For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಈ ಜೀವನ ಪಾಠ ಕಲಿಸದೇ ಹೋದರೆ ಮುಂದೆ ದುಃಖಿಸಬೇಕಾದೀತು

|

ತನ್ನ ಮಗು ಬಹು ಆತ್ಮವಿಶ್ವಾಸವುಳ್ಳದ್ದಾಗಿ, ಓರ್ವ ಯಶಸ್ವೀ ವ್ಯಕ್ತಿಯಾಗಿ ಬೆಳೆಯಬೇಕೆಂದು ಆಸೆ ಪಡದ ಯಾವ ತಾಯಿಯಾದರೂ ಇರಲು ಸಾಧ್ಯವೇ ಹೇಳಿ ?!! ಎಲ್ಲ ತಾಯಂದಿರೂ ಬಯಸೋದೇ ಇದನ್ನೇ ಅಲ್ಲವೇ ?! ನಿಮ್ಮ ಮಗುವು ಅತ್ಯುತ್ತಮ ವ್ಯಕ್ತಿಯಾಗಿ ಬೆಳೆಯಲೆಂದು ನೀವು ಹಾರೈಸುವುದರ ಜೊತೆಗೆ ಆತನೋ ಅಥವಾ ಆಕೆಯೋ ತನ್ನೆಲ್ಲ ಕನಸುಗಳನ್ನೂ ಸಾಕಾರಗೊಳಿಸಿಕೊಳ್ಳೋದರೊಂದಿಗೆ, ತನ್ನೆಲ್ಲ ಮಹತ್ವಾಕಾಂಕ್ಷೆಗಳನ್ನೂ ಈಡೇರಿಸಿಕೊಳ್ಳುವಂತಾಗಲಿ ಎಂದೇ ಓರ್ವ ತಾಯಿಯಾಗಿ ನೀವು ಹಾರೈಸುವಿರಿ ತಾನೇ ? ಆದರೆ ಓರ್ವ ಹೆತ್ತ ತಾಯಿಯಾಗಿ ನೀವು ನಿಭಾಯಿಸಬೇಕಾದ ಕೆಲ ಜವಾಬ್ದಾರಿಗಳೂ ಇರುತ್ವೆ. ಪ್ರತೀ ಹೆಜ್ಜೆಯಲ್ಲೂ ನಿಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಹಾಗೂ ಅವರಿಗೆ ಕೆಲವು ಮುಖ್ಯವಾದ ಜೀವನ ಪಾಠಗಳನ್ನ ಹೇಳಿಕೊಡುವುದೂ ನಿಮ್ಮ ಜವಾಬ್ದಾರಿಗಳೇ....

ಹೊಸ ವರ್ಷದ ಆರಂಭದೊಂದಿಗೆ, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನವನ್ನ ನಡೆಸೋಕೆ ಸಾಧ್ಯವಾಗೋ ರೀತಿಯಲ್ಲಿ ಹಾಗೂ ಎಲ್ಲ ಬಗೆಯ ಅನುಭವಗಳೊಂದಿಗೆ ಸೂಕ್ತ ರೀತಿಯಲ್ಲಿ ವ್ಯವಹರಿಸಲೋ ಸಾಧ್ಯವಾಗೋ ರೀತಿಯಲ್ಲಿ ನೀವು ನಿಮ್ಮ ಮಕ್ಕಳಿಗೆ ಕೆಲ ಮೂಲಭೂತ ಮೌಲ್ಯಗಳು ಹಾಗೂ ಪಾಠಗಳನ್ನ ಕಲಿಸಿಕೊಡಿ. ನಿಮ್ಮ ಮಗು ಸ್ವಾವಲಂಬಿಯಾಗಿರೋದಕ್ಕೆ ಹಾಗೂ ಸಮರ್ಥವಾಗಿ ಬಾಳೋದಕ್ಕೆ ದೀರ್ಘಾವಧಿಯಲ್ಲಿ ಇವೆಲ್ಲವನ್ನೂ ಆತ ಅಥವಾ ಆಕೆ ತಿಳಿದುಕೊಂಡಿರಬೇಕಾದದ್ದು ತುಂಬಾನೇ ಮುಖ್ಯ. ನಿಮ್ಮ ಮಗುವಿಗೆ ನೀವು ಕಲಿಸಿಕೊಡಬಹುದಾದ ಅಂತಹ ಐದು ಮೌಲ್ಯಗಳನ್ನ ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಓದಿಕೊಳ್ಳಿ....

