For Quick Alerts
ALLOW NOTIFICATIONS  
For Daily Alerts

ಹವಾಮಾನ ಬದಲಾದಾಗ ಮಕ್ಕಳಿಗೆ ಕಾಡುವ ಶೀತ, ಕೆಮ್ಮಿಗೆ ಮನೆಮದ್ದೇನು?

|

ಮಳೆಗಾಲದಲ್ಲಿ ಮಕ್ಕಳಲ್ಲಿ ಶೀತ, ಜ್ವರ, ಕೆಮ್ಮು ಮಾತ್ರವಲ್ಲ ಉದರ ಸಂಬಂಧಿ ಸಮಸ್ಯೆಗಲೂ ಸಾಮಾನ್ಯ. ಮಳೆಗೆ ಒದ್ದೆಯಾಗಿ, ಕಲುಷಿತ ನೀರು ಕುಡಿದೋ ಅಥವಾ ಥಂಡಿ ವಾತಾವರಣದಿಂದ ಮಕ್ಕಳಿಗೆ ಹುಷಾರು ತಪ್ಪುವುದು ಬೇಗ. ಸಾಮಾನ್ಯವಾಗಿ ಮಕ್ಕಳು ವರ್ಷಕ್ಕೆ ಎಂಟರಿಂದ ಹತ್ತು ಬಾರಿ ಶೀತಕ್ಕೆ ಒಳಗಾಗುತ್ತಾರಂತೆ. ಹೆಚ್ಚಿನ ಶೀತ ಬೇಗನೆ ಕಡಿಮೆಯಾಗಿಬಿಡುತ್ತದೆ. ಆದರೂ ಮಕ್ಕಳಿಗೆ ಶೀತ ಶುರುವಾದರೆ ಕಿರಿಕಿರಿ ಹೆಚ್ಚಾಗುವುದು ಪೋಷಕರಿಗೆ, ಗಂಟಲುನೋವು, ಶೀತ, ಮೂಗು ಸೋರುವಿಕೆ, ಮೂಗು ಕಟ್ಟುವುದರಿಂದ ಮಕ್ಕಳು ಹೈರಾಣಾಗಿಬಿಡುತ್ತವೆ. ಈ ಸಮಸ್ಯೆಯನ್ನು ನಿಭಾಯಿಸಲು ಮನೆಯಲ್ಲೇ ಪೋಷಕರು ಏನು ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ದ್ರವಗಳನ್ನು ಕೊಡಿ

ದ್ರವಗಳನ್ನು ಕೊಡಿ

ಶೀತ, ಜ್ವರದ ಸಮಯದಲ್ಲಿ ಮಕ್ಕಳಿಗೆ ಹೆಚ್ಚು ದ್ರವಾಹಾರ ನೀಡಬೇಕು. ಜ್ವರ, ವಾಂತಿ ಅಥವಾ ಬೇಧಿಯಿಂದ ಡಿಹೈಡ್ರೇಟ್‌ ಆದಾಗ ಹೆಚ್ಚು ದ್ರವಾಹಾರ ಕೊಡುವುದು ಮಕ್ಕಳನ್ನು ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುತ್ತದೆ. ಹೆಚ್ಚು ದ್ರವಾಹಾರ ನೀಡುವುದರಿಂದ ಗಟ್ಟಿಯಾಗಿರುವ ಶೀತ ಅಂದರೆ ಲೋಳೆಯು ಹೊರಬರಲೂ ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳನ್ನು ರಿಹೈಡ್ರೇಟ್‌ ಮಾಡುವ ಪಾನೀಯ, ಸೂಪ್‌, ಬಿಸಿ ನೀರು ಆಗಾಗ ಕೊಡಿ. ಎದೆಹಾಲು ಕುಡಿಯುವ ಮಕ್ಕಳಾದರೆ ಮಗುವಿಗೆ ಎದೆಹಾಲು ನೀಡಿ. ಇದು ಕಟ್ಟಿರುವ ಮೂಗಿನಿಂದಲೂ ಶಮನ ನೀಡುತ್ತದೆ.

