For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಸಸ್ಯಾಹಾರ ಮಾತ್ರ ನೀಡುತ್ತಿದ್ದೀರಾ? ಅವರ ಡಯಟ್ ಪ್ಲ್ಯಾನ್ ಇರಲಿ

|

ಕೆಲವು ಪೋಷಕಾಂಶಗಳನ್ನು ಕೇವಲ ಮಾಂಸಾಹಾರ ಮಾತ್ರವೇ ಪೂರ್ಣಗೊಳಿಸಬಹುದು ಎಂಬ ಮಿಥ್ಯೆಗೆ ವಿರುದ್ದವಾಗಿ, ಸಸ್ಯಾಹಾರದಿಂದಲೂ ಈ ಎಲ್ಲಾ ಪೋಷಕಾಂಶಗಳನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆಯಬಹುದು (ವಿಶೇಷವಾಗಿ ಪುಟ್ಟ ಮಕ್ಕಳ ಆಹಾರ ಬದಲಾಗುತ್ತಾ ಹೋಗುವ ಕಾರಣ ಈ ಪೋಷಕಾಂಶಗಳ ವಿವರಗಳನ್ನು ಬರೆದಿಡುವುದು ಕಷ್ಟ). ಜೀವಮಾನವಿಡೀ ಸಸ್ಯಾಹಾರ ಕ್ರಮವನ್ನೇ ಅನುಸರಿಸುವ ಮೂಲಕ ಯಾವುದಾದರೂ ಪೋಷಕಾಂಶಗಳನ್ನು ಪಡೆಯದೇ ಹೋಗಬಹುದು ಎಂಬ ಆತಂಕವೂ ಬೇಡ. ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ ಸಾಕು, ಸಸ್ಯಾಹಾರಿ ಮಕ್ಕಳೂ ಉಳಿದ ಮಕ್ಕಳಷ್ಟೇ ಆರೋಗ್ಯವಂತರಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ.

ಮುಖ್ಯವಾಗಿ, ನಿಮ್ಮ ಮಗು ಸಸ್ಯಾಹಾರವನ್ನೇ ಸೇವಿಸುತ್ತಿದ್ದರೆ, ಮಗು ಸೇವಿಸುವ ಪ್ರತಿ ತುತ್ತನ್ನೂ ನೀವು ಪರಿಗಣಿಸಬೇಕಾಗುತ್ತದೆ. ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳು ಪ್ರಮುಖವಾಗಿ ಮಾಂಸಾಹಾರದಿಂದ ದೊರಕುವ ಕಾರಣ ಇವುಗಳನ್ನು ಸಸ್ಯಾಹಾರದಿಂದ ಪಡೆಯಬೇಕಾದರೆ ಈ ಅಂಶಗಳಿರುವ ಆಹಾರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. (ಒಂದು ಹೋಲಿಕೆಯಲ್ಲಿ, ಎರಡು ತುಂಡು ಕೋಳಿ ಮಾಂಸದಿಂದ ದೊರಕುವಷ್ಟು ಪ್ರೋಟೀನನ್ನು ಪಡೆಯಬೇಕಾದರೆ ಒಂದು ಕಪ್ ನಷ್ಟು ಬೀನ್ಸ್ ಮತ್ತು ಅಷ್ಟೇ ಪ್ರಮಾಣದ ಅನ್ನವನ್ನು ಸೇವಿಸಬೇಕಾಗುತ್ತದೆ). ಒಂದು ವೇಳೆ ಮಕ್ಕಳು ಆರೋಗ್ಯಕರ ಸಸ್ಯಾಹಾರದ ಬದಲು ಸಿದ್ಧ ಆಹಾರಗಳು, ಸೋಡಾ ಮತ್ತು ಇತರ ಅನಾರೋಗ್ಯಕರ ಆಹಾರಗಳಿಗೆ ಒಲವು ತೋರಿದರೆ ಮಾತ್ರ ಈ ಮಕ್ಕಳ ಪುಟ್ಟ ಹೊಟ್ಟೆಯಲ್ಲಿ ಆರೋಗ್ಯಕರ ಆಹಾರಕ್ಕೆ ಜಾಗವೇ ಇಲ್ಲದೇ ಹೋಗಿ ಮುಖ್ಯ ಪೋಷಕಾಂಶಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ನಿಮ್ಮ ಮಗು ಪ್ರತಿ ಹೊತ್ತಿನ ಊಟದಲ್ಲಿಯೂ ಸಾಕಷ್ಟು ಪೌಷ್ಟಿಕ, ವಿವಿಧ ಬಣ್ಣಗಳ, ರುಚಿಗಳ ಆರೋಗ್ಯಕರ ಸಸ್ಯಾಹಾರವನ್ನು ಸೇವಿಸುವಂತೆ ಮಾಡಬೇಕು.