ಸಮಯದ ಪರಿಪಾಲನೆ

ಸಮಯದ ಪರಿಪಾಲನೆ

ನಿಮ್ಮ ಮಗುವಿಗೆ ಸಮಯದ ಮೌಲ್ಯವನ್ನ ಮನವರಿಕೆ ಮಾಡಿಸಿ ಹಾಗೂ ತನ್ನ ಸಮಯವನ್ನ ಚೆನ್ನಾಗಿ ನಿಭಾಯಿಸೋದಕ್ಕೆ ಅವನಿಗೆ/ಅವಳಿಗೆ ಹೇಳಿಕೊಡಿ. ಕ್ಲಪ್ತ ಸಮಯಕ್ಕೆ ಸರಿಯಾಗಿ, ಕೊಟ್ಟ ಮಾತಿಗೆ ತಕ್ಕಂತೆ ವಹಿಸಿಕೊಂಡ ಕೆಲಸವನ್ನ ಪೂರೈಸುವುದಕ್ಕೆ ಅಥವಾ ಪೂರ್ವನಿಗದಿತ ಸ್ಥಳದಲ್ಲಿ ಹಾಜರಾಗುವುದಕ್ಕೆ ಅವರಿಗೆ ಕಲಿಸಿಕೊಡಿ. ಬೇರೆಯವರ ಸಮಯಕ್ಕೆ ಬೆಲೆ ಕೊಡೋದನ್ನ ನಿಮ್ಮ ಮಗ ಅಥವಾ ಮಗಳಿಗೆ ಮೊದಲು ಕಲಿಸಿಕೊಡಿ. ಮಾಡಬೇಕಾದ ಕೆಲಸಗಳನ್ನ ಯೋಜನಾಬದ್ಧವಾಗಿ ಇರಿಸಿಕೊಳ್ಳೋ ಅಭ್ಯಾಸವನ್ನ ಅವರಲ್ಲಿ ಬೆಳೆಸಿ ಹಾಗೂ ಅವರಿಗೆ ಸಾಂಸ್ಥಿಕ ಕೌಶಲ್ಯಗಳನ್ನ ಕಲಿಸಿಕೊಡಿ.

ಇನ್ನೊಬ್ಬರಿಗೆ ಗೌರವ ಕೊಡೋದು

ಇನ್ನೊಬ್ಬರಿಗೆ ಗೌರವ ಕೊಡೋದು

ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ತಮ್ಮ ಗುರುಹಿರಿಯರಿಗೆ ಗೌರವ ಕೊಡಬೇಕೆನ್ನುವ ಪಾಠವನ್ನ ಎಲ್ಲ ಹೆತ್ತವರೂ ಕಲಿಸಿಯೇ ಇರುತ್ತಾರೆ. ಆದರೆ ಅದಷ್ಟೇ ಸಾಲದು. ಗುರುಹಿರಿಯರ ಜೊತೆಗೆ ಪ್ರತೀ ವ್ಯಕ್ತಿಗೂ ಗೌರವ ನೀಡುವ ಪ್ರವೃತ್ತಿಯನ್ನ ನಿಮ್ಮ ಮಗುವಿಗೆ ಕಲಿಸಿಕೊಡಿ. ನಿಮ್ಮ ಮಗು ಯಾರನ್ನೂ ಕೀಳಾಗಿ ಕಾಣೋದು ಬೇಡ. ಅವರು ಸಜ್ಜನ ನಾಗರಿಕರಾಗುವಂತಾಗಲು ಅವರಲ್ಲಿ ಸಹಾನುಭೂತಿಯ ಮನೋಭಾಅವನೆಯನ್ನ ಬೆಳೆಸಿರಿ.

