For Quick Alerts
ALLOW NOTIFICATIONS  
For Daily Alerts

ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಆಹಾರಕ್ರಮ ಹೀಗಿರಲಿ

|

ಬೆಳೆಯುತ್ತಿರುವ ಮಕ್ಕಳ ಆಹಾರ ಸಾಕಷ್ಟು ಪೌಷ್ಟಿಕವಾಗಿರಬೇಕು ಎಂಬ ಬಗ್ಗೆ ಎರಡು ಮಾತಿಲ್ಲ. ಪೋಷಕರಾಗಿ ನಮ್ಮ ಕರ್ತವ್ಯವೆಂದರೆ ನಮ್ಮ ಮಕ್ಕಳಿಗೆ ಅತ್ಯುತ್ತಮ ಪೋಷಣೆ ಮತ್ತು ಬೆಳವಣಿಗೆ ದೊರಕುವಂತಾಗಲು ಈ ಆಹಾರಗಳನ್ನು ನೀಡಬೇಕಾಗಿರುವುದು. ಅಂದರೆ ಮಕ್ಕಳ ಒಟ್ಟಾರೆ ಆಹಾರಕ್ರಮ ಬೆಳವಣಿಗೆಗೆ ಪೂರಕವಾಗುವಂತಿದ್ದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತಿರಬೇಕು.

ಪೋಷಕರಿಗೆ ಈ ಮಾತನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಆದರೆ ಪೋಷಕರಿಗೆ ಈ ಆಹಾರಗಳು ಯಾವುವು ಎಂಬ ಮಾಹಿತಿ ಇರಬೇಕಾದುದು ಅವಶ್ಯಕ. ಏಕೆಂದರೆ ಆರೋಗ್ಯಕರ ಆಹಾರಕ್ರಮ ಮಕ್ಕಳಿಗೂ ವಯಸ್ಕರಿಗೂ ಒಂದೇ ಆಗಿದ್ದರೂ, ಆದರೂ ಕೆಲವು ಪೋಷಕಾಂಶಗಳ ಪ್ರಮಾಣದಲ್ಲಿ ಭಿನ್ನವಾಗಿರುತ್ತವೆ.

ಆದರೆ ಇಂದು ಜಾಹೀರಾತುಗಳ ಮೂಲಕ ಮಕ್ಕಳಿಗೆ ಆಕರ್ಷಕವಾಗಿರುವಂತೆ ಪ್ರಸ್ತುತಪಡಿಸಲಾಗುತ್ತಿರುವ ಆಹಾರಗಳೆಲ್ಲವೂ ಆರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಮಕ್ಕಳು ತಮಗೆ ಯಾವುದು ನೋಡಲಿಕ್ಕೆ ಇಷ್ಟವಾಗುತ್ತದೆಯೋ ಅವನ್ನೇ ಹೆಚ್ಚು ತಿನ್ನಲು ಇಷ್ಟಪಡುತ್ತಾರೆಯೇ ವಿನಃ ಇವನ್ನೇ ತಿನ್ನು ಎಂದು ಹೇಳುವ ತಿಂಡಿಗಳನ್ನಲ್ಲ!

ಊಟದ ವಿಷಯದಲ್ಲಿ ಅನೇಕ ಮಕ್ಕಳು ನಂಬಲಾಗದಷ್ಟು ಹಠಮಾರಿಗಳಾಗಿರುತ್ತಾರೆ ಮತ್ತು ಅವರು ಅದನ್ನು ತಿನ್ನುವ ಮತ್ತು ಆನಂದಿಸುವ ಮೊದಲು ಅನೇಕ ಬಾರಿ ಆಹಾರವನ್ನು ನಿರಾಕರಿಸುತ್ತಾರೆ, ಆದ್ದರಿಂದ ನಿರುತ್ಸಾಹಗೊಳಿಸಬೇಡಿ - ಆರೋಗ್ಯಕರ ಊಟವನ್ನು ವೈವಿಧ್ಯಮಯವಾಗಿ ನೀಡುವುದೇ ಜಾಣತನದ ಕ್ರಮ.

