For Quick Alerts
ALLOW NOTIFICATIONS  
For Daily Alerts

ಮಳೆಯ ಆರ್ಭಟಕ್ಕೆ ಮುನ್ನ ಮಕ್ಕಳಿಗೆ ಇನ್‌ಫ್ಲುಯೆಂಜಾ ಲಸಿಕೆ ನೀಡಲು ತಜ್ಞರ ಸಲಹೆ

|

ಮಳೆಗಾಲ ಶುರುವಾಗಿದೆ, ಮಳೆಗಾಲ ಅಂದ ಮೇಲೆ ರೋಗ ನಿರೋಧಕ ಶಕ್ತಿ ಸ್ವಲ್ಪ ಕಡಿಮೆ ಇರುತ್ತದೆ, ಇದರಿಂದಾಗಿ ಕಾಯಿಲೆಗಳು ಬರುವುದು ಸಹಜ. ಈಗ ಎರಡು ವರ್ಷದಿಂದ ಕೊರೊನಾ ಆತಂಕ, ಅದರಲ್ಲೂ ಕೋವಿಡ್ 19 ಎರಡನೇ ಅಲೆಯಲ್ಲಿ ದೇಶ ಸಾಕಷ್ಟು ನೋವು-ನಷ್ಟಗಳನ್ನು ಅನುಭವಿಸಿದೆ.

ಕೋವಿಡ್‌ 19 ಅಲೆಯ ಆರ್ಭಟ ಕಡಿಮೆಯಾಗುತ್ತಿದೆ, ಆದರೆ ಕೋವಿಡ್‌ 19 ನಿರ್ಲಕ್ಷ್ಯ ಮಾಡುವಂತಿಲ್ಲ 3ನೇ ಅಲೆಯ ಆತಂಕ ಹೆಚ್ಚಿದೆ. ಹೊಸ ರೂಪಾಂತರ ವೈರಸ್ ಡೆಲ್ಟಾ ಪ್ಲಸ್ ಕೂಡ ಪತ್ತೆಯಾಗಿದ್ದು 3ನೇ ಅಲೆ ಈ ವೈರಸ್‌ ಪ್ರಚೋದನೆಯಾಗಬಹುದೇ ಎಂಬ ಆತಂಕ ಕೂಡ ಎದುರಾಗಿದೆ.

ಕೊರೊನಾ 3ನೇ ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂಬುವುದು ತಜ್ಷರ ಅಭಿಪ್ರಾಯವಾಗಿದೆ. ಆದ್ದರಿಂದ ಪೋಷಕರು ಎಲ್ಲಾ ರೀತಿಯಿಂದಲೂ ಮುನ್ನೆಚ್ಚರಿಕೆ ಕ್ರಮವಹಿಸಬೇಕು, ಅಲ್ಲದೆ ಮಕ್ಕಳಿಗೆ ಸಾಮಾನ್ಯ ಶೀತ-ಕೆಮ್ಮು ಈ ರೀತಿಯ ಸಮಸ್ಯೆ ತಡೆಗಟ್ಟಲು ಇನ್‌ಫ್ಲುಯೆಂಜಾ ಲಸಿಕೆ ಪಡೆಯುವಂತೆ ತಜ್ಞರು ಸೂಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಎಲ್ಲಾ ಮಕ್ಕಳಿಗೆ ಇನ್‌ಫ್ಲುಯೆಂಜಾ ಲಸಿಕೆ ನೀಡುವಂತೆ ಸೂಚನೆ ನೀಡಲಾಗಿದೆ. ಮಳೆಗಾಲಕ್ಕೆ ಮುನ್ನ ಈ ಲಸಿಕೆ ಏಕೆ ನೀಡಬೇಕು? ಇದರಿಂದ ದೊರೆಯುವ ಪ್ರಯೋಜನಗಳೇನು ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಇನ್‌ಫ್ಲುಯೆಂಜಾ ಎಂದರೇನು? ಸಾಮಾನ್ಯ ಶೀತ-ಕೆಮ್ಮಿಗಿಂತ ಇದು ಹೇಗೆ ಭಿನ್ನವಾಗಿದೆ?

