಳ ಜೊತೆಗೆ ಬೆರೆಸಿ, ಹೀಗೆ ಹಲವಾರು ಬಗೆಯಲ್ಲಿ ಸೇವಿಸಲು ನೀಡಬಹುದು. ವಿಶೇಷವಾಗಿ ಬೆಳಗ್ಗಿನ ಉಪಾಹಾರದಲ್ಲಿ ಬಾದಾಮಿ, ಅಕ್ರೋಟು, ಪಿಸ್ತಾಗಳನ್ನು ಬೆರೆಸಿ ನೀಡಿದರೆ ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.

ಒಣಫಲಗಳ ಸೇವನೆಯ ಅಡ್ಡ ಪರಿಣಾಮಗಳು:

ಒಣಫಲಗಳ ಸೇವನೆಯ ಅಡ್ಡ ಪರಿಣಾಮಗಳು:

ಒಣಫಲಗಳ ಸೇವನೆಯಿಂದ ಕೆಲವಾರು ಅಡ್ಡಪರಿಣಾಮಗಳೂ ಇವೆ. ಅತಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಲು, ಎದೆಯುರಿ ಮೊದಲಾದ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಮಕ್ಕಳು ಸೇವಿಸುವ ಪ್ರಮಾಣ ಅತಿ ಅಗತ್ಯ. ಒಂದು ಮುಷ್ಟಿಯಷ್ಟು ಎಲ್ಲಾ ಒಣಫಲಗಳ ಮಿಶ್ರಣ ಅಥವಾ ದಿನಕ್ಕೆ ಐದು ನೆನೆಸಿಟ್ಟ ಬಾದಾಮಿಗಳು, ಒಂದು ಅಕ್ರೋಟು ಇಷ್ಟೇ ಮಕ್ಕಳ ಅಗತ್ಯತೆಯನ್ನು ಪೂರೈಸಲು ಬೇಕಾದಷ್ಟಾಯಿತು.

ಕೆಲವು ಮಕ್ಕಳಿಗೆ ಶೇಂಗಾ ಬೀಜದ ಅಲರ್ಜಿ ಇರುತ್ತದೆ. ಒಂದು ವೇಳೆ ಇದು ನಿಮ್ಮ ಮಗುವಿಗೆ ಅಲರ್ಜಿಕಾರಕವಾಗಿದ್ದರೆ ಇದು ಮುಂದುವರೆದಂತೆ ಗಂಭೀರ ರೂಪವನ್ನೂ ಪಡೆದುಕೊಳ್ಳಬಹುದು. ಹಾಗಾಗಿ, ಈ ಅಲರ್ಜಿ ಇರುವ ಮಕ್ಕಳು ಯಾವುದೇ ಉತ್ಪನ್ನವನ್ನು ಬಳಸುವ ಮುನ್ನ ಈ ಆಹಾರದಲ್ಲಿ ಶೇಂಗಾ ಇರುವ ಬಗ್ಗೆ ಮಾಹಿತಿಯನ್ನು ಓದಿಕೊಳ್ಳಬೇಕು ಅಥವಾ ಹೋಟೆಲಿನಲ್ಲಿ ಆಹಾರವನ್ನು ತರಿಸುವಾಗ ಇದರಲ್ಲಿ ಶೇಂಗಾ ಇಲ್ಲದಿರುವುದನ್ನು ಸಿಬ್ಬಂದಿಯಿಂದ ಖಚಿತಪಡಿಸಿಕೊಳ್ಳಬೇಕು.

ನಿಮ್ಮ ಮಕ್ಕಳಿಗೆ ಡ್ರೈಫ್ರೂಟ್ಸ್ ಪರಿಚಯಿಸುವುದು ಹೇಗೆ?

ನಿಮ್ಮ ಮಕ್ಕಳಿಗೆ ಡ್ರೈಫ್ರೂಟ್ಸ್ ಪರಿಚಯಿಸುವುದು ಹೇಗೆ?

ಒಣಫಲಗ ಗಾತ್ರ ಕೊಂಚ ದೊಡ್ಡದೇ ಆಗಿದ್ದು, ಇದನ್ನು ಅಗಿಯದೇ ನುಂಗಿದರೆ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವ ಅಪಾಯವಿದೆ. ಆದ್ದರಿಂದ ಮಕ್ಕಳ ವಯಸ್ಸನ್ನು ಅನುಸರಿಸಿ ಒಣಫಲಗಳನ್ನು ಚಿಕ್ಕ ಚೂರಾಗಿಸಿ ನೀಡಬೇಕು. ಇದರ ಗಾತ್ರವನ್ನು ಗುರುತಿಸಿ ಅಗಿದು ನುಂಗುವಷ್ಟು ಪ್ರಬುದ್ಧರಾದ ಬಳಿಕವೇ ಇಡಿಯ ಫಲಗಳನ್ನು ನೀಡಬಹುದು. ಸಾಮಾನ್ಯವಾಗಿ ಮಕ್ಕಳು ಮೂರು ವರ್ಷದ ವಯಸ್ಸಾಗುವಷ್ಟರಲ್ಲಿ ತಾವು ತಿನ್ನಬಹುದಾದ ಆಹಾರಗಳನ್ನು ಚೆನ್ನಾಗಿ ಗುರುತಿಸಿಕೊಳ್ಳುವಷ್ಟು ಮಾನಸಿಕ ಬೆಳವಣಿಗೆಯನ್ನು ಪಡೆದಿರುತ್ತಾರೆ. ಆದರೆ ಎರಡರಿಂದ ಮೂರು ವರ್ಷದ ವಯಸ್ಸಿನ ಮಕ್ಕಳಿಗೆ ಇವನ್ನು ಇಡಿಯಾಗಿ ನೀಡದೇ ನುಣ್ಣಗೆ ಅರೆದು ಮಗುವಿನ ಆಹಾರದಲ್ಲಿ ಬೆರೆಸಿ ನೀಡಬೇಕು. ಇಡಿಯ ಫಲವನ್ನು ಎಂದೂ ನೀಡಬಾರದು.

ಆದರೆ, ಒಣಫಲಗಳನ್ನು ಹಾಗೇ ನೀಡುವ ಬದಲು ಸಾಕಷ್ಟು ನೀರು ಕುಡಿಯುವಂತೆ ಪ್ರೋತ್ಸಾಹಿಸಬೇಕು ಹಾಗೂ ಒಣಫಲಗಳನ್ನು ಚೆನ್ನಾಗಿ ಜಗಿದು ನೀರಾಗಿಸಿ ನುಂಗುವಂತೆ ಕಲಿಸಬೇಕು. ಈ ಮೂಲಕ ಒಣಫಲಗಳ ಪೂರ್ಣಪ್ರಮಾಣದ ಪ್ರಯೋಜನ ಪಡೆಯಲು ಹಾಗೂ ಮಲಬದ್ದತೆ ಉಂಟಾಗದಿರಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಒಣಫಲಗಳನ್ನು ಹೊಸದಾಗಿ ತಿನ್ನಲು ಪ್ರಾರಂಭಿಸುವ ಮಕ್ಕಳಿಗೆ ಈ ತೊಂದರೆಗಳು ಎದುರಾಗುತ್ತವೆ, ಆದರೆ ಅಭ್ಯಾಸವಾದಂತೆ ತಾವಾಗಿಯೇ ಸರಿಹೋಗುತ್ತವೆ.

English summary

Nuts in Your Children's Diet: Benefits, Side Effects & Recipes in Kannada

Nuts in Your Children's Diet: Benefits, Side Effects & Recipes in Kannada,
X
Desktop Bottom Promotion