ಮಗುವಿಗೆ ಬಲವಾದ ಮೂಳೆಗಳು ಮತ್ತು ಹಲ್ಲುಗಳು, ಆರೋಗ್ಯಕರ ಜೀರ್ಣಕ್ರಿಯೆ, ಆಮ್ಲಜನಕ-ಸಮೃದ್ಧ ರಕ್ತ ಮತ್ತು ಆರೋಗ್ಯಕರ ಪೌಷ್ಠಿಕಾಂಶಗಳನ್ನು ಸೇವಿಸುವ ಅಭ್ಯಾಸಗಳು ಬೇಕಾಗುತ್ತವೆ. ಬಾಲ್ಯದಿಂದಲೇ ಪೌಷ್ಠಿಕಾಂಶದಿಂದ ಕೂಡಿದ ಆಹಾರದಲ್ಲಿ ಹೂಡಿಕೆ ಮಾಡುವುದರಿಂದ ಮುಂದೆ ಮಕ್ಕಳ ಪ್ರಬುದ್ಧತೆಯಲ್ಲಿ ನಂಬಲಾಗದಷ್ಟು ಹೆಚ್ಚಿನ ಆರೋಗ್ಯಕರ ಫಲವಿದೆ.

ಶಾಲೆಗೆ ಹೋಗುತ್ತಿರುವ ಮಕ್ಕಳ ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳ ಕುರಿತು ಆಹಾರತಜ್ಞರಾದ ಮಹಿಮಾ ಸೇಠಿಯಾರವರು ಕೆಲವಾರು ಅಮೂಲ್ಯ ಮಾಹಿತಿಗಳನ್ನು ಒದಗಿಸಿದ್ದು ಇಂದಿನ ಲೇಖನದಲ್ಲಿ ಇವುಗಳನ್ನು ಒದಗಿಸಲಾಗಿದೆ. ಶಾಲೆಗೆ ಹೋಗುತ್ತಿರುವ ಮಕ್ಕಳ ಪ್ರತಿ ಪೋಷಕರೂ ಈ ಮಾಹಿತಿಯನ್ನು ತಪ್ಪದೇ ಅನುಸರಿಸುವುದು ಅಗತ್ಯವಾಗಿದೆ.

ಪ್ರೋಟೀನ್

ಪ್ರೋಟೀನ್

ಡೈರಿ ಉತ್ಪನ್ನಗಳು, ಮೊಟ್ಟೆ, ಒಣ ಬೀಜಗಳು ಮತ್ತು ಹಸಿ ಧಾನ್ಯಗಳು, ಮಾಂಸ, ಮೀನು, ಏಕದಳ ಮತ್ತು ದ್ವಿದಳ ಧಾನ್ಯಗಳು ಎಲ್ಲವೂ ಪ್ರೋಟೀನ್ ಭರಿತ ಆಹಾರಗಳಾಗಿವೆ. ಉತ್ತಮ ಪ್ರೋಟೀನ್ ಸಂಯೋಜನೆಗಾಗಿ ಎಲ್ಲಾ ಅಮೈನೋ ಆಮ್ಲಗಳನ್ನು ಪಡೆಯಲು ವಿವಿಧ ರೀತಿಯ ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಕ್ರಮಬದ್ದವಾಗಿ ಸೇವಿಸಲು ನೀಡಬೇಕು. ಡೈರಿ ಉತ್ಪನ್ನಗಳು, ಒಣ ಬೀಜಗಳು ಮತ್ತು ಹಸಿ ಧಾನ್ಯಗಳು, ವಿಶೇಷವಾಗಿ ಮೊಳಕೆ ಬಂದ ಧಾನ್ಯಗಳು ಪ್ರತಿದಿನದ ಪ್ರಧಾನ ಆಹಾರದ ಭಾಗವಾಗಬೇಕು.

ಕ್ಯಾಲ್ಸಿಯಂ

ಕ್ಯಾಲ್ಸಿಯಂ

ಹಾಲು ಮತ್ತು ಹಾಲಿನ ಉತ್ಪನ್ನಗಳು ಡೈರಿಯ ಉತ್ತಮ ಮೂಲವಾಗಿದೆ. ಆದರೂ, ಕೆಲವು ಮಕ್ಕಳು ಹಾಲು ಕುಡಿಯಲು ಪ್ರತಿರೋಧ ಒಡ್ಡುವ ಮೂಲಕ ಅತೀವ ಹಠಮಾರಿಗಳಾಗಿರುತ್ತಾರೆ. ಹಾಗಾಗಿ ಈ ಹಾಲನ್ನು ಸಿಹಿಯಾಗಿಸಲು ಸಕ್ಕರೆಯನ್ನು ಬೆರೆಸದೇ ಕೊಂಚವೇ ಜೇನನ್ನು ಬೆರೆಸಿ ನೀಡಬೇಕು. ಜೊತೆಗೇ ರಾಗಿ, ಹರಿವೆ ಬೀಜ (amaranth puffs/flour), ಮಖನಾ (Fox nuts) ಮೊದಲಾದವು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಎಲ್ಲಾ ಬೀಜಗಳಲ್ಲಿಯೂ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಹಸಿರು ಎಲೆಗಳ ತರಕಾರಿಗಳನ್ನು ವಾರಕ್ಕೆ 3 ಬಾರಿಯಾದರೂ ಆಹಾರದಲ್ಲಿ ಅಳವಡಿಸಬೇಕು. ಚಿಯಾ, ಎಳ್ಳು ಮತ್ತು ಸೂರ್ಯಕಾಂತಿ ಬೀಜಗಳು ಸಹ ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ.