ಇನ್‌ಫ್ಲುಯೆಂಜಾ ಎಂದರೇನು? ಸಾಮಾನ್ಯ ಶೀತ-ಕೆಮ್ಮಿಗಿಂತ ಇದು ಹೇಗೆ ಭಿನ್ನವಾಗಿದೆ?

ಕೋವಿಡ್‌ 19 ಸಾಂಕ್ರಾಮಿಕ ರೀಗವಿರುವ ಈ ಸಮಯದಲ್ಲಿ ಪ್ರತಿಯೊಬ್ಬ ಮಗುವಿಗೆ ಇನ್‌ಫ್ಲುಯೆಂಜಾ ಲಸಿಕೆ ನೀಡುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ, ಇದರಿಂದ ಮಕ್ಕಳಿಗೆ ರಕ್ಷಣೆ ಸಿಗುವುದು ಹಾಗೂ ಪೋಷಕರು ಆತಂಕಕ್ಕೆ ಒಳಗಾಗುವುದನ್ನು ತಪ್ಪಿಸಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಶೀತ, ಕೆಮ್ಮು ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಒಂದು ವೇಳೆ ಜ್ವರ, ಮೂಗು ಕಟ್ಟುವುದು, ಕೆಮ್ಮು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಇನ್‌ಫ್ಲುಯೆಂಜಾ ಫ್ಲೂ ಆಗಿದೆ. ಇದೊಂದು ವೈರಲ್ ಸೋಂಕು ಆಗಿದ್ದು ಇದು ತಗುಲಿದಾಗ ಮಕ್ಕಳಲ್ಲಿ ಉಸಿರಾಟದ ತೊಂದರೆ ಕಂಡು ಬರುವುದು. ಈ ರೀತಿಯ ಸೋಂಕು ತಗುಲಿದರೆ ಔಷಧಿ ತೆಗೆದುಕೊಂಡ ವಾರದೊಳಗೆ ಮಕ್ಕಳಲ್ಲಿ ಚೇತರಿಕೆ ಕಂಡು ಬರುವುದು, ಇಲ್ಲದಿದ್ದರೆ ಇದರಿಂದ ನ್ಯೂಮೋನಿಯಾ ಸಮಸ್ಯೆ ಉಂಟಾಗಿ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗುವುದು. ಅಧ್ಯಯನಗಳ ಪ್ರಕಾರ ಭಾರತದಲ್ಲಿ ಪ್ರತೀವರ್ಷ 1 ಲಕ್ಷಕ್ಕೂ ಅಧಿಕ ಮಕ್ಕಳು ಇನ್‌ಪ್ಲುಯೆಂಜಾ ಸೋಂಕು ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಇನ್‌ಫ್ಲುಯೆಂಜಾ ಯಾರಿಗೆ ಹೆಚ್ಚು ಅಪಾಯಕಾರಿ

ಇನ್‌ಫ್ಲುಯೆಂಜಾ ಯಾರಿಗೆ ಹೆಚ್ಚು ಅಪಾಯಕಾರಿ

ಯಾರಿಗೆ ಬೇಕಾದರೂ ಇನ್‌ಫ್ಲುಯೆಂಜಾ ಅಥವಾ ಫ್ಲೂ ಬರಬಹುದು. ಆದರೆ 6-5 ವರ್ಷದೊಳಗಿನ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ, 65 ವರ್ಷ ಮೇಲ್ಪಟ್ಟವರಲ್ಲಿ, ಆರೋಗ್ಯ ಕಾರ್ಯಕರ್ತರಲ್ಲಿ, ಮಧುಮೇಹ, ಅಸ್ತಮಾ, ಕ್ಯಾನ್ಸರ್ ಮುಂತಾದ ಸಮಸ್ಯೆ ಇರುವವರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಹೆಚ್ಚು ಅಪಾಯಕಾರಿ.