ನಿಮ್ಮ ಸಸ್ಯಾಹಾರಿ ಮಗು ಅಗತ್ಯಕ್ಕೆ ತಕ್ಕಷ್ಟು ಪ್ರೋಟೀನನ್ನು ಪಡೆಯುತ್ತಿದೆ ಎಂದು ಹೇಗೆ ಖಚಿತಪಡಿಸಿಕೊಳ್ಳುವಿರಿ?

ನಿಮ್ಮ ಸಸ್ಯಾಹಾರಿ ಮಗು ಅಗತ್ಯಕ್ಕೆ ತಕ್ಕಷ್ಟು ಪ್ರೋಟೀನನ್ನು ಪಡೆಯುತ್ತಿದೆ ಎಂದು ಹೇಗೆ ಖಚಿತಪಡಿಸಿಕೊಳ್ಳುವಿರಿ?

ಒಂದು ವೇಳೆ ನಿಮ್ಮ ಮಗು ಮೊಟ್ಟೆಯನ್ನು ಸೇವಿಸಲು ಸಾಧ್ಯವಾದರೆ, ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಲಭ್ಯವಾಗುತ್ತದೆ. ಉಳಿದಂತೆ, ಮೊಟ್ಟೆಯನ್ನೂ ಸೇವಿಸದಿದ್ದರೆ, ಇಡಿಯ ಧಾನ್ಯಗಳನ್ನು ಸೇವಿಸುವ ಮೂಲಕ ಅಗತ್ಯ ಪ್ರಮಾಣದ ಪ್ರೋಟೀನ್ ಸೇವಿಸುವಂತೆ ಮಾಡಿ.

ಮಾಂಸಾಹಾರದ ಬದಲಿಗೆ ಸೇವಿಸಬಹುದಾದ ಪರ್ಯಾಯ ಸಸ್ಯಾಹಾರಿ ಖಾದ್ಯಗಳೆಂದರೆ:

ಮಾಂಸಾಹಾರದ ಬದಲಿಗೆ ಸೇವಿಸಬಹುದಾದ ಪರ್ಯಾಯ ಸಸ್ಯಾಹಾರಿ ಖಾದ್ಯಗಳೆಂದರೆ:

