For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಬ್ರೇಕ್‌ಪಾಸ್ಟ್‌ಗೆ ಇಂಥ ಆಹಾರಗಳನ್ನು ಕೊಟ್ಟು ನೋಡಿ, ಖಂಡಿತ ಇಷ್ಟಪಡುತ್ತಾರೆ

|

ಮಕ್ಕಳಿಗೆ ತಿನಿಸುವುದು ಅಥವಾ ಅವರು ತಿನ್ನುವಂತೆ ಮಾಡುವುದು ಹೆಚ್ಚಿನ ಪೋಷಕರಿಗೆ ದೊಡ್ಡ ಸಾಹಸದ ಕೆಲಸವೇ ಆಗಿದೆ. ಒಂದು ದೋಸೆ ಕೊಟ್ಟರೆ ಅದರ ಒಂದು ಭಾಗ ಕೂಡ ಅವರ ಹೊಟ್ಟೆಗೆ ಹೋಗುವುದಿಲ್ಲ, ಸಾಕು, ನಂಗೆ ಬೇಡ ಹೀಗೆ ನೂರೆಂಟು ನೆಪ ಹೇಳಿ ಅವುಗಳನ್ನು ತಿನ್ನುವುದಿಲ್ಲ.

ಅದೇ ಜಂಕ್‌ ಫುಡ್ಸ್‌ ಬೇಡ-ಬೇಡ ಅಂದರೂ ತಿನ್ನುತ್ತವೆ. ಆದರೆ ಅವುಗಳನ್ನು ತಿಂದರೆ ಮಕ್ಕಳ ದೈಹಿಕ , ಮಾನಸಿಕ ಬೆಳವಣಿಗೆಗೆ ಅಗ್ಯತವಾದ ಪೋಷಕಾಂಶಗಳು ದೊರೆಯುವುದಿಲ್ಲ. ಆದ್ದರಿಂದ ಅಗ್ಯತವಾದ ಪೋಷಕಾಂಶಗಳಿರುವ ಆಹಾರವನ್ನೇ ಮಕ್ಕಳಿಗೆ ನೀಡಬೇಕು ಹಾಗೂ ಹೇಗಾದರೂ ಪುಸಲಾಯಿಸಿ ಆ ಆಹಾರಗಳನ್ನು ತಿನ್ನುವಂತೆ ಮಾಡಬೇಕು. ಅದಕ್ಕಿಂತ ಮೊದಲು ಮನೆಗೆ ಜಂಕ್‌ ಫುಡ್ಸ್‌ ತಂದು ಸ್ಟಾಕ್ ಇಡುವುದನ್ನು ನಿಲ್ಲಿಸಬೇಕು.

ನಿಮ್ಮ ಮಕ್ಕಳು ಇಷ್ಟ ಪಟ್ಟು ಸವಿಯುವ ಕೆಲವೊಮದು ಆಹಾರಗಳ ಬಗ್ಗೆ ನಾವಿಲ್ಲಿ ಹೇಳಿದ್ದೇವೆ. ಈ ಆಹಾರಗಳನ್ನು ಕೊಟ್ಟು ನೋಡಿ, ಅವರು ತಿನ್ನಲ್ಲ ಎಂಬ ಕಂಪ್ಲೇಂಟ್ ಇರಲ್ಲ, ಅಗ್ಯತವಾದ ಪೋಷಕಾಂಶಗಳು ಅವರ ದೇಹವನ್ನು ಸೇರುತ್ತವೆ.ಇನ್ನು ಏಕೆ ತಡ, ಇಂದಿನಿಂದಲೇ ಟ್ರೈ ಮಾಡಿ:

ಮಕ್ಕಳಿಗೆ ಬ್ರೇಕ್‌ಪಾಸ್ಟ್‌ಗೆ ಇಂಥ ಆಹಾರಗಳನ್ನು ಕೊಟ್ಟು ನೋಡಿ

ಮಕ್ಕಳಿಗೆ ಬ್ರೇಕ್‌ಪಾಸ್ಟ್‌ಗೆ ಇಂಥ ಆಹಾರಗಳನ್ನು ಕೊಟ್ಟು ನೋಡಿ

* ಬೇಳೆ ಕಾಳುಗಳನ್ನು ಹಾಕಿ ಮಾಡುವ ದೋಸೆ ತುಂಬಾ ರುಚಿ ಇರುತ್ತದೆ. ಆದ್ದರಿಂದ ಮಕ್ಕಳು ಇದನ್ನು ತಿನ್ನುತ್ತಾರೆ. ಅವರಿಗೆ ಕಾರ್ಬೋಹೈಡ್ರೇಟ್ಸ್ ಹಾಗೂ ಪ್ರೊಟೀನ್ ಕೂಡ ಸಿಗುವುದು.

