For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ: ಈ ಅಪಾಯಕಾರಿ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ

|

ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಅಧಿಕವಾಗುವುದು. ಡೆಂಗ್ಯೂ ಪ್ರಾಣಕ್ಕೆ ಅಪಾಯ ತರುವಂಥ ಕಾಯಿಲೆಯಾಗಿರುವುದರಿಂದ ಡೆಂಗ್ಯೂ ನಿರ್ಲಕ್ಷ್ಯ ಮಾಡುವಂತಿಲ್ಲ, ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಡೆಂಗ್ಯೂ ಜ್ವರ ಬಂದರೆ ಅಪಾಯ ಹೆಚ್ಚು. ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಶಾಲಾ ಮಕ್ಕಳಲ್ಲಿ ಕಂಡು ಬರುತ್ತಿದೆ, ಈಗಾಗಲೇ 15ಕ್ಕೂ ಹೆಚ್ಚು ಮಕ್ಕಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಡೆಂಗ್ಯೂ ಜ್ವರ ಹರಡದಂತೆ ಮುನ್ನೆಚ್ಚರಿಕೆವಹಿಸಬೇಕಾಗಿದೆ.

ಡೆಂಗ್ಯೂ ಜ್ವರ ಎಂದರೇನು?

ಡೆಂಗ್ಯೂ ಜ್ವರ ಎಂದರೇನು?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದೆ. ಡೆಂಗ್ಯೂ ಮಕ್ಕಳಿಗೆ ಬಂದರೆ ಅಪಾಯ ಹೆಚ್ಚು, ಏಕೆಂದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಡೆಂಗ್ಯೂ ತಗುಲಿದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆಯಾಗುವುದು. ಮಕ್ಕಳಲ್ಲಿ ಪ್ಲೇಟ್‌ಲೆಟ್‌ ತುಂಬಾನೇ ಕಡಿಮೆಯಾಗುವ ಅಪಾಯವಿದೆ.

ಮಕ್ಕಳಿಗೆ ಡೆಂಗ್ಯೂ ಅಪಾಯ ಏಕೆ?

ಮಕ್ಕಳಿಗೆ ಡೆಂಗ್ಯೂ ಅಪಾಯ ಏಕೆ?

ಸೊಳ್ಳೆಗಳು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ತುಂಬಾ ಇರುತ್ತದೆ, ಸಂಜೆ ಹೊತ್ತಿನಲ್ಲಿ ಮಕ್ಕಳು ಹೊರಗಡೆ ಆಟ ಆಡುತ್ತಿರುತ್ತಾರೆ, ಇನ್ನೂ ಕೆಲ ಮಕ್ಕಳು ತುಂಬು ತೋಳಿನ ಬಟ್ಟೆ ಬದಲಿಗೆ ಚಿಕ್ಕ ಚಡ್ಡಿ, ತೋಳಿಲ್ಲದ ಬಟ್ಟೆ ಇವುಗಳನ್ನು ಧರಿಸಿ ಆಡುತ್ತಾ ಇರುತ್ತಾರೆ, ಆಗ ಡೆಂಗ್ಯೂ ವೈರಸ್‌ ಇರುವ ಸೊಳ್ಳೆ ಕಚ್ಚಿದರೆ ಡೆಂಗ್ಯೂ ಜ್ವರ ಮಕ್ಕಳಿಗೆ ಬರುತ್ತದೆ. ಆದ್ದರಿಂದ ಮಕ್ಕಳಿಗೆ ಸೊಳ್ಳೆ ಕಚ್ಚದಂತೆ ತುಂಬಾ ಎಚ್ಚರವಹಿಸಿ, ಸೊಳ್ಳೆ ಕಚ್ಚದಂತೆ ಕ್ರೀಮ್‌, ಲೋಷನ್‌ ಹಚ್ಚಿ, ಮಕ್ಕಳು ಧರಿಸಿರುವ ಬಟ್ಟೆಗೆ ಹಾಕಲು ಸ್ಪ್ರೇ ಸಿಗುತ್ತೆ, ಅದನ್ನು ಬಳಸಿ.