ತರಕಾರಿಯ ಬರ್ಗರ್

ಸೋಯಾ ಅವರೆಯ ನಗ್ಗೆಟ್ಸ್

ಟೋಫು

ಬೀನ್ಸ್

ಒಣ ಬೀಜಗಳು / ಈ ಬೀಜಗಳಿಂದ ತಯಾರಿಸಲಾದ ಬೆಣ್ಣೆ

ಅಮೇರಿಕಾದ ಅಮೇರಿಕನ್ ಅಕ್ಯಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಆಪ್) ಸಂಸ್ಥೆ ಮಗು ಘನ ಆಹಾರಗಳನ್ನು ಸೇವಿಸತೊಡಗಿದ ತಕ್ಷಣವೇ ಒಣಫಲಗಳನ್ನು ನೀಡಲು ತೊಡಗಬೇಕು ಎಂದು ಶಿಫಾರಸ್ಸು ಮಾಡಿದೆ. ಆದರೂ, ನಿಮ್ಮ ಮಗುವಿಗೆ ಯಾವ ಆಹಾರ ಸೂಕ್ತ ಎಂಬುದನ್ನು ಮಕ್ಕಳ ತಜ್ಞರು ಸಲಹೆ ಮಾಡಬಲ್ಲರು. ಮಕ್ಕಳಿಗೆ ಶೇಂಗಾಬೀಜಗಳನ್ನು ತಿನ್ನಿಸುವುದೇ ಆದರೆ, ಇದನ್ನು ಇಡಿಯಾಗಿ ನೀಡದಿರಿ, ಏಕೆಂದರೆ, ಇದು ಮಗುವಿನ ಗಂಟಲಿನಲ್ಲಿ ಸಿಕ್ಕಿಕೊಳ್ಳುವ ಅಪಾಯವಿದೆ. ಬದಲಿಗೆ ನುಣ್ಣಗೆ ಅರೆದ ಬೆಣ್ಣೆಯನ್ನು ತಿನ್ನಿಸಿ.

ತಜ್ಞರು ಕೆಲವು ಸಂಕೀರ್ಣ ಕಾರ್ಬೋಹೈಡ್ರೆಟುಗಳು ಮತ್ತು ಸಸ್ಯಾಹಾರಿ ಪ್ರೋಟೀನ್ (ಬೀನ್ಸ್ ಹಾಗೂ ಅನ್ನ) ಗಳನ್ನು ಸೇವಿಸಲು ನೀಡುವ ಮೂಲಕ ಮಕ್ಕಳಿಗೆ ಮಾಂಸಾಹಾರದ ಮೂಲಕ ಲಭ್ಯವಾಗುವ ಅಗತ್ಯ ಪ್ರಮಾಣದ ಎಲ್ಲಾ ಅಮೈನೋ ಆಮ್ಲಗಳು ಲಭಿಸುತ್ತವೆ. ಇಡಿಯ ದಿನದ ಅವಧಿಯಲ್ಲಿ ಸಾಕಷ್ಟು ಪ್ರಮಾಣದ ಸಸ್ಯಜನ್ಯ ಪ್ರೋಟೀನುಗಳ ಮಿಶ್ರಣವನ್ನು ಸೇವಿಸಲು ನೀಡಬೇಕು. ಇದರ ಜೊತೆಗೇ ಇತರ ಆಹಾರಗಳನ್ನೂ ಮಗು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವಂತೆ ಮಾಡಬೇಕು.

ಸಸ್ಯಾಹಾರಿ ಮಕ್ಕಳ (ಮಾಂಸಾಹಾರ ಸೇವಿಸದ) ಪಾಲಕರು ಪ್ರೋಟೀನ್ ಆಹಾರದ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ಅಂದರೆ, ಮಗು ಸಾಕಷ್ಟು ಪ್ರಮಾಣದಲ್ಲಿ ಬೀನ್ಸ್, ಇಡಿಯ ಧಾನ್ಯಗಳು, ಒಣಫಲಗಳು, ದ್ವಿದಳ ಧಾನ್ಯಗಳು, ಸೋಯಾ ಅವರೆಯ ಆಹಾರಗಳು ಎಲ್ಲವನ್ನೂ ಸೇವಿಸಬೇಕು.

ಸಸ್ಯಾಹಾರಿ ಮಗುವಿಗೆ ಇನ್ನೂ ಯಾವ ಬಗೆಯ ಆಹಾರಗಳ ಅಗತ್ಯವಿದೆ?

ಸಸ್ಯಾಹಾರಿ ಮಗುವಿಗೆ ಇನ್ನೂ ಯಾವ ಬಗೆಯ ಆಹಾರಗಳ ಅಗತ್ಯವಿದೆ?