ಮೊಟ್ಟೆ ಹಾಕಿ ಮಾಡುವ ಫ್ರೆಂಚ್‌ ಟೋಸ್ಟ್, ಬೇಯಿಸಿದ ಮೊಟ್ಟೆಯ

ಮೊಟ್ಟೆ ಹಾಕಿ ಮಾಡುವ ಫ್ರೆಂಚ್‌ ಟೋಸ್ಟ್, ಬೇಯಿಸಿದ ಮೊಟ್ಟೆಯ

ಸ್ಯಾಂಡ್‌ವಿಚ್, ಆಮ್ಲೆಟ್ ಸ್ಯಾಂಡ್‌ವಿಚ್‌, ಬೇಯಿಸಿದ ಮೊಟ್ಟೆ

ಈ ರೀತಿಯ ಆಹಾರ ಮಾಡಿ ಕೊಟ್ಟರೆ ಅವರು ಬೇಡ ಅಂತ ಹೇಳುವುದೇ ಇಲ್ಲ, ಇಷ್ಟಪಟ್ಟು ತಿನ್ನುತ್ತಾರೆ. ಮೊಟ್ಟೆಯಲ್ಲಿ 13 ಪೋಷಕಾಂಶಗಳಿವೆ. ಅಲ್ಲದೆ ಹೊಟ್ಟೆ ತುಂಬುವುದರಿಂದ ಅತ್ಯತ್ತಮವಾದ ಬ್ರೇಕ್‌ಫಾಸ್ಟ್ ಆಯ್ಕೆ ಆಗಿದೆ.

ಪೀನಟ್ ಅಥವಾ ಆಲ್ಮೋಂಡ್ (ನೆಲ ಕಡಲೆ ಅಥವಾ ಬಾದಾಮಿ) ಬಟರ್ ಜೊತೆ ಪ್ಯಾನ್ ಕೇಕ್‌

ಪೀನಟ್ ಅಥವಾ ಆಲ್ಮೋಂಡ್ (ನೆಲ ಕಡಲೆ ಅಥವಾ ಬಾದಾಮಿ) ಬಟರ್ ಜೊತೆ ಪ್ಯಾನ್ ಕೇಕ್‌

ಪ್ಯಾನ್‌ ಕೇಕ್ ಮಾಡಿ ನೀವು ಅದಕ್ಕೆ ಆಮ್ಲೋಂಡ್ ಅಥವಾ ಪೀನಟ್‌ ಬಟರ್‌ ಹಾಕಿ ಕೊಟ್ಟರೆ ತುಂಬಾ ರುಚಿಯಾಗಿರುವುದರಿಂದ ಯಾವುದೇ ಕಿರಿಕ್ ಇಲ್ಲದೆ ಸವಿಯುತ್ತಾರೆ. ಅಲ್ಲದೆ ಅವರ ದೇಹಕ್ಕೆ ಅಗ್ಯತವಾಗಿರುವ ಪ್ರೊಟೀನ್, ವಿಟಮಿನ್‌ಗಳು ಹಾಗೂ ನಾರಿನಂಶ ದೊರೆಯುವುದು.

ದಾಲ್‌ ಪೊಟೆಟೊ ಪರೋಟ

ದಾಲ್‌ ಪೊಟೆಟೊ ಪರೋಟ

ಇದೊಂದು ಅದ್ಭುತ ಕಾಂಬಿನೇಷನ್‌ ಹಾಕಿದೆ. ಒಂದು ಕಪ್ ಹಾಲು ಅಥವಾ ಟೀ ಜೊತೆಗೆ ಇದನ್ನು ಕೊಟ್ಟರೆ ತುಂಬಾನೇ ಇಷ್ಟಪಟ್ಟು ಸವಿಯದಿದ್ದರೆ ಮತ್ತೆ ಕೇಳಿ.

