For Quick Alerts
ALLOW NOTIFICATIONS  
For Daily Alerts

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಿಸುವುದು ಸೂಕ್ತ?

|

ಸುಮಾರು ಹತ್ತು ಹದಿನೈದು ವರ್ಷದ ಹಿಂದೆಕ್ಕೆ ಹೋಲಿಸಿದರೆ ಮಕ್ಕಳು ಈಗ ಬೆಳೆಯುತ್ತಿರುವ ರೀತಿಗೂ ಆಗ ಬೆಳೆದ ರೀತಿಗೂ ತುಂಬಾ ವ್ಯತ್ಯಾಸವಿದೆ. ಹಿಂದೆಯೆಲ್ಲಾ ಈಗೀನಂತೆ ಸ್ಮಾರ್ಟ್‌ಫೋನ್‌ ಲೋಕವಿರಲಿಲ್ಲ. ಮೊಬೈಲ್‌ ಫೋನ್‌ ಬಳಕೆಯಿದ್ದರೂ ಸ್ಮಾರ್ಟ್ ಫೋನ್‌ ಬಳಕೆ ತುಂಬಾ ಕಡಿಮೆ ಇತ್ತು. ಇನ್ನು ಫ್ರೀ ಡಾಟಾ ಇರಲಿಲ್ಲವಾದರಿಂದ ಈಗೀನಂತೆ ಅನ್‌ಲಿಮಿಟೆಡ್ ಇಂಟರ್‌ನೆಟ್ ಸೌಲಭ್ಯವಿರಲಿಲ್ಲ.

Kids Using Mobile

ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ. ಬಡವ -ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರ ಕೈಯಲ್ಲಿ ಸ್ಮಾರ್ಟ್‌ಫೋನ್‌ ಇದ್ದೇ ಇರುತ್ತದೆ. ಎಷ್ಟೋ ಜನರು ತಮ್ಮಅಮೂಲ್ಯವಾದ ಸಮಯವನ್ನು ಮೊಬೈಲ್‌ ನೋಡುವುದರಲ್ಲಿಯೇ ಕಳೆಯುತ್ತಾರೆ. ಇನ್ನು ಮಕ್ಕಳಿಗೆ ಮೊಬೈಲ್‌ ಎಂದರೆ ಏನೋ ಆಕರ್ಷಣೆ. ಇನ್ನೂ ಒಂದು ವರ್ಷ ತುಂಬಿರಕ್ಕಿಲ್ಲ, ಅದಕ್ಕೆ ಮೊಬೈಲ್ ನೋಡುವ ಚಟ ಬೆಳೆದಿರುತ್ತದೆ.

ಇನ್ನು ಸ್ವಲ್ಪ ದೊಡ್ಡ ಮಕ್ಕಳಿಗೆ ಅಪ್ಪ-ಅಮ್ಮ ಮೊಬೈಲ್‌ಗೆ ಏನೇ ಪಾಸ್‌ವರ್ಡ್ ಹಾಕಿರಲಿ ಅದನ್ನು ತಿಳಿದು ಓಪನ್ ಮಾಡುವ ಕಲೆ ಗೊತ್ತಿರುತ್ತದೆ. ಓದು ಎಂದರೆ ಆಗಲ್ಲ, ಆದರೆ ಮೊಬೈಲ್‌ನಲ್ಲಿ ಒಂದಿಷ್ಟೂ ಕಣ್ಣು ಮಿಣುಕಿಸದೆ ಗಂಟೆ-ಗಟ್ಟಲೆ ಸಮಯವನ್ನು ಮೊಬೈಲ್ ನೋಡುತ್ತಾ ಕಳೆಯುತ್ತಾರೆ.