ವಿಟಮಿನ್ ಬಿ12: ಬೆಳೆಯುತ್ತಿರುವ ಮಕ್ಕಳಿಗೆ ವಿಟಮಿನ್ ಬಿ12 ಅತಿ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಆದರೆ ಈ ಪೋಷಕಾಂಶ ಪ್ರಮುಖವಾಗಿ, ಮಾಂಸಾಹಾರದ ಮೂಲಕ ದೊರಕುತ್ತದೆ. ಹಾಗಾಗಿ, ಸಸ್ಯಾಹಾರಿ ಮಕ್ಕಳು ಈ ಪೋಷಕಾಂಶದಿಂದ ವಂಚಿತರಾಗದೇ ಇರಲು, ಡೈರಿ ಉತ್ಪನ್ನಗಳು (ಸಾಧ್ಯವಾದರೆ ಮೊಟ್ಟೆ) ಸಾಕಷ್ಟು ಪ್ರಮಾಣದಲ್ಲಿ ಸೇವಿಸುವಂತೆ ಮಾಡಬೇಕು. ಮೊಟ್ಟೆ ತಿನ್ನದೇ ಇದ್ದರೆ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಲು ಉತ್ಸಾಹ ತೋರದೇ ಇದ್ದಾಗ ಮಾತ್ರ ಈ ಅಂಶ ಇರುವ ಹೆಚ್ಚುವರಿ ಔಷಧಿಗಳನ್ನು ಮತ್ತು ಆಹಾರಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ, ಕೆಲವಾರು ಧಾನ್ಯಗಳು ವಿಟಮಿನ್ ಬಿ12 ಅಂಶದಿಂದ ಹೊಂದಿದ್ದು ಇವನ್ನು ಮಕ್ಕಳ ಆಹಾರದಲ್ಲಿ ಅಳವಡಿಸಬೇಕು. ವಿಟಮಿನ್ನುಗಳಿಂದ ಸಮೃದ್ಧಗೊಳಿಸಿದ ಸೋಯಾ ಹಾಲು (ಈ ವಿವರಗಳನ್ನು ಪ್ಯಾಕೆಟ್ಟಿನ ಮೇಲೆ ಮುದ್ರಿಸಿದ್ದು ಈ ವಿಟಮಿನ್ ಬಿ12 ಇರುವುದನ್ನು ಖಚಿತಪಡಿಸಿಕೊಳ್ಳಿ) ಈ ಅಂಶ ಎಲ್ಲಾ ಮಲ್ಟಿವಿಟಮಿನ್ ಮಾತ್ರೆಗಳಲ್ಲಿ ಇರುವುದಿಲ್ಲ. ಹಾಗಾಗಿ, ಮಕ್ಕಳ ತಜ್ಞರ ಸಲಹೆ ಪಡೆಯುವುದು ಅಗತ್ಯ.

ವಿಟಮಿನ್ ಸಿ:

ವಿಟಮಿನ್ ಸಿ:

ಮಗುವಿನ ಪ್ರತಿ ಊಟದಲ್ಲಿಯೂ ಸಾಕಷ್ಟು ವಿಟಮಿನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಬಹುತೇಕ ಎಲ್ಲಾ ಆಹಾರಗಳ ಮೂಲಕ ಕಬ್ಬಿಣದ ಅಂಶ ಸಿಗುತ್ತದಾದರೂ ಸಸ್ಯಾಹಾರದ ಮೂಲಕ ಲಭಿಸುವ ಕಬ್ಬಿಣ (ಇದಕ್ಕೆ ನಾನ್-ಹೀಮ್ ಐರನ್ ಎಂದೂ ಕರೆಯುತ್ತಾರೆ) ಮಾಂಸಾಹಾರದ ಮೂಲಕ ಲಭಿಸುವ ಕಬ್ಬಿಣದಷ್ಟು (ಇದಕ್ಕೆ ಹೀಮ್ ಐರನ್ ಎಂದೂ ಕರೆಯುತ್ತಾರೆ) ಸುಲಭವಾಗಿ ದೇಹದಲ್ಲಿ ಹೀರಲ್ಪಡುವುದಿಲ್ಲ. ಹಾಗಾಗಿ, ಅಗತ್ಯಕ್ಕೆ ತಕ್ಕಷ್ಟು ಕಬ್ಬಿಣದ ಅಂಶ ಮಗುವಿಗೆ ಲಭಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಊಟದಲ್ಲಿಯೂ ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿಸುವಂತೆ ಮಾಡಿ (ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ). ಇದೇನೂ ಕಷ್ಟದ ಕೆಲಸವಲ್ಲ, ಲಿಂಬೆ, ಕಿತ್ತಳೆ, ಸ್ಟ್ರಾಬೆರಿ ಮೊದಲಾದ ಹಣ್ಣುಗಳು, ಟೊಮಾಟೋ ಸಾಸ್ ನೊಂದಿಗೆ ಪಾಸ್ತಾ ಮೊದಲಾದವುಗಳನ್ನು ತಿನ್ನಿಸಿದರೆ ಸಾಕಾಗುತ್ತದೆ.