ವಿಶ್ರಾಂತಿ

ವಿಶ್ರಾಂತಿ

ಕೆಲವು ಮಕ್ಕಳು ಹುಷಾರಿಲ್ಲಾದಾಗ ಆಟವಾಡಲು ಬಯಸುವುದು ಹೆಚ್ಚು. ಆದರೆ ಆಟವಾಡಲು ಬಿಡಬೇಡಿ, ನಿಶ್ಯಕ್ತಿ ಹೆಚ್ಚಾಗಬಹುದು. ಆನಾರೋಗ್ಯದಿಂದ ಶಕ್ತಿ ಕಳೆದುಕೊಳ್ಳುವ ದೇಹಕ್ಕೆ ಶಕ್ತಿಯನ್ನು ಮರುಪಡೆಯಲು ವಿಶ್ರಾಂತಿಯ ಅಗತ್ಯವಿರುತ್ತದೆ. ಮಕ್ಕಳನ್ನು ಬೆಚ್ಚಗಿಡಿ, ಆದಷ್ಟು ಕಾಟನ್‌ ಬಟ್ಟೆ ಹಾಕಿಸಿ. ಶಾಲೆಗೆ ಹೋಗುವ ಮಕ್ಕಳಾದರೆ ಕಳುಹಿಸಬೇಡಿ. ಆದಷ್ಟು ವಿಶ್ರಾಂತಿಯನ್ನು ಪಡೆಯುವಂತೆ ನೋಡಿಕೊಳ್ಳಿ.

ಜೇನುತುಪ್ಪ

ಜೇನುತುಪ್ಪ

ಅಂಬೆಗಾಲಿಡುವ ಮಕ್ಕಳಿಗೆ ದಿನಕ್ಕೆ ಎರಡರಿಂದ ಮೂರು ಬಾರಿ ಒಂದೆರಡು ಹನಿ ಜೇನುತುಪ್ಪವನ್ನು ನೆಕ್ಕಲು ನೀಡಿ. ಇದು ಮಗುವಿನ ಜೀರ್ಣಾಂಗ ಸ್ವಚ್ಛವಾಗಿಡಲು ಮತ್ತು ಅತಿಸಾರವನ್ನು ತಡೆಯಲು ಸಹಾಯ ಮಾಡುತ್ತದೆ.

ಮಸಾಜ್‌

ಮಸಾಜ್‌

ನೋವು ನಿವಾರಕ ಮುಲಾಮ್‌ ತಲೆನೋವು ಶೀತಕ್ಕೆ ಮಕ್ಕಳಿಗೆ ಬಳಸಬಹುದು. ಇದು ಬೇಗನೆ ಶೀತಕ್ಕೆ ಪರಿಹಾರ ನೀಡುತ್ತದೆ. ತಲೆನೋವು ಹಾಗೂ ಶೀತ ಸಂಬಂಧಿತ ಸಮಸ್ಯೆಗಳಿಗೆ ಎಂಟು ಗಂಟೆಗಳವರೆಗೂ ರಿಲೀಫ್‌ ನೀಡುತ್ತದೆ. ಮಗುವಿನ ಹಣೆ, ಕುತ್ತಿಗೆಗೆ ಮುಲಾಮನ್ನು ಹಚ್ಚಿ ಮೃದುವಾಗಿ ಮಸಾಜ್‌ ಮಾಡಿ. ಶೀತವಿದ್ದರೆ ಎದೆ ಮತ್ತು ಗಂಟಲಿಗೂ ಹಚ್ಚಿ ಮಸಾಜ್‌ ಮಾಡಿ. ಇದು ಕಟ್ಟಿದ ಮೂಗಿಗೂ ಪರಿಹಾರ ನೀಡುತ್ತದೆ. ಸಾಧ್ಯವಾದರೆ ಬೆನ್ನು ಅಂಗಾಲಿಗೂ ಮುಲಾಮು ಹಚ್ಚಿ ಮೃದುವಾಗಿ ಮಸಾಜ್‌ ಮಾಡಿ.