ಮನೆಯ ಸುತ್ತ-ಮುತ್ತ ನೀರು ಇಲ್ಲದಂತೆ ಎಚ್ಚರವಹಿಸಿ, ಇಲ್ಲದಿದ್ದರೆ ಅದರಲ್ಲಿ ಸೊಳ್ಳೆಗಳು ಮೊಟ್ಟೆ ಹಾಕಿ ಮರಿ ಮಾಡುತ್ತವೆ. ಆದ್ದರಿಂದ ಬಾಟಲಿಗಳು, ತೆಂಗಿನಕಾಯಿ ಚಿಪ್ಪು, ಬಾಟಲಿಗಳು, ಹಳೆಯ ಟೈರ್‌ಗಳು ಇಂಥ ವಸ್ತುಗಳನ್ನು ಮನೆ ಸುತ್ತಮುತ್ತ ಇಡಬೇಡಿ.

ಮಕ್ಕಳಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು

ಮಕ್ಕಳಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು

* ಜ್ವರ ಕಂಡು ಬರುವುದು, ಜ್ವರ 2-7 ದಿನಗಳವರೆಗೆ ಕಂಡು ಬರುತ್ತದೆ.

* ಮೈ ಉಷ್ಣತೆ 104°Fಕ್ಕಿಂತ ಅಧಿಕವಿರುವುದು

* ತುಂಬಾ ತಲೆನೋವು, ಕಣ್ಣುಗಳಲ್ಲಿ ನೋವು, ವಾಂತಿ, ಬೇಧಿ, ಮೈಕೈ ನೋವು, ಮೂಳೆ ನೋವು, ಸ್ನಾಯುಗಳಲ್ಲಿ ನೋವು, ತ್ವಚೆಯಲ್ಲಿ ಗುಳ್ಳೆಗಳು ಕಂಡು ಬರುವುದು.

* ಕಾಯಿಲೆ ತುಂಬಾ ಗಂಭೀರವಾಗಿದ್ದರೆ ದವಡೆಯಲ್ಲಿ ರಕ್ತ ಬರುವುದು, ರಕ್ತ ವಾಂತಿ, ತೀವ್ರ ಉಸಿರಾಟ, ತಲೆಸುತ್ತು ಈ ಲಕ್ಷಣಗಳು ಕಂಡು ಬರುವುದು.

ಡೆಂಗ್ಯೂ ತಡೆಗಟ್ಟಲು ಏನು ಮಾಡಬೇಕು?

ಡೆಂಗ್ಯೂ ತಡೆಗಟ್ಟಲು ಏನು ಮಾಡಬೇಕು?

* ಸೊಳ್ಳೆಗಳನ್ನು ತಡೆಗಟ್ಟಲು ಮನೆ ಸುತ್ತ-ಮುತ್ತ ಸ್ವಚ್ಛವಾಗಿಡಿ.

* ಮಲಗುವಾಗ ಸೊಳ್ಳೆ ಪರದೆಯ ಒಳಗಡೆ ಮಲಗಿ.

* ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಮನೆಯ ಕಿಟಕಿ, ಬಾಗಿಲು ತೆರೆಯಬೇಡಿ. ಇಲ್ಲದಿದ್ದರೆ ಕಿಟಕಿಗಳಿಗೆ ಸೊಳ್ಳೆ ನೆಟ್‌ ಹಾಕಿಸಿ.

* ತುಂಬು ತೋಳಿನ ಬಟ್ಟೆಗಳನ್ನು ಮಕ್ಕಳಿಗೆ ತೊಡಿಸಿ.

English summary

How to Protect Your Children From Dengue Fever in Kannada

This rainy season how you can protect your children from dengue fever in kannada, Read on....
X
Desktop Bottom Promotion