ಕಬ್ಬಿಣ: ಒಂದರಿಂದ ಮೂರು ವರ್ಷದ ಪುಟ್ಟ ಮಕ್ಕಳಿಗೆ ನಿತ್ಯವೂ 7 ಮಿಲಿಗ್ರಾಂ ನಷ್ಟು ಕಬ್ಬಿಣದ ಅವಶ್ಯಕತೆ ಇದೆ. ಬೆಳವಣಿಗೆಯ ಹಂತದಲ್ಲಿ ಮಕ್ಕಳಿಗೆ ಈ ಅಂಶದ ಕೊರತೆಯಾದರೆ ಬೆಳವಣಿಗೆ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಈ ಅಂಶವನ್ನು ಹೊಂದಿರುವ ಆಹಾರಗಳಾದ ಬ್ರೆಡ್, ಅಂಜೂರ, ಶೇಂಗಾಬೀಜದ ಬೆಣ್ಣೆ, ಹುಮ್ಮುಸ್, ಟೋಫು ಮತ್ತು ಧಾನ್ಯಗಳನ್ನು ಸೇವಿಸುಬಂತೆ ಮಾಡಿ. ಆದರೆ ಈ ಬಗ್ಗೆ ಮಕ್ಕಳ ತಜ್ಞರಲ್ಲಿ ಸಲಹೆ ಪಡೆಯಿರಿ. ಅಗತ್ಯ ಎನಿಸಿದರೆ ಮಗುವಿಗೆ ಸೇವಿಸಲು ವೈದ್ಯರು ಹೆಚ್ಚುವರಿ ಕಬ್ಬಿಣದ ಅಂಶವಿರುವ ಔಷಧಿಗಳನ್ನು ಸೇವಿಸಲು ಸಲಹೆ ಮಾಡಬಹುದು.

ಸಸ್ಯಾಹಾರಿ ಶಿಶುಗಳು ಮತ್ತು ಮಕ್ಕಳು ಎಷ್ಟು ಹಾಲು ಕುಡಿಯಬೇಕು?

ಸಸ್ಯಾಹಾರಿ ಶಿಶುಗಳು ಮತ್ತು ಮಕ್ಕಳು ಎಷ್ಟು ಹಾಲು ಕುಡಿಯಬೇಕು?

ಮಕ್ಕಳಿಗೆ ಹಾಲು ಅತಿ ಅಗತ್ಯವಾಗಿದೆ. ಒಂದು ವರ್ಷದಿಂದ ಎರಡು ವರ್ಷದ ವಯಸ್ಸಿನ ಶಿಶುಗಳಿಗೆ ನಿತ್ಯವೂ ಎರಡರಿಂದ ಮೂರು ಕಪ್ ಹಾಲು ಬೇಕಾಗುತ್ತದೆ. ಎರಡರಿಂದ ಐದು ವರ್ಷದ ಮಕ್ಕಳಿಗೆ ಎರಡರಿಂದ ಎರಡೂವರೆ ಕಪ್ ಹಾಲು ಬೇಕಾಗುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೋಟೀನ್ ಮೊದಲಾದ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಸಾಮಾನ್ಯವಾಗಿ ಮಕ್ಕಳು ಹಾಲನ್ನು ಇಷ್ಟಪಟ್ಟೇ ಕುಡಿಯುತ್ತಾರೆ.