ಕಬ್ಬಿಣ

ಕಬ್ಬಿಣ

ಸಮತೋಲಿತ ಆಹಾರಕ್ಕಾಗಿ, ಕಬ್ಬಿಣ ಅಂಶವಿರುವ ಆಹಾರಗಳನ್ನು ಆಗಾಗ ತಿನ್ನಿಸಲು ಪ್ರಯತ್ನಿಸಿ ಮತ್ತು ಅಂಬೆಗಾಲಿಡುವ ಮಕ್ಕಳಿಗೆ ವಿವಿಧ ರೀತಿಯ ಆಹಾರವನ್ನು ಸೇವಿಸಲು ಪ್ರೋತ್ಸಾಹಿಸಿ. ಬೀಜಗಳು ಮತ್ತು ಒಣಹಣ್ಣುಗಳು ಕಬ್ಬಿಣದ ಅಂಶದ ಉತ್ತಮ ಮೂಲಗಳಾಗಿವೆ. ಅಂಜೂರದ ಹಣ್ಣುಗಳು, ಖರ್ಜೂರಗಳು, ಒಣದ್ರಾಕ್ಷಿ, ಆಪ್ರಿಕಾಟ್, ಗೋಡಂಬಿ, ಪಾಸ್ಟಾ ಮತ್ತು ಬಾದಾಮಿ ಇವೆಲ್ಲವನ್ನೂ ಕೊಂಚ ಪ್ರಮಾಣದಲ್ಲಿ ನೀಡಿ. ಎಲ್ಲಾ ಏಕದಳ ಧಾನ್ಯಗಳು, ಬೀನ್ಸ್, ಮೊಟ್ಟೆ ಮತ್ತು ಮೀನುಗಳಲ್ಲಿ ಕಬ್ಬಿಣದ ಹೆಚ್ಚಿನ ಅಂಶವಿದೆ. ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಕಬ್ಬಿಣ-ಭರಿತ ಆಹಾರ ಮೂಲಗಳನ್ನು ವಿಟಮಿನ್ ಸಿ ಸಮೃದ್ಧ ಆಹಾರದೊಂದಿಗೆ ಸಂಯೋಜಿಸಲು ಮರೆಯದಿರಿ.

ಉದಾಹರಣೆಗೆ ಯಾವಾಗಲೂ ಏಕದಳ, ದ್ವಿದಳ ಧಾನ್ಯಗಳ ಮೇಲೆ ನಿಂಬೆ ಹಿಸುಕಿ ಮತ್ತು ಒಣ ಬೀಜಗಳೊಂದಿಗೆ ಕಿತ್ತಳೆ, ಕಿವಿ, ಕಲ್ಲಂಗಡಿಗಳನ್ನು ತಿನ್ನಲು ನೀಡಿ.

ಉತ್ಕರ್ಷಣ ನಿರೋಧಕಗಳು (Antioxidants)

ಉತ್ಕರ್ಷಣ ನಿರೋಧಕಗಳು (Antioxidants)

ಆಟಗಳ ಮೂಲಕ, ಕ್ರಿಮಿಕಾರಕ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ, ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರ ಮೂಲಕ ಮಕ್ಕಳು ತಮ್ಮ ದೇಹದೊಳಗೆ ಆಹ್ವಾನಿಸುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ನೆರವಾಗುವ ಉತ್ಕರ್ಷಣ ನಿರೋಧಕಗಳು ಮಕ್ಕಳ ಆಹಾರದ ಅವಿಭಾಜ್ಯ ಭಾಗವಾಗಿರಬೇಕು. ಕಾಲೋಚಿತ ಮತ್ತು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದರಿಂದ ಅವುಗಳು ತಮ್ಮ ದೈನಂದಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ.