ಬಾಳೆಹಣ್ಣಿನ ಜೊತೆಗೆ ಆಲ್ಮೋಂಡ್ ಬಟರ್ ಟೋಸ್ಟ್

ಬಾಳೆಹಣ್ಣಿನ ಜೊತೆಗೆ ಆಲ್ಮೋಂಡ್ ಬಟರ್ ಟೋಸ್ಟ್

ಟೋಸ್ಟ್ ಅಂದ್ರೆ ಎಲ್ಲಾ ಮಕ್ಕಳು ಇಷ್ಟ ಪಡುತ್ತಾರೆ. ಅದರಲ್ಲೂ ಆಲ್ಮೋಂಡ್ ಹಾಕಿ ಮಾಡುವ ಟೋಸ್ಟ್ ಅಂತೂ ತುಂಬಾನೇ ಚೆನ್ನಾಗಿರುತ್ತದೆ.

ಇಡ್ಲಿ, ದೋಸೆ, ಉಪ್ಪಿಟ್ಟು ಅನ್ನು ಸ್ಟೈಲಿಷ್ ಆಗಿ ನೀಡಿ

ಇಡ್ಲಿ, ದೋಸೆ, ಉಪ್ಪಿಟ್ಟು ಅನ್ನು ಸ್ಟೈಲಿಷ್ ಆಗಿ ನೀಡಿ

ಮಕ್ಕಳು ಸ್ವಲ್ಪ ಸ್ಟೈಲಿಷ್ ಆಗಿ ಡೆಕೋರೇಟ್ ಮಾಡಿ ಕೊಟ್ಟರೆ ಇಷ್ಟಪಡುತ್ತಾರೆ. ಇಡ್ಲಿ ಮೇಲೆ ಚಾಕೋಲೆಟ್ ಸಿರಪ್ ಹಾಕಿ ಕೊಡುವುದು, ಎಗ್ ದೋಸೆ, ಚಿಸ್ ದೋಸೆ, ತರಕಾರಿ, ಡ್ರೈ ಫ್ರೂಟ್ಸ್ ಹಾಕಿದ ಉಪ್ಪಿಟ್ಟು ಇವೆಲ್ಲಾ ಬಾಯಿಗೆ ರುಚಿಯಾಗಿರುತ್ತೆ.

ಕೊನೆಯದಾಗಿ: ನಿಮ್ಮ ಮಕ್ಕಳು ಏನೂ ತಿನ್ನುತ್ತಿಲ್ಲ ಎಂದಾದರೆ ಅವರು ತಿನ್ನದೇ ಇರಲು ಕಾರಣವೇನು ನೋಡಿ, ಬಹುಶಃ ತುಂಬಾ ಚಾಕ್ಲೆಟ್, ಬಿಸ್ಕೆಟ್‌, ಜಂಕ್ಸ್ ತಿನ್ನುತ್ತಿದ್ದರೆ ಆರೋಗ್ಯಕರ ಆಹಾರ ಇಷ್ಟಪಡಲ್ಲ. ಆದ್ದರಿಂದ ಅವುಗಳನ್ನು ಕೊಳ್ಳುವುದು ಕಡಿಮೆ ಮಾಡಿ ಇಂಥ ಆರೋಗ್ಯಕರ ಆಹಾರದ ಅಭ್ಯಾಸ ಬೆಳೆಸಿ. ಅವರು ಒಂದು ಹೊತ್ತು ತಿನ್ನದಿದ್ದರೂ ತೊಂದರೆಯಿಲ್ಲ, ಹೊಟ್ಟೆ ಹಸಿದಾಗ ತಿಂತಾರೆ, ಅವರು ತಿಂದಿಲ್ಲ ಜಂಕ್‌ ಕೊಟ್ಟರೆ ಒಳ್ಳೆಯ ಆಹಾರಗಳಿಂದ ದೂರವಿರುತ್ತಾರೆ.

English summary

Nutritionist Healthy Breakfast Options for Kids in kannada

Nutritionist Healthy Breakfast Options for Kids in kannada,Read on...
Story first published: Tuesday, September 7, 2021, 13:34 [IST]
X
Desktop Bottom Promotion