ಮಕ್ಕಳ ಮೇಲೆ ಮೊಬೈಲ್ ಪ್ರಭಾವ

ಮಕ್ಕಳ ಮೇಲೆ ಮೊಬೈಲ್ ಪ್ರಭಾವ

ಮನೆಯಿಂದ ಹೊರಗಡೆ ಹೋಗಿ ಆಡುವುದಿರಲಿ, ಮನೆಯೊಳಗೆ ಕೇರಂ, ಚೆಸ್ ಈ ರೀತಿಯ ಆಟಗಳನ್ನೂ ಆಡುವುದಿಲ್ಲ. ಅದರ ಬದಲಿಗೆ ಮೊಬೈಲ್ ಗೇಮ್ ಆಡುವುದರಲ್ಲಿ ಎತ್ತಿದ ಕೈ. ಇನ್ನು ಕೆಲ ಪೋಷಕರು ಮಕ್ಕಳಿಗೆ ಟ್ಯಾಬ್ಲೆಟ್ ಗಿಫ್ಟ್ ನೀಡುತ್ತಾರೆ. ಮಕ್ಕಳು ಗಲಾಟೆ ಮಾಡದೆ ಒಂದು ಕಡೆ ಕೂರಲಿ ಎಂದು ತಮ್ಮ ಮೊಬೈಲ್ ಕೊಟ್ಟು ಬಿಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ.

ಇತ್ತೀಚೆಗೆ ಡಿಜಿಟಲ್‌ ಮಾಧ್ಯಮಗಳು ಮಕ್ಕಳ ಮೇಲೆ ಬೀರುತ್ತಿರುವ ಪ್ರಭಾವಗಳ ಕುರಿತು ಕಿಡ್ಸ್ ಅಂಡ್ ಟೆಕ್‌ ನಡೆಸಿದ ಅಧ್ಯಯನ ವರದಿಯಲ್ಲಿ ಬಹುತೇಕ ಮಕ್ಕಳು 11 ವರ್ಷ ತುಂಬುವುದಕ್ಕಿಂತ ಮುಂಚೆ ಮೊಬೈಲ್ ಬಳಕೆ ಮಾಡಲು ಪ್ರಾರಂಭಿಸುತ್ತಾರೆ. ಅದರಲ್ಲೂ ಶೇ. 50ರಷ್ಟು ಮಕ್ಕಳು ಹನ್ನೆರಡು ವರ್ಷ ತುಂಬುವುದಕ್ಕಿಂತ ಮುಂಚೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಅಕೌಂಟ್‌ ಹೊಂದಿರುತ್ತಾರೆ ಎಂದು ಹೇಳಿದೆ. ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಇಂಥ ತಾಣಗಳಲ್ಲಿ ಎಷ್ಟೋ ಮಕ್ಕಳು ಸಕ್ರಿಯವಾಗಿರುವುದು ಮಾತ್ರವಲ್ಲ, ತುಂಬಾ ಅಭಿಮಾನಿ ಬಳಗ ಹೊಂದಿರುವ ಮಕ್ಕಳನ್ನೂ ನೋಡಬಹುದು.

ಮಕ್ಕಳಲ್ಲಿ ಮೊಬೈಲ್ ಚಟ

ಮಕ್ಕಳಲ್ಲಿ ಮೊಬೈಲ್ ಚಟ

ಕೆಲವೊಂದು ಪೋಷಕರೇ ಮಕ್ಕಳಿಗೆ ಮೊಬೈಲ್‌ ಬಳಕೆ ಮಾಡಲು ಕೊಟ್ಟರೆ, ಇನ್ನು ಕೆಲವು ಮಕ್ಕಳು ಪೋಷಕರು ವಿರೋಧಿಸಿದರೂ ಮೊಬೈಲ್ ಬಳಕೆ ಮಾಡುತ್ತವೆ. ಮಕ್ಕಳು ಹೀಗೆ ಮೊಬೈಲ್‌ ಬಳಕೆ ಆಡುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮೊಬೈಲ್‌ನಲ್ಲಿ ತಾಸುಗಟ್ಟಲೆ ಕಳೆಯುವುದರಿಂದ ಮಕ್ಕಳ ದೈಹಿಕ ವ್ಯಾಯಾಮ ಕಡಿಮೆಯಾಗುತ್ತದೆ. ಇನ್ನು ಅವರ ಮಾನಸಿಕ ಸ್ಥಿತಿಯೂ ಹಾಳಾಗುತ್ತದೆ. ಮೊಬೈಲ್‌ ಹೆಚ್ಚು ನೊಡುವುದರಿಂದ ಕಣ್ಣಿನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಅಲ್ಲದೆ ಸಾಮಾಜಿಕ ತಾಣದಲ್ಲಿ ತಪ್ಪಾದ ವ್ಯಕ್ತಿಗಳ ಸಹವಾಸದಿಂದಾಗಿ ಹಾದಿ ತಪ್ಪುವ ಸಾಧ್ಯತೆಯೂ ಇದೆ.

ಹಾಗಾದರೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್ ನೀಡುವುದು ಸೂಕ್ತ?

ಹಾಗಾದರೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್ ನೀಡುವುದು ಸೂಕ್ತ?

ಮಕ್ಕಳಿಗೆ ಮೊಬೈಲ್ ನೀಡಲು ಯಾವ ವಯಸ್ಸು ಸೂಕ್ತ ಎಂದು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ, ಏಕೆಂದರೆ ಮಕ್ಕಳು ಚಿಂತಿಸುವ ರೀತಿ ಒಬ್ಬೊಬ್ಬರದು ಒಂದೊಂದು ರೀತಿ ಇರುತ್ತದೆ. ಕೆಲ ಮಕ್ಕಳು ತುಂಬಾ ಚಿಕ್ಕ ಪ್ರಾಯದಲ್ಲಿಯೇ ಯಾವುದು ತಪ್ಪು ಯಾವುದು ಸರಿ ಎಂದು ಪ್ರೌಢರಂತೆ ಯೋಚಿಸಿದರೆ ಇನ್ನು ಕೆಲವು ಮಕ್ಕಳು ತುಂಬಾ ಬಾಲಿಶವಾಗಿ ವರ್ತಿಸುತ್ತಾರೆ. ಆದ್ದರಿಂದ ಮಕ್ಕಳ ವರ್ತನೆ ನೋಡಿ ಅವರಿಗೆ ಮೊಬೈಲ್‌ ನೀಡಬೇಕೆ, ಬೇಡ್ವೆ ಎಂದು ಪೋಷಕರು ಯೋಚಿಸಬೇಕು.

ಪೋಷಕರೇ ಗಮನವಿರಲಿ

ಪೋಷಕರೇ ಗಮನವಿರಲಿ

ಮಕ್ಕಳು ಮೊಬೈಲ್‌ ಕೇಳಿದಾಗ ಕೊಡಲಿಲ್ಲ ಎಂದರೆ ಅದು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದು. ಮಕ್ಕಳು ಮೊಬೈಲ್ ಕೇಳಿದರೆಂದು ಕೊಡಿಸುವ ಮೊದಲು ಅವರಿಗೆ ಯಾವ ಸಂದರ್ಭದಲ್ಲಿ ಮೊಬೈಲ್ ಕೊಡುವುದು ಒಳ್ಳೆಯದು ಎಂದು ಪೋಷಕರು ಯೋಚಿಸುವುದು ಒಳ್ಳೆಯದು. ಮೊಬೈಲ್ ಕೊಟ್ಟ ಮೇಲೆ ಪೋಷಕರು ಮಕ್ಕಳ ವರ್ತನೆ ಬಗ್ಗೆ ಗಮನ ನೀಡಲೇಬೇಕು. ಅವರು ಮೊಬೈಲ್‌ ಅನ್ನು ಯಾವ ರೀತಿ ಬಳಸುತ್ತಿದ್ದಾರೆ, ಎಷ್ಟು ಸಮಯ ಬಳಸುತ್ತಿದ್ದಾರೆ ಎಂದು ಗಮನಿಸಬೇಕು. ಅವರ ವರ್ತನೆಯಲ್ಲಿ ಅಸಹಜತೆ ಕಂಡರೆ ತಿಳಿ ಹೇಳುವುದು ಉತ್ತಮ.

ಮಕ್ಕಳಿಗೆ ಮೊಬೈಲ್ ಬಳಸಬೇಡಿ ಎಂದು ಹೇಳಿದರೆ ಅವರು ನಿಮ್ಮ ಮಾತನ್ನು ಕೇಳಲು ಸಿದ್ಧವಾಗಿರುವುದಿಲ್ಲ. ಬದಲಿಗೆ ಮೊಬೈಲ್ ಹೇಗೆ ಬಳಸಬೇಕು, ಎಷ್ಟು ಸಮಯ ಬಳಿಸಬೇಕು ಎಂಬ ತಿಳುವಳಿಕೆ ನೀಡುವ ಕೆಲಸವನ್ನು ಪೋಷಕರು ಮಾಡಬೇಕು.

English summary

In Which Age Can Give Mobile To Kids?

Do you know when is right time to give mobile to your kids, Here are best parenting tips, Read on.
X
Desktop Bottom Promotion