ನಾರಿನಂಶ ಮತ್ತು ನೀರು

ನಾರಿನಂಶ ಮತ್ತು ನೀರು

ಕೊನೆಯದಾಗಿ, ನಮ್ಮ ಆರೋಗ್ಯವನ್ನು ನಮ್ಮ ಕರುಳಿನಲ್ಲಿ ತಯಾರಿಸಲಾಗುತ್ತದೆ ಎಂಬ ನಾಣ್ಣುಡಿಗೆ ಅನುಗುಣವಾಗಿ ನಮ್ಮ ಆಹಾರಕ್ರಮವಿರಬೇಕು. ಆದ್ದರಿಂದ ಮೇಲೆ ವಿವರಿಸಿದ ಎಲ್ಲಾ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳಬೇಕು ಮತ್ತು ಬಳಸಬೇಕು ಎಂದು ನಮಗೆ ಅರಿವಿದ್ದರೆ ಶುದ್ಧ ಕರುಳು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರಿಯಬಹುದು. ಸಾಮಾನ್ಯವಾಗಿ ಮಕ್ಕಳು ಕಡಿಮೆ ನೀರು ಕುಡಿಯುತ್ತಾರೆ. ಹಾಗಾಗಿ, ಆಗಾಗ ನೀರು ಕುಡಿಯುತ್ತಿರುವುದನ್ನು ಹೇಳಿ ಖಚಿತಪಡಿಸಿಕೊಳ್ಳುವುದು ಅಗತ್ಯ. ಜೊತೆಗೇ ಈ ನೀರನ್ನು ನಿಂಬೆ ಪಾನಕ, ಎಳನೀರು, ಕಚ್ಚಾ ಮಾವಿನ ಪಾನೀಯ, ಮಜ್ಜಿಗೆ ಮತ್ತು ಸರಳ ನೀರಿನ ರೂಪದಲ್ಲಿ ಒದಗಿಸುತ್ತಾ ಇರಬೇಕು. ಜಾಹೀರಾತು ಆಕರ್ಷಕವೆಂದು ಅನಾರೋಗ್ಯಕರ ಸಿದ್ಧರೂಪದ ನೀರಿನಲ್ಲಿ ಬೆರೆಸುವ ಕೃತಕ ರುಚಿಯ ಪಾನೀಯಗಳು ಸರ್ವಥಾ ಬೇಡ. ಏಕೆಂದರೆ ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ ಇರುತ್ತದೆ. ಜೊತೆಗೇ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರಿನಂಶ ಮಕ್ಕಳ ಊಟದಲ್ಲಿ ಇರುವಂತೆ ನೋಡಿಕೊಳ್ಳಿ. ಹಸಿಯಾಗಿ ಸೇವಿಸುವ ಸಾಲಾಡ್, ತರಕಾರಿಗಳನ್ನು ನಿತ್ಯವೂ ಕೊಂಚವಾದರೂ ಸೇವಿಸಲು ನೀಡಿ. ಜೊತೆಗೇ ಊಟದಲ್ಲಿಯೂ ಸಾಕಷ್ಟು ಏಕದಳ ಮತ್ತು ದ್ವಿದಳ ಧಾನ್ಯಗಳಿರುವಂತೆ ನೋಡಿಕೊಳ್ಳಿ. ವಿಶೇಷವಾಗಿ ನಾರು ನಿವಾರಿಸಿದ ಆಹಾರಗಳನ್ನು (ಮುಖ್ಯವಾಗಿ ಮೈದಾ ಹಿಟ್ಟು) ನೀಡದಿರಿ. ಬದಲಿಗೆ ನೈಸರ್ಗಿಕ ನಾರಿನಂಶವಿರುವ (ಇಡಿಯ ಗೋಧಿಯ ಹಿಟ್ಟು) ಆಹಾರಗಳನ್ನು ಸೇವಿಸಲು ನೀಡಿ.

ಅಡುಗೆಗೆ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಬಳಸಿ

ಅಡುಗೆಗೆ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಬಳಸಿ

ಕೊಂಚ ದುಬಾರಿಯಾದರೂ ಸರಿ, ಮಕ್ಕಳಿಗಾಗಿ ತಯಾರಿಸುವ ಆಹಾರವನ್ನು ತುಪ್ಪ ಅಥವಾ ಕೊಬ್ಬರಿ ಎಣ್ಣೆಯಿಂದಲೇ ತಯಾರಿಸಿ. ಇವು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ಸಿಹಿತಿಂಡಿಗಳು / ಹುರಿದ / ಹೆಚ್ಚುವರಿ ಉಪ್ಪಿನ / ಸಂಸ್ಕರಿಸಿದ ಆಹಾರಗಳು