ಹಬೆ/ ಸ್ಟೀಮ್‌ ನೀಡಿ

ಹಬೆ/ ಸ್ಟೀಮ್‌ ನೀಡಿ

ಶೀತ ಆದರೆ ಕಟ್ಟಿದ ಮೂಗಿನಿಂದ ಉಸಿರಾಡೋದಿಕ್ಕೂ ಆಗೋದಿಲ್ಲ, ನಿದ್ದೆಯೂ ಬಾರದೆ ಕಿರಿಕಿರಿ ಎನಿಸಿಬಿಡುತ್ತದೆ. ಹೀಗಿದ್ದರೆ ಸ್ವಲ್ಪ ಹಬೆಯನ್ನು ತೆಗೆದುಕೊಳ್ಳುವಂತೆ ಮಾಡಿ. ಬಿಸಿ ನೀರನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಹಬೆ ತಾಕುವಂತೆ ಮಗುವನ್ನು ನಿಲ್ಲಿಸಿ. ಇಲ್ಲವಾದರೆ ಬಾತ್‌ರೂಮ್‌ನಲ್ಲೂ ಬಿಸಿ ನೀರನ್ನು ಬಕೆಟ್‌ನಲ್ಲಿ ತುಂಬಿಸಿ ಅದಕ್ಕೆ ಶೀತಕ್ಕೆ ಬಳಸುವ ಮುಲಾಮು ಹಾಕಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬಿಸಿ ಆವಿಯನ್ನು ಮಗು ಉಸಿರಾಡುವಂತೆ ಮಾಡಿ, ಇದು ಕಟ್ಟಿದ ಮೂಗನ್ನು ಸರಾಗವಾಗಿ ತೆರೆಯುವಂತೆ ಮಾಡುತ್ತದೆ. ಅಲ್ಲದೇ ಶೀತ ಗಟ್ಟಿಯಾಗಿ ಮೂಗು ಕಟ್ಟಿದ್ದರೆ ಲೋಳೆಯು ಸರಾಗವಾಗಿ ಇಳಿದುಹೋಗಲೂ ಸಹಾಯ ಮಾಡುತ್ತದೆ. ಹಬೆಯನ್ನು ತೆಗೆದುಕೊಳ್ಳುವುದರಿಂದ ನಿದ್ದೆಗೂ ಶೀತದಿಂದ ಅಡ್ಡಿಯಾಗದು.

ಬೆಚ್ಚಗಿನ ಉಪ್ಪುನೀರಿನಿಂದ ಗಾರ್ಗಲ್‌ ಮಾಡಿಸಿ

ಬೆಚ್ಚಗಿನ ಉಪ್ಪುನೀರಿನಿಂದ ಗಾರ್ಗಲ್‌ ಮಾಡಿಸಿ

ಉಪ್ಪು ನೀರು ಗಂಟಲು ನೋವಿಗೆ ಪರಿಹಾರ ನೀಡುತ್ತದೆ. ಐದಾರು ವರ್ಷದ ಮಕ್ಕಳಾದರೆ ಸ್ವಲ್ಪ ಬೆಚ್ಚಗೆ ಇರುವ ನೀರಿಗೆ ಕಲ್ಲುಪ್ಪು ಹಾಕಿ ಗಾರ್ಗಲ್‌ ಮಾಡಿಸಿ. ಇದು ಗಟ್ಟಿಯಾದ ಲೊಳೆಯನ್ನು ಸಡಿಲಗೊಳಿಸಲೂ ಸಹಕಾರಿ.

ಮಕ್ಕಳಿಗೆ ಜ್ವರ ಶೀತವಿದ್ದಾಗ ಆದಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ. ಮೂಗು ಒರೆಸಿದ ಬಟ್ಟೆಗಳನ್ನು ಆಗಾಗ ಬದಲಿಸಿ, ಸಾಧ್ಯವಾದರೆ ಟಿಶ್ಯು ಪೇಪರ್‌ ಬಳಸಿ, ಒಂದು ಬಾರಿ ಬಳಸಿ ಬಿಸಾಕಬಹುದು. ಮಗುವಿಗೆ ಶೀತವಾದಾಗ ಒರಟಾದ ಕರ್ಚೀಫ್‌ನಿಂದ ಮೂಗು ಒರೆಸಬೇಡಿ. ಮಗುವಿನ ಮುಖದ ಚರ್ಮ ಸೂಕ್ಷ್ಮವಾಗಿರುತ್ತದೆ. ಒರಟಾಗಿ ಒರೆಸಿದಾಗ ಚರ್ಮ ಎದ್ದು ಉರಿಯಾಗುವ ಸಂಭವ ಹೆಚ್ಚು. ಶೀತವಾದಾಗ ಮೂಗು ಸ್ವಚ್ಛಗೊಳಿಸಲು ಬಟ್ಟೆಯನ್ನು ಒದ್ದೆ ಮಾಡಿ ಸ್ವಚ್ಛಗೊಳಿಸಿ.

English summary

Know Simple Remedies for Common Cold And Flu In Kids in kannada

Here are simple remedies for common cold and flu in kids in kannada, read on....
Story first published: Saturday, August 27, 2022, 11:04 [IST]
X
Desktop Bottom Promotion