ಕಾರುಣ್ಯಭರಿತ ದೃಷ್ಟಿಕೋನವನ್ನ ನಿಮ್ಮ ಮಗು ಬೆಳೆಸಿಕೊಳ್ಳಲಿ

ಕಾರುಣ್ಯಭರಿತ ದೃಷ್ಟಿಕೋನವನ್ನ ನಿಮ್ಮ ಮಗು ಬೆಳೆಸಿಕೊಳ್ಳಲಿ

ತನ್ನಿಂದ ಸಾಧ್ಯವಾದಷ್ಟು ಪರರಿಗೆ ಸಹಾಯ ಮಾಡುವ ಪ್ರವೃತ್ತಿ, ಸಜ್ಜನಿಕೆ, ಹಾಗೂ ದಯೆಯಂತಹ ಮಾನವೀಯ ಗುಣಗಳನ್ನ ನಿಮ್ಮ ಮಗು ಅತ್ಯಗತ್ಯವಾಗಿ ಅಳವಡಿಸಿಕೊಳ್ಳಬೇಕು. ಇತರರಿಗೆ ತನ್ನ ಕೈಲಾದ ನೆರವು ನೀಡುವ ಗುಣ ಯಾವತ್ತೂ ನಿಮ್ಮ ಮಗುವಿನಲ್ಲಿ ನೆಲೆಯಾಗಿರಲಿ. ತಮ್ಮ ಸ್ವಂತ ಭಾವನೆಗಳಿಗೆ ಹಾಗೂ ಅವಶ್ಯಕತೆಗಳಿಗೆ ಅವರು ಅದೆಷ್ಟು ಮಹತ್ವವನ್ನ ನೀಡುತ್ತಾರೆಯೋ ಅಷ್ಟೇ ಮಹತ್ವವನ್ನ ಇತರ ಭಾವನೆ ಹಾಗೂ ಅವಶ್ಯಕತೆಗಳಿಗೂ ನೀಡುವುದನ್ನ ಅವರಿಗೆ ಕಲಿಸಿಕೊಡಿ.