ಇನ್‌ಫ್ಲುಯೆಂಜಾ ಒಬ್ಬರಿಂದ ಒಬ್ಬರಿಗೆ ಹರಡುವುದಾ?

ಇನ್‌ಫ್ಲುಯೆಂಜಾ ಒಬ್ಬರಿಂದ ಒಬ್ಬರಿಗೆ ಹರಡುವುದಾ?

ಎಂಜಲಿನ ಹನಿ ಅಥವಾ ಡ್ರಾಪ್‌ಲೆಟ್ಸ್ ಮೂಲಕ ಇದು ಹರಡುವುದು. ಇನ್‌ಫ್ಲುಯೆಂಜಾ ಬಂದ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಸೋಂಕಾಣು 6 ಅಡಿಯವರೆಗೆ ಹಾರುತ್ತದೆ. ಮಕ್ಕಳು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಸೋಂಕು ಹೆಚ್ಚು ದಿನ ಹರಡುತ್ತಾರೆ. ಅಂದ್ರೆ ಅವರು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು.

ತಡೆಗಟ್ಟುವುದು ಹೇಗೆ?

ತಡೆಗಟ್ಟುವುದು ಹೇಗೆ?

* ಮಕ್ಕಳು ಕೆಮ್ಮುವಾಗ, ಸೀನುವಾಗ ಕರ್ಚೀಫ್ ಅಡ್ಡ ಹಿಡಿಯಿರಿ ಅಥವಾ ಅವರಿಗೆ ತಿಳಿಸಿ.

* ಕೈಗಳನ್ನು ಆಗಾಗ ಶುಚಿಯಾಗಿ ತಳೆದುಕೊಳ್ಳಿ.

* ಸೋಂಕು ಇರುವ ಮಕ್ಕಳಿಂದ ಅಥವಾ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಿ

* ಸಾವರ್ಜನಿಕ ಸ್ಥಳಗಳಿಗೆ ಹೋಗುವಾ ಮಾಸ್ಕ್ ಧರಿಸಿ.

* ವರ್ಷಕ್ಕೊಮ್ಮೆ ಲಸಿಕೆ ಪಡೆಯಿರಿ.

ಮಕ್ಕಳಿಗೆ ಇನ್‌ಫ್ಲುಯೆಂಜಾ ಲಸಿಕೆ ನೀಡುವುದರ ಪ್ರಯೋಜನವೇನು?

ಮಕ್ಕಳಿಗೆ ಇನ್‌ಫ್ಲುಯೆಂಜಾ ಲಸಿಕೆ ನೀಡುವುದರ ಪ್ರಯೋಜನವೇನು?

6 ತಿಂಗಳಿನಿಂದ 5 ವರ್ಷದ ಕೆಳಗಿನ ಮಕ್ಕಳಿಗೆ ಇನ್‌ಫ್ಲೂಯೆಂಜಾ ಲಸಿಕೆ ನೀಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ವರ್ಷಕ್ಕೊಮ್ಮೆ ಇನ್‌ಫ್ಲುಯೆಂಜಾ ಲಸಿಕೆ ಪಡೆಯುವುದರಿಂದ ಮಕ್ಕಳನ್ನು ಇನ್‌ಫ್ಲುಯೆಂಜಾ ಸೋಂಕಿನಿಂದ ರಕ್ಷಣೆ ಮಾಡುವುದು ಮಾತ್ರವಲ್ಲ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.

English summary

Experts Recommending Influenza Vaccination For All Children Before The Monsoon Season Begins

Experts recommending Influenza vaccination for all children before the monsoon season begins,read on,
Story first published: Saturday, June 26, 2021, 17:29 [IST]
X
Desktop Bottom Promotion