ಅಂದರೆ, ಕೇವಲ ಹಾಲನ್ನು ಮಾತ್ರವೇ ಕುಡಿಯುವುದರಿಂದ ಸಸ್ಯಾಹಾರಿ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ಏಕೆಂದರೆ ಹಾಲನ್ನು ಮಾತ್ರವೇ ಕುಡಿಯುವುದರಿಂದ ಅಗತ್ಯ ಪ್ರಮಾಣದ ಕಬ್ಬಿಣ ದೊರಕುವುದಿಲ್ಲ. ಘನ ಅಹಾರಗಳನ್ನು ಸೇವಿಸುವ ಮೂಲಕ ಆಗುವಷ್ಟು ಹಸಿವು ಹಾಲಿನಿಂದ ಆಗುವುದಿಲ್ಲ (ಇತರ ಆಹಾರಗಳಿಂದ ಲಭಿಸುವ ಕಬ್ಬಿಣ ಮತ್ತು ಇತರ ಪೋಷಕಾಂಶಗಳು ಹಾಲಿನಿಂದ ದೊರಕುವುದಿಲ್ಲ).

ಜೊತೆಗೇ, ಸಂಶೋಧನೆಯ ಮೂಲಕ ಧೃಢೀಕರಿಸಿದ ಅಂಶವೆಂದರೆ ಹಾಲು ಹೆಚ್ಚು ಕುಡಿದರೆ ಇತರ ಆಹಾರಗಳಿಂದ ಲಭ್ಯವಾಗಬಹುದಾಗಿದ್ದ ಕಬ್ಬಿಣದ ಅಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಹಾಗೂ ಇದೇ ಕಾರಣಕ್ಕೆ ಕಬ್ಬಿಣದಿಂದ ಸಮೃದ್ದವಾಗಿರುವ ಆಹಾರವನ್ನು ಸೇವಿಸಿದರೂ ಸಾಕಷ್ಟು ಕಬ್ಬಿಣ ಹೀರಿಕೊಳ್ಳಲಾಗುವುದಿಲ್ಲ. (ಮಾಂಸಾಹಾರದಿಂದ ಕಬ್ಬಿಣ ಸುಲಭವಾಗಿ ಹೀರಲ್ಪಡುತ್ತದೆ). ಆದ್ದರಿಂದ ಮಗುವಿಗೆ ಆಹಾರದ ಮೂಲಕ ಲಭ್ಯವಾಗಿರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಯಾವುದೇ ತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ಹಾಗಾಗಿ, ಸಾಮಾನ್ಯ ಹಾಲಿನ ಜೊತೆಗೇ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸೋಯಾ ಅವರೆಯ ಹಾಲನ್ನು ಕುಡಿಯಲು ನೀಡಬೇಕು. ಜೊತೆಗೇ ಬೇಯಿಸಿದ ಆಲೂಗಡ್ಡೆ, ಅಗಸೆಬೀಜ, ನೀರು, ಅರ್ಧ ಕಪ್ ಸಸ್ಯಾಹಾರಿ ಚೀಸ್, ಅರಿಶಿನದೊಂದಿಗೆ ತಯಾರಿಸಲಾಗುವ ವೇಗನ್ ಟಾಟ್ಸ್ ಎಂಬ ಆಹಾರಗಳನ್ನು ಸೇವಿಸಲು ನೀಡಾಬಹುದು. ಈ ಮೂಲಕ ಮಕ್ಕಳಿಗೆ ಅಗತ್ಯ ಪ್ರಮಾಣದ ಕ್ಯಾಲ್ಸಿಯಂ ಲಭಿಸುತ್ತದೆ.

English summary

Feeding Vegetarian Kids: Meal Ideas for Vegetarian Toddlers in Kannada

Feeding vegetarian kids: meal ideas for vegetarian toddlers, read on...
Story first published: Tuesday, April 27, 2021, 17:27 [IST]
X
Desktop Bottom Promotion