ಸಿಹಿತಿಂಡಿಗಳು / ಹುರಿದ / ಹೆಚ್ಚುವರಿ ಉಪ್ಪಿನ / ಸಂಸ್ಕರಿಸಿದ ಆಹಾರಗಳು

ಈ ಆಹಾರಗಳನ್ನು ಮನೆಯಲ್ಲಿ ಸಂಗ್ರಹಿಸದಿರುವುದೇ ಉತ್ತಮ. ಇದು ಮಕ್ಕಳ ಸಹಿತ ಪ್ರತಿಯೊಬ್ಬರ ಆರೋಗ್ಯಕ್ಕೂ ಹಾನಿಕಾರಕ ಮತ್ತು ಪ್ರಕೃತಿಯಲ್ಲಿ ಹೆಚ್ಚು ವ್ಯಸನಕಾರಿಯಾಗಿದೆ. ಅಂತಹ ಆಹಾರಗಳನ್ನು ಕೇವಲ ತಿಂಗಳಿಗೊಮ್ಮೆ ಔತಣ ಅಥವಾ ಬದಲಾವಣೆಯಾಗಿ ಸೇವಿಸುವುದು ಉತ್ತಮ ಆದರೆ ಅದು ಅಭ್ಯಾಸವಾಗಬಾರದು. ಪೋಷಕರಾದ ನಾವು ಪ್ರಮಾಣಕ್ಕಿಂತ ಹೆಚ್ಚಾಗಿ ವೈವಿಧ್ಯತೆಯನ್ನು ಒದಗಿಸಲು ಪ್ರಯತ್ನಿಸಬೇಕು. ಆಹಾರದ ಚಿಕ್ಕ ಭಾಗಗಳು ಮಗುವಿಗೆ ವೈವಿಧ್ಯಮಯ ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

ನಿಮ್ಮ ಮಗುವಿನ ಆಹಾರಕ್ರಮ ಹೀಗಿರಲಿ

ನಿಮ್ಮ ಮಗುವಿನ ಆಹಾರಕ್ರಮ ಹೀಗಿರಲಿ

ಬೆಳಗ್ಗಿನ ಮೊದಲ ಆಹಾರ - ಹಾಲು / ಯಾವುದೇ ಹಣ್ಣು / ಬೀಜಗಳು ಮತ್ತು ನೆನೆಸಿದ ಧಾನ್ಯಗಳು ಅಥವಾ ಮೊಳಕೆ ಬರಿಸಿದ ಧಾನ್ಯಗಳು, ಕೊಂಚ ಎಳನೀರು (ಪೂರ್ವಭಾವಿಯಾಗಿ)

ಬೆಳಗಿನ ಉಪಾಹಾರ - ಧಾನ್ಯ ಆಧಾರಿತ ಅವಲಕ್ಕಿ / ಉಪ್ಪಿಟ್ಟು / ಇಡ್ಲಿ ದೋಸೆ ಸಂಬಾರ್ / ಇಡಿಯ ಗೋಧಿಹಿಟ್ಟಿನ ಪರೋಟ

ಮಧ್ಯಾಹ್ನಕ್ಕೂ ಮುನ್ನ- ಸಸ್ಯಾಹಾರಿ ಸಾರು / ಎಳನೀರು / ಹಣ್ಣು

ಮಧ್ಯಾಹ್ನದ ಊಟ - ರೋಟಿ ಹಸಿರು ತರಕಾರಿಯ ದಾಲ್ / ಮೊಳಕೆ ಬರಿಸಿದ ಧಾನ್ಯಗಳು ಮೊಸರು/ ಚಿಕ್ಕ ಭಾಗ ಹಸಿ ತರಕಾರಿಯ ಸಲಾಡ್

ಸಂಜೆ - ಹಾಲು / ಒಣ ಬೀಜಗಳು ಮತ್ತು ನೆನೆಸಿಟ್ಟ ಬೀಜಗಳು (ಪೂರ್ವಭಾವಿಯಾಗಿ) / ಢೋಕ್ಲಾ / ದೋಸೆ

ಭೋಜನ - ಅನ್ನ, ದಾಲ್ ಸಲಾಡ್ ಸಹಿತ ಸಸ್ಯಾಹಾರಿ ಊಟ.

ಮಲಗುವ ಸಮಯ - ಏಲಕ್ಕಿಯೊಂದಿಗೆ ಹಳದಿ ಪುಡಿ ಬೆರೆಸಿದ ಹಾಲು.

English summary

Nutrition For School Aged Children: An Expert’s Guide

Here we are discussing about Nutrition For School Aaged Children: An Expert’s Guide. Remember to start by setting a good example at home with your own eating habits. Because children follow what they see and not what they are told.Read more.
X