ನಿಮ್ಮ ಮಗು ಕ್ರೀಡಾಮನೋಭಾವನೆಯನ್ನ ಬೆಳೆಸಿಕೊಳ್ಳಲಿ

ನಿಮ್ಮ ಮಗು ಕ್ರೀಡಾಮನೋಭಾವನೆಯನ್ನ ಬೆಳೆಸಿಕೊಳ್ಳಲಿ

ನಿಮ್ಮ ಮಗುವಿಗೆ ಅತ್ಯುತ್ತಮವಾಗಿ ಹೊರಹೊಮ್ಮುವುದಕ್ಕೆ ಬೇಕಾದ ಕೌಶಲ್ಯಗಳನ್ನ ಕಲಿಸಿದ್ದೀರ, ಅವರಲ್ಲಿ ಸ್ಪರ್ಧಾಮನೋಭಾವನೆಯನ್ನೂ ಬೆಳೆಸಿದ್ದೀರ. ನಿಮ್ಮ ಮಗುವಿಗೆ ಅದೆಷ್ಟೇ ಸಾಮರ್ಥ್ಯವಿರಲೀ, ಅದೆಷ್ಟೇ ಕೌಶಲ್ಯಗಳಿರಲೀ, ಒಮ್ಮೊಮ್ಮೆ ಸ್ಪರ್ಧೆಯಲ್ಲಿ ನಿಮ್ಮ ಮಗುವಿಗೂ ಸೋಲಾಗುವ ಸಾಧ್ಯತೆ ಇದ್ದೇ ಇರುತ್ತದೆ ಅಲ್ಲವೇ ? ಅಂತಹ ಸನ್ನಿವೇಶಗಳಲ್ಲಿ ಅವರು ತಮ್ಮ ಸೋಲನ್ನ ಆಪ್ತವಾಗಿ, ಗೌರವಪೂರ್ವಕವಾಗಿ ಸ್ವೀಕರಿಸುವಂತಾಗಬೇಕು ಹಾಗೂ ಅವರಲ್ಲಿನ ಸ್ಪರ್ಧಾ ಮನೋಭಾವನೆಯನ್ನ ಹಾಗೆಯೇ ಜೀವಂತವಾಗಿ ಇರಿಸಿಕೊಂಡಿರಬೇಕು. ವಿಶಾಲ ಹೃದಯದವರಾಗಿದ್ದು, ತಮ್ಮ ಸೋಲನ್ನ ನಿಭಾಯಿಸುವ ಸಾಮರ್ಥ್ಯ ಅವರಿಗಿರಬೇಕು, ಅಂತಹಾ ಮನೋಭಾವನೆಯನ್ನ ನೀವು ಅವರಲ್ಲಿ ಬೆಳೆಸಬೇಕು.

ಬೆವರಿನ ಬೆಲೆಯ ಅರಿವು ನಿಮ್ಮ ಮಗುವಿಗಿರಲಿ

ಬೆವರಿನ ಬೆಲೆಯ ಅರಿವು ನಿಮ್ಮ ಮಗುವಿಗಿರಲಿ

ಜೀವನದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಒಂದು ಬೆಲೆಯಿರುತ್ತದೆ. ಹಾಗಾಗಿ ಯಾವುದನ್ನೇ ಪಡೆದುಕೊಳ್ಳುವುದಕ್ಕಾದರೂ ಕಠಿಣ ಶ್ರಮ ಪಡಬೇಕಾದುದು ಅಗತ್ಯ ಅನ್ನೋ ಸತ್ಯವನ್ನ ನಿಮ್ಮ ಮಗುವಿಗೆ ಕಲಿಸಿಕೊಡಿ. ತಮಗಿಷ್ಟವಾದ ಗೊಂಬೆಯನ್ನ ಪಡೆದುಕೊಳ್ಳೋದರಿಂದ ಹಿಡಿದು, ತಮ್ಮ ಜೀವನದ ಗುರಿಯನ್ನ ಸಾಧಿಸಿಕೊಳ್ಳೋ ವಿಚಾರದವರೆಗೂ, ಯಾವುದನ್ನೂ ಹಾಗೇ ಸಲೀಸಾಗಿ ತೆಗೆದುಕೊಳ್ಳಬಾರದೆಂಬ ಮಹತ್ತರ ಪಾಠವನ್ನ, ಯಾವುದೂ ಪುಕ್ಕಟೆಯಾಗಿ ದೊರಕಲಾರದೆಂಬ ಜೀವನ ಸತ್ಯವನ್ನ ಅವರಿಗೆ ಕಲಿಸಿಕೊಡಿ, ತಿಳಿಸಿಕೊಡಿ. ಅರ್ಪಣಾ ಮನೋಭಾವ ಹಾಗೂ ಪ್ರಾಮಾಣಿಕತೆಯಿಂದ ಮಾಡುವ ಯಾವ ಕೆಲಸವೂ ವ್ಯರ್ಥವಾಗದೆಂಬ ಸತ್ಯವನ್ನೂ ಅವರಿಗೆ ಮನವರಿಕೆ ಮಾಡಿಕೊಡಿ.

English summary

Life Lessons To Teach Your Kids to Be the Best Version Of Themselves

Life lessons to teach your kids to Be the best version of themselves, have a look.
X
Desktop Bottom Promotion