For Quick Alerts
ALLOW NOTIFICATIONS  
For Daily Alerts

5-11 ವರ್ಷದ ಮಕ್ಕಳಿಗೆ ಸಿಗಲಿದೆ ಕೋರ್ಬೆವ್ಯಾಕ್ಸ್ ಕೊರೊನಾ ಲಸಿಕೆ

|

ಭಾರತದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗಿತ್ತು, ಇದೀಗ 5 ವರ್ಷದಿಂದ 11 ವರ್ಷ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ.

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಪರಿಣಿತರ ತಂಡ ತರ್ತು ಪರಿಸ್ಥಿತಿಯಲ್ಲಿ ಕೋವಿಡ್‌ 19 ಲಸಿಕೆ ಕೋರ್ಬೆವ್ಯಾಕ್ಸ್ ನೀಡಲು ಸಲಹೆ ನೀಡಿದೆ.

5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ-ಶಾಲಾ ಮಕ್ಕಳಿಗೆ ಸುರಕ್ಷತೆ

5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ-ಶಾಲಾ ಮಕ್ಕಳಿಗೆ ಸುರಕ್ಷತೆ

5 ವರ್ಷದಲ್ಲಿ ಮಕ್ಕಳ ಕಲಿಕೆ ಪ್ರಾರಂಭವಾಗುತ್ತದೆ. ಇದೀಗ ಕೊರೊನಾ ಹೆಚ್ಚುತ್ತಿರುತ್ತಿರುವುದರಿಂದ ಪೋಷಕರಲ್ಲಿ ಆತಂಕ ಇದೆ. 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯವಿದೆ, ಇದೀಗ 5 ವರ್ಷದ ಮೇಲ್ಪಟ್ಟ ಮಕ್ಕಳಿಗೆ ನೀಡಲು ಸಲಹೆ ನೀಡಿರುವುದರಿಂದ ಸಂಪೂರ್ಣ ಶಾಲ ಮಕ್ಕಳಿಗೆ ಕೋವಿಡ್ 19 ಲಸಿಕೆ ಸಿಗುವಂತಾಗುವುದು.

2021 ಡಿಸೆಂಬರ್‌ನಲ್ಲೇ ಸಿಕ್ಕಿದೆ ಕೋವೋವ್ಯಾಕ್ಸ್ ಬಳಸಲು ಅನುಮತಿ

2021 ಡಿಸೆಂಬರ್‌ನಲ್ಲೇ ಸಿಕ್ಕಿದೆ ಕೋವೋವ್ಯಾಕ್ಸ್ ಬಳಸಲು ಅನುಮತಿ

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ 2021 ಡಿಸೆಂಬರ್‌ 28ಕ್ಕೆ12-17 ವರ್ಷದ ಮಕ್ಕಳಿಗೆ ತುರ್ತು ಪರಿಸ್ಥಿತಿಯಲ್ಲಿ ಕೋವಾವ್ಯಾಕ್ಸ್ ನೀಡಲು ಅನುಮತಿ ನೀಡಿದೆ. ಕೋವಾಕ್ಸಿನ್‌ ಕೂಡ ತುರ್ತು ಪರಿಸ್ಥಿತಿಯಲ್ಲಿ12-18 ವರ್ಷದ ಮಕ್ಕಳಿಗೆ ನೀಡಲು ಅನುಮತಿ ಸಿಕ್ಕಿದೆ.

ಇನ್ನು 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಿಗಲಿದೆ ಕೋರ್ಬೆವ್ಯಾಕ್ಸ್

ಇನ್ನು 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಿಗಲಿದೆ ಕೋರ್ಬೆವ್ಯಾಕ್ಸ್

ತುರ್ತು ಪರಿಸ್ಥಿತಿಯಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ನೀಡಲಾಗುವುದು.

ಕೋವಿಡ್‌ 19 ತಡೆಗಟ್ಟುವಲ್ಲಿ ಲಸಿಕೆಗಳು ಎಷ್ಟು ಪ್ರಮುಖ ಪಾತ್ರವಹಿಸಿದೆ ಎಂಬುವುದು ಸಾಬೀತಾಗಿದೆ. ಇದೀಗ 5 ವರ್ಷದ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ದೊರೆಯುವುದರಿಂದ ದೇಶದ ಬಹು ದೊಡ್ಡ ಜನತೆಗೆ ಕೋವಿಡ್ 19 ವಿರುದ್ಧ ಸುರಕ್ಷತೆ ಸಿಕ್ಕಂತಾಗುವುದು.

ಕೋವಿಡ್‌ 19 ಲಸಿಕೆ ಪಡೆದವರಿಗೆ ಕೊರೊನಾ ವೈರಸ್ ತಗುಲಿದರೂ ಪರಿಸ್ಥಿತಿ ಗಂಭೀರವಾಗುತ್ತಿಲ್ಲ. ಆದ್ದರಿಂದ ಕೋವಿಡ್‌ 19 ಎಂಬ ಮಾರಕ ರೋಗ ತಡೆಗಟ್ಟುವಲ್ಲಿ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗಿದೆ.

English summary

Covid vaccine for Kids: Expert Panel Recommends Corbevax Covid jab for 5-11 Years Age Group

Covid vaccine for Kids: Expert Panel Recommends Corbevax Covid jab for 5-11 Years Age Group
Story first published: Friday, April 22, 2022, 14:24 [IST]
X
Desktop Bottom Promotion